ಸುಭಾಷಚಂದ್ರ ಬೋಸ್ – ಆಝಾದ ಹಿಂದ್ ಸೇನೆ

ಬೋಸ್ ಮತ್ತೆ ಅಜಾದ್ ಹಿಂದ್ ಸೇನೆಯ ಸ್ಥಾಪನೆ

ಸುಭಾಷಚಂದ್ರ ಬೋಸ್ ಭಾರತದ ಸ್ವಾತಂತ್ರ್ಯಸಂಗ್ರಾಮದ ಓರ್ವ ಅಗ್ರಗಣ್ಯ ನೇತಾರರಾಗಿದ್ದರು. ಇವರನ್ನು ನೇತಾಜಿ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ.  ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಸಹಾಯದಿಂದ ಆಂಗ್ಲರೊಂದಿಗೆ ಹೋರಾಡಲು ಆಝಾದ ಹಿಂದ್​ ಸೇನೆಯನ್ನು ಸ್ಥಾಪಿಸಿದರು. ಅವರು ನೀಡಿದ ’ಜೈ ಹಿಂದ್​’ ಘೋಷಣೆಯು ಇಂದು ಭಾರತದ ರಾಷ್ಟೀಯ ಘೋಷಣೆಯಾಗಿದೆ.

ಮಹಾತ್ಮಾ ಗಾಂಧಿಯವರು ೧೯೪೪ರಲ್ಲಿ ಅಮೇರಿಕಾದ ಪತ್ರಕರ್ತ ಲುಯಿ ಫಿಶರರೊಂದಿಗೆ ಚರ್ಚಿಸುವಾಗ ನೇತಾಜಿಯವರನ್ನು ’ದೇಶಭಕ್ತರ ದೇಶಭಕ್ತ’ ಎಂದು ಉಲ್ಲೇಖಿಸಿದ್ದರು. ನೇತಾಜಿಯವರ ಕೊಡುಗೆ ಹಾಗೂ ಪ್ರಭಾವ ಎಷ್ಟಿತ್ತೆಂದರೆ ’ಒಂದು ವೇಳೆ ನೇತಾಜಿ ವಿಭಜನೆಯ ಸಮಯದಲ್ಲಿ ಭಾರತದಲ್ಲಿ ಉಪಸ್ಥಿತರಿದ್ದರೆ, ಬಹುಶಃ ಭಾರತದ ವಿಭಜನೆಯಾಗುತ್ತಿರಲಿಲ್ಲ, ಭಾರತವು ಏಕಸಂಘ ರಾಷ್ಟ್ರವಾಗಿರುತ್ತಿತ್ತು’ ಎಂಬುದು ತಿಳಿದವರ ಅಭಿಪ್ರಾಯವಾಗಿದೆ. ಸ್ವತಃ ಗಾಂಧೀಜಿಯವರಿಗೂ ಹೀಗೆ ಅನಿಸುತ್ತಿತ್ತು.

ಬೋಸ್​ ಸ್ಥಾಪಿಸಿದ ಆಝಾದ ಹಿಂದ್​ ಸೇನೆ ಭಾರತದ ಪಾರತಂತ್ರ್ಯದ ಕಾಲದ ಸೈನ್ಯ

ಪ್ರತಿಯೊಬ್ಬ ಭಾರತೀಯನನ್ನು ರೋಮಾಂಚನಗೊಳಿಸುವ ಶಬ್ದವಾದ ’ಆಝಾದ ಹಿಂದ್​ ಸೇನೆ’ ಎನ್ನುತ್ತಿದ್ದಂತೆಯೇ ದೇಶದ ಸ್ವಾತಂತ್ರ್ಯಕ್ಕೋಸ್ಕರ ಜಗತ್ತನ್ನು ಚೀಲಕ್ಕೆ ತುಂಬುವ ಸುಭಾಷಚಂದ್ರ ​ಬೋಸ್, ‘ಚಲೋ ದಿಲ್ಲಿ’ ಎಂಬ ಎಂದು ಗರ್ಜಿಸುತ್ತ​ ಹಿಂದುಸ್ಥಾನದ ದಿಕ್ಕಿನತ್ತ ಪ್ರಯಾಣಿಸಿದ ಸ್ವಾತಂತ್ರ್ಯಸಂಗ್ರಾಮದ ಕಲ್ಪನೆಯಿಂದ ಅರಳಿದ ಸೇನೆ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ಸಿದ್ದವಾಗಿರುವ  ಹಿಂದುಸ್ಥಾನೀ ಸ್ತ್ರೀಯರ ಝಾಂಸೀ ರಾಣಿಯ ಗುಂಪು ಕಣ್ಣಮುಂದೆ​ ಕಾಣಿಸುತ್ತದೆ. ೧೮೫೭ ರ ಮೊದಲ ಸ್ವಾತಂತ್ರ್ಯಸಂಗ್ರಾಮದಲ್ಲಿ ಮೈಮರೆತು ಹೋರಾಡಿದ ಝಾಂಸಿ ರಾಣಿಯ ಹೆಸರನ್ನು ಪಡೆದುಕೊಂಡ ಗುಂಪು ಹಿಂದುಸ್ಥಾನದ ಸ್ವಾತಂತ್ರ್ಯಸಂಗ್ರಾಮದಲ್ಲಿನ ನಿರ್ಣಾಯಕ ಪರ್ವದಲ್ಲಿನ ಹೋರಾಟಕ್ಕೆ ಶಸ್ತ್ರಸಜ್ಜರಾಗಿರುವುದು ಅಸಾಮಾನ್ಯವಾದ ಯೋಗವಾಗಿದೆ. ಭಾರತದ ಸ್ವಾತಂತ್ರ್ಯ ’ಲಕ್ಷ್ಮಿಯ ಕಾಲಿನಿಂದಲೇ’ ಬಂದಿತು ಎಂಬ ಶಬ್ಧಗಳು ಎಲ್ಲ ದೃಷ್ಟಿಯಿಂದಲೂ ನಿಜವೆನಿಸುತ್ತವೆ.

