ಪ್ರಾಚೀನ ಭಾರತದ ಶೈಕ್ಷಣಿಕ ವೈಭವ

ಭಾರತದಲ್ಲಿ ಬ್ರಿಟಿಷರ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಆ ಕಾಲದಲ್ಲಿ ಸರ್ ಥಾಮಸ್ ಮುನ್ರೊ ಎಂಬ ಬ್ರಿಟಿಷ ಅಧಿಕಾರಿಯು ಭಾರತದ ಶೈಕ್ಷಣಿಕ ಸ್ಥಿತಿಯ ಸಂಪೂರ್ಣ ಸಮೀಕ್ಷೆಯನ್ನು ಮಾಡಿದರು. ಈ ಸಮೀಕ್ಷೆಯಿಂದ ಪ್ರಾಚೀನ ಕಾಲದ ಭಾರತದ ಶೈಕ್ಷಣಿಕ ವೈಭವವು ಕಂಡುಬರುತ್ತದೆ.

೧. ಸರ್ ಥಾಮಸ್ ಸಮೀಕ್ಷೆ

೧ಅ. ಬಂಗಾಳ ಹಾಗೂ ಬಿಹಾರದಲ್ಲಿನ ೧ ಲಕ್ಷ ೫೦ ಸಾವಿರ ಊರಿನಲ್ಲಿರುವ ಶಾಲೆಗಳು : ೧ ಲಕ್ಷ

೧ಆ. ೧೮೨೬ರ ವರೆಗೆ ಮದ್ರಾಸ ಪ್ರಾಂತ್ಯದ ೨೧ ಜಿಲ್ಲೆಗಳಲ್ಲಿನ ಉಚ್ಛ ಶಿಕ್ಷಣಸಂಸ್ಥೆಗಳು : ೧೦೬೪

೧ಇ. ಬಂಗಾಳದ ಪ್ರತಿಯೊಂದು ಜಿಲ್ಲೆಯಲ್ಲಿರುವ ಉಚ್ಚ ಶಿಕ್ಷಣ ಸಂಸ್ಥೆಗಳು : ಸರಾಸರಿ ೧೦೦

ಮುಂಬೈ ಹಾಗೂ ಪಂಜಾಬ ಪ್ರಾಂತ್ಯಗಳ ಸಮೀಕ್ಷೆಯ ನಿಷ್ಕರ್ಷವೂ ಮೇಲಿನಂತೆಯೇ ಇದೆ.

೨. ಪ್ರಾಚೀನ ಭಾರತದ ಶೈಕ್ಷಣಿಕ ವೈಶಿಷ್ಟ್ಯಗಳು !

೨ಅ. ಸಮಾಜದ ಅವಶ್ಯಕತೆಯಂತೆ ಯೋಗ್ಯ ನಾಗರಿಕರನ್ನು ಸಿದ್ಧಪಡಿಸುವುದು : ಹಿಂದಿನ ಕಾಲದಲ್ಲಿ ಶಿಕ್ಷಣಕ್ಕಾಗಿ ಅಸ್ತಿತ್ವದಲ್ಲಿದ್ದ ಗುರುಪರಂಪರೆಯು ಅತ್ಯಂತ ಪ್ರಾಚೀನ ಹಾಗೂ ಶ್ರೇಷ್ಠ ಪರಂಪರೆಯಾಗಿದ್ದರಿಂದ ಶಿಕ್ಷಣದ ಗುಣಮಟ್ಟವು ಉಚ್ಚ ಮಟ್ಟದ್ದಾಗಿತ್ತು. 'ಸಮಾಜದ ಅವಶ್ಯಕತೆಯಂತೆ ಯೋಗ್ಯ ನಾಗರಿಕರನ್ನು ಸಿದ್ಧಗೊಳಿಸುವುದೇ ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಿತ್ತು; ಆದುದರಿಂದಲೇ ಶಿಕ್ಷಣವು ಮುಗಿದ ನಂತರ ಶಿಕ್ಷಣ ಸಂಸ್ಥೆಗಳು ಪದವಿಪ್ರದಾನ ಸಮಾರಂಭಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಯೋಗ್ಯತೆಯಂತೆ ಅವರ ವರ್ಣ ಹಾಗೂ ವ್ಯವಸಾಯವನ್ನು ನಿರ್ಧರಿಸುತ್ತಿದ್ದರು. ಇದಲ್ಲದೆ ಕುಟುಂಬದಲ್ಲಿಯೇ ಪರಂಪರಾಗತ ವ್ಯವಸಾಯದ ಶಿಕ್ಷಣ ದೊರೆಯುತ್ತಿತ್ತು.

