ವಾಹನಗಳು ಹಾಗೂ ವಾಯು ಮಾಲಿನ್ಯ

ವಾಯುಮಾಲಿನ್ಯ

೧. ವಾಹನದೊಳಗಿನ ಮೂಲ ಯಂತ್ರದಿಂದ ಕಾಡಿಗೆಯ ಸೂಕ್ಷ್ಮ ಕಣಗಳು ಹೊರ ಬೀಳುತ್ತವೆ. ವಾತಾವರಣನ್ನು ಮಲಿನಗೊಳಿಸುತ್ತವೆ. ವಾತಾವರಣದಲ್ಲಿ ಪಸರಿಸಿರುವ ಕಾಡಿಗೆಯ ಸೂಕ್ಷ್ಮ ಕಣಗಳ ಸಂಪರ್ಕದಲ್ಲಿ ದೀರ್ಘಕಾಲದವರೆಗೆ ಇದ್ದರೆ ಫುಪ್ಫುಸದ ಕರ್ಕರೋಗವು ಹಾಗೂ ಹೃದಯದ ಅನ್ಯ ವಿಕಾರಗಳು ಕೂಡ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. (ಶ್ರೀರಾಮ ಸಿಧಯೆ, ದೈನಿಕ ಮಹಾರಾಷ್ಟ್ರ ಟೈಮ್ಸ್, ಮಾರ್ಚ ೨೦೦೨)

೨. ವಾಹನಗಳಿಂದ ಆಗುವ ವಾಯುಮಾಲಿನ್ಯದ ಪ್ರಶ್ನೆಯಂತೂ ಜಗತ್ತಿನಲ್ಲೆಲ್ಲಕಡೆ ಭಯಹುಟ್ಟಿಸುತ್ತಲೇ ಇದೆ ಹಾಗೂ ಅದರ ಪರಿಣಾಮವು ಸಜೀವ ಮತ್ತು ನಿರ್ಜೀವ ವಸ್ತುಗಳು ಎನ್ನದೆ ಎರಡರ ಮೇಲೂ ಆಗುತ್ತಿದೆ. ಕೋಲ್ಕತದಲ್ಲಿ ವಾಯು ಮಾಲಿನ್ಯ ಎಷ್ಟು ತೀವ್ರ ರೂಪ ಹೊಂದಿದೆ ಅಂದರೆ, ಮಧ್ಯಾಹ್ನದ ಸಮಯದಲ್ಲಿಯೂ ಕೂಡ ಮುಸ್ಸಂಜೆಯ ಬೆಳಕಿರುತ್ತದೆ. ಅಲ್ಲಿ ಶುಭ್ರವಾದ ಬಟ್ಟೆಗಳನ್ನು ಧರಿಸಿದರೆ ಒಂದೆರಡು ಗಂಟೆಯೊಳಗೆ ವಾತಾವರಣದ ಕೊಳೆ ಮೆತ್ತಿಕೊಳ್ಳುತ್ತದೆ!.

೩. ಥೈಲ್ಯಾಂಡ್ನ ರಾಜಧಾನಿಯಾದ ಬ್ಯಾಂಕಾಕ್ ನಗರದ ವಾಹನಗಳ ಪ್ರಚಂಡ ಸಂಖ್ಯೆಯಿಂದ ಗಂಭೀರವಾದ ವಾಯುಮಾಲಿನ್ಯ ಆಗಿದೆ. ಇಲ್ಲಿನ ದೊಡ್ಡ ರಸ್ತೆಯ ಬದಿಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳ ಹಲ್ಲಿನ ವಸಡೆಗಳಲ್ಲಿ ಹಾಗೂ ಮೂತ್ರದಲ್ಲಿ ಸೀಸ (ಲೆಡ್) ಸೇರಿರುವುದು ಕಂಡುಬಂದಿದೆ. (ದೈನಿಕ ಪುಢಾರಿ, ೩.೬.೧೯೯೯ )

೪. ‘ಒಬ್ಬ ಪ್ರಾಧ್ಯಾಪಕ ಮಿತ್ರರು ಹೇಳುತ್ತಿದ್ದರು, ನ್ಯೂಯಾರ್ಕ, ಟೋಕಿಯೋ, ಲಂಡನ್ ಮುಂತಾದ ನಗರಗಳ ಗಾಳಿಯು ವಿಲಕ್ಷಣವಾದ ವಿಷದಿಂದ ತುಂಬಿಕೊಂಡಿದೆ. ಮನುಷ್ಯನು ಎಷ್ಟು ಸಹಿಸಬಹುದು, ಅದಕ್ಕಿಂತ ಮೂರರಷ್ಟು ಅಧಿಕ ವಿಷವು ವಾತಾವರಣದಲ್ಲಿದೆ. ಆದರೂ ಮನುಷ್ಯ ಜೀವಿಸುತ್ತಿರುವನು. ಇಷ್ಟೊಂದು ವಿಷವು ಸಹಿಸುವ ರೂಢಿಯಾಗಿದೆ. ರೂಢಿಯಿಂದ ಅಭ್ಯಾಸವಾಗಿದೆ, ವಿಷ ಸಹಿಸುವ ಅವನ ಕ್ಷಮತೆಯು ಹೆಚ್ಚಿದೆ. ಮುಂಬಯಿಯ ಗಾಳಿಯಲ್ಲಿಯೂ ಎರಡುಪಟ್ಟು ಹೆಚ್ಚು ವಿಷ ಖಂಡಿತವಾಗಿಯೂ ಇರಬಹುದಾಗಿದೆ. – ಗುರುದೇವ ಡಾ. ಕಾಟೇಸ್ವಾಮಿಜಿ ( ಘನಗರ್ಜಿತ, ಮಾರ್ಚ ೨೦೦೮ )

೫. ಪೆಟ್ರೋಲ ಹಾಗೂ ಡೀಜೆಲ್ ಇವುಗಳ ಬಳಕೆಯಿಂದ ವಾಯುವು ವಿಷಯುಕ್ತವಾಗಿರುವುದು! ನೀವು ವಾಹನಗಳನ್ನು ನಡೆಸುತ್ತೀರಾ? ಪೆಟ್ರೋಲ ಹಾಗೂ ಡೀಜೆಲ್ ಇವುಗಳ ಬಳಕೆಯಿಂದ ‘ವಾಯು’ ಇನ್ನೆಷ್ಟು ವಿಷಯುಕ್ತ ಮಾಡುತ್ತಿರಿ? – ಗುರುದೇವ ಡಾ. ಕಾಟೇಸ್ವಾಮಿಜಿ ( ಘನಗರ್ಜಿತ, ಜುಲೈ ೨೦೦೯ )