ಜಗತ್ತನ್ನು ಬದಲಿಸುವ ಬದಲು ನಾವೇ ಬದಲಾಗೋಣ !

ಒಂದು ದಿನ ಓರ್ವ ಯುವರಾಣಿಯು ವಿಹಾರಕ್ಕೆ ಹೋಗುವಾಗ ಅವಳ ಪಾದಕ್ಕೆ ಒಂದು ಮುಳ್ಳು ಚುಚ್ಚಿತ್ತು, ಅದನ್ನು ಕಂಡು ರಾಜನು ಮಂತ್ರಿಯನ್ನು ಕರೆದು ನಾವು ನಡೆಯುವ ಜಾಗದಲ್ಲಿ ಮುಳ್ಳು ಚುಚ್ಚದಂತೆ ಸಂಪೂರ್ಣ ನೆಲಕ್ಕೆ ಚರ್ಮದ ಹೊದಿಕೆಯನ್ನು ಹಾಸಬೇಕು ಎಂದು ಅಪ್ಪಣೆಯನ್ನು ಕೊಡುತ್ತಾನೆ. ಮಂತ್ರಿಗೆ ಇಡೀ ಪ್ರದೇಶಕ್ಕೆ ಬೇಕಾದಷ್ಟು ದೊಡ್ಡ ಚರ್ಮದ ಹೊದಿಕೆಯನ್ನು ಹೊಲಿಯುವುದು ಹೇಗೆ ಎಂಬ ಚಿಂತೆಯಾಯಿತು. ಆಗ ಅವರಿಗೆ ಒಂದು ಉಪಾಯ ಹೊಳೆದು, ಯುವರಾಣಿಗೆ ಅವರು ಒಂದು ಜೋಡಿ ಪಾದರಕ್ಷೆಗಳನ್ನು ತಂದುಕೊಟ್ಟರು.

ನೀತಿ : ಜಗತ್ತಿನಲ್ಲಿ ಹಲವು ರೀತಿಯ ಮುಳ್ಳುಗಳಿವೆ, ಪಾದರಕ್ಷೆ ಹಾಕಿದವರಿಗೆ ಅವು ಚುಚ್ಚುವುದಿಲ್ಲ, ಅದುದರಿಂದ ಮಕ್ಕಳೇ, ನಮ್ಮಿಂದ ಜಗತ್ತನ್ನು ಸರಿಪಡಿಸಲು ಅಗುವುದಿಲ್ಲ, ಅದರ ಬದಲು ಪ್ರತಿಯೊಬ್ಬರೂ ಬದಲಾಗೋಣ, ಆಗ ಜಗತ್ತು ತನ್ನಿಂದ ತಾನೇ ಬದಲಾಗುತ್ತದೆ.
– ಡಾ. ವಸಂತ ಬಾಲಾಜಿ ಆಠವಲೇ (೧೯೯೦)