ವಿದ್ಯಾರ್ಥಿ ಮಿತ್ರರೇ, ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೆ?

ಆಂಗ್ಲರ (ಬ್ರಿಟಿಷರ) ವಂಶದವರಾದ ಭಾರತೀಯರು!

'೧೯೪೭ರ ಅಗಷ್ಟ ೧೫ ರಂದು ನಾವು (ಭಾರತ ದೇಶ) ಸ್ವತಂತ್ರರಾದೇವು; ಆದರೆ ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೆ? ಎಂಬ ಪ್ರಶ್ನೆ ಉಧ್ಭವಿಸುತ್ತದೆ. ಇದಕ್ಕೆ ಕಾರಣ ಎಂದರೆ ಇಂದು ನಮ್ಮ ಪ್ರತಿಯೊಂದು ಕೃತಿಯು ಬ್ರಿಟಿಷರಂತೆ ಇದೆ.ಬ್ರಿಟಿಷರು ನಮ್ಮ ಮೇಲೆ ಅನೇಕ ಅತ್ಯಾಚಾರಗಳನ್ನು ಮಾಡಿದರು.ಜಲಿಯನವಾಲಾ ಬಾಗ ಹತ್ಯಾಕಾಂಡ; ಸಾವರಕರರನ್ನು ಎತ್ತಿನಂತೆ ಗಾಣಕ್ಕೆ ಕಟ್ಟಿ ಚಾಟಿ ಏಟು ಕೊಟ್ಟವರು ಬ್ರಿಟಿಷರು. ಸ್ವಾತಂತ್ರ್ಯಕ್ಕಾಗಿ ಅನೇಕರು ತಮ್ಮ ಸಂಸಾರವನ್ನು ತ್ಯಜಿಸಿದರು. ಇನ್ನಷ್ಟು ಜನರು ಗಲ್ಲಿಗೇರಿದರು. ಹೀಗಿರುವಾಗ ನಮ್ಮಲ್ಲಿ ಅದರ ಬಗ್ಗೆ ಕ್ರೋಧ ನಿರ್ಮಾಣವಾಗುದನ್ನು ಬಿಟ್ಟು ನಾವು ಅವರ ಮಾನಸಿಕ ಗುಲಾಮರಾಗಿ ಬದುಕುತ್ತಿದ್ದೇವೆ. 'ಪ್ರಗತಿ' ಮತ್ತು 'ವಿಜ್ಞಾನ', ಇವುಗಳ ಸೋಗಿನಲ್ಲಿ ನಮ್ಮ ಸಂಸ್ಕೃತಿ, ದೇವರು, ದೇಶ ಮತ್ತು ರಾಷ್ಟ್ರಪ್ರೇಮ ಇವುಗಳ ಬಗ್ಗೆ ನಾವು ಮರೆತಂತೆ ಓಡಾಡುತ್ತಿದ್ದೇವೆ. ನಿಜವಾಗಿ ನಾವು ನಮ್ಮ ಕೃತಿಯಿಂದ "ನಾವು ಖಂಡಿತವಾಗಿಯೂ ಬ್ರಿಟಿಷರ ವಂಶದವರೇ ಆಗಿದ್ದೇವೆ", ಎಂದು ತೋರಿಸುತ್ತಿದ್ದೇವೆ.

ಲೋಕಮಾನ್ಯ ತಿಲಕರು ಅಪೇಕ್ಷಿಸಿದ ಸ್ವರಾಜ್ಯ.