ತಮ್ಮ ದೇಶದಿಂದ ಮೂರುವರೆ ವರ್ಷಗಳವರೆಗೆ ಹೊರಗೆ ಉಳಿದ ನೇತಾಜಿಗೆ ತಮ್ಮ ಮಾತೃಭೂಮಿಗೆ, ದೇಶವನ್ನು ಪ್ರವೇಶಿಸುವ ಮೊದಲು ಶತ್ರುಗಳನ್ನು ಹೊರಓಡಿಸಿ, ತಮ್ಮ ಮಾತೃಭೂಮಿಯನ್ನು ದಾಸ್ಯತ್ವದಿಂದ ಮುಕ್ತಗೊಳಿಸಿ ತಮ್ಮ ಸಾರ್ವಭೌಮ ದೇಶದ ಓರ್ವ ಸನ್ಮಾನನೀಯ ನಾಗರಿಕ​ನಾಗಿ ಮರಳಬೇಕೆಂಬ ತೀವ್ರ ಆಸೆ ಇತ್ತು. ಕಳೆದ ಮೂರುವರೆ ವರ್ಷಗಳಲ್ಲಿ ಮಾಡಿದ ಅಪಾರ ಶ್ರಮ ಹಾಗೂ ಆಯೋಜನೆಗಳ ಫಲದ್ರೂಪಗೊಳ್ಳುವ ಲಕ್ಷಣಗಳು ಕಂಡುಬರುತ್ತಿದ್ದವು, ಆದರೆ ನೇತಾಜಿಯು ಹಗಲುಗನಸು ಕಾಣುವಂತಹ ಆಶಾವಾದಿ ಮನುಷ್ಯನಾಗಿರದೇ ಓರ್ವ ದೂರದೃಷ್ಟಿಯುಳ್ಳವರಾಗಿದ್ದರು. ಅವರು ಸಂಪೂರ್ಣ ತಯಾರಿಯಿಂದ ಹಾಗೂ ಬಲದಿಂದ ದಾಳಿ ನಡೆಸಿ ಅದು ನಿರ್ಣಾಯಕ ಹಾಗೂ ಯಶಸ್ವಿಯಾಗುವ ಪೂರ್ಣ ವಿಶ್ವಾಸವಾದ ನಂತರವೇ ತಮ್ಮ ನಿರ್ಣಾಯಕ ದಾಳಿ ಮಾಡುವವರಿದ್ದರು ಹಾಗೂ ಅವರು ಇಂತಹ ನಿರ್ಣಾಯಕ ದಾಳಿಯು ಯಶಸ್ವಿಯಾಗಲು ಕೇವಲ ಸೈನ್ಯ ಮತ್ತು ಶಸ್ತ್ರಗಳಷ್ಟೇ ಸಾಲದೆ ನಮ್ಮ ಪ್ರಯತ್ನಗಳಿಗೆ ದೇಶಬಾಂಧವರ ಮನಃಪೂರ್ವಕ ಬೆಂಬಲ ಸಿಗುವುದು ಅವಶ್ಯಕವಿದೆ ಎಂಬುದನ್ನು ಅರಿತಿದ್ದರು. ಮಾತ್ರ ’ ಆಝಾದ ಹಿಂದ್​ ಸೇನೆಯು ಪರಕೀಯ ಅಧಿಕಾರದ ಮೇಲೆ ಹೊರಗಿನಿಂದ ದಾಳಿ ಮಾಡುವ ಸಮಯಕ್ಕೆ ಜಾಗೃತ ಹಾಗೂ ಸ್ವಾತಂತ್ರ್ಯಕ್ಕಾಗಿ ಸಿದ್ಧವಿರುವ ಸರ್ವಸಾಮಾನ್ಯ ಭಾರತೀಯರು ಒಳಗಿನಿಂದ ದಾಳಿ ಎಬ್ಬಿಸಿದಾಗ, ಈ ಇಬ್ಬದಿಯ ದಾಳಿಯಲ್ಲಿ ಪರಕೀಯರ  ಬೇಳೆ ಬೇಯದಿರುವ ಕ್ಷಣವೇ ನಿಜವಾದ ಸ್ವಾತಂತ್ರ್ಯದ ಕ್ಷಣವಾಗಿರುವುದು’ ಎಂಬುದು ನೇತಾಜಿಯವರ ಧ್ಯೇಯವಾಗಿತ್ತು.

