ನಮಗೆ ದೇವರೊಬ್ಬರೇ ಆಧಾರ ! (ದ್ರೌಪದಿ ವಸ್ತ್ರಾಹರಣ)

ಪಗಡೆಯಾಟದಲ್ಲಿ ಮೋಸದಿಂದ ಗೆದ್ದ ದುರ್ಯೋಧನನು ದ್ರೌಪದಿಯನ್ನು ರಾಜ್ಯಸಭೆಗೆ ಬರುವಂತೆ ಆದೇಶ ನೀಡಿದನು. ಆದೇಶವನ್ನು ಪಾಲಿಸಿದ ದುಃಶಾಸನನು ದ್ರೌಪದಿಯನ್ನು ನಿರ್ದಾಕ್ಷಿಣ್ಯವಾಗಿ ಸಭೆಗೆ ಎಳೆದು ತಂದನು. ತನ್ನನ್ನು ಅವಮಾನಿಸದಂತೆ ದ್ರೌಪದಿಯು ಪರಿ ಪರಿಯಾಗಿ ಬೇಡಿಕೊಂಡರೂ ಇವರೀರ್ವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆಗ ದ್ರೌಪದಿಯ ಮನಸ್ಸಿನಲ್ಲಿ ಒಂದು ವಿಚಾರ ಬಂತು ‘ನನಗೆ ೫ ಗಂಡಂದಿರು ಇದ್ದಾರೆ. ಸಂಪೂರ್ಣ ಜಗತ್ತನ್ನು ಎದುರಿಸಿ ಜಯಿಸುವ ಸಾಮರ್ಥ್ಯ ಅವರಿಗಿದೆ. ಅವರು ನನ್ನನ್ನು ಖಂಡಿತವಾಗಿಯೂ ರಕ್ಷಿಸುವರು’. ಅವಳು ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವರಲ್ಲಿ ಸಹಾಯ ಮಾಡುವಂತೆ ಬೇಡಿಕೊಂಡಳು, ಆದರೆಯರೂ ಮುಂದೆ ಬರಲಿಲ್ಲ. ನಂತರ ಅಲ್ಲಿದ್ದ ಹಿರಿಯರನ್ನು ಸಂಬೋಧಿಸಿ ಅವರಲ್ಲಿ ಸಹಾಯವನ್ನು ಬೇಡಿದಳು, ಆದರೆ ಅವರೆಲ್ಲರೂ ತಲೆಕೆಳಗಾಗಿ ಕುಳಿತುಕೊಂಡಿದ್ದರು. ಜ್ಯೇಷ್ಠರಿಂದಲೂ ಅವಳಿಗೆ ಪರಿಹಾರ ಸಿಗಲಿಲ್ಲ.

ಕೊನೆಗೆ ಅವಳು ಶ್ರೀಕೃಷ್ಣನ ಮೊರೆ ಇಟ್ಟಳು. ಆರ್ತತೆಯಿಂದ ಅವನನ್ನು ಕರೆದಾಗ ಕೂಡಲೇ ದ್ರೌಪದಿಯ ನೆರವಿಗೆ ಧಾವಿಸಿದ ಕೃಷ್ಣನು ಅವಳಿಗೆ ಮುಗಿಯದಷ್ಟು ಉದ್ದ ಸೀರೆಗಳನ್ನು ನೀಡಿ ಅವಳ ಮಾನವನ್ನು ರಕ್ಷಿಸಿದನು. ನಂತರ ಅವಳು ಶ್ರೀಕೃಷ್ಣನಿಗೆ ‘ಕೃಷ್ಣಾ, ನಾನು ಸಂಕಟದಲ್ಲಿ ಇದ್ದೇನೆ ಎಂದು ತಿಳಿದ ತಕ್ಷಣ ನೀನು ನನ್ನ ನೆರವಿಗೆಕೆ ಬರಲಿಲ್ಲ? ನಾನು ಕರೆದ ನಂತರವೇ ಏಕೆ ಬಂದೆ?’ ಎಂದು ಪ್ರಶ್ನಿಸಿದಳು. ಆಗ ಶ್ರೀ ಕೃಷ್ಣನು ‘ನಿನಗೆ ನಿನ್ನ ಪತಿಗಳ ಮೇಲೆ ಅತೆವ ವಿಶ್ವಾಸವಿತ್ತು. ನಿನ್ನ ರಕ್ಷಣೆಗೆ ಅವರು ಸಮರ್ಥರಾಗಿದ್ದಾರೆ ಎಂದು ನೀನು ತಿಳಿದಿದ್ದೆ, ಆದುದರಿಂದ ನೀನು ಅವರನ್ನೇ ಮೊದಲಿಗೆ ಕರೆದೆ. ಹಾಗಿದ್ದಲ್ಲಿ ನಾನು ಹೇಗೆ ಬರುವುದು? ನೀನು ನನ್ನಲ್ಲಿ ಮೊರೆ ಇತ್ತ ತಕ್ಷಣ ನಾನು ಧಾವಿಸಿ ಬಂದೆ!’ ಎಂದು ಹೇಳಿದನು. ದ್ರೌಪದಿಯು ತನ್ನ ಮನವನ್ನು ಕಾಪಾಡಿದ ಕೃಷ್ಣನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದಳು.

ತಾತ್ಪರ್ಯ : ದೇವರಲ್ಲದೆ ನಮಗೆ ಬೇರೆ ಪರ್ಯಾಯವಿಲ್ಲ. ನಾವು ಯಾರನ್ನು ನಮ್ಮವರೆಂದು ತಿಳಿದುಕೊಳ್ಳುತ್ತೇವೆ, ಅವರೂ ಕೂಡ ನಮ್ಮ ನೆರವಿಗೆ ಬಾರದಿರುವ ಸಂದರ್ಭವಿರುತ್ತದೆ. ಯಾರನ್ನಾದರೂ ನಾವು ಪುನಃ ಪುನಃ ಕರೆಯುತ್ತಿದ್ದಾರೆ, ಒಂದು ಬಾರಿಯಾದರೂ ಆ ವ್ಯಕ್ತಿ ತಿರುಗಿ ನಮ್ಮನ್ನು ನೋಡುತ್ತಾನೆ ಅಲ್ಲವೇ? ಆದರೆ ದೇವರು ನಮ್ಮ ಒಂದೇ ಒಂದು ಕರೆಗೆ ಓಗೊಟ್ಟು ಓಡೋಡಿ ನಮ್ಮ ನೆರವಿಗೆ ಬರುತ್ತಾರೆ. ಇಂತಹ ದೇವರನ್ನು ಬಿಟ್ಟು ನಾವು ಅವರಿವರನ್ನು ನಮ್ಮ ಸಹಾಯಕ್ಕೆ ಕರೆಯುತ್ತೇವೆ. ನಾವು ದೇವರನ್ನೇ ಕರೆಯುತ್ತಿದ್ದಲ್ಲಿ ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ ಅಲ್ಲವೇ? ಹಾಗಾದರೆ ಇಂದಿನಿಂದಲೇ ದೇವರನ್ನು ಕರೆಯುವುದನ್ನು (ನಾಮ ಜಪ) ರೂಢಿಸಿಕೊಳ್ಳುವಿರಲ್ಲವೇ?