ಲೋಕಮಾನ್ಯ ತಿಲಕರು "ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಮತ್ತು ಅದನ್ನು ನಾನು ಸಾಧಿಸಿಯೇ ತೀರುತ್ತೇನೆ" ಎಂದು ಉದ್ಗರಿಸಿದ್ದರು. ಅವರಿಗೆ ಅಪೇಕ್ಷಿತವಿರುವಂತಹ ಸ್ವರಾಜ್ಯ, ಸ್ವಧರ್ಮ, ಸ್ವರಾಷ್ಟ್ರ, ಸ್ವಸಂಸ್ಕೃತಿ ಮತ್ತು ಸ್ವಭಾಷೆಗಳ ತೀವ್ರ ಅಭಿಮಾನ ಇರುವ ಜನರಿರುವ ರಾಷ್ಟ್ರ. ಆದರೆ ಇಂದು, ದಶಕಗಳ ಸ್ವಾತಂತ್ರ್ಯದ ನಂತರ ನಮಗೆ ತದ್ವಿರುದ್ಧ ಚಿತ್ರ ಕಾಣುತ್ತಿದೆ. ಈ ಪರಿಸ್ಥಿತಿಯನ್ನು ನೋಡಿ 'ನಾವು ನಿಜವಾಗಿಯೂ ಸ್ವತಂತ್ರ್ಯರಾಗಿದ್ದೇವೆಯೆ? ಎಂದೆನಿಸುವುದು ಸಹಜ.

ಬ್ರಿಟಿಷರ ಅಂಧಾನುಕರಣೆ ಹೀಗಾಗುತ್ತಿದೆ…!

ಅ. ಬ್ರಿಟಿಷರಂತೆ ವೇಷಭೂಷೆ: ಇಂದು ಸ್ವತಂತ್ರ ಭಾರತದಲ್ಲಿ ನಾವು ಆಂಗ್ಲರಂತೆ ವೇಶಭೂಷಣ ಮಾಡಿಕೊಂಡು ಓಡಾಡುತ್ತಿದ್ದೇವೆ. ಹುಡುಗರು ಶರ್ಟ, ಪ್ಯಾಂಟ, ಟೈ ಹಾಕಿಕೊಂಡರೆ, ಹೆಣ್ಣು ಮಕ್ಕಳು ಇಂಗ್ಲೆಂಡಿನ ಹುಡುಗಿಯರು ಧರಿಸುವಂತೆ ಜೀನ್ಸ್ ಮತ್ತು ಟಿ ಶರ್ಟ ಹಾಕಿಕೊಂಡು ತಿರುಗಾಡುತ್ತಾರೆ. ಹೀಗೆ ಮಾಡುವುದು ನಮಗೆ ಭೂಷಣ ಅನಿಸುತ್ತದೆ. ಇಂದಿನ ಹುಡುಗರಿಗೆ 'ನಿಮ್ಮ ಹತ್ತಿರ ಜುಬ್ಬಾ ಪಾಯಿಜಾಮಾ ಅಥವಾ ಪಂಚೆ ಇದೆಯೇ?' ಎಂದು ಕೇಳಿದರೆ, 'ಇಲ್ಲ' ಎಂಬುವುದೇ ಉತ್ತರವಾಗಿರುತ್ತದೆ.ನಾವೆಲ್ಲರು ಸೇರಿ ಒಂದು ನಿಶ್ಚಯ ಮಾಡೋಣ, 'ನಾನು ಸ್ವತಂತ್ರ ಭಾರತದಲ್ಲಿ ಇದ್ದೇನೆ, ಕನಿಷ್ಠ ಪಕ್ಷ ಹಬ್ಬ ಹರಿದಿನಗಳ ಅಥವಾ ರಾಷ್ಟ್ರೀಯ ಹಬ್ಬಗಳ ದಿನದಂದಾದರೂ ನನ್ನ ಉಡುಪು ಭಾರತೀಯ ಪದ್ಧತಿಯಂತೆ ಇದ್ದರೆ, ನಾನು ಸ್ವತಂತ್ರ ಭಾರತದಲ್ಲಿ ಇದ್ದೇನೆ ಎಂದು ಅನಿಸುವಂತಾಗಬೇಕು'.

