ಆಧ್ಯಾತ್ಮಿಕ ಸಂಜ್ಞೆಗಳ ಅರ್ಥ (ಭಾಗ -೧)

ಸಂಕಲನಕಾರರ ವೈಜ್ಞಾನಿಕ ದೃಷ್ಟಿಕೋನ

ಈ ಸಂಕೇತಸ್ಥಳದ ಯಾವುದೇ ಲೇಖನವನ್ನು ವಾಚಕರಿಗೆ ಸಂವಿಧಾನದ ಕಲಂ ೫೧ಅ ಇದಕ್ಕನುಸಾರ 'ವೈಜ್ಞಾನಿಕ ದೃಷ್ಟಿಕೋನವಿಡಲು' ಅಡಚಣೆಯನ್ನು ತರಲು ಬರೆದಿಲ್ಲ. ಸಂವಿಧಾನವು ಕಲಂ ೨೫ಕ್ಕನುಸಾರ ವ್ಯಕ್ತಿಗೆ ಧರ್ಮಪಾಲನೆಯ ಮತ್ತು ಧರ್ಮಪ್ರಸಾರದ ಅಧಿಕಾರವನ್ನು ನೀಡಿದೆ. ನ್ಯಾಯಾಲಯಗಳಲ್ಲಿನ ಅನೇಕ ತೀರ್ಪುಗಳಿಂದ ಧಾರ್ಮಿಕ ಭಾವನೆಗಳು ಹೊರನೋಟಕ್ಕೆ ಹೇಗೆ ಕಾಣಿಸಿದರೂ ಅವುಗಳಲ್ಲಿ ಮಧ್ಯ ಪ್ರವೇಶಿಸುವ ಅಧಿಕಾರವು ಸರಕಾರ ಅಥವಾ ನ್ಯಾಯಾಲಯಕ್ಕಿಲ್ಲ. ಹಾಗೆಯೇ ಈ ಮಧ್ಯ ಪ್ರವೇಶಿಸುವ ಅಧಿಕಾರವನ್ನು ಕೇವಲ ಸಾಮಾಜಿಕ ಶಾಂತಿ, ನೈತಿಕತೆ ಮತ್ತು ಆರೋಗ್ಯವು ಅಪಾಯಕ್ಕೊಳಗಾದಾಗ ಮಾತ್ರ ಮಾಡಬಹುದು ಎಂದು ತೀರ್ಪು ನೀಡಿದೆ. ಈ ಸಂಕೇತಸ್ಥಳದ ಈ ಮೂರು ವಿಷಯಗಳನ್ನು ಅಪಾಯಕ್ಕೊಳಪಡಿಸುವ ದೃಷ್ಟಿಯಿಂದ ಬರೆಯಲಾಗಿರದೇ ಸಂವಿಧಾನಾತ್ಮಕ ಅಧಿಕಾರವನ್ನು ಉಪಯೋಗಿಸಿಯೇ ಅಧ್ಯಾತ್ಮದ ಅಧ್ಯಯನ ಮಾಡಲು ಮತ್ತು ಧರ್ಮಾಚರಣೆಯನ್ನು ಹೇಳಲು ನೀಡಲಾಗಿವೆ.