ಆದರೆ ಇದಕ್ಕಾಗಿ ನಮ್ಮ ದೇಶವಾಸಿಗಳಿಗೆ ಆಝಾದ ಹಿಂದ್​ ಸೇನೆಯು ನಮ್ಮ ಮುಕ್ತಿಸೇನೆ ಮತ್ತು ಸ್ವತಂತ್ರ ಹಿಂದುಸ್ಥಾನದ ಭಾವೀ ಸೇನಾದಳವಾಗಿದೆ ಎಂಬ ಭಾವನೆ ಉಂಟಾಗುವುದು ಅತ್ಯವಶ್ಯಕವಾಗಿದೆ ಎಂದು ನೇತಾಜಿಯವರಿಗೆ ಅನಿಸುತ್ತಿತ್ತು. ಇದು ಅತ್ಯಂತ ಕಠಿಣವಿದೆ ಎಂಬುದೂ ಅವರಿಗೆ ತಿಳಿದಿತ್ತು. ಒಂದು ಕಡೆ ಧೂರ್ತ ಬ್ರಿಟೀಷರು ಅಪಪ್ರಚಾರ ನಡೆಸಿ ಕುಚೇಷ್ಟೆಯೊಂದಿಗೆ ಆಝಾದ ಹಿಂದ್​ ಸೇನೆಯನ್ನು ಅತ್ಯಂತ ತುಚ್ಛವಾಗಿ ’ಜಿಫ್ಸ’ (ಜಾಪನೀಜ್ ಇನ್ಸಪಾವರ್ಡ ಫಿಫ್ಥ ಕಾಲಮ್ನಿಸ್ಟಸ್) ಎಂದು ಉಲ್ಲೇಖಿಸುತ್ತಿದ್ದರು. ಬ್ರಿಟೀಷರು ’ಆಝಾದ ಹಿಂದ್​ ಸೇನೆಯು ಜಪಾನೀಯರ ಅಧೀನದಲ್ಲಿರುವ ದಲವಾಗಿದ್ದು, ಅದು ಭಾರತದ ಮೇಲೆ ಜಪಾನ ರೂಪಿ ಶತ್ರುವಿಗೆ ಆಕ್ರಮಣ ಮಾಡಲು ಸಹಾಯ ಮಾಡುತ್ತಿದೆ ಮತ್ತು ಇದರಲ್ಲಿ ಅವರಿಗೆ ಅಧಿಕಾರದ ಲಾಲಸೆಯಿದೆ, ಅಂದರೆ ಇದು ಸೇನೆಯಲ್ಲ ದ್ರೋಹಿಯಾಗಿದೆ’ ಎಂಬಂತೆ ಅಪಪ್ರಚಾರ ಮಾಡಿದ್ದರು. ಇನ್ನೊಂದೆಡೆ ಪ್ರಸ್ಥಾಪಿತ ಮುಖಂಡರು ಹಾಗೂ ಕಾಂಗ್ರೆಸ ಪಕ್ಷವೂ ನೇತಾಜಿ ಹಾಗೂ ಆಝಾದ ಹಿಂದ್​ ಸೇನೆಯನ್ನು ತಮ್ಮದು ಎಂದು ಹೇಳಲು ನಿರಾಕರಿಸಿದರು ಹಾಗೂ ಅವರನ್ನು ಧಿಕ್ಕರಿಸಲಾಗಿತ್ತು, ಅವರ ಭಗೀರಥ ಪ್ರಯತ್ನಗಳ ಬಗ್ಗೆ ಅವಲೋಕನ ಮಾಡಲು ಸಿದ್ಧರಿರಲಿಲ್ಲ ಹಾಗೂ ಅವರ ನಕಾರಾತ್ಮಕ ಪ್ರತಿಮೆಯನ್ನು ನಿರ್ಮಿಸಿಟ್ಟಿದ್ದರು. ಕಾಂಗ್ರೆಸ್ಸ ಇಂತಹ ಪ್ರಯತ್ನವು ತಮ್ಮ ಧೋರಣೆಗೆ ವಿರುದ್ಧವಾಗಿರುವುದರಿಂದ ಅವರನ್ನು ವಿರೋಧೀಸುವ ಧೋರಣೆಯನ್ನು ಸ್ವೀಕರಿಸಿತ್ತು.