ಆ. ಶಿಕ್ಷಕರಿಗೆ "ಸರ್" ಎಂದು ಸಂಬೋಧಿಸುವುದು : ಇಂದು ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆ, ಹಾಗಾದರೆ ಶಿಕ್ಷಕರಿಗೆ ಸರ್ ಎಂದು ಸಂಬೋಧಿಸದೇ 'ಗುರುಗಳೆ' ಎಂದು ಸಂಬೋಧಿಸಬೇಕು.ಅವರಿಗೆ 'ಹಲೋ'ಎಂದು ಸ್ವಾಗತಿಸದೆ, ಆದರದಿಂದ 'ನಮಸ್ಕಾರ' ಮಾಡಬೇಕು. ಸರ್ ಎಂದು ಆಂಗ್ಲರನ್ನು ಸಂಬೋಧಿಸುತ್ತಿದ್ದರು. ಸ್ವಾತಂತ್ರ್ಯದ ನಂತರ ಈಗಲೂ ನಾವು ಹಾಗೆಯೇ ಮಾತನಾಡಬೇಕೇ?

ಇ. ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪಡೆಯದೇ ಆಂಗ್ಲಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವುದರಲ್ಲಿ ಅಭಿಮಾನ ಪಡುವುದು : ಯಾವ ಬ್ರಿಟಿಷರು ನಮ್ಮ ಮೇಲೆ ೧೫೦ ವರ್ಷಗಳ ಕಾಲ ಅತ್ಯಾಚಾರ ನಡೆಸಿದರೋ, ಅವರ ಭಾಷೆಯಲ್ಲಿ ಶಿಕ್ಷಣ ಪಡೆಯುವುದರಲ್ಲಿ ನಮಗೆ ಅಭಿಮಾನವಾಗುತ್ತದೆ ಅಂದರೆ ನಾವು ಇಂದಿಗೂ ಬ್ರಿಟಿಷರ ಬೌದ್ಧಿಕ ಗುಲಾಮರಾಗಿದ್ದೇವೆ ಎಂದು ಅರ್ಥ! ನಮ್ಮಲ್ಲಿ ಸ್ವಭಾಷಾ ಅಭಿಮಾನವನ್ನು ಜಾಗೃತಗೊಳಿಸಿ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದುಕೊಳ್ಳಬೇಕು.

ಈ. ಕ್ರಾಂತಿಕಾರರಿಗಿಂತ ಚಲನಚಿತ್ರ ನಟ-ನಟಿಯರು ಆದರ್ಶರಾಗಿರುವುದು: ಭಗತಸಿಂಗ, ರಾಜಗುರು, ಸುಖದೇವ ಮತ್ತು ಸಾವರಕರ ಮುಂತಾದ ಕ್ರಾಂತಿಕಾರರೇ ನಮ್ಮ ಆದರ್ಶರಾಗಿರಬೇಕು. ಅವರು ತಮ್ಮ ಸರ್ವಸ್ವವನ್ನು ತ್ಯಜಿಸಿದವರು, ತಾರುಣ್ಯದಲ್ಲಿಯೇ ಗಲ್ಲಿಗೇರಿದವರು. ಇದರ ನೆನಪು ನಮಗೆ ಸತತವಾಗಿ ಆಗಬೇಕು, ನಾವು ಅವರ ಆದರ್ಶವನ್ನು ಇಟ್ಟುಕೊಳ್ಳಬೇಕು. ಚಲನಚಿತ್ರ ನಟರು ನಮ್ಮ ಆದರ್ಶರಲ್ಲ.

