ಶಿವರಾಜ್ಯಾಭಿಷೇಕ ದಿನದ ಮಹತ್ವ !

ಶಿವರಾಜ್ಯಾಭಿಷೇಕ ದಿನ

ಮಿತ್ರರೇ, ಜ್ಯೇಷ್ಠ ಶುಕ್ಲ ಪಕ್ಷ ತ್ರಯೋದಶಿ, ಈ ದಿನವು ‘ಶಿವರಾಜ್ಯಾಭಿಷೇಕ ದಿನ’ವಾಗಿದೆ. ಇಂದಿನ ರಾಜಕಾರಣಿಗಳ ಮಾನಸಿಕತೆಯನ್ನು ನೋಡಿದ ಮೇಲೆ ಶಿವಾಜಿ ಮಹಾರಾಜರಂತಹ ರಾಜರ ಆವಶ್ಯಕತೆ ನಮಗಿದೆಯೆಂದು ನಮ್ಮೆಲ್ಲರ ಗಮನಕ್ಕೆ ಬರುತ್ತದೆ. ಶಿವಾಜಿ ಮಹಾರಾಜರಂತಹ ರಾಜರಿಂದಾಗಿಯೇ ರಾಷ್ಟ್ರ ಮತ್ತು ಧರ್ಮದ, ಅಂದರೆ ನಮ್ಮ ರಕ್ಷಣೆಯೂ ಆಗುವುದು. ಮಿತ್ರರೇ, ಇಂದು ನಾವೇನು ನೋಡುತ್ತಿದ್ದೇವೆ? ರಾಜಕಾರಣಿಗಳು ಕೋಟ್ಯಾವಧಿ ಮೌಲ್ಯದ ರಾಷ್ಟ್ರೀಯ ಸಂಪತ್ತನ್ನು ದೋಚುತ್ತಿದ್ದಾರೆ. ಇಂದು ಭ್ರಷ್ಟಾಚಾರ, ಚಾರಿತ್ರ್ಯಹೀನತೆ ಮತ್ತು ಅನೇಕ ಆಪಾದನೆಗಳಲ್ಲಿ ಸಿಲುಕಿರುವ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ. ಇಂತಹ ಜೂಜುಕೋರರಂತಹ ರಾಜಕಾರಣಿಗಳು ನಮ್ಮ ಮತ್ತು ನಮ್ಮ ರಾಷ್ಟ್ರದ ರಕ್ಷಣೆಯನ್ನು ಹೇಗೆ ಮಾಡಲು ಸಾಧ್ಯ? ಆದ್ದರಿಂದ ಇವರನ್ನು ಓಡಿಸಿ, ಶಿವಾಜಿ ಮಹಾರಾಜರಂತಹ ರಾಜಕಾರಣಿಗಳನ್ನು ಪಟ್ಟಕ್ಕೇರಿಸಲು ನಿಶ್ಚಯಿಸುವುದು ಶಿವರಾಜ್ಯಾಭಿಷೇಕ ದಿನದ ಮಹತ್ವವಾಗಿದೆ.

ಶಿವಾಜಿ ಮಾಹಾರಾಜ ಎಂದರೆ ನಮ್ಮ ರಕ್ಷಕ!

