ಹೋಳಿ ಹಬ್ಬದಲ್ಲಿ ಆಗುವ ತಪ್ಪು ಆಚರಣೆಗಳನ್ನು ದೂರಗೊಳಿಸಿ ಈಶ್ವರನ ಕೃಪೆಯನ್ನು ಸಂಪಾದಿಸೋಣ

ಹೋಳಿ ಹಬ್ಬದ ಮಾಧ್ಯಮದಿಂದ ಇತರರಿಗೆ ಆನಂದವಾಗುವಂತೆ ನಡೆದುಕೊಳ್ಳುವುದು ಆವಶ್ಯಕವಾಗಿದೆ.

ವಿದ್ಯಾರ್ಥಿ ಮಿತ್ರರೇ, ಹಿಂದೂ ಸಂಸ್ಕೃತಿಗನುಗುಣವಾಗಿ ನಾವು ನಮ್ಮ ದೇಶದಲ್ಲಿ ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ಹಬ್ಬದ ದಿನದಂದು ನಾವು ಸಂತೋಷದಿಂದಿರುವುದಲ್ಲದೆ, ಇತರರಿಗೆ ಆನಂದವನ್ನು ನೀಡಲು ಬರಬೇಕು. ಹಾಗಿದ್ದರೆ ಮಿತ್ರರೇ, ನನಗೆ ಹೇಳಿ, ನಾವು ‘ಹೋಳಿಯನ್ನು ಆಚರಿಸುವಾಗ ಹಬ್ಬದ ಮಾಧ್ಯಮದಿಂದ ನಿಜವಾಗಿಯೂ ಇತರರಿಗೆ ಆನಂದ ದೊರಕುವಂತೆ ಆಚರಿಸುತ್ತೇವೆಯೇ? ಇಲ್ಲವಲ್ಲ? ಜನರಿಗೆ ನಮ್ಮ ಹಬ್ಬಗಳು ಬೇಡವೆಂದೆನಿಸುತ್ತವೆ. ನಮ್ಮ ಹಬ್ಬಗಳು ಇಷ್ಟು ಕೆಟ್ಟವಾಗಿವೆಯೇ? ನಿಜವಾಗಿಯೂ ಇಲ್ಲ.

ಧರ್ಮಶಿಕ್ಷಣವನ್ನು ನೀಡಿ ಹಬ್ಬಗಳಲ್ಲಿರುವ ಎಲ್ಲ ತಪ್ಪು ಆಚರಣೆಗಳನ್ನು ದೂರಿಗೊಳಿಸಿರಿ!

ಧರ್ಮಶಿಕ್ಷಣ ಸಿಗದ ಕಾರಣ ಪ್ರತಿಯೊಂದು ಹಬ್ಬವನ್ನು ಏಕೆ ಮತ್ತು ಹೇಗೆ ಆಚರಿಸಬೇಕು, ಅದರ ಹಿಂದಿರುವ ಶಾಸ್ತ್ರವೇನು? ಇದು ನಮಗೆ ಗೊತ್ತಿಲ್ಲ. ಆದ್ದರಿಂದ ನಮ್ಮ ಹಬ್ಬಗಳಲ್ಲಿ ಅನೇಕ ತಪ್ಪು ಆಚರಣೆಗಳು ಸೇರಿಕೊಂಡಿವೆ. ಇಂತಹ ತಪ್ಪು ಆಚರಣೆಳನ್ನು ನಿಲ್ಲಿಸುವ ಸಲುವಾಗಿ ಪ್ರತಿಯೊಬ್ಬ ಹಿಂದೂ ಮಗು ಧರ್ಮಶಿಕ್ಷಣವನ್ನು ಪಡೆದುದುಕೊಳ್ಳುವುದು ಅವಶ್ಯಕವಾಗಿದೆ. ಮಿತ್ರರೇ, ನಾವು ಎಲ್ಲರೂ ಧರ್ಮಶಿಕ್ಷಣವನ್ನು ತೆಗೆದುಕೊಳ್ಳೋಣ ಮತ್ತು ಹಬ್ಬಗಳಲ್ಲಿರುವ ಎಲ್ಲ ತಪ್ಪು ಆಚರಣೆಗಳನ್ನು ದೂರಗೊಳಿಸೋಣ. ಆಗ ಇದೇ ನಿಜವಾದ ಹೋಳಿ ಹಬ್ಬವಾಗುತ್ತದೆ.

ಹೋಳಿ ಹಬ್ಬದ ದಿನ ಮುಂದಿನ ಕೃತಿಗಳನ್ನು ತಡೆದು ಧರ್ಮ ಕರ್ತವ್ಯವನ್ನು ಪಾಲಿಸೋಣ!