ಉ. ಎಲ್ಲ ವಿಷಯಗಳ ಶೋಧ ಆಂಗ್ಲರು ಮಾಡಿದರು ಎಂದು ಅಭಿಮಾನವಾಗುವುದು; ಆದರೆ ಪ್ರತ್ಯಕ್ಷದಲ್ಲಿ ಮೂಲ ಸಂಶೋಧಕರ ಬಗ್ಗೆ ತಿಳಿದುಕೊಳ್ಳದಿರುವುದು: ಇಂದು ನಮಗೆ ಮುಖ್ಯವಾದ ಎಲ್ಲ ಸಂಶೋಧನೆಗಳನ್ನೂ ಆಂಗ್ಲರು ಮಾಡಿದರು ಎಂದು ಹೇಳಲಾಗುತ್ತದೆ. ಅದಕ್ಕೆ ನಮಗೆ ಅವರ ಬಗ್ಗೆ ಅಭಿಮಾನವಾಗುತ್ತದೆ. ಆದರೆ ಸತ್ಯಸಂಗತಿ ಏನೆಂದರೆ ಬ್ರಿಟಿಷರು ಭಾರತಕ್ಕೆ ಬರುವ ಮುಂಚೆಯೆ ನಮ್ಮ ಋಷಿಮುನಿಗಳು ಎಲ್ಲ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿಅನೇಕ ಆವಿಷ್ಕಾರಗಳನ್ನು ಮಾಡಿದ್ದರು.

೧.ವಿಮಾನದ ಸಂಶೋಧನೆ – ಭಾರದ್ವಾಜ ಋಷಿಗಳು
೨.ಖಗೋಳ ಶಾಸ್ತ್ರ- ಆರ್ಯಭಟ್ಟ
೩. ರಸಾಯನ ಶಾಸ್ತ್ರ- ನಾಗಾರ್ಜುನ
೪. ವನಸ್ಪತಿ ಶಾಸ್ತ್ರ- ಜೀವಕ

ಊ. ಪಾಶ್ಚಾತ್ಯರ ಪದ್ಧತಿಯಲ್ಲಿ ಹುಟ್ಟುಹಬ್ಬ ಆಚರಿಸುವುದು: ಈಗಿನ ಮಕ್ಕಳು 'ಕೇಕ್' ಕತ್ತರಿಸಿ ಮತ್ತು ಅದರ ಮೇಲಿರುವ ಮೇಣದಬತ್ತಿ ಆರಿಸಿ ಹುಟ್ಟುಹಬ್ಬ ಆಚರಿಸುತ್ತಾರೆ. ನಾವು ನಿಜವಾಗಿಯೂ ಸ್ವತಂತ್ರರಾಗಿದ್ದೇವೆಯೇ? ನಾವು ಮಕ್ಕಳ ಹುಟ್ಟುಹಬ್ಬ ಆರತಿ ಮಾಡಿ ಆಚರಿಸಿದರೆ ಮಾತ್ರ ನಾವು ಸ್ವತಂತ್ರರಿದ್ದೇವೆ ಎಂದು ಹೇಳಬಹುದು.

ಎ. ಬ್ರಿಟಿಷರಂತೆ ಆಹಾರ ತೆಗೆದುಕೊಳ್ಳುವುದು: ಬ್ರೆಡ-ಜಾಮ್, ಬರ್ಗರ, ಪಿಝ್ಝಾ ಇವುಗಳಿಗಿಂತ ನಮ್ಮ ಆಹಾರಅನ್ನ, ಸಾರು, ರೊಟ್ಟಿ ಮತ್ತು ಚಪಾತಿ ಮುಂತಾದವು ಆಗಿರಬೇಕು. 'ಆಹಾರದಂತೆ ವಿಚಾರ' ಎಂಬ ಉಕ್ತಿಯಿದೆ. ಆಹಾರ ಬ್ರಿಟಿಷರಂತೆ ಇದ್ದರೆ ವಿಚಾರ ಕೂಡ ಅವರಂತೆ ಆಗಬಹುದು.