ದೇವರು, ದೇಶ ಮತ್ತು ಧರ್ಮ ಸಂಕಟದಲ್ಲಿರುವಾಗ ಛತ್ರಪತಿ ಶಿವಾಜಿ ಮಹಾರಾಜರ ರೂಪದಲ್ಲಿ ಹಿಂದೂಗಳಿಗೆ ರಕ್ಷಕನು ದೊರಕಿ ಪ್ರಜೆಗಳ (ಜನರ) ದೈನ್ಯತೆಯು ದೂರವಾಗುವುದು : ಶಿವಾಜಿ ಮಹಾರಾಜರ ರಾಜ್ಯಾಭಿಷೇಕವಾಗುವ ಮುಂಚೆ ನಮ್ಮ ಮಾತೆಯರು ಮತ್ತು ಸಹೋದರಿಯರು ಸುರಕ್ಷಿತವಾಗಿರಲಿಲ್ಲ. ಸ್ತ್ರೀಯರ ಮೇಲೆ ಅನೇಕ ಅತ್ಯಾಚಾರಗಳು ಆಗುತ್ತಿದ್ದವು. ಅವರ ರಕ್ಷಣೆಗೆ ಯಾವ ರಕ್ಷಕನೂ ಇರಲಿಲ್ಲ. ಒತ್ತಾಯಪೂರ್ವಕವಾಗಿ ಹಿಂದೂಗಳ ಧರ್ಮಾಂತರವೂ ನಡೆಯುತ್ತಿತ್ತು. ಅಂದರೆ ಆ ಕಾಲದಲ್ಲಿಯೂ ನಮ್ಮ ದೇವರು, ದೇಶ ಮತ್ತು ಧರ್ಮ ಇತ್ಯಾದಿ ಎಲ್ಲವೂ ಸಂಕಟದಲ್ಲಿದ್ದವು. ಹಿಂದೂಗಳಿಗೆ ಅಭಯ ನೀಡುವವರ ಆವಶ್ಯಕತೆ ಇತ್ತು! ಇಂತಹ ಸಮಯದಲ್ಲಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕವು ನಡೆಯಿತು ಮತ್ತು ಶಿವಾಜಿ ಮಹಾರಾಜರು ಜನತೆಯ ಮೇಲೆ ತಾಯಿಗೆ ಸಮಾನ ಪ್ರೀತಿಯನ್ನು ತೋರಿದರು. ಪ್ರಜೆಗಳಿಗೆ ಅವರನ್ನು ರಕ್ಷಿಸುವಂತಹ ರಾಜ ದೊರೆತನು. ಅದರಿಂದ ಆ ಸಮಯದ ಜನರು ಸುಖವಾಗಿ ಬಾಳತೊಡಗಿದರು. ತಮ್ಮ ರಾಜನಿಗಾಗಿ ತಮ್ಮ ಜೀವವನ್ನೇ ಪಣಕ್ಕಿಡಲು ಮುಂದಾದರು. ಇಂದಿಗೂ ನಮಗೆ ಛತ್ರಪತಿ ಶಿವಾಜಿ ಮಹಾರಾಜರಂತಹ ರಾಜರೇ ಬೇಕೆಂದೆನಿಸುವುದಲ್ಲವೇ?

ಶಿವಾಜಿ ಮಹಾರಾಜ ಬಗ್ಗೆ ಇಂದು ನಡೆಯುವ ಅಪಪ್ರಚಾರ!

ಛತ್ರಪತಿ ಶಿವಾಜಿ ಮಹಾರಾಜರ ಸ್ಪೂರ್ತಿದಾಯಕವಾದ ಇತಿಹಾಸವನ್ನು ಮುಚ್ಚಿಹಾಕಲು ಇಂದಿನ ರಾಜಕಾರಣಿಗಳು ಮಾಡುತ್ತಿರುವ ಪ್ರಯತ್ನಗಳು.

ಅ. ಶಾಲೆಗಳಲ್ಲಿ ಸುಳ್ಳು ಮತ್ತು ವಿಕೃತ ಇತಿಹಾಸವನ್ನು ಕಲಿಸುವುದು : ಎನ್.ಸಿ.ಇ.ಆರ್.ಟಿ. ಪಠ್ಯಪುಸಕ್ತದಲ್ಲಿ ‘ನಮ್ಮ ಆದರ್ಶ ರಾಜರು’ನಂತಹ ಪಾಠದಲ್ಲಿ ‘ಶಿವಾಜಿ ಮಹಾರಾಜರು ಲೂಟಿಕೋರರಾಗಿದ್ದರು’ ಹಾಗೂ ‘ಲೂಟಿಕೋರರಾಗಿರುವವರು ಆದರ್ಶ ರಾಜರಾಗಿದ್ದರು’ ಎಂದು ಸುಳ್ಳು ಇತಿಹಾಸವನ್ನು ಕಲಿಸಲಾಗುತ್ತಿದೆ. ಅಕಬರನು ಯಾವ ರೀತಿಯಲ್ಲಿ ಆದರ್ಶ ರಾಜನಾಗಿದ್ದನು ಎನ್ನುವುದನ್ನು ಬಿಂಬಿಸಲು ಪಠ್ಯಪುಸ್ತಕದಲ್ಲಿ ಪುಟಗಳ ತುಂಬ ವರ್ಣನೆ ಮಾಡಿದ್ದಾರೆ. ಮತ್ತು ಯಾರನ್ನು ವಿಶ್ವದೆಲ್ಲೆಡೆ ‘ಆದರ್ಶ ರಾಜ’ ಎಂದು ಗೌರವಿಸಲಾಗುತ್ತಿದೆಯೋ ಅಂತಹ ಛತ್ರಪತಿ ಶಿವಾಜಿ ಮಹಾರಾಜರ ಕುರಿತಾಗಿ ಮಾತ್ರ ನಾಲ್ಕು ಸಾಲುಗಳಲ್ಲಿ ವಿವರಿಸಿದ್ದಾರೆ.

