ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ (ಭಾಗ -೨)

‘ಸೂಕ್ಷ ’ ಈ ಶಬ್ದದ ಸಂದರ್ಭದಲ್ಲಿ ಕೆಲವು ಸಂಜ್ಞೆಗಳ ಅರ್ಥ

ಸ್ಥೂಲ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳ ಆಚೆಗಿನದ್ದು ಎಂದರೆ ‘ಸೂಕ್ಷ ’. ಈ ಸೂಕ್ಷದ ಜ್ಞಾನದ ವಿಷಯದಲ್ಲಿ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. ಉದಾ.

ಭಗವತೋ ನಾರಾಯಣಸ್ಯ ಸಾಕ್ಷಾನ್ಮಹಾಪುರುಷಸ್ಯ ಸ್ಥಾವಿಷ್ಠಂ ರೂಪಮ್ ಆತ್ಮಮಾಯಾಗುಣಮಯಮ್ ಅನುವರ್ಣೀತಮ್ ಅಧ್ಯತಃ ಪಠತಿ ಶೃಣೋತಿ ಶ್ರಾವಯತಿ ಸ ಉಪಗೇಯಂ ಭಗವತಃ ಪರಮಾತ್ಮನಃ ಅಗ್ರಹ್ಯಮ್ ಅಪಿ ಶ್ರದ್ಧಾಭಕ್ತಿವಿಶುದ್ಧಬುದಿಧಃ ವೇದ | ಶ್ರೀಮದ್ಭಾಗವತ, ಸ್ಕಂಧಾ ೫, ಅಧ್ಯಾಯ ೨೬, ಸೂತ್ರ ೩೮

ಅರ್ಥ : ಉಪನಿಷತ್ತಿನಲ್ಲಿ ವರ್ನಿಸಲಾದ ಭಗವಂತನ ನಿರ್ಗುಣ ಸ್ವರೂಪವು ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿದೆ ಆದರೂ ಯಾರು ಅವನ ಸ್ಥೂಲ ರೂಪದ ವರ್ಣನೆಯನ್ನು ಓದುತ್ತನೆಯೋ, ಕೆಳುತ್ತನೆಯೋ ಅಥವಾ ಕೇಳಿಸುತ್ತಾನೆಯೋ ಅವನ ಬುದ್ಧಿಯು ಶ್ರದ್ಧೆ ಮತ್ತು ಭಕ್ತಿ ಇವುಗಳಿಂದ ಶುದ್ಧವಾಗುತ್ತದೆ ಮತ್ತು ಅವನಿಗೆ ಆ ಸೂಕ್ಷ್ಮ ರೂಪದ್ದೂ ಜ್ನಾನವಾಗುತ್ತದೆ ಮತ್ತು ಅನುಭೂತಿ ಬರುತ್ತದೆ.

ಸಾಧನೆಯನ್ನು ಮಾಡುವುದರಿಂದ ಸನಾತನದ ಸಾಧಕರಲ್ಲಿ ಶ್ರದ್ಧೆ ಮತ್ತು ಭಕ್ತಿಯು ಹೆಚ್ಚಾಗುತ್ತಿರುವುದರಿಂದ ಅವರಿಗೂ ಸೂಕ್ಷ ರೂಪದ ಜ್ಞಾನವಾಗುತ್ತದೆ ಮತ್ತು ಸೂಕ್ಷಕ್ಕೆ ಸಂಬಂಧಿಸಿದ ಅನುಭೂತಿಗಳು ಬರುತ್ತವೆ. ಒಟ್ಟಿನಲ್ಲಿ ಧರ್ಮಗ್ರಂಥಗಳಲ್ಲಿ ವರ್ಣಿಸಿದಂತಹ ವಚನಗಳ ಸತ್ಯತೆಯ ಪ್ರಚೀತಿಯನ್ನೂ ಸನಾತನದ ಸಾಧಕರು ಪಡೆಯುತ್ತಿದ್ದಾರೆ. ಬಾಲ್ಸಂಸ್ಕಾರದ ಸಂಕೇತಸ್ಧಳದಲ್ಲಿನ ಲೇಖನಗಳಲ್ಲಿ ಕೆಲವು ಕಡೆಗಳಲ್ಲಿ ‘ಸೂಕ್ಷ’ ಎಂಬ ಶಬ್ದದ ಕುರಿತಾದ ಸಂಜ್ಞೆಗಳನ್ನು ಉಪಯೋಗಿಸಲಾಗಿದೆ. ಅದರ ಸ್ಪಷ್ಟೀಕರಣವು ಮುಂದಿನಂತಿದೆ.

