ಸಾಹಸಿ ಪೃಥ್ವಿಸಿಂಹ

ಬಾಲಮಿತ್ರರೇ, ಔರಂಗಜೇಬ ಹೆಸರಿನ ಒಬ್ಬ ಮೊಗಲ ಸಾಮ್ರಾಟನಿದ್ದನು. ಅವನು ಬಹಳ ಗರ್ವಿಷ್ಠ, ದುಷ್ಟ ಹಾಗೂ ಅತ್ಯಾಚಾರಿಯಾಗಿದ್ದನು. ಅವನು ಜೋಧಪುರ ರಾಜ್ಯವನ್ನು ಗೆದ್ದನು ಮತ್ತು ಅಲ್ಲಿಯ ರಾಜಾ ರಾಣಾ ಯಶವಂತ ಸಿಂಹನನ್ನು ತನ್ನ ದಾಸನನ್ನಾಗಿ ಮಾಡಿಕೊಂಡನು. ರಾಣಾ ಯಶವಂತ ಸಿಂಹ ತನ್ನ ಸೋಲಿನಿಂದಾಗಿ ಔರಂಗಜೇಬನ ಎಲ್ಲ ಷರತ್ತುಗಳನ್ನು ಒಪ್ಪಲು ವಿವಶನಾಗಿದ್ದನು. ಒಮ್ಮೆ ಔರಂಗಜೇಬನು ಅರಣ್ಯದಲ್ಲಿ ಬೇಟೆಯಾಡಲು ಹೋಗಿದ್ದನು. ಅಲ್ಲಿ ಅವನು ಒಂದು ದೊಡ್ಡ ಹುಲಿಯನ್ನು ಹಿಡಿದಿದ್ದನು. ಹಾಗೂ ಮರುದಿನ ಅವನು ಆ ಹುಲಿಯನ್ನು ರಾಜಸಭೆಯಲ್ಲಿ ಎಲ್ಲರ ಎದುರಿಗೆ ತಂದು ನಿಲ್ಲಿಸುವಂತೆ ಆದೇಶವಿತ್ತನು. ಔರಂಗಜೇಬನು ಎಲ್ಲರೆದುರಿಗೆ ಜಂಬದಿಂದ ‘ನಿಮ್ಮಲ್ಲಿ ಯಾರಾದರೂ ಇಷ್ಟು ಭಯಂಕರ ಹುಲಿಯನ್ನು ನೋಡಿದ್ದೀರಾ?’ ಎಂದು ಕೇಳಿದನು. ಆಗ ರಾಜಸಭೆಯಲ್ಲಿ ಜೋಧಪುರ ರಾಣಾ ಯಶವಂತಸಿಂಹ ಕೂಡ ಇದ್ದರು. ರಾಣಾ ಯಶವಂತ ಸಿಂಹನ ಒಬ್ಬ ಪುತ್ರನೂ ಇದ್ದನು. ಅವನ ಹೆಸರು ಪೃಥ್ವಿಸಿಂಹ ಎಂದು. ಔರಂಗಜೇಬನ ಮಾತನ್ನು ಕೇಳಿ ರಾಣಾ ಯಶವಂತ ಸಿಂಹನಿಗೆ ಸುಮ್ಮನಿರಲು ಆಗಲಿಲ್ಲ. ಅವನು ‘ನನ್ನ ಹತ್ತಿರ ಒಂದು ಶಾವಕವಿದೆ ಅರ್ಥಾತ್ ಹುಲಿ ಮರಿಯಿದೆ, ಅದರ ಎದುರಿಗೆ ನೀವು ಹಿಡಿದಿರುವ ಈ ಹುಲಿ ಏನೇನೂ ಅಲ್ಲ’ ಎಂದು ಹೇಳಿದನು.

