ದತ್ತಾತ್ರೇಯನ ಸಾಧನಾ ಮಂತ್ರ ಮತ್ತು ಜಯಘೋಷಗಳು

‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ’ ಸಾಧನಾಮಂತ್ರದ ಭಾವಾರ್ಥ !

ದತ್ತನ ‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ’ ಸಾಧನಾ ಮಂತ್ರವು ಪ್ರಚಲಿತವಾಗಿದೆ. ದಿಗಂಬರಾ ಎಂದರೆ ದಿಕ್ಕುಗಳೇ ಯಾರ ಅಂಬರ ಅಂದರೆ ವಸ್ತ್ರಗಳಾಗಿವೆಯೋ ಅಂತಹವನು, ಅಂದರೆ ಸರ್ವವ್ಯಾಪಿಯಾಗಿರುವವನು. ಶ್ರೀ ಎಂದರೆ ಲಕ್ಷ್ಮೀ ಮತ್ತು ಅವಳು ಯಾರ ಪಾದಗಳಲ್ಲಿ ವಾಸಿಸುತ್ತಾಳೆಯೋ ಅವನೇ ಶ್ರೀಪಾದ. ಶ್ರೀಪಾದ ವಲ್ಲಭ ಎಂದರೆ ಯಾರ ಪಾದಗಳಲ್ಲಿ ಲಕ್ಷ್ಮಿಯ ವಾಸವಿದೆಯೋ ಮತ್ತು ಯಾರು ಲಕ್ಷ್ಮಿಯ ಸ್ವಾಮಿಯಾಗಿದ್ದಾನೆಯೋ ಅವನು, ಎಂದರೆ ಶ್ರೀ ವಿಷ್ಣು.

‘ಅಲಖ ನಿರಂಜನ’ ಜಯ ಘೋಷದ ಅರ್ಥವೇನು ?

‘ಅಲಖ ನಿರಂಜನ’ ಇದು ದತ್ತನ ಪ್ರಚಲಿತ ಜಯಘೋಷವಾಗಿದೆ. ಅಂಜನ ಎಂದರೆ ಅಜ್ಞಾನ. ಅಜ್ಞಾನ ಇಲ್ಲದಂತಾಗುವುದೆಂದರೆ ನಿರಂಜನ; ಆದುದರಿಂದ ನಿರಂಜನ ಎಂದರೆ ಜ್ಞಾನ. ಲಕ್ಷ ಎಂದರೆ ನೋಡುವುದು ಅಥವಾ ನೋಡಲು ಬರುವುದು. ಅಲಕ್ಷ ಎಂದರೆ ನೋಡಲು ಆಗದೇ ಇರುವಷ್ಟು ಪ್ರಕಾಶವುಳ್ಳ ಅಥವಾ ತೇಜಸ್ವಿಯಾದದ್ದು. ಅಲಕ್ಷ ಶಬ್ದವು, ಅಲಖ ಎಂದಾಗಿದೆ. ಹಾಗಾಗಿ ‘ಅಲಖ ನಿರಂಜನ’ ಎಂದರೆ ನೋಡಲು ಅಸಾಧ್ಯವಾಗಿರುವ ಜ್ಞಾನದ ಮತ್ತು ತೇಜಸ್ಸಿನ ಪ್ರತ್ಯಕ್ಷ ಸಾಕ್ಷಾತ್ಕಾರವಾಗುವುದು.

Leave a Comment