ಏ. ತಂದೆ ತಾಯಿಯನ್ನು ಮಮ್ಮಿ-ಪಪ್ಪಾ ಎಂದು ಕರೆಯಲು ಇಷ್ಟವಾಗುತ್ತದೆ: ಇದು ಬ್ರಿಟಿಷರ ಗುಲಾಮರಾಗಿರುವುದರ ಪ್ರತೀಕವಾಗಿದೆ. ಇಂದಿನಿಂದ ನಾವು ನಮ್ಮ ತಂದೆ ತಾಯಿಯನ್ನು ಅಪ್ಪ-ಅಮ್ಮ ಎಂದು ಕರೆಯಲು ಪ್ರಾರಂಭಿಸೋಣ, ಆಗಲೇ ನಾವು ಸ್ವಾತಂತ್ರ್ಯದಿನ ಆಚರಣೆ ಮಾಡಿದಂತೆ ಆಗುವುದು.

ಒ. ಬ್ರಿಟಿಷರಂತೆ 'ದಿವಸ'ಗಳ ಆಚರಣೆ ಮಾಡುವುದರಲ್ಲಿ ಧನ್ಯರಾಗುವುದು: ಉದಾ; ೩೧ ಡಿಸೆಂಬರನ್ನು ನಾವು ಹೊಸವರ್ಷ ಎಂದು ಅನಂದದಿಂದ ಆಚರಿಸುತ್ತೇವೆ. ನಿಜವಾಗಿ ನಾವು ನಮ್ಮ ಹೊಸವರ್ಷ ಯುಗಾದಿಯಂದು ಆಚರಿಸಬೇಕು; ಆದರೆ ನಾವು ೩೧ ಡಿಸೆಂಬರ ದಿನವೇ ಆಚರಿಸುತ್ತೇವೆ. ಇದು ಗುಲಾಮಗಿರಿಯ ಲಕ್ಷಣವಾಗಿದೆ. ಇಂದಿನ ಸ್ವಾತಂತ್ರ್ಯ ದಿನದಂದು ನಾವು ಎಲ್ಲರೂ ಕೂಡಿ ಪ್ರತಿಜ್ಞೆಯನ್ನು ಮಾಡೋಣ 'ನಾವು ಬ್ರಿಟಿಷರ ದಿನಗಳನ್ನು ಆಚರಿಸದೆ ಕೇವಲ ನಮ್ಮ ಹಬ್ಬ-ಹರಿದಿನಗಳನ್ನು ಮಾತ್ರ ಆಚರಿಸುತ್ತೇವೆ' ಎಂದು.

ಔ. ಪ್ರತಿಜ್ಞೆ, ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಇವುಗಳನ್ನು ಹೇಳುವ ಸಮಯದಲ್ಲಿ ಘಟಿಸುವ ಅಯೋಗ್ಯ ಕೃತಿಯಿಂದ ಆಗುವ ರಾಷ್ಟ್ರದ ಅಪಮಾನ: ಈಗಿನ ಹುಡುಗರು ಪ್ರತಿಜ್ಞೆ ಹೇಳುವಾಗ ಚೇಷ್ಟೆ ಮಾಡುವುದು, ಅನಾವಶ್ಯಕವಾಗಿ ಮಾತನಾಡುವುದು, ಬರೆಯುವುದು ಇಂತಹ ಕೃತಿಗಳನ್ನು ಮಾಡುತ್ತಾರೆ. ಹೀಗೆ ಮಾಡುವುದೆಂದರೆ ನಮ್ಮ ಪ್ರತಿಜ್ಞೆಯ ಅವಮಾನ ಮಾಡಿದಂತೆ. ಪರೋಕ್ಷವಾಗಿ ಅದು ರಾಷ್ಟ್ರದ ಅವಮಾನವೇ ಆಗಿದೆ. ನಾವು ವಂದೇ ಮಾತರಂ ಹಾಡುವಾಗ ಅದರ ಎರಡೇ ಪಂಕ್ತಿಗಳನ್ನು ಹಾಡುತ್ತೇವೆ. ಇದು ನಮ್ಮ ರಾಷ್ಟ್ರಗೀತೆಯ ಅವಮಾನವಾಗುತ್ತದೆ.ವಂದೇ ಮಾತರಂನಲ್ಲಿ ೬ ಪಂಕ್ತಿಗಳಿವೆ. ಇವತ್ತು ನಾವು ಸಂಪೂರ್ಣ ವಂದೇ ಮಾತರಂ ಹಾಡುವ ನಿಶ್ಚಯವನ್ನು ಮಾಡೋಣ.

