ರಾಮರಾಜ್ಯದಲ್ಲಿ ಶಿಕ್ಷಣಪದ್ಧತಿ ಹೇಗಿತ್ತು ?

ಶ್ರೀರಾಮನು ಸ್ವತಂತ್ರ ಶಿಕ್ಷಣವನ್ನು ನೀಡಿಪ್ರತಿಯೊಂದು ಮನೆಯಲ್ಲಿ 'ಶ್ರೀರಾಮ'ನನ್ನು ನಿರ್ಮಿಸಿದ್ದನು !

ರಾಮರಾಜ್ಯದಲ್ಲಿ ಆರ್ಥಿಕ ಯೋಜನೆಯೊಂದಿಗೆ ಉಚ್ಛ ಮಟ್ಟದ ’ರಾಷ್ಟ್ರೀಯ ಚಾರಿತ್ರ್ಯ’ವನ್ನು ನಿರ್ಮಿಸಲಾಗಿತ್ತು. ಆಗಿನ ಜನರು ನಿರ್ಲೋಭಿ, ಸತ್ಯವಾದಿ, ನಿಷ್ಕಾಮಿ, ಆಸ್ತಿಕ ಹಾಗೂ ಕೃತಿಶೀಲರಾಗಿದ್ದರು. ಕ್ರಿಯಾಶೂನ್ಯರಾಗಿರಲಿಲ್ಲ. ಯಾವಾಗ ವಿನಾಕಾರಣ ಸಂಬಳ ಬರುತ್ತದೆಯೋ ಆಗ ಕ್ರಿಯಾಶೂನ್ಯತೆಯು ಬಂದೇ ಬರುತ್ತದೆ. ಆಗಿನ ಕಾಲದಲ್ಲಿ ಜನರು ಸ್ವತಂತ್ರರಾಗಿದ್ದರು, ಏಕೆಂದರೆ ಶಿಕ್ಷಣವು ರಾಜರ ಹಾಗೂ ಧನದ ಆಶ್ರಯದಲ್ಲಿರದೇ ಸ್ವತಂತ್ರವಾಗಿತ್ತು. ಶಿಕ್ಷಣ ಹಾಗೂ ಶಿಕ್ಷಣವನ್ನು ನೀಡುವವರು ಪರಾಧೀನರಾಗಿದ್ದರೆ ಅಂತಹ ಶಿಕ್ಷಣದಿಂದ ನಿರ್ಮಾಣವಾಗುವುದಾದರೂ ಏನು ? ಏನನ್ನು ನೆಡುತ್ತೇವೆಯೋ ಅದೇ ಮೊಳಕೆಯೊಡೆಯುತ್ತದೆ. ಅದರಲ್ಲಿ ಬದಲಾವಣೆಯಾಗುವುದಿಲ್ಲ ಅಲ್ಲವೇ?

ಶ್ರೀರಾಮನು ಸ್ವತಂತ್ರ ಶಿಕ್ಷಣವನ್ನು ನೀಡಿ ಮನೆಮನೆಯಲ್ಲಿ ಓರ್ವ ಶ್ರೀರಾಮನನ್ನು ನಿರ್ಮಿಸಿದ್ದನು. ಎಲ್ಲಿ ಶಿಕ್ಷಣವು ರಾಜನ ಅಥವಾ ಧನದ ಆಶ್ರಯದಲ್ಲಿರುತ್ತದೆಯೋ ಅಲ್ಲಿ ಸ್ವತಂತ್ರ ಶ್ವಾಸೋಚ್ಛಾಸವಿರುವುದಿಲ್ಲ ಹಾಗೂ ರಾಷ್ಟ್ರೀಯ ಚಾರಿತ್ರ್ಯದ ಪುನರುತ್ಥಾನವಿರುವುದಿಲ್ಲ.

ಜನರಿಗೆ ದೊರೆತ ವಿಶಿಷ್ಠ ಶಿಕ್ಷಣದಿಂದ ’ರಾಷ್ಟ್ರೀಯ ಚಾರಿತ್ರ್ಯ’ ನಿರ್ಮಾಣವಾಯಿತು !

ಮನುಷ್ಯನನ್ನು ಕರ್ತವ್ಯನಿಷ್ಠೆ ಮತ್ತು ನಿರ್ಲೋಭಿಯನ್ನಾಗಿ ನಿರ್ಮಿಸಲಾಗಿತ್ತು. ನಾವು ಕೇವಲ ಒಂದೇ ಕರ್ತವ್ಯವನ್ನು ಮಾಡುತ್ತಿದ್ದರೆ ಕರ್ತವ್ಯನಿಷ್ಠೆ ಬರುವುದಿಲ್ಲ. ಆದುದರಿಂದ ಶ್ರೀರಾಮನು ಜನರಿಗೆ ವಿಶಿಷ್ಟ ಶಿಕ್ಷಣವನ್ನು ನೀಡಿ ರಾಷ್ಟ್ರೀಯ ಚಾರಿತ್ರ್ಯವನ್ನು ನಿರ್ಮಿಸಿದನು.

ಆಧಾರ : ವ್ಯಾಸವಿಚಾರ, ೯ನೆ ಸ್ಕಂಧ

ಸಮಾಜವು ನಮ್ಮ ಸುಖ ಹಾಗೂ ಹಿತದ ಕಲ್ಪನೆಯನ್ನು ಯಶಸ್ವಿಗೊಳಿಸಲು ಪ್ರಯತ್ನಿಸುತ್ತಿರುತ್ತದೆ; ಆದರೆ ಅದನ್ನು ಹೇಗೆ ಪಡೆಯುವುದು ಎಂಬುದರ ಅರಿವು ಅದಕ್ಕೆ ಇರುವುದಿಲ್ಲ. ಶ್ರೀರಾಮನಿಗೆ ಇದರ ಸಂಪೂರ್ಣ ಅರಿವಿದ್ದರಿಂದ ಅವನು ಆ ಕಾಲದಲ್ಲಿ ಜನರಿಗೆ ಸಾಧನೆಯಿಂದ ಧರ್ಮಾಧಿಷ್ಠಿತವಾದ ವಿಶಿಷ್ಟ ಶಿಕ್ಷಣದಿಂದ ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜವನ್ನು ನಿರ್ಮಿಸುವ ಶಿಕ್ಷಣವನ್ನು ನೀಡಿದ್ದನು. ಇದರಿಂದ ’ರಾಷ್ಟ್ರೀಯ ಚಾರಿತ್ರ್ಯ’ವು ನಿರ್ಮಾಣವಾಗಿತ್ತು.

– ಪ.ಪೂ. ಪಾಂಡೆ ಮಹಾರಾಜರು, ಸನಾತನ ಆಶ್ರಮ, ಪನವೇಲ.