ಪ್ಲಾಸ್ಟಿಕ್ ಬಳಕೆ ವಿನಾಶಕ್ಕೆ ದಾರಿ!

ವಿಜ್ಞಾನಿಗಳು ತುಕ್ಕು ಹಿಡಿಯದ, ತೂಕದಲ್ಲಿ ಹಗುರಾದ ಹಾಗೂ ಹೆಚ್ಚು ಬಾಳ್ವಿಕೆ ಇರುವ ವಸ್ತುಗಳನ್ನು ಅಂದರೆ ‘ಪ್ಲಾಸ್ಟಿಕ್’ ಎಂಬ ಪದಾರ್ಥವನ್ನು ಸಿದ್ಧಪಡಿಸಿದರು, ಇದು ನಿಜ ಸಂಗತಿ; ಆದರೆ ಅದರ ಬಳಕೆ ಮುಗಿದ ನಂತರ ಅದರಲ್ಲಿನ ಕಣಗಳು ನಾಶ ಹೊಂದುವುದಿಲ್ಲವಾದುದರಿಂದ ಅದನ್ನು ನಷ್ಟ ಮಾಡಲು ಆಗುವುದಿಲ್ಲ. ಆದ್ದರಿಂದ ಪರಿಸರ ಮಾಲಿನ್ಯ ಆಗುತ್ತದೆ. ಮರಳಿ ಬಳಕೆಗೆ ಬರದಂತಹ ಪ್ಲಾಸ್ಟಿಕನ ವಸ್ತುಗಳನ್ನು ಎಲ್ಲಿ ಇಡುವುದು ಹಾಗೂ ಅದನ್ನು ನಷ್ಟಪಡಿಸುವುದು ಹೇಗೆ ಎಂಬ ಸಮಸ್ಯೆಯು ಜಗತ್ತಿನಾದ್ಯಂತ ಚರ್ಚಿಸಲಾಗುತ್ತಿದೆ. ಪ್ಲಾಸ್ಟಿಕ್ ಉದ್ಯೋಗದಿಂದ ಲಕ್ಷಾಂತರ ಜನರಿಗೆ ದಿನಕೂಲಿ ಸಿಗುತ್ತದೆ. ಆದರೂ ಕೇವಲ ದಿನಕೂಲಿಯನ್ನು ನಿರ್ಮಿಸುವ ಸಾಧನವಾಗಿದೆ ಎಂದು ಪ್ಲಾಸ್ಟಿಕನ ಬಳಕೆ ಮಾಡುವುದು ಅಪಾಯಕಾರಿಯಾಗಬಹುದು.

ಪ್ಲಾಸ್ಟಿಕ್.ನಿಂದ ಭೂಮಿ ಬಂಜರು ಆಗುವುದು !

ಅ. ‘ಒಂದು ಪ್ಲಾಸ್ಟಿಕ ಚೀಲದ ವಿಭಜನೆಯಾಗಲು ೧೦೦ ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಆ ಪ್ಲಾಸ್ಟಿಕನ ವಿಭಜನೆಯಾಗಿ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಘಟಕ ಹೊರಬೀಳುತ್ತವೆ. ಆದುದರಿಂದ ಆ ಭಾಗದಲ್ಲಿ ಭೂಮಿ ಬಂಜರು ಆಗುವ ಪ್ರಕ್ರಿಯೆಯು ಆರಂಭಗೊಳ್ಳುತ್ತದೆ. – ಶ್ರೀ.ಅರವಿಂದ ಜಾಧವ, ಫೋಂಡಾ, ಗೋವಾ

ಆ. ಪ್ಲಾಸ್ಟಿಕನ ಚೀಲಗಳು ಜಲಾಶಯದಲ್ಲಿ ಸೇರಿಕೊಳ್ಳುತ್ತವೆ. ಈ ಪ್ಲಾಸ್ಟಿಕ ಯುಕ್ತ ನೀರನ್ನು ಹೊಲ ಗದ್ದೆಗಳ ನೀರಾವರಿಗೆ ಉಪಯೋಗಿಸಿದ್ದಲ್ಲಿ ಆ ಭೂಮಿಯ ಧಾರಣೆ ಕ್ಷಮತೆಯ ಮೇಲೆ, ಹಾಗೆಯೇ ಉತ್ಪನ್ನದ ಮೇಲೆಯೂ ಪರಿಣಾಮವಾಗುತ್ತದೆ.

ಮಹಾಪೂರ ಬರುವುದು

೨೬ ಜುಲೈ ೨೦೦೫ರಲ್ಲಿ ಭಾರೀ ಮಳೆಯಿಂದ ಮುಂಬಯಿಯಲ್ಲಿ ಬಂದ ಮಹಾ ಪ್ರಳಯಕ್ಕೆ ಅನೇಕ ಕಾರಣಗಳಿದ್ದರೂ ಅದರಲ್ಲಿ ‘ಪ್ಲಾಸ್ಟಿಕ ಚೀಲದ ಬಳಕೆ’ಯೂ ಒಂದು ಕಾರಣವಾಗಿತ್ತು. – ಶ್ರೀ.ಮಿಲಿಂದ ಮುರುಗಕರ, ಮಹೇಶ ಶೆಲಾರ (ಲೋಕಸತ್ತಾ, ೧೦.೨.೨೦೧೧)

ಪ್ಲಾಸ್ಟಿಕ್.ನಿಂದ ಪ್ರಾಣಿಗಳಿಗೂ ಸಂಕಟ!