ಸೂಕ್ಷ ಜಗತ್ತು

ಯಾವುದು ಸ್ಥೂಲ ಪಂಚಜ್ಞಾನೇಂದ್ರಿಯಗಳಿಗೆ (ಮೂಗು, ನಾಲಗೆ, ಕಣ್ಣು, ತ್ವಚೆ ಮತ್ತು ಕಿವಿಗಳಿಗೆ) ತಿಳಿಯುವುದಿಲ್ಲವೋ ಆದರೆ ಯಾವುದರ ಅಸ್ತಿತ್ವದಿಂದ ಜ್ಞಾನ ಸಾಧನೆಯನ್ನು ಮಾಡಲಾಗುತ್ತದೆಯೋ ಅದಕ್ಕೆ ‘ಸೂಕ್ಷ ಜಗತ್ತು’ ಎನ್ನುತ್ತಾರೆ.

ಸೂಕ್ಷದ್ದು ಕಾಣಿಸುವುದು, ಕೇಳಿಸುವುದು ಇತ್ಯಾದಿ
(ಪಂಚಸೂಕ್ಷ ಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು)

ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುವುದು, ಅಂದರೆ ಅವರಿಗೆ ಕಣ್ಣುಗಳಿಗೆ ಕಾಣಿಸದಿರುವಂತಹದ್ದು ಕಾಣಿಸುತ್ತದೆ ಮತ್ತು ಕೆಲವರಿಗೆ ಸೂಕ್ಷದ ನಾದ ಅಥವಾ ಶಬ್ದವು ಕೇಳಿಸುತ್ತದೆ.

ಸೂಕ್ಷ ಜ್ಞಾನದ ಕುರಿತಾದ ಚಿತ್ರ

ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಏನು ಅರಿವಾಗುತ್ತದೆಯೋ ಅಥವಾ ಅಂತರ್ದೃಷ್ಟಿಯಿಂದ ಏನು ಕಾಣಿಸುತ್ತದೆಯೋ ಅದರ ಕುರಿತು ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ ಜ್ಞಾನದ ವಿಷಯದಲ್ಲಿನ ಚಿತ್ರ’ ಎನ್ನುತ್ತಾರೆ.

ಸೂಕ್ಷ ಪರೀಕ್ಷೆ

ಯಾವುದಾದರೊಂದು ಘಟನೆಯ ವಿಷಯದಲ್ಲಿ ಅಥವಾ ಪ್ರಕ್ರಿಯೆಯ ವಿಷಯದಲ್ಲಿ ಚಿತ್ತಕ್ಕೆ (ಅಂತರ್ಮನಕ್ಕೆ) ಏನು ಅರಿವಾಗುತ್ತದೆಯೋ ಅದಕ್ಕೆ 'ಸೂಕ್ಷ ಪರೀಕ್ಷೆ' ಎನ್ನುತ್ತಾರೆ.

ಸೂಕ್ಷ ಜ್ಞಾನದ ವಿಷಯದಲ್ಲಿನ ಪ್ರಯೋಗ

ಕೆಲವು ಸಾಧಕರು ಸೂಕ್ಷದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವ ಕ್ಷಮತೆಯ ಅಧ್ಯಯನವೆಂದು ಯಾವುದಾದರೊಂದು ವಸ್ತುವಿನ ವಿಷಯದಲ್ಲಿ ಮನಸ್ಸು ಮತ್ತು ಬುದ್ಧಿಯ ಆಚೆಗೆ ಏನರಿವಾಗುತ್ತದೆ ಎಂಬುದರ ಪರಿಶೀಲನೆ ಮಾಡುತ್ತಾರೆ. ಇದಕ್ಕೆ ‘ಸೂಕ್ಷ ಜ್ಞಾನದ ವಿಷಯದಲ್ಲಿನ ಪ್ರಯೋಗ’ ಎನ್ನುತ್ತಾರೆ.

