ಶ್ರೀರಾಮನ ನಾಮಜಪ

ದೇವರ ಬಗ್ಗೆ ಭಕ್ತಿಭಾವ ನಿರ್ಮಾಣವಾದ ನಂತರ ದೇವರ ನಾಮಜಪವನ್ನುಹೇಗೆ ಮಾಡಿದರೂ ನಡೆಯುತ್ತದೆ. ಆದರೆ ಭಕ್ತಿಭಾವವು ಬೇಗನೆ ನಿರ್ಮಾಣವಾಗಲು ಮತ್ತು ದೇವರ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ನಾಮಜಪದ ಉಚ್ಚಾರ ಯೋಗ್ಯವಾಗಿರುವುದುಅವಶ್ಯಕವಾಗಿದೆ.

ತಾರಕ ಮತ್ತು ಮಾರಕ ಎಂದು ದೇವರ ಎರಡು ರೂಪಗಳಿರುತ್ತದೆ. ಭಕ್ತರಿಗೆ ಆಶೀರ್ವಾದವನ್ನು ನೀಡುವ ರೂಪವೆಂದರೆ ತಾರಕ ರೂಪ. ಉದಾ: ಆಶೀರ್ವಾದ ಮುದ್ರೆಯಲ್ಲಿ ಸಾಮಾನ್ಯವಾಗಿಕಾಣಿಸುವ ಶ್ರೀರಾಮ. ಅಸುರರ ಸಂಹಾರವನ್ನು ಮಾಡುವ ರೂಪವೆಂದರೆ ಮಾರಕರೂಪ. ಉದಾ:ವಾಲಿ, ರಾವಣ ಮುಂತಾದಅಸುರರ ನಾಶವನ್ನು ಮಾಡುತ್ತಿರುವ ಶ್ರೀರಾಮ. ದೇವರ ಬಗ್ಗೆ ಸಾತ್ತ್ವಿಕ ಭಾವ ನಿರ್ಮಾಣವಾಗಲು ತಾರಕ ರೂಪದ ನಾಮಜಪದ ಅವಶ್ಯಕತೆಯಿರುತ್ತದೆ ಮತ್ತು ದೇವರಿಂದ ಶಕ್ತಿ ಮತ್ತು ಚೈತನ್ಯ ಗ್ರಹಿಸಲು ಅವರ ಮಾರಕ ರೂಪದ ನಾಮಜಪದ ಅವಶ್ಯಕತೆ ಇರುತ್ತದೆ.

ಶ್ರೀರಾಮನ ತಾರಕ-ಮಾರಕ ಸಂಯುಕ್ತ ನಾಮಜಪವನ್ನು ಯೋಗ್ಯ ಉಚ್ಚಾರ ಸಹಿತ ಹೇಗೆ ಮಾಡಬೇಕೆಂದು ಹೇಳಲಾಗಿದೆ

ಶ್ರೀರಾಮ ಜಯ ರಾಮ ಜಯ ಜಯ ರಾಮ ನಾಮಜಪ ಮಾಡುವಾಗ ನಾಮಜಪದಲ್ಲಿ ತಾರಕ ಭಾವ ಬರಲು ನಾಮಜಪದಲ್ಲಿ ಮೊದಲಿಗೆ ಬರುವಜಯ ರಾಮಮತ್ತು ನಂತರ ಬರುವಜಯ ಜಯದಲ್ಲಿನ ಎರಡನೇಜಯಹೇಳುವಾಗ ಅದಕ್ಕೆ ಒತ್ತು ನೀಡದೇ ನಿಧಾನವಾಗಿ ಹೇಳಬೇಕು ಮತ್ತು ಆಗಶ್ರೀರಾಮ, ನಾನು ನಿನಗೆ ಸಂಪೂರ್ಣ ಶರಣಾಗಿದ್ದೇನೆಎಂಬ ಭಾವವನ್ನಿಡಬೇಕು. ನಾಮಜಪದಲ್ಲಿ ಮಾರಕ ಭಾವ ಬರಲುಶ್ರೀರಾಮಶಬ್ದದಲ್ಲಿನಶ್ರೀ ಮೇಲೆ, ಎರಡನೇ ಬಾರಿ ಬರುವಜಯಶಬ್ದದಅಕ್ಷರದ ಮೇಲೆ ಮತ್ತು ಕೊನೆಯರಾಮಶಬ್ದದರಾಅಕ್ಷರದ ಮೇಲೆ ಒತ್ತು ನೀಡಬೇಕು. ಕೊನೆಯಜಯ ಜಯ ನಂತರ ಸ್ವಲ್ಪ ಹೊತ್ತು ತಡೆದುರಾಮಎಂದು ಹೇಳಬೇಕು.

Leave a Comment