ಅಸೆಗಳೇ ಪ್ರಗತಿಗೆ ಆಡಚಣೆಯಾಗಿವೆ!

ಒಬ್ಬನಿಗೆ ಮಥುರೆಯಿಂದ ಗೋಕುಲಕ್ಕೆ ಹೋಗುವುದಿತ್ತು. ಹಾದಿಯಲ್ಲಿ ಯಮುನೆಯನ್ನು ದಾಟಿ ಹೋಗಬೇಕಿತ್ತು. ಅವನು ಕುಡಿದ ಅಮಲಿನಲ್ಲಿ ಒಂದು ದೋಣಿಯನ್ನು ಏರಿದನು, ಮತ್ತು ಹೀಗೆ ರಾತ್ರಿ ಇಡೀ ದೋಣಿಯನ್ನು ಹಾಯಿಸುತ್ತಾ ಸೂರ್ಯೋದಯವಾಯಿತು. ಬೆಳಕಿನಲ್ಲಿ ನೋಡಿದರೆ ಅ ಪ್ರದೇಶವು ಮಥುರೆಯ ಹಾಗೆ ಇತ್ತು. ಪಕ್ಕದ ದೋಣಿಯವನಿಗೆ ಕೇಳಿದರೆ ಅವನು ಅ ಪ್ರದೇಶ ಮಥುರೆ ಎಂದು ಹೇಳಿದನು. ನಂತರ ಆ ಮನುಷ್ಯನಿಗೆ ಗೊತ್ತಾಯಿತು ನದಿ ತೀರಕ್ಕೆ ದೋಣಿಯನ್ನು ಕಟ್ಟಿದ ಹಗ್ಗವನ್ನು ಬಿಡಿಸಲು ಮರೆತ್ತಿದ್ದನು. ದೋಣಿ ಇನ್ನೂ ಕೂಡ ತೀರಕ್ಕೆ ಕಟ್ಟಿ ಇತ್ತು, ಅವನು ಇದ್ದಲ್ಲಿಯೇ ದೋಣಿಯನ್ನು ಹಾಯಿಸುತ್ತಿದ್ದನು.

ನೀತಿ : ನಮ್ಮ ಜೀವನದಲ್ಲಿರುವ ಆಸೆಗಳನ್ನು ಅಪೇಕ್ಷೆಗಳನ್ನು (ಹಗ್ಗವನ್ನು) ನಾವು ತ್ಯಜಿಸದಿದ್ದರೆ ನಮ್ಮ ನೌಕೆಯು (ಜೀವವು) ಇನ್ನೊಂದು ತೀರವನ್ನು (ಅಂದರೆ ದೇವರನ್ನು) ತಲುಪಲಾರದು.
– ಡಾ. ವಸಂತ ಬಾಲಾಜಿ ಆಠವಲೇ (೧೯೯೦)