ನೇತಾಜಿಯವರು ಪ್ರತ್ಯಕ್ಷ ತಮ್ಮ ಮಾತೃಭೂಮಿಯಲ್ಲಿನ ಈ ಪರಿಸ್ಥಿತಿಯನ್ನು ಕಂಡು ಜಗತ್ತಿನಲ್ಲಿ ತಮ್ಮ ಸೈನ್ಯದ ಸ್ಥಾನ ಏನಿರಬಹುದು? ಯಾವ ಪ್ರತಿಮೆ ಇರಬಹುದು? ಹಾಗೂ ತಮ್ಮ ದೇಶದ ಸ್ವಾತಂತ್ರ್ಯಸಂಗ್ರಾಮಕ್ಕೆ ಬೇಕಾದ ಜಾಗತೀಕ ಸಹಾಯದ ಮಹತ್ವವನ್ನು ಅರಿತಿದ್ದರು. ಇಷ್ಟೇ ಅಲ್ಲ ’ತಾವು ಮತ್ತು ತಮ್ಮ ಸೈನ್ಯವು ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದು ಈ ಪ್ರಯತ್ನದಲ್ಲಿ ಏಶಿಯಾದ ಎಲ್ಲ ಸ್ವಾತಂತ್ರ್ಯವಾದಿ ರಾಷ್ಟ್ರ ಹಾಗೆಯೇ ಪಾಶ್ಚಿಮಾತ್ಯ ರಾಷ್ಟ್ರಗಳೂ ಒಂದು ಸ್ವಾತಂತ್ರ್ಯೋನ್ಮುಖ ರಾಷ್ಟ್ರವೆಂದು ತಮಗೆ ಬೆಂಬಲ ನೀಡಬೇಕು’ ಎಂಬುದು ನೇತಾಜಿಯವರ ಮಹತ್ವಾಕಾಂಕ್ಷೆಯಾಗಿತ್ತು. ಓರ್ವ ವ್ಯಕ್ತಿ ಅಥವಾ ಸಂಘಟನೆಗೆ ಬೆಂಬಲ ನೀಡುವುದು ಅಥವಾ ವಯಕ್ತಿಕ ಸಹಾಯ ನೀಡುವುದು ಮತ್ತು ಯುದ್ಧದಲ್ಲಿ ಒಂದು ರಾಷ್ಟ್ರವು ನ್ಯಾಯ ಸಮ್ಮತವಾದ ಇನ್ನೊಂದು ರಾಷ್ಟ್ರಕ್ಕೆ ಬೆಂಬಲ ನೀಡುವುದರಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ಮುಖ್ಯವಾಗಿ ಯಾವಾಗ ಒಂದು ದೇಶದ ಸೈನ್ಯವು ತನ್ನ ಸಂಗ್ರಾಮವನ್ನು ಹೂಡುವುದು ಹಾಗೂ ಸಮವಿಚಾರದ ರಾಷ್ಟ್ರಗಳು ಅದಕ್ಕೆ ಸಹಾಯ ಮಾಡುವುದೋ ಆಗ ಅದು ಸಂಕೇತಕ್ಕನುಸಾರವಾಗಿರುತ್ತದೆ ಆದರೆ ಯಾವುದಾದರೊಂದು ಗುಂಪಿಗೆ ಅಥವಾ ವ್ಯಕ್ತಿನಿಷ್ಟ ಸಂಘಟನೆಗೆ ಸಹಾಯ ಮಾಡುವುದು ಇವು ಇತರ ರಾಷ್ಟ್ರಗಳ ಒಳಜಗಳ ಆಥವಾ ಹಸ್ತಕ್ಷೇಪ ಎಂದು ನಿರ್ಧರಿತವಾಗುತ್ತದೆ. ಆಝಾದ ಹಿಂದ್​ ಸೇನೆಯು ಯಾವುದೇ ವಯಕ್ತಿಕ ಲಾಭಕ್ಕಾಗಿ ಅಥವಾ ತಮ್ಮ ಹಟಪೂರ್ತಿಗಾಗಿ ನಡೆಸಿದ ಹೋರಾಟವಾಗಿರಲಿಲ್ಲ ಅದು ಒಂದು ಸಮರಕ್ಕಾಗಿ ನಿಂತಿರುವ ರಾಷ್ಟ್ರದ ಗೌರವವಾಗಿತ್ತು. ಮತ್ತು ಆದುದರಿಂದಲೇ ನೇತಾಜಿಯವರು ಮಾತ್ರಭೂಮಿ ಹಾಗೂ ಅವಳಿಗೆ ಬೇಂಬಲಕ್ಕೆ ನಿಂತಿರುವ ಮಿತ್ರರಾಷ್ಟ್ರಗಳಿಗೆ ಕೆಟ್ಟಹೆಸರು ಬರದಂತೆ ನೋಡಿಕೊಳ್ಳುತ್ತಿದ್ದರು, ಆದರೆ ಅವರು ತಮ್ಮ ಸಂಗ್ರಾಮ ಯುದ್ಧನೀತಿಗೆ ಹಾಗೂ ಸಂಕೇತವನ್ನು ಅನುಸರಿಸಿ ತಮ್ಮ ಹಾಗೂ ತಮ್ಮ ರಾಷ್ಟ್ರದ ಹಕ್ಕು ಪಡೆಯಲು ನ್ಯಾಯ ಮಾರ್ಗದಿಂದ ಹೋರಾಡುವವರಿದ್ದರು.