ಔರಂಗಜೇಬನು ಅಹಂಕಾರಿ ಹಾಗೂ ಕಪಟಿಯಾಗಿದ್ದನು ಮತ್ತು ರಾಣಾ ಯಶವಂತಸಿಂಹನ ಮಾತನ್ನು ಕೇಳಿ ಅವನಿಗೆ ತುಂಬಾ ಕೋಪ ಬಂತು. ಅಹಂಕಾರದಲ್ಲಿ ಮಾತನಾಡುತ್ತಾ, ಔರಂಗಜೇಬನು ರಾಣಾಜಿಗೆ ಮರುದಿನ ತನ್ನ ಹುಲಿ ಮರಿಯನ್ನು ತರಲು ಹೇಳಿದನು. ಮರುದಿನ ರಾಣಾಜಿ ತನ್ನ ಹದಿನಾಲ್ಕು ವರ್ಷದ ಸಾಹಸಿ ಹಾಗೂ ಶಕ್ತಿಶಾಲಿ ಪುತ್ರ ಪೃಥ್ವಿಸಿಂಹನನ್ನು ರಾಜಸಭೆಗೆ ಕರೆದುಕೊಂಡು ಬಂದು ‘ಇದೇ ನನ್ನ ಹುಲಿಮರಿ!’ ಎಂದು ಹೇಳಿದನು. ಔರಂಗಜೇಬ ಮತ್ತು ದರಬಾರಿನ ಜನರೆಲ್ಲ ಪೃಥ್ವಿಸಿಂಹನನ್ನು ನೋಡಿ ಬಹಳ ಆಶ್ಚರ್ಯಗೊಂಡರು. ಔರಂಗಜೇಬನು ಪೃಥ್ವಿಸಿಂಹನನ್ನು ತುಚ್ಛವಾಗಿ ನೋಡಿ ಮನಸ್ಸಿನಲ್ಲಿಯೇ ವಿಚಾರ ಮಾಡಿ ಈ ಚಿಕ್ಕ ಹುಡುಗ ಏನು ಮಾಡುತ್ತಾನೆ ಎಂದುಕೊಂಡನು. ಆದರೆ ಅಹಂಕಾರದ ಕಾರಣ ಪೃಥ್ವಿಸಿಂಹನ ಶಕ್ತಿ ಮತ್ತು ಸಾಹಸವನ್ನು ನೋಡಲು ಅವನು ಪೃಥ್ವಿಸಿಂಹನನ್ನು ಹುಲಿಯ ಪಂಜರದೊಳಗೆ ಹೋಗಲು ಹೇಳಿದನು.

ಮಕ್ಕಳೇ, ಇದರ ನಂತರ ಏನಾಯಿತೆಂದು ನಿಮಗೆ ಗೊತ್ತಿದೆಯೇ? ಹುಲಿಯ ಪಂಜರದೊಳಗೆ ಪೃಥ್ವಿಸಿಂಹ ಹೋದಾಗ ಹುಲಿಯು ಅವನನ್ನು ನೋಡಿ ಒಂದು ಕ್ಷಣ ತಟಸ್ಥವಾಗಿ ನಿಂತಿತು. ಆದರೆ ಔರಂಗಜೇಬನ ಸೇವಕರು ಹುಲಿಯನ್ನು ಕೆರಳಿಸಲು ಆ ಹುಲಿಗೆ ಭಲ್ಲೆಯಿಂದ ತಿವಿದರು. ಭಲ್ಲೆಯ ತಿವಿತದಿಂದ ಹುಲಿ ಸಿಟ್ಟಿಗೆದ್ದ ಜೋರಾಗಿ ಘರ್ಜಿಸಿತು. ಅದೇ ಸಮಯದಲ್ಲಿ ಪೃಥ್ವಿಸಿಂಹನು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕತ್ತಿಯನ್ನು ತೆಗೆದನು, ಆಗ ಪಂಜರದ ಹೊರಗೆ ನಿಂತಿದ್ದ ರಾಣಾಜಿಯು ಪೃಥ್ವಿಸಿಂಹನಿಗೆ ಕೂಗುತ್ತ ಹೇಳಿದನು ‘ಪೃಥ್ವಿಸಿಂಹಾ! ಹುಲಿಯು ನಿನ್ನ ಪ್ರತಿಸ್ಪರ್ಧಿ. ಆದರೆ ಅದರ ಬಳಿ ಕತ್ತಿಯಿಲ್ಲ. ಹುಲಿಯ ಬಳಿ ಯಾವುದೇ ಶಸ್ತ್ರವಿಲ್ಲ, ಹೀಗಿರುವಾಗ ನೀನೂ ಕೂಡ ಹುಲಿಯೊಂದಿಗೆ ಹೋರಾಡುವಾಗ ಶಸ್ತ್ರವನ್ನು ಉಪಯೋಗಿಸಬಾರದು. ಕತ್ತಿಯಿಂದ ಅದರ ಮೇಲೆ ಆಕ್ರಮಣ ಮಾಡುವುದು ಸರಿಯಲ್ಲ. ನೀನೂ ಅದರಂತೆಯೇ ಶಸ್ತ್ರವಿಲ್ಲದೆಯೇ ಹೋರಾಡಬೇಕು’ ಎಂದು ಹೇಳಿದನು. ತಂದೆಯ ಈ ವಾಕ್ಯಗಳನ್ನು ಕೇಳುತ್ತಲೇ ಪೃಥ್ವಿಸಿಂಹನು ತನ್ನ ಕತ್ತಿಯನ್ನು ಎಸೆದನು ಮತ್ತು ನಿಶ್ಶಸ್ತ್ರವಾಗಿ ಹುಲಿಯೊಂದಿಗೆ ಹೋರಾಡಲು ಸಿದ್ಧನಾದನು.