ಮಿತ್ರರೇ, ಈ ರಾಜಕಾರಣಿಗಳು ನಮ್ಮ ಪುಸ್ತಕದಿಂದ ಶಿವಾಜಿ ಮಹಾರಾಜರ ಮತ್ತು ಅಫಜಲಖಾನನ ವಧೆಯ ಚಿತ್ರವನ್ನು ಸಹ ತೆಗೆದು ಹಾಕಿದ್ದಾರೆ.

ಆ. ರಾಯಗಡ (ಕೋಟೆ) ಮೇಲೆ ಯಾವ ಸ್ಥಳದಲ್ಲಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕವಾಯಿತೋ, ಅಲ್ಲಿ ಜಯಂತಿಯನ್ನು ಆಚರಿಸಲು ಕೂಡ ನಿರ್ಬಂಧವಿದೆ. ಈಗ ಹೇಳಿ ಮಿತ್ರರೇ, ನಿಜವಾದ ಇತಿಹಾಸವನ್ನು ಮುಚ್ಚಿಡುವ ಇಂದಿನ ರಾಜಕಾರಣಿಗಳು ನಮ್ಮ ಮೇಲೆ ಯಾವ ರೀತಿಯ ಸಂಸ್ಕಾರವನ್ನು ಮಾಡುತ್ತಾರೆ?

ಇಂದಿನ ರಾಜಕಾರಣಿಗಳ ಸತ್ಯ ಸ್ವರೂಪ

ಅ. ಬಾಲ್ಯದಿಂದಲೇ ವೈಷಮ್ಯದ ಬೀಜವನ್ನು ಬಿತ್ತುವುದು : ನಾವು ಶಾಲೆಗೆ ಹೋಗುತ್ತೇವೆ, ಅಲ್ಲಿ ವರ್ಗದಲ್ಲಿ ‘ನಿಮ್ಮ ಜಾತಿ ಯಾವುದು? ನೀನು ಇಂತಹ ಜಾತಿಗೆ ಸೇರಿರುವುದರಿಂದ ನಿನಗೆ ಸರಕಾರದಿಂದ ಸವಲತ್ತುಗಳು ದೊರೆಯಬಹುದು. ಹಾಗೆಯೇ ನಿನಗೆ ಕಡಿಮೆ ಅಂಕಗಳು ದೊರೆತರೂ ನಿನಗೆ ಎಲ್ಲಿ ಬೇಕಾದರೂ ಪ್ರವೇಶ ದೊರಕಬಹುದು!’ ಎಂದು ಹೇಳುತ್ತಾರೆ. ಅಂದರೆ ಶಾಲೆಯಿಂದಲೇ ನಮ್ಮ ಮನಸ್ಸಿನಲ್ಲಿ ವೈಷಮ್ಯದ ಬೀಜವನ್ನು ಬಿತ್ತಲಾಗುತ್ತದೆ. ಇಂತಹ ಬೀಜವನ್ನು ಬಿತ್ತುವ ರಾಜಕಾರಣಿಗಳು ನಮಗೆ ಬೇಡವೇ ಬೇಡ! ಪ್ರತಿಯೊಂದು ಮಗುವಿಗೂ ಅವನು ಯಾವುದೇ ಜಾತಿಯವನಿರಲಿ, ಅವನ ಕ್ಷಮತೆ ಮತ್ತು ಜಾಣ್ಮೆಗನುಗುಣವಾಗಿ ಪ್ರವೇಶ ದೊರೆಯಬೇಕು. ಇದರಿಂದಲೇ ಸಮಾಜದಲ್ಲಿ ಸಮಾನತೆ ಮತ್ತು ಮಕ್ಕಳಲ್ಲಿ ಸಂಘಭಾವನೆಯು ನಿರ್ಮಾಣವಾಗುವುದು.