ಶಿವಾಜಿಮಹಾರಾಜರು ಯಾವ ಕಾರಣದಿಂದ ರಾಜಮುಕುಟದ ಬಗ್ಗೆ ಎಳ್ಳಷ್ಟು ಆಸಕ್ತಿಯಿಲ್ಲದಿರುವಾಗಲೂ ರಾಯಗಡದ ಮೇಲೆ ತಮ್ಮ ರಾಜ್ಯಾಭೀಷೇಕ ಮಾಡಿಸಿಕೊಂಡು ಸ್ವರಾಜ್ಯ ಸ್ಥಾಪನೆಯ ಘೋಷಣೆ ಮಾಡಿದರೋ, ನೇತಾಜಿಯವರೂ ಅದೇ ಉದ್ದೇಶದಿಂದ ಆಝಾದ ಹಿಂದ್​ನ ಹಂಗಾಮಿ ಸರಕಾರವನ್ನು ಸ್ಥಾಪಿಸುವ ನಿರ್ಣಯ ತೆಗೆದುಕೊಂಡರು. ಇಲ್ಲಿ ಪುನಃ ನೇತಾಜಿಯವರ ಮೇಲಿನ ಶಿವಚರಿತ್ರೆಯ ಪ್ರಭಾವವು ಕಂಡುಬರುತ್ತದೆ. ನಮ್ಮ ಲಷ್ಕರ ಎಂದರೆ ಯಾವುದೇ ದರೋಡೆಖೋರರ ಗುಂಪಲ್ಲ, ಯಾವುದೇ ಅಧಿಕಾರಾಸಕ್ತಿಯುಳ್ಳ ಸೈನ್ಯವಲ್ಲ, ಯಾವುದೇ ಅತ್ಯಾಚಾರಿಗಳ ಗುಂಪು ಆಗಿರದೆ ಹಿಂದುಸ್ಥಾನವನ್ನು ಸ್ವತಂತ್ರಗೊಳಿಸಲು ವಚನಬದ್ಧ ಹಾಗೂ ಧ್ಯೇಯಾಸಕ್ತ ದೇಶಭಕ್ತರು ಸಂಘಟಿತರಾಗಿ ಮತ್ತು ತಮ್ಮ ಭಾವೀ ಸ್ವತಂತ್ರ ರಾಷ್ಟ್ರದ ಪ್ರತಿನಿಧೀಕವಾದ ಸರಕಾರವನ್ನು ಸ್ಥಾಪಿಸಿ ಸಂಪೂರ್ಣ ಜಗತ್ತಿಗೆ ’ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ನಮ್ಮ ರಾಷ್ಟ್ರಧ್ವಜದ ಕೆಳಗೆ ನಮ್ಮ ಸೇನಾನಿಗಳ ಅಧಿಪತ್ಯದಲ್ಲಿ ಉಪಲಬ್ಧವಿರುವ ಎಲ್ಲ ಮಾರ್ಗ ಹಾಗೂ ಸಹಾಯಗಳಿಂದ ಹೋರಾಡುವವರಿದ್ದೇವೆ ಹಾಗೂ ಈ ಸಂಘರ್ಷವು ಸ್ವಾತಂತ್ರ್ಯಪ್ರಾಪ್ತಿಯಲ್ಲಿಯೇ ವಿಲೀನವಾಗುವುದು. ಈಗ ಯಾರೂ ನಮ್ಮನ್ನು ದ್ರೋಹಿ, ಪಿತೂರಿಯವರು, ಲೋಭಿ, ಭ್ಯಾಡ ಹಾಗೂ ಪರಕೀಯರ ಕೈಗೊಂಬೆಗಳೆಂದು ಹೇಳಲಾರರು ಏಕೆಂದರೆ ಈಗ ನಾವು ಸ್ವತಂತ್ರ ಹಿಂದುಸ್ಥಾನದ ಸರಕಾರವನ್ನು ಸ್ಥಾಪಿಸುತ್ತಿದ್ದು ಯಾರು ನಮ್ಮೊಂದಿಗೆ ಬರುವವರಿದ್ದಾರೆಯೋ ಅವರು ನಮ್ಮ ರಾಷ್ಟ್ರಕ್ಕೆ ಮಾನ್ಯತೆಯನ್ನು ನೀಡಿ,  ನಮ್ಮ ಸ್ವಾತಂತ್ರ್ಯದ ಆದರವಿಟ್ಟು ನಮ್ಮನ್ನು  ಮಿತ್ರರಾಷ್ಟ್ರ ವೆಂದು ನಮಗೆ ಬೆಂಬಲ ಕೊಡುತ್ತಿದ್ದಾರೆ, ಆದರೆ ಸ್ವಾತಂತ್ರ್ಯವು ನಮ್ಮದೇ ಇರುವುದು ಮತ್ತು ಅದಕ್ಕಾಗಿ ಯಾವಾಗ ಯಾವಾಗ ರಕ್ತಪಾತವಾಗುವುದೋ ಆಗ ಮೊಟ್ಟಮೊದಲು ನಮ್ಮ ರಕ್ತ ಚೆಲ್ಲುವುದು !

ದಿನಾಂಕ ೨೧ ಅಕ್ಟೋಬರ ೧೯೪೩ ರಂದು ಸಿಂಗಾಪುರದಲ್ಲಿ ಬೋಸ್​
ಆಝಾದ ಹಿಂದ್​ನ ಹಂಗಾಮಿ ಮತ್ತು ಅಸ್ಥಾಯಿ ಸರಕಾರದ ಘೋಷಣೆ ಮಾಡಿದರು.