ಅ. ಒತ್ತಾಯಪೂರ್ವಕ ದೇಣಿಗೆಯನ್ನು ಪಡೆದುಕೊಳ್ಳುವುದು ತಪ್ಪು.

ಆ. ಕಲೂಷಿತ ನೀರಿನ ಬಲೂನನ್ನು ಇತರರಿಗೆ ಹೊಡೆಯಬೇಡಿ.

ಇ. ನೀರಿನ ಅನಾವಶ್ಯಕ ಉಪಯೋಗವನ್ನು ಮಾಡಬೇಡಿ.

ಈ. ಯಾರಿಗೂ ಬಲವಂತವಾಗಿ (ಒತ್ತಾಯಪೂರ್ವಕವಾಗಿ) ಬಣ್ಣವನ್ನು ಹಚ್ಚಬೇಡಿ.

ಉ. ಎಣ್ಣೆಯುಕ್ತ ಬಣ್ಣವನ್ನು (Oil Paints) ಉಪಯೋಗಿಸಬೇಡಿರಿ.

ಊ. ಕರ್ಕಶ ಧ್ವನಿಯಲ್ಲಿ ಡಿ.ಜೆ.ಯ ಹಾಡುಗಳನ್ನು ಹಚ್ಚಿ ಶಬ್ದ ಮಾಲಿನ್ಯವನ್ನು ಮಾಡಬೇಡಿ.

ಎ. ಇತರರಿಗೆ ದು:ಖವನ್ನುಂಟು ಮಾಡುವಂತಹ ಕೃತಿ(ಕಾರ್ಯವನ್ನು)ಯನ್ನು ಮಾಡಬೇಡಿ.

ಏ. ವಾಹನಗಳ ಟಾಯರಗಳನ್ನು ಸುಟ್ಟು ವಾಯು ಮಾಲಿನ್ಯ ಮಾಡಬೇಡಿ.

ಹೋಳಿ ಹಬ್ಬದ ದಿನ ಮುಂದಿನ ಕೃತಿಗಳನ್ನು ಮಾಡಿ ಧರ್ಮ ಹಾನಿಯನ್ನು ತಡೆಯಿರಿ.

ಅ. ನಿಮ್ಮ ಸ್ನೇಹಿತರಿಗೆ ಹೋಳಿಹಬ್ಬದ ಶುಭಾಶಯಗಳನ್ನು ಕನ್ನಡದಲ್ಲೇ ತಿಳಿಸಿ.

ಆ. ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ಪರಿಸರ ಸಂರಕ್ಷಣೆಯನ್ನು ಮಾಡಿ.

ಇ. ಇತರರಿಗೆ ಆನಂದವಾಗುವಂತಹ ಕೃತಿಗಳನ್ನು ಮಾಡಿ.

ಈ. ಹೋಳಿಹಬ್ಬದಲ್ಲಿ ಆಚರಿಸಲ್ಪಡುತ್ತಿರುವ ತಪ್ಪು ಆಚರಣೆಗಳನ್ನು ನಿಲ್ಲಿಸಲು ಮಕ್ಕಳಿಗೆ ತಿಳಿಹೇಳಿ.

ಉ. ‘ಹೋಳಿಯೊಂದಿಗೆ ನನ್ನಲ್ಲಿರುವ ದೋಷಗಳು ನಷ್ಟವಾಗಿ ಸದ್ಗುಣಗಳು ಬೆಳೆಯಲಿ' ಎಂದು ಪ್ರಾರ್ಥನೆಯನ್ನು ಮಾಡಿರಿ.

ನಾವು ಹೋಳಿ ಹಬ್ಬದಂದು ಮೇಲಿನ ಎಲ್ಲ ವಿಷಯಗಳನ್ನು ಆಚರಣೆಯಲ್ಲಿ ತಂದು ದೇವರ ಕೃಪೆಯನ್ನು ಸಂಪಾದಿಸೋಣ. ಹಾಗಾದರೆ ಬನ್ನಿ ಮಿತ್ರರೇ ‘ಮೇಲಿನ ಪ್ರತಿಯೊಂದು ಕೃತಿಯೂ ನಮ್ಮ ಆಚರಣೆಯಲ್ಲಿ ಬರಲಿ ಎಂದು ದೇವರ ಚರಣಗಳಲ್ಲಿ ಪ್ರಾರ್ಥಿಸೋಣ.

– ಶ್ರೀ ರಾಜೇಂದ್ರ ಪಾವಸಕರ (ಗುರೂಜಿ) , ಪನವೇಲ.

Leave a Comment