ಅಂ. ಸ್ವಾತಂತ್ರ್ಯ ದಿನದಂದು ಧ್ವಜದ ಅವಮಾನ ಮಾಡುವುದು: ಕೆಲವು ಮಕ್ಕಳು ಧ್ವಜವನ್ನು ಆಟ ಆಡಲು ಬಳಸುತ್ತಾರೆ. ಸೈಕಲ್ಗೆ ಕಟ್ಟಿಕೊಂಡು ತಿರುಗಾಡುತ್ತಾರೆ. ಕೆಲವು ಜನ ತಮ್ಮ ಶರ್ಟಿನ ಕಿಸೆಗೆ ಚಿಕ್ಕ ಧ್ವಜವನ್ನು ಸಿಕ್ಕಿಸುತ್ತಾರೆ. ಸಾಯಂಕಾಲವಾಗುವಷ್ಟರಲ್ಲಿ ಆ ಧ್ವಜ ಎಲ್ಲಿಯಾದರು ಕಸದಲ್ಲಿ ಬಿದ್ದಿರುತ್ತದೆ. ಪ್ಲಾಸ್ಟಿಕ ಹಾಳೆಯ ಧ್ವಜವನ್ನು ಮಾರುವುದು ಮತ್ತು ಧ್ವಜದಂತೆ ಮೂರು ಬಣ್ಣ ಇರುವ ಟೀಶರ್ಟ ಬಳಸುವುದು ಅಂದರೆ ನಮ್ಮ ರಾಷ್ಟ್ರದ ಪ್ರತೀಕದ ಅವಮಾನ ಮಾಡಿದಂತೆ. "ನಾವು ರಾಷ್ಟ್ರಧ್ವಜದ ಅವಮಾನ ಆಗಲು ಬಿಡುವುದಿಲ್ಲ" ಎಂದು ಇಂದೇ ನಾವೆಲ್ಲರೂ ಪ್ರತಿಜ್ಞೆಯನ್ನು ಮಾಡೋಣ.

೪. ಪರತಂತ್ರದ ಸ್ಥಿತಿಯನ್ನು ಬದಲಾಯಿಸಿ ಸ್ವಾತಂತ್ರ್ಯ ಅನುಭವಿಸಲು ನಿಶ್ಚಯ ಮಾಡೋಣ !: ನಾವು ನಿಜವಾಗಿಯೂ ಸ್ವಾತಂತ್ರ್ಯಗಳಿಸಿದ್ದರೂ ಬ್ರಿಟಿಷರ ಬೌದ್ಧಿಕ ಗುಲಾಮಗಿರಿಯಲ್ಲಿ ಬದುಕುತ್ತಿದ್ದೇವೆ. ಸ್ವಲ್ಪದರಲ್ಲಿ ನಾವು ಸ್ವಾತಂತ್ರರಾಗಿರದೆ ಪಾರತಂತ್ರದಲ್ಲಿಯೇ ಬದುಕುತ್ತಿದ್ದೇವೆ. ಈ ಸ್ಥಿತಿಯನ್ನು ಬದಲಾಯಿಸಲು ನಿಶ್ಚಯ ಮಾಡುವುದೇ ನಿಜವಾದ ಸ್ವಾತಂತ್ರ್ಯೋತ್ಸವ ಆಚರಿಸಿದಂತೆ.

ಶ್ರೀ ರಾಜೇಂದ್ರ ಪಾವಸಕರ (ಗುರೂಜಿ)ಪನವೇಲ.

Leave a Comment