1362476805_1567977364_f2ab218b18

ನೇತಾಜಿಯವರಿಗೆ ಇತಿಹಾಸದ ಉತ್ತಮ ಅಭ್ಯಾಸವಿತ್ತು ಇಷ್ಟೇ ಅಲ್ಲದೇ ಅವರು ಭೂತಕಾಲದಲ್ಲಿ ನಡೆದ ಅನೇಕ ಘಟನೆಗಳ ಸಂಗತಿಯನ್ನು ವರ್ತಮಾನ ಪರೀಸ್ಥಿತಿಯೊಂದಿಗೆ ತಪ್ಪಿಲ್ಲದೆ ಸಾಧಿಸುತ್ತಿದ್ದರು. ಈ ಅಸ್ಥಾಯಿ ಸರಕಾರವನ್ನು ಸ್ಥಾಪಿಸುವಾಗ ಅವರ ಕಣ್ಣೆದುರು ಜಾಗತೀಕ ಇತಿಹಾಸದಲ್ಲಿನ ೧೯೧೬ ನೇ ಇಸವಿಯ ಐರಿಶ್ ಸ್ವಾತಂತ್ರ್ಯವೀರರು ಸ್ಥಾಪಿಸಿದ ಅಸ್ಥಾಯಿ ಸರಕಾರ, ಝೆಕ್ ಅಸ್ಥಾಯಿ ಸರಕಾರ ಹಾಗೆಯೇ ಕೇಮಾಲ್ ಪಾಶಾ ಇವನು ಅನಾತೊಲಿಯಾದಲ್ಲಿ ಸ್ಥಾಪಿಸಿದ ಹಂಗಾಮಿ ಸರಕಾರ ಇವುಗಳೆಲ್ಲ ಇರಲೇಬೇಕು. ನೇತಾಜಿಯವರು ಈ ಪ್ರಸಂಗದಲ್ಲಿ  ಸೇರಿದ ೧೦೦೦ ಕ್ಕೂ ಹೆಚ್ಚಿನ ಪ್ರತಿನಿಧಿಗಳಿಗೆ ಈ ಸರಕಾರದ ಸ್ವರೂಪವನ್ನು ತಿಳಿಸಿ ಹೇಳುವಾಗ ಯುದ್ಧಕಾಲಕ್ಕೆ ಸ್ಥಾಪಿಸಲ್ಪಟ್ಟ ಈ ಸರಕಾರದ ಕಾರ್ಯಪದ್ಧತಿಯು ಶಾಂತಿಕಾಲದಲ್ಲಿನ ಸಾಮಾನ್ಯ ಸರಕಾರಕ್ಕಿಂತ ಸಾಕಷ್ಟು ವಿಭಿನ್ನವಾಗಿರುವುದು, ಅದರ ಕಾರ್ಯಪದ್ಧತಿಯು ಬೇರೆಯಾಗಿರುವುದು ಏಕೆಂದರೆ ಅದು ಶತ್ರುಗಳ ವಿರುದ್ಧ ಹೋರಾಡುವ ಸರಕಾರವಾಗಿರುವುದು. ಈ ಸರಕಾರಕ್ಕೆ ಮಂತ್ರಿಮಂಡಲದ ಹೊರತು ಇತರ ಅನೇಕ ಸಲಹೆಗಾರರು ಇರುವರು. ಅವರು ಪೂರ್ವ ಏಶಿಯಾದಲ್ಲಿನ ಹಿಂದುಸ್ಥಾನಿಯರೊಂದಿಗೆ ಸತತವಾಗಿ ಸಂಪರ್ಕದಲ್ಲಿರುವರು. ಯಾವಾಗ ಈ ಸರಕಾರ ಸ್ವತಂತ್ರ ಹಿಂದುಸ್ಥಾನದ ಭೂಮಿಯಲ್ಲಿ ಸ್ಥಾಳಾಂತರಿತವಾಗುವುದೋ ಆಗ ಅದು ಎಂದಿನ ಕೆಲಸಗಳನ್ನು ಮಾಡಲು ಆರಂಭಿಸುತ್ತದೆ. ಈ ಸರಕಾರದ ಮಂತ್ರಿಮಂಡಲಕ್ಕೆ ಕೆಂಪು ದೀಪದ ಗಾಡಿಗಳು ಮತ್ತು ಮಾನಸನ್ಮಾನ ಇರದೆ  ಸ್ವರಾಜ್ಯ ಸ್ಥಾಪನೆಯ ಜಬಾಬ್ದಾರಿಯಿತ್ತು. ಸಂಗ್ರಾಮವು ಆರಂಭವಾಗಿದೆ, ಈಗ ಯಾವಾಗ ಪ್ರತ್ಯಕ್ಷ ಯುದ್ಧಭೂಮಿಯ ಕಡೆಗೆ ಆಝಾದ ಹಿಂದ್​ ಸೇನೆಯು ಪ್ರಸ್ಥಾನ ಮಾಡುವುದೋ ಅಗಲೇ ಪ್ರತ್ಯಕ್ಷ ಯುದ್ಧವು ಪ್ರಾರಂಭವಾಗುವುದು. ಯುದ್ಧದಲ್ಲಿ ಜಯ ಗಳಿಸಿ, ಆಂಗ್ಲ್ ಮತ್ತು ಅಮೇರಿಕದ ಸೈನ್ಯಕ್ಕೆ ಮಣ್ಣುಮುಕ್ಕಿಸಿ ವ್ಹಾಯಿಸರಾಯನನ್ನು ಹೊರಹಾಕಿ ಅವನ ಭವನದ ಮೇಲೆ ಯಾವಾಗ ತ್ರಿವರ್ಣ ಧ್ವಜವನ್ನು ಹಾರಿಸುವೆವೋ ಆಗಲೇ ಹೋರಾಟ ನಿಲ್ಲುವುದು’ ಎಂದು ಹೇಳಿದ್ದರು.

ಆಝಾದ ಹಿಂದ್​ನ ಹಂಗಾಮಿ ಸರಕಾರದ ಮಂತ್ರಿ ಮಂಡಲ

1362476887_1567977346_b67f40a242

ನೇತಾಜಿಯವರು ಸ್ವತಃ ಈ ಸರಕಾರದ ಸರ್ವೋಚ್ಚಪದವಿಯಲ್ಲಿ ಅಂದರೆ ಪ್ರಧಾನಮಂತ್ರಿ ಅಥವಾ ರಾಷ್ಟ್ರಪ್ರಮುಖರಾಗಿದ್ದರು. ಯುದ್ಧ ಹಾಗೂ ಪರರಾಷ್ಟ್ರವ್ಯವಹಾರ ಈ ಎರಡು ಖಾತೆಗಳು ಅವರ ಬಳಿ ಇದ್ದವು. ಸ್ವಾತಂತ್ರ್ಯಪರ್ವದ ಭೀಷ್ಮಾಚಾರ್ಯರಾದ ರಾಶಬಾಬು ಈ ಸರಕಾರದ ಸರ್ವೋಚ್ಚ ಸಲಹೆಗಾರರಾಗಿ ಇರಬೇಕು ಎಂಬುದಾಗಿ ಮೊದಲೇ ತೀರ್ಮಾನಿಸಿದ್ದರು ಹಾಗೂ ಅದನ್ನು ರಾಶಬಾಬು ಒಪ್ಪಿಕೊಂಡರು. ಲೆಫ್ಟನಂಟ ಕರ್ನಲ ಏ, ಸಿ. ಚಟರ್ಜಿ ಇವರು ಅರ್ಥಮಂತ್ರಿಗಳಿದ್ದರು,ಆನಂದ ಮೋಹನ ಸಹಾಯ ಇವರಿಗೆ ಮಂತ್ರಿಪದವಿ ಕೊಡಲಾಗಿತ್ತು. ಎಸ್. ಏ ಐಯ್ಯರ ಬಳಿ ಪ್ರಸಿದ್ಧಿ ಹಾಗೂ ಪ್ರಚಾರ ವ್ಯವಸ್ಥೆಯ ಜಬಾಬ್ದಾರಿಯಿತ್ತು, ಕ್ಯಾಪ್ಟನ್ ಲಕ್ಷ್ಮೀ ಇವರಿಗೆ ಸ್ತ್ರೀ ಸಂಘಟನೆಯ ಜಬಾಬ್ದಾರಿ ಇತ್ತು,