ಅದೇ ಸಮಯದಲ್ಲಿ ಸಿಟ್ಟಿನಿಂದ ಹುಲಿಯು ಪೃಥ್ವಿಸಿಂಹನ ಮೇಲೆ ಎಗರಿ ಬಂತು. ಪೃಥ್ವಿಸಿಂಹನು ಹೆದರದೇ ಮುಂದಕ್ಕೆ ಹೋದನು ಮತ್ತು ಹುಲಿಯ ಮೇಲೆ ಮಿಂಚಿನ ವೇಗದಲ್ಲಿ ಎರಗಿ ತನ್ನ ಎರಡೂ ಕೈಗಳಿಂದ ಆ ಹುಲಿಯ ದವಡೆಯನ್ನು ಹಿಡಿದುಕೊಂಡು ಸೀಳಿದನು. ಮಕ್ಕಳೇ ನೋಡು ನೋಡುತ್ತಲೇ ಏನಾಯಿತೆಂದರೆ ಆ ಹುಲಿಯ ಪ್ರಾಣ ಹೋಯಿತು. ಕೇವಲ ಹದಿನಾಲ್ಕು ವರ್ಷದ ಚಿಕ್ಕ ವಯಸ್ಸಿನ ಪೃಥ್ವಿಸಿಂಹನ ಈ ಅಪೂರ್ವ ಪರಾಕ್ರಮವನ್ನು ನೋಡಿ ಔರಂಗಜೇಬ ಹಾಗೂ ಇತರ ದರ್ಬಾರಿನವರೆಲ್ಲರೂ ಆಶ್ಚರ್ಯಚಕಿತರಾದರು.

ಮಿತ್ರರೇ, ಸಾಮರ್ಥ್ಯ ಮತ್ತು ಶೌರ್ಯವು ನಮ್ಮ ಜೀವನದಲ್ಲಿ ಎಷ್ಟು ಅಧಿಕ ಮಹತ್ವಪೂರ್ಣ ಸ್ಥಾನವಿದೆಯಲ್ಲವೇ? ಶೌರ್ಯ, ನಿರ್ಭಯತೆ ಹಾಗೂ ಸಾಹಸ ಈ ಗುಣಗಳಿಂದ ನಿಮ್ಮ, ದೇಶದ ಹಾಗೂ ಸಂಸ್ಕೃತಿಯನ್ನು ರಕ್ಷಿಸಬಹುದು ಹಾಗೂ ಇದರಿಂದ ನಮ್ಮ ವೈಭವ ಹೆಚ್ಚಳವಾಗುತ್ತದೆ. ಆದ್ದರಿಂದ ನಾವೆಲ್ಲರೂ ಪ್ರತಿದಿನ ವ್ಯಾಯಾಮ ಮಾಡುವುದು, ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ. ವ್ಯಾಯಾಮದಿಂದ ಶರೀರ ಸುದೃಢವಾಗುತ್ತದೆ ಮತ್ತು ಸಾಧನೆಯಿಂದ ಮನಸ್ಸು ಬಲವಾಗುತ್ತದೆ. ಹಾಗಿದ್ದರೆ ನೀವು ಇದನ್ನು ಮಾಡುವಿರಲ್ಲವೇ?

Leave a Comment