ಛತ್ರಪತಿ ಶಿವಾಜಿ ಮಹಾರಾಜರು ತನ್ನ ಸೈನ್ಯದಲ್ಲಿ ತರುಣರನ್ನು ಭರ್ತಿ ಮಾಡಿಸಿಕೊಳ್ಳುವಾಗ ಅವನು ಯಾವ ಜಾತಿಯವನಾಗಿದ್ದಾನೆ ಎಂದು ನೋಡುವ ಬದಲಾಗಿ, ಆ ಕೆಲಸಕ್ಕೆ ಅವನು ಅರ್ಹನಿದ್ದಾನೆಯೇ ಎನ್ನುವ ಬಗ್ಗೆ ವಿಚಾರವನ್ನು ಮಾಡುತ್ತಿದ್ದರು. ನಮಗೂ ಇಂತಹ ರಾಜರೇ ಬೇಕಲ್ಲವೇ? ಯಾರು ಎಲ್ಲರನ್ನು ಸಮಾನತೆಯಿಂದ ನೋಡಿಕೊಳ್ಳುತ್ತಾರೆಯೋ ಮತ್ತು ಸಂಘಭಾವನೆಯನ್ನು ಕಾಪಾಡಿಕೊಂಡು ರಾಷ್ಟ್ರ ರಕ್ಷಣೆಗಾಗಿ ಸಿದ್ಧರಾಗುವ ಪೀಳಿಗೆಯನ್ನು ನಿರ್ಮಾಣ ಮಾಡುತ್ತಾನೆಯೋ, ಅಂತಹ ರಾಜಕಾರಣಿಗಳನ್ನು ನಾವು ಚುನಾವಣೆಯಲ್ಲಿ ಆರಿಸಬೇಕು.

ಆ. ಮಕ್ಕಳು ತಿನ್ನುವ ಅನ್ನ ಮತ್ತು ಕುಡಿಯುವ ಹಾಲಿನಲ್ಲಿಯೂ ಕಲಬೆರಕೆ: ನಿಜ ಹೇಳಬೇಕೆಂದರೆ ರಾಜನು ತಾಯಿಯಂತೆ ಇರಬೇಕು. ಆದರೆ ಇಂದಿನ ರಾಜಕಾರಣಿಗಳಿಗೆ ನಮ್ಮ ಜೀವದ ಬಗ್ಗೆ ಯಾವ ಕಾಳಜಿಯೂ ಇಲ್ಲ. ಯಾವ ರಾಜಕಾರಣಿಗಳು ವಿದ್ಯಾರ್ಥಿಗಳಿಗೆ ನೀಡಲಾಗುವ ಊಟ ಮತ್ತು ಹಾಲಿನಲ್ಲಿಯೂ ಭ್ರಷ್ಟಾಚಾರವನ್ನು ಎಸಗುತ್ತಾರೆಯೋ ಅವರು ಎಂದಾದರೂ ನಮ್ಮ ರಕ್ಷಣೆಯನ್ನು ಮಾಡಬಲ್ಲರೇ? ಇಂತಹ ರಾಜಕಾರಣಿಗಳನ್ನು ನಿಷೇಧ ಮಾಡುವುದೇ ನಿಜವಾದ ಶಿವರಾಜ್ಯಾಭಿಷೇಕದ ದಿನವನ್ನು ಆಚರಿಸುವುದಾಗಿದೆ.