ಏ.ಎನ್. ಸರಕಾರ ಇವರು ಕಾನೂನುಸಲಹೆಗಾರರಿದ್ದರು, ಜಗನ್ನಾಥರಾವ ಭೋಸಲೆ, ನಿರಂಜನ ಭಗತ, ಅಝಿಜ ಅಹಮದ, ಮೊಹಮ್ಮದ ಝಮನ ಕಿಯಾಣಿ , ಏ.ಡಿ. ಲೋಗನಾದನ, ಎಹಸಾನ್ ಕಾದೀರ್ ಹಾಗೂ ಶಾಹನವಾಝ ಖಾನ ಇವರು ಲಷ್ಕರನ ಪ್ರತಿನಿಧಿಗಳಾಗಿದ್ದರೆ ಕರೀಮ ಗನಿ, ದೇಬನಾಥ ದಾಸ, ಯಲ್ಲಾಪ್ಪಾ, ಜಾನ್ ಥಿವಿ, ಸರದಾರ ಇಶರಸಿಂಗ ಇವರು ಸಲಹೆಗಾರರಾಗಿದ್ದರು. ರಾಷ್ಟ್ರಪ್ರಮುಖ ಹಾಗೂ ಪ್ರಧಾನಮಂತ್ರಿ ಎಂದು ಶಪಥ ತೆಗೆದುಕೊಳ್ಳುವಾಗ ನೇತಾಜಿಯವರ ಕಂಠ ತುಂಬಿ ಬಂದಿತು. ಕೆಲವು ಕ್ಷಣ ಅವರ ಮುಖದಿಂದ ಶಬ್ದಗಳೇ ಹೊರಡುತ್ತಿರಲಿಲ್ಲ. ಅನಂತರ ತಮ್ಮನ್ನು ತಾವೇ ಸುಧಾರಿಸಿಕೊಂಡು ಅವರು ’ಪರಮೇಶ್ವರನಿಗೆ ಸ್ಮರಿಸಿ ನಾನು ಸುಭಾಷಚಂದ್ರ ಬೋಸ, ಭಾರತಕ್ಕೆ ಮತ್ತು ನನ್ನ ೩೮ ಕೋಟಿ ಬಾಂಧವರನ್ನು ಸ್ವತಂತ್ರಗೊಳಿಸಲು ಈ ಪವಿತ್ರ ಪ್ರತಿಜ್ಞೆಯನ್ನು ಮಾಡುತ್ತಿದ್ದೇನೆ. ಕೊನೆ ಉಸಿರು ಇರುವವರೆಗೂ ನಾನು ಈ ಪುಣ್ಯದಾಯಕ ಯುದ್ಧವನ್ನು ಹೀಗೆಯೇ ಶುರು ಇಡುವೆನು’ ಎಂದು ಶಪಥಗೈದರು. ಚಪ್ಪಾಳೆಯ ಸದ್ದಿನಲ್ಲಿ ಮತ್ತು ಆ ಭಾವಪೂರ್ಣ ವಾತಾವರಣದಲ್ಲಿ ಎಲ್ಲ ಮಂತ್ರಿ ಮಂಡಲದ  ಶಪಥ ವಿಧಿ ಜರುಗಿತು. ಹೊಸ ರಾಷ್ಟ್ರಗೀತೆಯೊಂದಿಗೆ  ಸಂಮ್ಮೇಳನವು ಮುಕ್ತಾಯಗೊಂಡಿತು.

ಸಬ ಸುಖಕಿ ಚೈನಕಿ ಬರಖಾ ಬರಖಾ ಭಾರತ ಭಾಗ ಹೈ ಜಾಗಾ
ಪಂಜಾಬ, ಸಿಂಧು, ಗುಜರಾತ್,ಮರಾಠಾ, ದ್ರಾವಿಡ, ಉತ್ಕಲ ಬಂಗಾ
ಚಂಚಲ ಸಾಗರ ಬಿಂಧ ಹಿಮಾಲಾ, ನೀಲಾ ಜಮುನಾ ಗಂಗಾ
ಸೂರಜ ಬನಕರ ಜಗಪರ ಚಮಕೆ ಭಾರತ ನಾಮ ಸುಭಾಗಾ, ಜಯ ಹೊ ಜಯ ಹೊ, ಜಯ ಹೊ !

ಸಬಕೆ ದಿಲಮೆ ಪ್ರೀತ ಬಸಾಯೆ ತೆರಿ ಮೀಠಿ ಬಾನಿ
ಹರ ಸುಬೇಕೆ ಹರ ಮಜಹಬಕೆ ರಹನೆವಾಲೆ ಪ್ರಾಣಿ
ಸಬ ಭೇದ-ಔ-ಫರ್ಕಮಿಟಾಕೆ,
ಸಬ ಗೋದಮೇ ತೆರಿ ಆಕೆ,
ಗೂಂದೆ ಪ್ರೇಮ ಕಿ ಮಾಲಾ
ಸೂರಜ ಬನಕರ ಜಗಪರ ಚಮಕೆ ಭಾರತ ನಾಮ ಸುಭಾಗಾ, ಜಯ ಹೊ ಜಯ ಹೊ, ಜಯ ಹೊ !