‘ಕೆಟ್ಟ ಶಕ್ತಿಗಳ ತೊಂದರೆ’ ಎಂಬ ಸಂಜ್ಞೆಯ ಅರ್ಥ

ವಾತಾವರಣದಲ್ಲಿ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಸಾಧನೆ ಮಾಡುವುದರಿಂದ ಸಾಧಕರಲ್ಲಿ ಒಳ್ಳೆಯ ಶಕ್ತಿಗಳು ಆಕರ್ಷಿತವಾಗುತ್ತವೆ. ಸಾಧನೆಯಿಂದ ವಾತಾವರಣದಲ್ಲಿನ ಒಳ್ಳೆಯ ಶಕ್ತಿಯ ಬಾಹುಳ್ಯವೂ ಹೆಚ್ಚಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ಶಕ್ತಿಯು ಕಡಿಮೆಯಾಗುತ್ತದೆ. ಹೀಗಾಗಬಾರದು ಎಂದು ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿ ವಿಘ್ನಗಳನ್ನು ತರುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಯಜ್ಞದಲ್ಲಿ ರಾಕ್ಷಸರು ವಿಘ್ನಗಳನ್ನು ತರುತ್ತಿದ್ದುದರ ಅನೇಕ ಕಥೆಗಳು ವೇದಪುರಾಣಗಳಲ್ಲಿವೆ. ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರ, ರಾಕ್ಷಸ, ಪಿಶಾಚಿ ಇವುಗಳನ್ನು ಪ್ರತಿಬಂಧಿಸಲು ಮಂತ್ರಗಳನ್ನು ನೀಡಲಾಗಿದೆ. ಅವುಗಳಲ್ಲಿ ಒಂದು ಮಂತ್ರವು ಮುಂದಿನಂತಿದೆ.