ಶ್ರದ್ಧೆಯಿಂದ ಧರ್ಮಾಚರಣೆ ಮಾಡಿದರೆ ಧರ್ಮದ ಕುರಿತಾದ ವಿವಿಧ ಅನುಭವಗಳು ಬರುತ್ತವೆ, ಇದು ಇಂದಿನ ತನಕದ ಇತಿಹಾಸವಾಗಿದೆ. ಧರ್ಮ ಮತ್ತು ಶ್ರದ್ಧೆ ಈ ವಿಷಯಗಳು ವೈಯಕ್ತಿಕವಾಗಿರುವುದರಿಂದ ಈ ಸಂಕೇತಸ್ಥಳದ ಲೇಖನಗಳಲ್ಲಿ ನೀಡಿರುವ ಅನುಭವಗಳು ಸಹ ವೈಯಕ್ತಿಕವೇ ಆಗಿವೆ. ಆದುದರಿಂದ ಅವು ಸಾರಾಸಗಟಾಗಿ ಅನ್ವಯವಾಗುತ್ತವೆ ಅಥವಾ ಎಲ್ಲರಿಗೂ ಅದೇ ರೀತಿಯ ಅನುಭವಗಳೇ ಬರುತ್ತದೆ ಹೀಗೇನಿಲ್ಲ. ಸಮಾಜದಲ್ಲಿ ಅಂಧಶ್ರದ್ಧೆಯನ್ನು ಹರಡಲು ಅಥವಾ ವೈದ್ಯಕೀಯ ಉಪಚಾರಗಳಿಗೆ ಅಥವಾ ವೈಜ್ಞಾನಿಕ ದೃಷ್ಟಿಕೋನಗಳನ್ನು ವಿರೋಧಿಸಲು ಸಹ ಈ ಲೇಖನಗಳನ್ನು ಕೊಟ್ಟಿಲ್ಲ. ವಾಚಕರು ಮುಕ್ತಮನಸ್ಸಿನಿಂದ ಈ ಲೇಖನಗಳ ಅಧ್ಯಯನ ಮಾಡುವುದು ಅಪೇಕ್ಷಿತವಿದೆ ಎಂಬುದನ್ನು ದಯವಿಟ್ಟು ಎಲ್ಲರೂ ನೋಂದಣಿ ಮಾಡಬೇಕು. – ಸಂಕಲನಕಾರರು

ಸಂಕೇತಸ್ಥಳದ ಲೇಖನಗಳಲ್ಲಿ ಉಪಯೋಗಿಸಲಾಗಿರುವ ಕೆಲವು ಆಧ್ಯಾತ್ಮಿಕ ಪರಿಭಾಷೆಗಳ ಅರ್ಥ

ಆಧ್ಯಾತ್ಮಿಕ ಉಪಾಯ

ಯಾರಾದರೊಬ್ಬರ ಮನಸ್ಸಿನಲ್ಲಿ ಬಹಳಷ್ಟು ವಿಚಾರಗಳು ಬರುತ್ತಿದ್ದಾಗ, ಮನಸ್ಸು ಏಕಾಗ್ರವಾಗದಿದ್ದಾಗ, ಮಾನಸಿಕವಾಗಿ ಅಸ್ವಸ್ಥ ಅಥವಾ ಅಶಾಂತವೆನಿಸುತ್ತಿದ್ದಲ್ಲಿ ನಾಮಜಪ, ಧ್ಯಾನ, ಪ್ರಾಣಾಯಾಮ, ಮಂತ್ರಜಪ, ಪ್ರಾರ್ಥನೆ ಇತ್ಯಾದಿ ಆಧ್ಯಾತ್ಮಿಕ ಕೃತಿಗಳನ್ನು ಮಾಡಿದುದರಿಂದ ಸಾಧಕರ ಮನಸ್ಸು ಸ್ಥಿರ ಅಥವಾ ಪ್ರಸನ್ನವಾಗುತ್ತದೆ. ಈ ಆಧ್ಯಾತ್ಮಿಕ ಕೃತಿಗಳಿಗೆ 'ಆಧ್ಯಾತ್ಮಿಕ ಉಪಾಯ' ಎನ್ನುತ್ತಾರೆ.