ಸುಬಹ ಸಬೇರೆ ಪ್ರೇಮ ಪಂಖೇರು ತೇರೆಹಿ ಗುಣ ಗಾಯೆ
ಬಾಸಭರಿ ಭರಪೂರ ಹವಾಏಂ ಜೀವನ ಮೆ ರೂತ ಲಾಯೆ
ಸಬ ಮಿಲಕರ ಹಿಂದ್​ ಪುಕಾರೆ, ಜಯ ಆಝಾದ ಹಿಂದ್​ಕೆ ನಾರೆ,
ಪ್ಯಾರಾ ದೇಶ ಹಮಾರಾ
ಸೂರಜ ಬನಕರ ಜಗಪರ ಚಮಕೆ ಭಾರತ ನಾಮ ಸುಭಾಗಾ, ಜಯ ಹೊ ಜಯ ಹೊ, ಜಯ ಹೊ !

(ಈ ಗೀತೆಯನ್ನು ಹಾಡುವಾಗ ಸ್ವತಂತ್ರ ಹಿಂದುಸ್ಥಾನದಲ್ಲಿ ಪ್ರತಿಯೊಂದು ಕಂಠವು ಈ  ಗೀತೆಯನ್ನು ಹಾಡುವುದು ಎಂಬ ಕನಸು ಕಾಣುತ್ತಿದ್ದ ನೇತಾಜಿಯವರಿಗೆ ಕೆಲವು ದಶಕಗಳ ನಂತರ ಈ ಗೀತೆಯು ಎಲ್ಲಿಯೂ ಕೇಳಿ ಬರುವುದಿಲ್ಲ, ಅಥವಾ ಯಾರಿಗೆ ಗೊತ್ತೂ ಇರಲಿಕ್ಕಿಲ್ಲ’ ಎಂಬ ಕಲ್ಪನೆಯೂ ಇರಲಿಲ್ಲ.)

1362477164_1039093430_8f1b74760d_m

ಸ್ವತಂತ್ರ ದೇಶದ ಸರಕಾರ ಅಂದರೆ
ಸ್ವಂತದ ಹಣ ಮತ್ತು ಅಂಚೆ ತಿಕೇಟು ಇರಲೇಬೇಕು

1362477807_123

೫೦೦ ರೂಪಾಯಿ ಮೌಲ್ಯದ ರಾಷ್ಟ್ರೀಯ ಪ್ರಮಾಣ ಪತ್ರವು
ಆಝಾದ ಹಿಂದ್​ ನ  ಸ್ಥೈರ್ಯ ಮತ್ತು ಯಶಸ್ಸಿನ ಸಾಕ್ಷಿ ಕೊಡುತ್ತಿದ್ದವು

1362477888_1039093418_fdbcd4a7e8_m

ಮುಯ್ಯಿಗೆ ಮುಯ್ಯಿ​

ಆಂಗ್ಲರು ಸೈನ್ಯದಲ್ಲಿ ಆಝಾದ ಹಿಂದ್​ ಸೇನೆಯ ಬಗ್ಗೆ ಅಪಪ್ರಚಾರ ಮಾಡಿ ಆಂಗ್ಲ ಸೈನ್ಯದಲ್ಲಿನ ಹಿಂದುಸ್ಥಾನಿ ಸಿಪಾಯಿಗಳಿಗೆ ಆಝಾದ ಹಿಂದ್​ನಲ್ಲಿ ಸೇರದಿರುವಂತೆ ಅನೇಕ ಪತ್ರಿಕೆಗಳನ್ನು ಹಂಚಿದ್ದರು. ಅದಕ್ಕೆ ಪ್ರತ್ಯುತ್ತರವೆಂದು ಆಝಾದ ಹಿಂದ್​ ಸರಕಾರವು ಹಿಂದಿ ಸಿಪಾಯಿಗಳಿಗೆ ಸತ್ಯಪರಿಸ್ಥಿತಿ ತಿಳಿಯಬೇಕು ಹಾಗೂ ಅವರು ಆಝಾದ ಹಿಂದ್​ ಸೇನೆಯಲ್ಲಿ ಸೇರಿಕೊಳ್ಳಬೇಕು ಎಂದು ಪತ್ರಿಕೆಗಳನ್ನು ಹಂಚಿತು. ಇದರಲ್ಲಿ ಆಝಾದ ಹಿಂದ್​ ಸೈನ್ಯವು ಗುಲಾಮಗಿರಿಯ ಸರಪಳಿಯನ್ನು ತೊಡೆಯುತ್ತಿದೆ ಹಾಗೂ ಈಗ ಭೂಮಿಗೆ ಆಂಗ್ಲರ ಬಾವುಟ ದೊರೆತಿದೆ, ಜಪಾನೀ ಲಷ್ಕರದ ಸಹಾಯದಿಂದ ಆಝಾದ ಹಿಂದ್​ನ ವೀರರ ಓಡಾಟವು ನಡೆದಿದೆ ಎಂಬುದು ಈ ಪತ್ರಿಕೆಯಲ್ಲಿ ಪ್ರಭಾವಕಾರಿಯಾಗಿ ತೋರಿಸಲಾಗಿತ್ತು.

1362478118_1568048154_0dfa101935_o