ಸ್ತುವಾನಮಗ್ನ ಆ ವಹ ಯಾತುಧಾನಂ ಕಿಮೀದಿನಮ್|
ತ್ವಂ ಹಿ ದೇವ ವಂದಿತೋ ಹಂತಾ ದಾಸ್ಯೋರ್ಬಭೂವಿಥ||

ಅಥರ್ವವೇದ, ಕಾಂಡ ೧, ಸೂಕ್ತ ೭, ಖಂಡ ೧

ಅರ್ಥ : ಎಲ್ಲರ ಜಠರಾಗ್ನಿಯ ರೂಪದಲ್ಲಿ ವಾಸಿಸುವ, ವಿದ್ಯುತ್ ಇತ್ಯಾದಿ ರೂಪಗಳಿಂದ ಇಡೀ ಜಗತ್ತನ್ನು ವ್ಯಾಪಿಸುವಂತಹ ಮತ್ತು ಯಜ್ಞದಲ್ಲಿ ಅಗ್ರಣಿಯಾಗಿರುವ ಹೇ ಅಗ್ನಿಯೇ, ನಾವು ಯಾವ ದೇವತೆಗಳನ್ನು ಸ್ತುತಿಸುತ್ತಿರುವೆವೋ ಅವರ ತನಕ ನೀನು ಈ ಹವಿರ್ಭಾಗವನ್ನು ತಲುಪಿಸು. ನಾವು ಕೊಟ್ಟಿರುವ ಹವಿರ್ಭಾಗದ ಪ್ರಶಂಸೆಯನ್ನು ಮಾಡುವಂತಹ ದೇವತೆಗಳಿಗೆ ನಮ್ಮ ಹತ್ತಿರ ಕರೆದು ತಾ, ಮತ್ತು ನಮ್ಮನ್ನು ಕೊಲ್ಲಲು ಇಚ್ಚಿಸುತ್ತಿರುವ ಗುಪ್ತ ರೂಪದಿಂದ (ಸೂಕ್ಷ್ಮ ರೂಪದಿಂದ) ಸಂಚರಿಸುತ್ತಿರುವ ಕಿಮಿದಿನ್ಲಾ (ದುಷ್ಟ ಪಿಶಾಚಿಗಳ ಒಂದು ವಿಧ) ವನ್ನು ನಮ್ಮಿಂದ ದೂರಕೊಂಡೊಯ್ಯು. ಏಕೆಂದರೆ ಈ ಡಾನ್ ಇತ್ಯಾದಿ ಗುಣಗಳಿಂದ ಯುಕ್ತನಾಗಿರುವ ದೇವನೇ, ನಾವು ವಂದನೆ ಮಾಡಿದಾಗ ನೀನು ಉಪಕ್ಷಯ (ಘಾತ) ಮಾಡುವ ಯಾತುಧಾನ (ರಾಕ್ಷಸ)ರನ್ನು ಸಂಹಾರ ಮಾಡುತ್ತಿರುವೆ, ಹಾಗಾಗಿ ನೀನು ಇವನನ್ನು (ಈ ರಾಕ್ಷಸನನ್ನು) ನಿನ್ನ ಹತ್ತಿರ ಕರೆದುಕೋ ಅಥವಾ ಸ್ತೂಯಮಾನ ಅಗ್ನಿಯೇ, ಪ್ರತೀಕಾರ ಮಾಡಲು ನೀನು ಈ ರಾಕ್ಷಸನ ಈ ಪುರುಷನಲ್ಲಿ ಆವೇಶ ಮಾಡು.

ತಾತ್ಪರ್ಯ : ಕೆಟ್ಟ ಶಕ್ತಿಗಳು ಸಾಧನೆಯನ್ನು ಮಾಡುವವರಿಗೆ ತೊಂದರೆ ನೀಡುತ್ತವೆ ಮತ್ತು ಈ ತೊಂದರೆಗಳ ನಿವಾರಣಾರ್ಥ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದಾದಿ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸಂಕೇತಸ್ಥಳದ ಲೇಖನಗಳಲ್ಲಿ ಕೆಲವು ಕಡೆಗಳಲ್ಲಿ 'ಕೆಟ್ಟ ಶಕ್ತಿ' ಅಥವಾ 'ಅಧ್ಯಾತ್ಮಿಕ ತೊಂದರೆ' ಈ ಶಬ್ದಗಳನ್ನು ಉಪಯೋಗಿಸಲಾಗಿದೆ. ಅದನ್ನು ಮೇಲೆ ನೀಡಿರುವ ವಿಷಯವನ್ನು ಅನುಸರಿಸಿ ನೀಡಲಾಗಿದೆ.

ಆಧಾರ : ಮರಾಠಿ ವಿಶ್ವಕೋಶ ಖಂಡ ೧, ಪ್ರಕಾಶಕರು : ಮಹಾರಾಷ್ಟ್ರ ರಾಜ್ಯ ಸಂಸ್ಕೃತಿ ಮಂಡಳ, ಸಚಿವಾಲಯ, ಮುಂಬೈ ೪೦೦೦೩೨, ಆವೃತ್ತಿ ೧ (೧೯೭೬) ಪುಟ ೧೯೪)

ವಾಚಕರು ತಮಗೆ ಲೇಖನದಲ್ಲಿ ಯಾವುದಾದರೊಂದು ಆಧ್ಯಾತ್ಮಿಕ ಸಂಜ್ಞೆಯು ಗಮನಕ್ಕೆ ಬಾರದಿದ್ದಲ್ಲಿ ದಯವಿಟ್ಟು ಅದರ ಬಗ್ಗೆ ಸಂಕೇತಸ್ಥಳಕ್ಕೆ ತಿಳಿಸಬೇಕು. ಆ ಸಂಜ್ಞೆಗೆ ಸಂಬಂಧಿತ ಲೇಖನದವನ್ನು ಇನ್ನಷ್ಟು ಸುಸ್ಪಷ್ಟಗೊಳಿಸುತ್ತೇವೆ.