ಸತ್ಸಂಗದ ಮಹಿಮೆ ಉಳಿಸಲು ಜಡಭರತನು ವೈಯಕ್ತಿಕ ಅಪಮಾನದ ಕಡೆ ಲಕ್ಷ್ಯಕೊಡದಿರುವುದು

ಒಂದು ಸಲ ರಾಜಾ ರಹೂಗಣ ಪಾಲಕಿಯಲ್ಲಿ ಕುಳಿತು ಕಪಿಲ ಮುನಿಗಳ ಆಶ್ರಮಕ್ಕೆ ಹೊರಟಿದ್ದನು. ಪಾಲಕಿಯ ಒಂದು ಸೇವಕನಿಗೆ ಹುಷಾರು ತಪ್ಪಿತು. ಅದಕ್ಕಾಗಿ ರಾಜನು ಯಾರಾದರು ಕಾಣಿಸಿದರೆ ಅವರಿಗೆ ಪಾಲಕಿ ಹಿಡಿಯಲು ಕರೆದುಕೊಂಡು ಬಾ ಎಂದು ಹೇಳಿದನು. ಅದೇ ರಸ್ತೆಯಲ್ಲಿ ಜಡಭರತನೆಂಬ ಋಷಿ ಮಲಗಿದ್ದನು. ಅವನು ಹುಟ್ಟಿನಿಂದಲೂ ಮೌನವ್ರತ ಪಾಲನೆ ಮಾಡುತ್ತಿದ್ದರು. ಸೇವಕನು ಜಡಭರತನನ್ನು ನೋಡಿದನು ಮತ್ತು ಅವನು ದಷ್ಟ-ಪುಷ್ಟನಾಗಿದ್ದರಿಂದ ಈ ಪಾಲಕಿಯನ್ನು ಹಿಡಿಯಲು ಯೋಗ್ಯನೆಂದು ತಿಳಿದು ಅವನನ್ನು ಕರೆತಂದನು. ಪಾಲಕಿ ತೆಗೆದುಕೊಂಡು ಹೋಗುವಾಗ ರಾಜನು ಜದಭರತನಿಗೆ"ನೀನು ಸರಿಯಾಗಿ ನಡೆಯುತ್ತಿಲ್ಲ ಅದಕ್ಕಾಗಿ ನನಗೆ ಪಾಲಕಿಯಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ" ಎಂದನು. ಒಂದು ಸಲ ಪಾಲಕಿಯು ರಾಜನ ಮಸ್ತಕಕ್ಕೆತಾಗಿತು. ಆಗ ರಾಜನು ಭರತನಿಗೆ ದಂಡ ಕೊಡುವೆನೆಂದು ಹೇಳಿದನು. ವಾಸ್ತವಿಕವಾಗಿ ಭರತನು ರಾಜನಿಂದ ಹಣವನ್ನು ಅಥವಾ ಅನ್ನ-ಧಾನ್ಯಗಳನ್ನು ತೆಗೆದುಕೊಂಡಿರಲಿಲ್ಲ. ಆದರೂ ರಾಜನು ಅಹಂಕಾರದಿಂದ ಭರತನಿಗೆ ಹೊಡೆಯಲು ಪ್ರವೃತ್ತನಾದನು. ಆಗ ಭರತನು ಹೀಗೆ ವಿಚಾರ ಮಾಡಿದನು "ನೀನು ನನ್ನ ಶರೀರಕ್ಕೆ ಹೊಡೆಯಬಹುದು ಆದರೆ ಆತ್ಮಕ್ಕೆ ಅಲ್ಲಾ,ಅದಕ್ಕಾಗಿ ನಾನು ಮೌನನಾಗಿರುತ್ತೇನೆ". ನಂತರ ಅವನು ವಿಚಾರ ಮಾಡಿದನು "ರಾಜನ ಅಹಂಕಾರದಿಂದ ಅವನು ನರಕವಾಸ ಮಾಡಬೇಕಾಗುತ್ತದೆ. ಹೀಗಾದರೆ ಸತ್ಸಂಗದ ಮಹಿಮೆ ನಷ್ಟವಾಗುವುದು ಮತ್ತು ಜನರೆಲ್ಲ ಜಡಭರತನ ಜೊತೆಗೆ ಸಮಯ ಕಳೆದ ರಾಜನಿಗೆ ನರಕವಾಸ ಪ್ರಾಪ್ತವಾಯಿತು ಎಂದು ಹೇಳುವರು’. ಸತ್ಸಂಗದ ಮಹಿಮೆ ಉಳಿಸಲು ಜಡಭರತನು ಮೌನ ತ್ಯಾಗಮಾಡಿ ರಾಜನಿಗೆ ಉಪದೇಶ ಮಾಡಿದನು "ರಾಜಾ ನಿನಗೆ ಕಲ್ಯಾಣವಾಗಲಿ, ಕಪಿಲಮುನಿಗಳ ಆಶ್ರಮಕ್ಕೆ ಉಪದೇಶ ಕೇಳಲು ಹೊರಟಿರುವೆ ಅಹಂಕಾರವನ್ನು ತ್ಯಾಗಮಾಡು", ಎಂದು ಹೇಳಿದನು. ಆಗ ರಾಜಾ ರಹೂಗಣನಿಗೆ ತನ್ನ ತಪ್ಪಿನ ಅರಿವಾಯಿತು ಮತ್ತು ಅವನು ಭರತನಿಗೆ ಕ್ಷಮೆ ಕೇಳಿದನು. ಭರತನು ಅವನಿಗೆ ಆತ್ಮಜ್ಞಾನದ ಅನುಭೂತಿಯನ್ನು ನೀಡಿದನು.

ಡಾ. ವಸಂತ ಬಾಳಾಜಿ ಆಠವಲೆ.

ಸಾರಾಂಶ: ಎಂದಿಗೂ ನಾವು ಯಾರ ಅವಮಾನವನ್ನೂ ಮಾಡಬಾರದು.