ಸರದಾರ ವಲ್ಲಭ ಭಾಯಿ ಪಟೇಲ್‌

ಸರದಾರ ವಲ್ಲಭ ಭಾಯಿ ಪಟೇಲ್ರು ೧೮೭೫ರ ಆಕ್ಟೋಬರ್ ೩೧ರಂದು ಗುಜರಾತಿನ ನದಿಯಾಡ ಎಂಬ ಊರಿನಲ್ಲಿ ಜನಿಸಿದರು. ಬಡತನದಲ್ಲೇ ಜೀವನ ನಡೆಸಿದ ಇವರು ೧೮೯೭ರಲ್ಲಿ ಮೆಟ್ರಕ್ಯುಲ್ಲೇಶನ್ ಮುಗಿಸಿ, ೧೯೧೦ರಲ್ಲಿ ಇಂಗ್ಲೆಂಡಿಗೆ ತೆರಳಿ ಬ್ಯಾರಿಸ್ಟರ್ ಪದವಿಯನ್ನು ಮೊದಲು ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಭಾರತಕ್ಕೆ ಬಂದು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ೧೯೧೮ರಲ್ಲಿ ಖೇಡಾ ಜಿಲ್ಲೆಯಲ್ಲಿ ಬಟ್ಟೆ ಗಿರಣಿಯ ಕಾರ್ಮಿಕರು ಶೋಷಣೆಗೆ ಒಳಗಾದಾಗ ಅವರ ಪರವಾಗಿ ಹೋರಾಡಿ ಜಯಗಳಿಸಿ ಕೊಟ್ಟರು ೧೯೧೯ರಲ್ಲಿ ರೌಲೆಟ್ ಕಾಯಿದೆ ಜಾರಿಯಾದಾಗ ಅಲಹಾಬಾದನಲ್ಲಿ ಪಟೇಲರು ಇದನ್ನು ಉಗ್ರವಾಗಿ ಖಂಡಿಸಿದರು. ಇವರ ನೇತೃತ್ವದಲ್ಲಿ ೧೯೨೩ರಲ್ಲಿ ನಾಗಪುರದಲ್ಲಿ ಭಾರತದ ಧ್ವಜವನ್ನು ಹಾರಿಸಿದರು. ೧೯೨೭ರಲ್ಲಿ ಬಾರ್ಡೋಲ್ಲಿ ಸತ್ಯಾಗ್ರಹದಲ್ಲಿ ದುಮುಕಿ ರೈತರ ಮೇಲಿನ ತೆರಿಗೆ ಕಡಿತಕ್ಕಾಗಿ ಹೋರಾಡಿದರು. ಇದೇ ಸಂದರ್ಭದಲ್ಲಿ ರೈತರು, ಇವರನ್ನುರೈತರ ಸರದಾರಎಂದು ಕರೆದರು. ಜವಾಹರಲಾಲ ನೆಹರುರವರು ೧೯೨೯ರಲ್ಲಿ ರಾವಿ ನದಿ ತೀರದಿಂದ ಯಾತ್ರೆ ಹೊರಟು ಸ್ವರಾಜ್ಯವೇ ಕಾಂಗ್ರೆಸ್ಸಿನ ಗುರಿ ಎಂದು ಸಾರಿದರು. ಆಗ ಜನರನ್ನು ಮಾನಸಿಕವಾಗಿ ಸತ್ಯಾಗ್ರಹಕ್ಕೆ ಅಣಿಗೊಳಿಸುವ ಜವಾಬ್ದಾರಿ ಇವರ ಮೇಲೆ ಇತ್ತು. ೧೯೩೧ರ ಜನವರಿ ೨೬ ರಂದು ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಆಯ್ಕೆ ಆದರು. ೧೯೩೫ರಲ್ಲಿ ಖೆಡಾ ಜಿಲ್ಲೆಯಲ್ಲಿ ಪ್ಲೇಗ್ ಹರಡಿದಾಗ ಸ್ವತಃ ಅಲ್ಲಿಗೆ ತೆರಳಿ ಜನರ ಸೇವೆ ಮಾಡಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಗುಡುಗಿದರು. ಮಹಾತ್ಮಾ ಗಾಂಧೀಜಿಯವರ ನಿಧನದ ನಂತರ ವಲ್ಲಭಭಾಯಿ ಪಟೇಲರವರು ತಾವೇ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದರು. ೧೯೪೮ರಲ್ಲಿ ಹೈದರಾಬಾದಿನ ನಿಜಾಮರ ಪ್ರತಿನಿಧಿ ಲೈಕ್ ಅಲಿ ಭಾರತದ ಒಕ್ಕೂಟದಲ್ಲಿ ಸೇರಲು ಒಪ್ಪದಿದ್ಧಾಗ ಇವರು ದಿಟ್ಟತನದಿಂದ ಭಾರತದ ಸೈನಿಕರನ್ನು ನುಗ್ಗಿಸಿ ಪ್ರಾಂತವನ್ನು ವಶಪಡಿಸಿಕೊಂಡರು. ಇವರ ನೇತ್ರತ್ವದಲ್ಲಿ ಸ್ವತಂತ್ರ ಭಾರತದ ಎಲ್ಲ ಚಿಕ್ಕ ಚಿಕ್ಕ ೫೬೫ ಆಡಳಿತಗಾರರನ್ನೆಲ್ಲ ಒಂದು ಗೂಡಿಸಿ ಸ್ವತಂತ್ರ ಭಾರತವನ್ನು ೨೬ ಆಡಳಿತದ ವಿಭಾಗಗಳನ್ನಾಗಿ ವಿಂಗಡಿಸಿದರು. ಇವರ ದಿಟ್ಟ ನಿಲುವಿನಿಂದ ಇವರನ್ನುಉಕ್ಕಿನ ಮನುಷ್ಯಎಂದು ಕರೆದರು. ಅನಾರೋಗ್ಯದ ಕಾರಣದಿಂದ ೧೯೫೦ರ ಡಿಸೆಂಬರ್ ೧೫ರಂದು ತಮ್ಮ ೭೫ನೇ ವಯಸ್ಸಿನಲ್ಲಿ ತೀರಿಕೊಂಡರು. ಭಾರತ ಸರಕಾರ ಇವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದಭಾರತ ರತ್ನಪ್ರಶಸ್ತಿ ನೀಡಿ ಗೌರವಿಸಿತು.

Leave a Comment