ಗೋವು, ನಾಯಿ ಮುಂತಾದ ಪ್ರಾಣಿಗಳು ಆಹಾರವನ್ನು ಹುಡುಕಿ ತ್ಯಾಜ್ಯದಲ್ಲಿ ಇರುವ ಪದಾರ್ಥಗಳನ್ನು ತಿನ್ನುತ್ತವೆ. ಇದರಿಂದತ್ಯಾಜ್ಯದಲ್ಲಿರುವ ಪ್ಲಾಸ್ಟಿಕ ಪ್ರಾಣಿಗಳ ಹೊಟ್ಟೆಯೊಳಗೆ ಹೋಗಿ, ಅವುಗಳಿಗೆ ಕಾಯಿಲೆ ಬರುವಂತಹ ಗಂಭೀರ ಸಮಸ್ಯೆ ನಿರ್ಮಾಣವಾಗಿವೆ.

ಇಂದಿನ ಸ್ಥಿತಿ

ಪ್ಲಾಸ್ಟಿಕ ಚೀಲಗಳ ಸಂಬಂಧದಲ್ಲಿ ಸರಕಾರವು ಒಂದು ಕಾನೂನನ್ನು ಜಾರಿಗೆ ತಂದಿತ್ತು. ಆದಕ್ಕನುಸಾರ 'ಇಂತಿಷ್ಟು ದಪ್ಪವಿರುವ' ಚೀಲಗಳನ್ನೇ ನಿರ್ಮಿಸಬೇಕು, ಎಂದು ಪ್ಲಾಸ್ಟಿಕ್ ಚೀಲದ ಉತ್ಪಾದಕರ ಮೇಲೆ ನಿರ್ಬಂಧವನ್ನು ಹೇರಲಾಯಿತು. ಆದರೆ ಸಿಗುವ ಲಾಭಕ್ಕೋಸ್ಕರ ಈ ಬಗ್ಗೆ ಸಂಪೂರ್ಣ ದುರ್ಲಕ್ಷ ಮಾಡಿ ವಾತಾವರಣಕ್ಕೆ ಘಾತಕವಿರುವ ಪ್ಲಾಸ್ಟಿಕನ ನಿರ್ಮಿತಿಯು ಎಗ್ಗಿಲ್ಲದೆ ನಡೆಯುತ್ತಿದೆ. – ಶ್ರೀ. ಅರವಿಂದ ಜಾಧವ, ಗೋವಾ

ಉಪಾಯಗಳು

೧.ಸಾಮಾನುಗಳನ್ನು ತರಲು ಮನೆಯಿಂದ ಹೊರಡುವಾಗ ಪ್ರತಿಯೊಬ್ಬರು ಜ್ಯೂಟ (ಸೆಣಬಿನ ನಾರಿನಿಂದ ಮಾಡಿದ) ಚೀಲ, ಬಟ್ಟೆಯ ಚೀಲ ಇವುಗಳ ಬಳಕೆ ಮಾಡಲು ನಿಶ್ಚಯಿಸಿದರೆ, ಈ ಪ್ರಶ್ನೆಯು ಶೇ. ೯೦ರಷ್ಟು ಕಡಿಮೆ ಆಗಬಹುದು. ‘ಪ್ಲಾಸ್ಟಿಕ’ನ ವಸ್ತುಗಳ ಬಳಕೆ ಅತ್ಯಲ್ಪ ಮಾಡಿ, ಮಾರುಕಟ್ಟೆಯಿಂದ ಅಥವಾ ಪೇಟೆಯಿಂದ ಸಾಮಾನು ತರುವಾಗಪ್ಲಾಸ್ಟಿಕ್ ಬಳಕೆ ಅನಿವಾರ್ಯವಾದಲ್ಲಿ ಸಾಧ್ಯವಾದಷ್ಟು ದೊಡ್ಡ ಚೀಲಗಳಲ್ಲಿ ತನ್ನಿರಿ. – ( ಮಾಸೀಕ ಪತ್ರಿಕೆ ಗೀತಾ ಸ್ವಾಧ್ಯಾಯ, ಸಪ್ಟೆಂಬರ ೨೦೧೦ )

೨.ಸಂಯುಕ್ತ ಅರಬ ಅಮೀರಾತದಲ್ಲಿ ಪ್ಲಾಸ್ಟಿಕ ಮೇಲಿನ ನಿರ್ಬಂಧದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ್ದರಿಂದ ಕೇವಲ ೨ ವರ್ಷಗಳಲ್ಲಿ ಆ ದೇಶದಲ್ಲಿ ಪ್ಲಾಸ್ಟಿಕ ಚೀಲಗಳಬಳಕೆ ನ್ಯೂನವಾಗಿದೆ. (ಆಧಾರ: ದೈನಿಕ ತರುಣ ಭಾರತ, ೨೨.೧.೨೦೧೧ )

೩.ಯುರೋಪ ಹಾಗೂ ಅಮೇರಿಕಾಗಳಲ್ಲಿ ಪ್ಲಾಸ್ಟಿಕನ ಬಳಕೆಯ ಬಗ್ಗೆ ಜನಜಾಗೃತಿಯಿಂದಲೇಪ್ಲಾಸ್ಟಿಕ್ ಹಾವಳಿ ಕಡಿಮೆಯಾಗಿದೆ. – ಶ್ರೀ.ಮಿಲಿಂದ ಮುರುಗಕರ, ಮಹೇಶ ಶೆಲಾರ(ಲೋಕಸತ್ತಾ, ೧೦.೨.೨೦೧೧)