ಶಿಕ್ಷಣ ಎಂಬುವುದು ಆತ್ಮಸ್ವರೂಪದ ಪ್ರಕಟೀಕರಣವನ್ನು ಮಾಡಬೇಕು !

ಭಾರತೀಯ ಸಂಸ್ಕೃತಿಯು, 'ಯಾವ ಮನುಷ್ಯನಿಗೆ ಕೇವಲ ತನ್ನ ಸುಖ ದುಃಖವೇ ತಿಳಿಯುತ್ತದೆಯೋ' ಅವನಿಗೆ 'ಪಶು' ಎಂಬ ಸಂಜ್ಞೆಯನ್ನು ನೀಡುತ್ತದೆ ಹಾಗೂ 'ಯಾರಿಗೆ ಇತರರ ನೋವು ಅರ್ಥವಾಗುತ್ತದೆಯೋ, ಇತರರ ದುಃಖದಿಂದ ದುಃಖವಾಗುತ್ತದೆ ಹಾಗೂ ಇತರರ ಸುಖದಿಂದ ಸುಖವೆನಿಸುತ್ತದೆಯೋ' ಅವನಿಗೆ ’ಮನುಷ್ಯ’ ಎಂಬ ಸಂಜ್ಞೆಯನ್ನು ನೀಡುತ್ತದೆ. ಆದುದರಿಂದ ಶ್ರೀ ಆದಿ ಶಂಕರಾಚಾರ್ಯರು ’ಈಶ್ವರನ ಸಾಕ್ಷಾತ್ಕರ ಮಾಡಿಕೊಳ್ಳಲು ಮನುಷ್ಯನ ಬಳಿ ಯಾವ ೩ ವಿಷಯಗಳ ಗಂಟು ಇರಬೇಕಾಗುತ್ತದೆಯೋ ಅದರಲ್ಲಿ ಪ್ರಥಮವಾಗಿ ಮನುಷ್ಯತ್ವವು ಇರಬೇಕಾಗುತ್ತದೆ’ ಎಂದು ಹೇಳುತ್ತಾರೆ.

ಮನುಷ್ಯತ್ವಂ ಮುಮುಕ್ಷತ್ವಂ ಮಹಾಪುರುಷಸಂಶ್ರಯಃ | (ಅಂದರೆ ಮನುಷ್ಯನೆಂದು ಜನ್ಮಕ್ಕೆ ಬರುವುದು, ಮುಮುಕ್ಷುತ್ವ ಹಾಗೂ ಅನ್ನದ ಸಹವಾಸ) ಹೀಗೆ ೩ ವಿಷಯಗಳಿರುತ್ತವೆ. ಭಾರತೀಯ ಸಂಸ್ಕೃತಿಯು ಮನಸ್ಸಿನಿಂದ ಮನುಷ್ಯನಾಗುವುದಕ್ಕೆ ಶಿಕ್ಷಣವೆಂಬ ವ್ಯಾಖ್ಯೆಯನ್ನು ನೀಡುತ್ತದೆ.

ನೀವು ಕರ್ಮ, ಉಪಾಸನೆ ಹಾಗೂ ಜ್ಞಾನಕಾಂಡದ ಅನುಷ್ಠಾನವನ್ನು ಎಷ್ಟೇ ಬಾರಿ ಮಾಡಿರಿ; ಆದರೆ ಎಲ್ಲಿಯ ತನಕ ನಿಮಗೆ ಇತರರನ್ನು ಪ್ರೀತಿಸುವ ಕಲೆಯು ಪ್ರಾಪ್ತವಾಗುವುದಿಲ್ಲವೋ ಅಲ್ಲಿಯ ತನಕ ಈಶ್ವರ ಪ್ರಾಪ್ತಿಯಲ್ಲಿರುವ ಮನುಷ್ಯತ್ವದ ಸಾರ್ಥಕತೆಯನ್ನು ನೀವು ಪಡೆಯಲಾರಿರಿ. ಕೇವಲ ಆ ತ್ರಿಕಾಂಡದ ಅನುಷ್ಠಾನದಿಂದ ವಿದ್ಯಾವಿದ್ಯೆಯ ರಕ್ಷಣೆಯಾಗುತ್ತದೆ ಹಾಗೂ ಪರಂಪರೆಯು ಉಳಿಯುತ್ತದೆ. ನಿಧಾನವಾಗಿ ಅವರಲ್ಲಿನ ಆಚಾರ ವಿಚಾರ ಸಂಪನ್ನತೆಯು ನಷ್ಟವಾಗಿದ್ದರಿಂದ ಅವರ ಮೂಲಭೂತ ಉದ್ದೇಶವು ಸಂಪನ್ನವಾಗುವುದಿಲ್ಲ. ಎಲ್ಲಿಯ ತನಕ ನಿಮಗೆ ಇತರರನ್ನು ಪ್ರೀತಿಸುವ ಕಲೆಯು ಪ್ರಾಪ್ತವಾಗುವುದಿಲ್ಲವೋ ಅಲ್ಲಿಯ ತನಕ ರಾಷ್ಟ್ರವು ಸುಖಿಯಾಗಿರಲು ಸಾಧ್ಯವಿಲ್ಲ.

ಈ ಪ್ರೀತಿಸುವ ಕಲೆಯನ್ನೇ ಭಕ್ತಿ ಎಂದು ಹೇಳುತ್ತಾರೆ. ಹೀಗೆ ಮಾಡುವುದರಿಂದ ಭಕ್ತಿಯಲ್ಲಿ ಕರ್ಮ ಹಾಗೂ ಜ್ಞಾನಯೋಗದ ಪರಿಣಿತಿಯು ಬರಲು ಪ್ರಾರಂಭವಾಗುತ್ತದೆ ಹಾಗೂ ಇದೇ ಈ ಮೂರೂ ಕಾಂಡಗಳ ಅನುಷ್ಠಾನದ ಗುಟ್ಟಾಗಿದೆ. ಇದರ ಹೊರತು ನೀವು ಧರ್ಮಾಂಗದ ಬಾಹ್ಯ ಆಭೂಷಣಗಳಿಂದ ಎಷ್ಟೇ ಅಲಂಕೃತರಾದರೂ ಅದರಿಂದ ಯಾವುದೇ ಉಪಯೋಗವಿಲ್ಲ.

ಇದನ್ನೇ ನಿಜವಾದ ಶಿಕ್ಷಣವೆಂದು ಹೇಳುತ್ತಾರೆ. ನೀವು ’ಆತ್ಮಲಾಭವು ನಿಮ್ಮ ಶಿಕ್ಷಣದ ಅಂತಿಮ ಧ್ಯೇಯವಾಗಿದೆ’ ಎಂದು ಹೇಳಬಹುದು. ನಮ್ಮಲ್ಲಿರುವ ಮೂಲಭೂತ ಸೂಕ್ಷ್ಮವಾಗಿರುವ ಆತ್ಮಸ್ವರೂಪದ ಪ್ರಕಟೀಕರಣವಾದ್ದರಿಂದ ಅದನ್ನು ಶಿಕ್ಷಣವೆಂದು ಹೇಳಲು ಸಾಧ್ಯವಾಗುತ್ತದೆ.’

-ಪೂ. ಕಾಣೇ ಮಹಾರಾಜರು, ನಾರಾಯಣಗಾಂವ್, ಮಹಾರಾಷ್ಟ್ರ