ಸಂಕೇತಸ್ಥಳದ ಲೇಖನಗಳಲ್ಲಿರುವ ಶೇ.ವಾರು ಭಾಷೆ

ಅಧ್ಯಾತ್ಮವು ವೈಜ್ಞಾನಿಕ ಪರಿಭಾಷೆಯಲ್ಲಿ ತಿಳಿಯಬೇಕು ಎಂಬುದಕ್ಕಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಸಂಮ್ಮೋಹನ ಉಪಚಾರತಜ್ಞರಾಗಿರುವ ಪ.ಪೂ.ಡಾ.ಜಯಂತ ಆಠವಲೆ (ಸಂಕಲನಕಾರರು) ಇವರು ಸಂಕೇತಸ್ಥಳದ ಲೇಖನದಲ್ಲಿ ಕೆಲವು ವಿಷಯಗಳಲ್ಲಿ ವಿವಿಧ ಘಟಕಗಳ ಪ್ರಮಾಣವನ್ನು ಶೇ.ವಾರು ಭಾಷೆಯಲ್ಲಿ ತಿಳಿಸಿದ್ದಾರೆ. ಉದಾ. ಸ್ವಲ್ಪ, ಮಧ್ಯಮ ಮತ್ತು ಅಧಿಕ ಇವುಗಳಿಗೆ ಅವುಗಳ ಪ್ರಮಾಣಕ್ಕನುಸಾರ ೧ರಿಂದ ೩೦ಶೇ., ೩೧ರಿಂದ ೬೦ಶೇ. ಮತ್ತು ೬೧ರಿಂದ ೧೦೦ ಶೇ. ಹೀಗೆ ಹೇಳಲಾಗಿದೆ.

ಸಾಧಕರಿಗೆ ಹೊಳೆಯುವ ಜ್ಞಾನವು ಅವರ ಅಧ್ಯಾತ್ಮದಲ್ಲಿನ ಪ್ರತಿಭೆಯು ಜಾಗೃತವಾದುದರ ಅನುಭೂತಿ!

ಸನಾತನದ ಕೆಲವು ಸಾಧಕರು ಅನೇಕ ವರ್ಷ ಸಾಧನೆ (ತಪಸ್ಸು) ಮಾಡಿರುವುದರಿಂದ ಅವರ ಆಧ್ಯಾತ್ಮಿಕ ಪ್ರತಿಭೆಯು ಜಾಗೃತವಾಗಿ ಅವರಿಗೆ ವಿವಿಧ ವಿಷಯಗಳ ಮೇಲೆ ಜ್ಞಾನವು・ಹೊಳೆಯುತ್ತದೆ, ಇದು ಅನುಭೂತಿಯೇ ಆಗಿದೆ. ಅನುಭೂತಿ ಬರುವ ಸಂದರ್ಭದಲ್ಲಿನ ಧರ್ಮಶಾಸ್ತ್ರದ ಆಧಾರವು ಮುಂದಿನಂತಿದೆ. –

ತತಃ ಪ್ರಾತಿಭಶ್ರಾವಣರೇಧನಾದರ್ಶಾಸ್ವಾದವಾರ್ತಾ ಜಾಯಂತೆ| – ಪಾತಂಜಲಿಯೋಗದರ್ಶನ, ಪಾದ ೩, ಸೂತ್ರ ೩೬

ಅರ್ಥ : ಆತ್ಮದ ಜಾಗದಲ್ಲಿ ಸಂಯಮ (ಯೋಗಾಭ್ಯಾಸ ಮತ್ತು ಧ್ಯಾನ) ಮಾಡುವುದರಿಂದ ಪ್ರತಿಭಾಸಾಮರ್ಥ್ಯದಿಂದ ಸೂಕ್ಷ್ಮ (ಅಡಗಿರುವ) ಅಥವಾ ಅತೀ ದೂರದ ವಸ್ತುಗಳ ಜ್ಞಾನವಾಗುವುದು (ಅಂತರ್ದೃಷ್ಟಿ ಪ್ರಾಪ್ತವಾಗುವುದು) ದಿವ್ಯ (ದೈವೀ)ನಾದ ಕೇಳಿಸುವುದು, ದಿವ್ಯ ಸ್ಪರ್ಶದ ಅರಿವಾಗುವುದು, ದಿವ್ಯ ರೂಪ ಕಾಣಿಸುವುದು, ದಿವ್ಯ ರಸದ ಸವಿಯನ್ನು ಪಡೆಯುವುದು ಮತ್ತು ದಿವ್ಯ ಗಂಧದ ಅರಿವಾಗುವುದು ಈ ಸಿದ್ಧಿಗಳು ಪ್ರಾಪ್ತವಾಗುತ್ತವೆ.

