ಮಧುರಾಷ್ಟಕಮ್ |

ಶ್ರೀಪಾದ್ ವಲ್ಲಭಾಚಾರ್ಯರು ಶ್ರೀಕೃಷ್ಣನನ್ನು ವರ್ಣಿಸಿ ರಚಿಸಿದ ಸುಂದರ ಸಂಸ್ಕೃತ ರಚನೆ – ಮಧುರಾಷ್ಟಕಮ್. ಭಕ್ತಿರಸಭರಿತ ಮಧುರಾಷ್ಟಕದಲ್ಲಿ ಶ್ರೀಕೃಷ್ಣನ ಭಕ್ತಿಯಲ್ಲಿ ತಲ್ಲೀನರಾದಲ್ಲಿ ಎಲ್ಲವೂ ಹೇಗೆ ಮಧುರವಾಗಿ ಕಾಣಿಸುತ್ತದೆ ಎಂದು ಸುಂದರವಾಗಿ ವರ್ಣಿಸಲಾಗಿದೆ. ಮಧುರಾಷ್ಟಕವನ್ನು ರಾಗ ಜೌನಪುರಿಯಲ್ಲಿ ಹಾಡುತ್ತಾರೆ.

ಶ್ರೀಪಾದ್ ವಲ್ಲಭಾಚಾರ್ಯರು ಹದಿನೈದನೆಯ ಶತಮಾನದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಕವಿಯಾಗಿದ್ದರು. ಅವರು ವ್ಯಾಸ ಸೂತ್ರ ಭಾಷ್ಯ, ಜೈಮಿನೀಯ ಸೂತ್ರ ಭಾಷ್ಯ, ಭಾಗವತ್ ಟೀಕಾ ಸುಬೋಧಿನಿ, ಪುಷ್ಟಿ ಪ್ರವಳಾ, ರಹಸ್ಯ ಸಂಸ್ಕೃತ ಇತ್ಯಾದಿ ಅನೇಕ ವಿಷಯಗಳನ್ನು ರಚಿಸಿದ್ದಾರೆ.

ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಮ್ |
ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೧ ||

ವಚನಂ ಮಧುರಂ ಚರಿತಂ ಮಧುರಂ ವಸನಂ ಮಧುರಂ ವಲಿತಂ ಮಧುರಮ್ |
ಚಲಿತಂ ಮಧುರಂ ಭ್ರಮಿತಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೨ ||

ವೇಣುರ್ಮಧುರೋ ರೇಣುರ್ಮಧುರಃ ಪಾಣಿರ್ಮಧುರಃ ಪಾದೌ ಮಧುರೌ |
ನೃತ್ಯಂ ಮಧುರಂ ಸಖ್ಯಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೩ ||

ಗೀತಂ ಮಧುರಂ ಪೀತಂ ಮಧುರಂ ಭುಕ್ತಂ ಮಧುರಂ ಸುಪ್ತಂ ಮಧುರಮ್ |
ರೂಪಂ ಮಧುರಂ ತಿಲಕಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೪ ||

ಕರಣಂ ಮಧುರಂ ತರಣಂ ಮಧುರಂ ಹರಣಂ ಮಧುರಂ ರಮಣಂ ಮಧುರಮ್ |
ವಮಿತಂ ಮಧುರಂ ಶಮಿತಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೫ ||

ಗುಞ್ಜಾ ಮಧುರಾ ಬಾಲಾ ಮಧುರಾ ಯಮುನಾ ಮಧುರಾ ವೀಚೀ ಮಧುರಾ |
ಸಲಿಲಂ ಮಧುರಂ ಕಮಲಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೬ ||

ಗೋಪೀ ಮಧುರಾ ಲೀಲಾ ಮಧುರಾ ಯುಕ್ತಂ ಮಧುರಂ ಮುಕ್ತಂ ಮಧುರಮ್ |
ದೃಷ್ಟಂ ಮಧುರಂ ಶಿಷ್ಟಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೭ ||

ಗೋಪಾ ಮಧುರಾ ಗಾವೋ ಮಧುರಾ ಯಷ್ಟಿರ್ಮಧುರಾ ಸೃಷ್ಟಿರ್ಮಧುರಾ |
ದಲಿತಂ ಮಧುರಂ ಫಲಿತಂ ಮಧುರಂ ಮಧುರಾಧಿಪತೇರಖಿಲಂ ಮಧುರಮ್ || ೮ ||

ಇತಿ ಶ್ರೀಮದ್ವಲ್ಲಭಾಚಾರ್ಯವಿರಚಿತಂ ಮಧುರಾಷ್ಟಕಂ ಸಮ್ಪೂರ್ಣಂ|

Leave a Comment