ಇ. ಜನರು ಆಹಾರವಿಲ್ಲದೇ ಉಪವಾಸದಿಂದ ಸಾಯುತ್ತಿದ್ದರೂ, ಧಾನ್ಯಗಳಿಂದ ಮದ್ಯವನ್ನು ತಯಾರಿಸಲು ಪ್ರೋತ್ಸಾಹಿಸುವುದು : ಇಂದು ನಮ್ಮ ದೇಶದಲ್ಲಿ ಶೇ.೪೦ರಷ್ಟು ಜನರು ಉಪವಾಸವಿರುತ್ತಾರೆ. ತಿನ್ನಲು ಆಹಾರವಿಲ್ಲದೇ ಅವರು ಸಾಯುತ್ತಿರುವಾಗ, ಧಾನ್ಯಗಳಿಂದ ಮದ್ಯವನ್ನು ತಯಾರಿಸಲಾಗುತ್ತಿದೆ. ಇಂತಹ ಅತಿಯಾದ ಸ್ವಾರ್ಥದಿಂದ ಕೂಡಿರುವ ರಾಜಕಾರಣಿಗಳನ್ನು ಮನುಷ್ಯರೆಂದು ಹೇಗೆ ಕರೆಯಬಹುದು? ಇವರಿಗೆ ಅಧಿಕಾರವನ್ನು ನಡೆಸಲು ಯಾವ ಯೋಗ್ಯತೆಯಿದೆ? ಇಂತಹವರನ್ನು ಓಡಿಸುವ ನಿಶ್ಚಯವನ್ನು ಮಾಡಿದರೆ ಅದು ‘ಶಿವರಾಜ್ಯಾಭಿಷೇಕ ದಿನ’ ಕ್ಕೆ ಅನ್ವರ್ಥವಾಗುವುದು. ಇಂತಹ ನಿಶ್ಚಯವನ್ನು ಮಾಡುವಿರಲ್ಲವೇ?

ಈ. ಪಾಶ್ಚಿಮಾತ್ಯ ಚಲನಚಿತ್ರಗಳು ಮತ್ತು ಜಾಹೀರಾತುಗಳಿಂದ ಮಕ್ಕಳ ಮೇಲೆ ಕೆಟ್ಟ ಸಂಸ್ಕಾರವಾಗಬಹುದೆನ್ನುವ ವಿಚಾರವನ್ನು ಮಾಡದಿರುವುದು : ನಮ್ಮ ಮೇಲೆ ಒಳ್ಳೆಯ ಸಂಸ್ಕಾರವಾಗಬೇಕೆಂದರೆ ಇದಕ್ಕಾಗಿ ಯಾವ ಮಾಧ್ಯಮಗಳು ಲಭ್ಯವಿವೆ? ಎಲ್ಲ ಚಲನಚಿತ್ರಗಳಲ್ಲಿಯೂ ಅಶ್ಲೀಲತೆ, ಹೊಡೆದಾಟ, ಬಡಿದಾಟ, ಹತ್ಯೆ ಮತ್ತು ದರೋಡೆ ಮಾಡುವುದು ಮುಂತಾದವುಗಳನ್ನು ತೋರಿಸಲಾಗುತ್ತಿದೆ. ಇದರಿಂದ ನಮ್ಮ ಮೇಲೆ ಯಾವ ತೆರನಾದ ಸಂಸ್ಕಾರವಾಗುವುದು? ಚಲನಚಿತ್ರ ಮತ್ತು ಜಾಹೀರಾತುಗಳಲ್ಲಿ ಮೈಮೇಲೆ ತುಂಡು ಬಟ್ಟೆ ಹಾಕಿರುವ ಹೆಣ್ಣುಮಕ್ಕಳು ಮತ್ತು ಹುಡುಗರನ್ನು ತೋರಿಸುತ್ತಾರೆ. ಇದರಿಂದ ನಮ್ಮ ಮೇಲೆ ಯಾವ ರೀತಿಯ ಸಂಸ್ಕಾರಗಳನ್ನು ಮಾಡುವುದಿದೆ, ಅಥವಾ ನಮ್ಮನ್ನು ಕೆಡಿಸುವ ಪ್ರಯತ್ನವೇ? ನಮಗೆ ಇಂತಹ ರಾಜಕಾರಣಿಗಳು ಬೇಡವೇ ಬೇಡ, ಯಾರು ನಮ್ಮ ಮೇಲೆ ರಾಷ್ಟ್ರ, ಧರ್ಮ ಮತ್ತು ಭಾರತೀಯ ಸಂಸ್ಕೃತಿ ಇವುಗಳ ಸಂಸ್ಕಾರವನ್ನು ಮಾಡುವುದಿಲ್ಲವೋ ಅಂತಹವರು ಬೇಡವೇ ಬೇಡ.

