‘ವಾತಾವರಣ’ ಯುದ್ಧ ತಂತ್ರ

‘ಕಳೆದ ಕೆಲವು ವರ್ಷಗಳಿಂದ ಶತ್ರು ದೇಶಗಳ ಬಲವನ್ನು ಕುಗ್ಗಿಸಲು,ಅವರನೈಸರ್ಗಿಕ ಸಂಪತ್ತನ್ನು ಪಡೆದುಕೊಳ್ಳುವುದರ ಜೊತೆ ಅಲ್ಲಿನ ವಾತಾವರಣವನ್ನು ಒಂದು ಶಸ್ತ್ರದಂತೆ ಬಳಕೆ ಮಾಡಲಾಗುತ್ತಿದೆ !

ಇದಕ್ಕೊಂದು ಉತ್ತಮ ಉದಾಹರಣೆ ಎಂದರೆಅಮೇರಿಕ ಮತ್ತು ವಿಎತ್ನಾಮ್ ಯುದ್ಧ. ವಿಎತ್ನಾಮ್ ದಟ್ಟವಾದ ಅರಣ್ಯ ಹಾಗೂ ಹೊಲಗಳಲ್ಲಿ ಬೆಳೆಯುವ ಧಾನ್ಯವನ್ನು ನಷ್ಟಪಡಿಸಲು ಹಾಗೂ ಅರಣ್ಯವನ್ನು ನಾಶಗೊಳಿಸಲು ಅಮೆರಿಕಾದ ಯುದ್ಧ ವಿಮಾನಗಳುವಿಷಕಾರಿ ಪದಾರ್ಥಗಳನ್ನು ಸಿಂಪಡಿಸಿದವು.ಅಲ್ಲಿನ ಹವಾಮಾನದಲ್ಲಿ ಬದಲಾವಣೆ ಮಾಡಿ ಕೃತಕ ಅಕಾಲಿಕ ಮಳೆ ಬೀಳಿಸುವ ಪ್ರಯತ್ನಗಳನ್ನು ಕೂಡ ಮಾಡಲಾಯಿತು!

ವಾತಾವರಣ ಯುದ್ಧತಂತ್ರ’ದಿಂದ ಮನುಷ್ಯ ಸಂಹಾರ ಸಂಭವ!

ಅ. ಶತ್ರುಗಳ ಪ್ರದೇಶದ ಮೇಲೆ ಉಲ್ಕೆಯ ಮಾರ್ಗ ಬದಲಾಯಿಸಿ ಅವುಗಳ ಸುರಿಮಳೆ ಮಾಡಬಹುದು.

ಆ.ಶತ್ರು ಪ್ರದೇಶದ ಆಕಾಶದಲ್ಲಿ ‘ಆಯನೋಸ್ಫಿಯರ’ನಲ್ಲಿ ಏರುಪೇರುಗಳನ್ನು ತಂದುಅದರ ಸಂಪರ್ಕ ವ್ಯವಸ್ಥೆಯನ್ನು ಕೆಡಿಸಿ ಇಡಬಹುದಾಗಿದೆ.

ಇ. ನದಿಗಳ ಪ್ರವಾಹವನ್ನು ಬದಲಾಯಿಸಬಹುದು. ಅದರಿಂದ ಶತ್ರುವಿಗೆ ಕುಡಿಯಲು ನೀರು ಸಿಗದಂತೆ ಮಾಡಬಹುದು.

ಈ. ಶತ್ರು ಪ್ರದೇಶದಲ್ಲಿ ನದಿ ಹಾಗೂ ಸಮುದ್ರದ ನೀರಿನಲ್ಲಿ ಇವುಗಳಲ್ಲಿ ರಾಸಾಯನಿಕ ಅಥವಾ ಅಣುಶಸ್ತ್ರಸಜ್ಜಿತ ಕ್ಷಿಪಣಿಗಳ ಮೂಲಕ ವಿಷ ಬೆರೆಸಬಹುದು.

ಉ. ಸಮುದ್ರ ತೀರದಲ್ಲಿರುವ ಶತ್ರು ಪ್ರದೇಶವನ್ನು ಧ್ವಂಸಗೊಳಿಸಲು, ಗುರುತ್ವಾಕರ್ಷಣೆಯಲ್ಲಿ ಏರುಪೇರುಗಳನ್ನು ಮಾಡಿ, ಬೃಹತ್ ಅಲೆಗಳನ್ನು ಸೃಷ್ಟಿಸಿ, ಮಹತ್ವದ ಬಂದರು, ಪಟ್ಟಣಗಳಲ್ಲಿ ಜಲಪ್ರಳಯ ನಿರ್ಮಿಸಬಹುದು.

ಊ.ಅಣು ಸ್ಥಾವರಗಳು, ಖನಿಜತೈಲದ ಬಾವಿಗಳುಹಾಗೂ ದೊಡ್ಡ ಆಣೆಕಟ್ಟುಗಳು ಇವೆಲ್ಲ ಭವಿಷ್ಯದಪರ್ಯಾವರಣದ ಯುದ್ಧನೀತಿಯಲ್ಲಿನ ಗುರಿಗಳಾಗಿ ಮುಖ್ಯ ಪಾತ್ರಗಳನ್ನು ವಹಿಸುವವು.

ಆರ್ಥರ ವೆಸ್ಟಿಂಗ, ಯುದ್ಧನೀತಿ ಹಾಗೂ ಪರಿಸರ ತಜ್ಞ.