ವಿಶ್ಲೇಷಣೆ : ಸನಾತನದ ಕೆಲವು ಸಾಧಕರಿಗೆ ಶ್ಲೋಕದಲ್ಲಿ ಹೇಳಿರುವಂತೆ ಯಾವುದಾದರೊಂದು ವಿಷಯಕ್ಕೆ ಸಂಬಂಧಿತ ಚಿಂತನ ಮಾಡಿಲ್ಲದಿರುವಾಗ ಅದರ ವಿಷಯದಲ್ಲಿ ಪ್ರತಿಭೆಯು ಜಾಗೃತವಾಗಿ ಜ್ಞಾನವು ಹೊಳೆಯುವುದು, ದಿವ್ಯ ನಾದ ಕೇಳಿಸುವುದು, ಸೂಕ್ಷ್ಮರೂಪ (ಸೂಕ್ಷ್ಮ-ಚಿತ್ರ) ಕಾಣಿಸುವುದು ಮುಂತಾದ ವಿವಿಧ ರೀತಿಯ ಅನುಭೂತಿಗಳು ಬರುತ್ತಿವೆ.

ಇದರಿಂದ ಸಾಧಕರಿಗೆ ಹೊಳೆಯುವ ಜ್ಞಾನವಿರಲಿ ಅಥವಾ ಯೋಗಾಭ್ಯಾಸದಿಂದ ಸಾಧಕರಲ್ಲಿ ಜಾಗೃತವಾಗುವ ಅಂತರ್ದೃಷ್ಟಿಯಿರಲಿ ಇವೆರಡಕ್ಕೂ ಧರ್ಮಶಾಸ್ತ್ರದ ಆಧಾರವಿದೆ ಎಂಬುದು ಸಿದ್ಧವಾಗುತ್ತದೆ.

ಜ್ಞಾನ ಸಿಗುವ ಸಾಧಕರ ನಮ್ರತೆ

ಇದರ ಕುರಿತು ಈ ಜ್ಞಾನವು ನನ್ನದಾಗಿರದೇ ಸಾಕ್ಷಾತ್ ಈಶ್ವರೀ ಜ್ಞಾನವಾಗಿದೆ ಎಂದು ಸಂಬಂಧಿತ ಸಾಧಕರ ಭಾವವಿರುತ್ತದೆ. ಅಹಂಕಾರ ಹೆಚ್ಚಾಗಬಾರದು, ಎಂದು ಅವರು ಜ್ಞಾನದ ಲೇಖನದ ಕೊನೆಗೆ ತಮ್ಮ ಹೆಸರನ್ನು ಬರೆಯದೇ ತಮ್ಮ ಶ್ರದ್ಧಾಸ್ಥಾನಗಳ ಹೆಸರನ್ನು ಬರೆಯುತ್ತಾರೆ ಮತ್ತು ಕಂಸದಲ್ಲಿ ಸ್ವತಃ ಮಾಧ್ಯಮವಾಗಿರುವುದಾಗಿ ಬರೆಯುತ್ತಾರೆ. ಉದಾ. ಸೂಕ್ಷ್ಮ ಜಗತ್ತಿನ ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ). ಸೂಕ್ಷ್ಮಜಗತ್ತಿನ ಓರ್ವ ವಿದ್ವಾಂಸರು ಅವರಿಗೆ ಜ್ಞಾನವನ್ನು ನೀಡುತ್ತಾರೆ ಎಂಬುವುದು ಸೌ. ಅಂಜಲಿ ಗಾಡಗೀಳರ ಭಾವವಾಗಿರುತ್ತದೆ.

ಯಾವುದಾದರೊಂದು ವಿಷಯವನ್ನು ಬರೆಯುವಾಗ ತೊಂದರೆಯಾದರೆ, ಜ್ಞಾನದ ಲೇಖನದ ಕೊನೆಗೆ ತಮ್ಮ ಹೆಸರನ್ನು ಬರೆಯದೇ 'ಓರ್ವ ಮಾಂತ್ರಿಕ' ಎಂದು ಬರೆಯುತ್ತಾರೆ ಮತ್ತು ಕಂಸದಲ್ಲಿ ಸ್ವತಃ ಮಾಧ್ಯಮವಾಗಿರುವುದಾಗಿ ಬರೆಯುತ್ತಾರೆ.

ಭಾಗ-2 ಓದಲು ಇಲ್ಲಿ ಕ್ಲಿಕ್ ಮಾಡಿ!

Leave a Comment