ಉ. ಮಕ್ಕಳ ಮೇಲೆ ಪರಕೀಯ ಭಾಷೆಯನ್ನು ಹೇರಿ ಸ್ವಭಾಷೆಯಿಂದ ಅವರನ್ನು ವಂಚಿತರನ್ನಾಗಿಸುವುದು: ನೀವು ನಮಗೆ ಚಿಕ್ಕಂದಿನಿಂದ ಪರಕೀಯ ಭಾಷೆಯಲ್ಲಿಯೇ ಏಕೆ ಶಿಕ್ಷಣವನ್ನು ನೀಡುತ್ತೀರಿ? ಮಾತೃಭಾಷೆಯ ಜ್ಞಾನ ಒಳ್ಳೆಯದಿದ್ದರೆ, ಅವನು ಇತರ ಭಾಷೆಗಳನ್ನು ಕೂಡ ಸಹಜತೆಯಿಂದ ಕಲಿಯಬಲ್ಲನು. ಈ ಪರಕೀಯ ಭಾಷೆಯಿಂದ ನಮ್ಮ ಮನಸ್ಸಿನ ಮೇಲೆ ಒತ್ತಡ ನಿರ್ಮಾಣವಾಗಿ ಕೀಳರಿಮೆಯಿಂದ ನಿರಾಶೆಯೂ ಬರುತ್ತದೆ. ನಮಗೆ ಮಾತೃಭಾಷೆಯಿಂದಲೇ ಶಿಕ್ಷಣವನ್ನು ನೀಡಿ. ನಮಗೆ ನಮ್ಮ ದೇವತೆಗಳ ಕುರಿತಾದ ಮಾಹಿತಿ, ಹಾಗೆಯೇ ಜೀವನದ ಎಲ್ಲ ಮೌಲ್ಯಗಳನ್ನು ಕಲಿಸುವ ರಾಮಾಯಣ ಮಹಾಭಾರತ ಇವುಗಳ ಶಿಕ್ಷಣ ಬೇಕಾಗಿದೆ. ಭಾವಿ (ಮುಂದಿನ) ಪೀಳಿಗೆಯು ಸಕ್ಷಮವಾಗಬೇಕಾದರೆ ಇಂತಹ ವಿಚಾರವನ್ನು ಮಾಡದಿರುವ ಈ ರಾಜಕಾರಣಿಗಳು, ನಮ್ಮ ಸಮಸ್ಯೆಗಳ ಕುರಿತು ಯಾವುದೇ ವಿಚಾರವನ್ನು ಮಾಡುವುದಿಲ್ಲ.

ಮಿತ್ರರೇ, ಇಂತಹ ರಾಜಕಾರಣಿಗಳು ನಿಮಗೆ ಇಷ್ಟವಾಗುತ್ತಾರೆಯೇ? ಇಲ್ಲವಲ್ಲ? ನಮಗೆ ಛತ್ರಪತಿ ಶಿವಾಜಿ ಮಹಾರಾಜರಂತಹ ರಾಜರು ಬೇಕಾಗಿದ್ದಾರಲ್ಲವೇ? ಯೋಚಿಸಿ !

– ಶ್ರೀ ರಾಜೇಂದ್ರ ಪಾವಸಕರ(ಗುರೂಜಿ) ಪನವೇಲ (೨೦೧೩)

Leave a Comment