೨ಆ. ಸರ್ವಾಂಗೀಣ ವ್ಯಾವಹಾರಿಕ ಜ್ಞಾನ : ಮೊದಲು ಶಾಲೆಯಲ್ಲಿ ಧರ್ಮಶಾಸ್ತ್ರ, ವಿಧಿ, ಜ್ಯೋತಿಷ್ಯಶಾಸ್ತ್ರದಂತಹ ಸರ್ವಾಂಗೀಣ ವ್ಯಾವಹಾರಿಕ ಜ್ಞಾನವನ್ನು ನೀಡಲಾಗುತ್ತಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಯೊಂದಿಗೆ ಅವರಲ್ಲಿ ಶಿಕ್ಷಣದ ನಂತರ ಓರ್ವ ಉತ್ತಮ ನಾಗರಿಕನಾಗುವ ಕ್ಷಮತೆಯನ್ನು ವೃದ್ಧಿಸುವಲ್ಲಿ ವಿಶೇಷ ಗಮನವನ್ನು ನೀಡಲಾಗುತ್ತಿತ್ತು. ಇದಕ್ಕಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಿವಾಸದ ಸೌಲಭ್ಯವೂ ಇರುತ್ತಿತ್ತು.

೨ಇ. ಶಿಕ್ಷಣವು ಸಮಾಜದ ರೂಪದಲ್ಲಿರುವ ವಿರಾಟ ಪುರುಷನ ಸೇವೆಯ ಮಾಧ್ಯಮವಾಗಿರುವುದು : ಶಿಕ್ಷಣವು ಕೇವಲ ಹೊಟ್ಟೆ ತುಂಬಿಸುವ ಅಥವಾ ಹಣಗಳಿಸುವ ಮಾಧ್ಯಮವಾಗಿರಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಂಪೂರ್ಣ ಕ್ಷಮತೆಯನ್ನು ಉಪಯೋಗಿಸಿ ಸಮಾಜ ರೂಪದಲ್ಲಿರುವ ವಿರಾಟ ಪುರುಷನ ಸೇವೆ ಮಾಡುತ್ತಿದ್ದರು; ಆದುದರಿಂದ ಯಾವುದೇ ವ್ಯವಹಾರದಲ್ಲಿ ಭ್ರಷ್ಟಾಚಾರ, ಸಂಗ್ರಹಿಸುವುದು ಅಥವಾ ಮೋಸದ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.

೨ಈ. ಶಿಕ್ಷಣದ ಆರ್ಥಿಕ ಹೋಣೆಯನ್ನು ಹೊತ್ತ ರಾಜರು ಹಾಗೂ ಅದರ ಯೋಗ್ಯ ಫಲವನ್ನು ಹಿಂತಿರುಗಿಸುವ ವಿದ್ಯಾರ್ಥಿಗಳು : ವೈದಿಕ ಕಾಲದಿಂದ ರಾಜ ಮಹಾರಾಜರು ಹಾಗೂ ಹಿರಿಯ ಸ್ಥಾನದಲ್ಲಿರುವ ಮಹಾನುಭಾವರು ಜಾಗ್ರತೆಯಿಂದ ಹಾಗೂ ಕೃತಿಶೀಲರಾಗಿಶಿಕ್ಷಣ ವ್ಯವಸ್ಥೆಯ ಖರ್ಚನ್ನು ನೋಡಿಕೊಳ್ಳುತ್ತಿದ್ದರು. ಓರ್ವ ಶಿಕ್ಷಣ ಸಂಸ್ಥೆಗೆ ಆರ್ಥಿಕ ಸಹಾಯ ಮಾಡುವುದೆಂದರೆ ಋಷಿ ಋಣದಿಂದ ಮುಕ್ತಗೊಳಿಸುವ ಪುಣ್ಯಕರ್ಮವೆಂದು ತಿಳಿಯಲಾಗುತ್ತದೆ. ಆದುದರಿಂದ ಶಿಕ್ಷಣ ಸಂಸ್ಥೆಗಳು ರಾಜನ ಆರ್ಥಿಕ ಸಹಾಯದಿಂದ ನಡೆಯುತ್ತಿದ್ದವು ಹೊರತು ಅವು ರಾಜಾಶ್ರಿತವಾಗಿರಲಿಲ್ಲ.

ಆಧಾರ : ಮಾಸಿಕ ಗೀತಾ ಸ್ವಾಧ್ಯಾಯ, ಜನವರಿ ೨೦೧೧