ನವಜಾತ ಶಿಶುವನ್ನು ಮತ್ತು ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು ?

ಪ್ರಸೂತಿಯನಂತರ ಬಾಣಂತಿಯ ಕೋಣೆಯಲ್ಲಿ ಇತರರಿಗೆ ಪ್ರವೇಶಏಕೆ ನಿಷಿದ್ಧ?

ಗರ್ಭಾಶಯದಲ್ಲಿ ಮಗು ಜಂತುರಹಿತ ವಾತಾವರಣದಲ್ಲಿ ಇರುತ್ತದೆ. ಜನ್ಮದ ನಂತರ ಅದು ಅನೇಕ ಜಂತುಗಳಿರುವ ವಾತಾವರಣದಲ್ಲಿ ಬರುತ್ತದೆ. ನವಜಾತ ಶಿಶುವಿನ ರೋಗಪ್ರತಿಬಂಧಕ ಶಕ್ತಿಯು ಬಹಳ ಕಡಿಮೆಯಿರುವುದರಿಂದ ನಾವು ನವಜಾತ ಶಿಶುವನ್ನು ಜಂತುಗಳ ಸಂಪರ್ಕಕ್ಕೆ ತರದೇ ಬೇರೆಯೇ ಕೋಣೆಯಲ್ಲಿ ಇಡುವುದು ಸೂಕ್ತವಾಗಿರುತ್ತದೆ. ಪ್ರಸೂತಿಯ ನಂತರ ತಾಯಿಬಹಳ ದಣಿದಿರುತ್ತಾಳೆ, ಅಲ್ಲದೇ ಅವಳ ರೋಗಪ್ರತಿಬಂಧಕ ಶಕ್ತಿಯು ಕಡಿಮೆಯಾಗಿರುತ್ತದೆ. ಪ್ರಸೂತಿಯ ನಂತರ ಗರ್ಭಾಶಯಕ್ಕೆ ಗಾಯವಾಗುವುದರಿಂದ ಅಲ್ಲಿ ಜಂತುಗಳು ಬೇಗನೆ ಬೆಳೆಯುತ್ತವೆ. ತಾಯಿಗೆ ಕೆಮ್ಮು,ನೆಗಡಿಯಾಗಿರುವ ಜನರ ಸಂಪರ್ಕದಿಂದಾಗಿ ಕೆಮ್ಮು,ನೆಗಡಿಯಾದರೆ, ಅದರ ಜಂತುಗಳು ಶಿಶುವಿನ ತನಕ ಸಹಜವಾಗಿ ತಲುಪಬಲ್ಲುದು, ಆದುದರಿಂದಲೇ ಜಂತುಸಂಸರ್ಗದಿಂದ ತಾಯಿ ಮತ್ತು ಮಗುವಿನ ಸಂರಕ್ಷಣೆಯನ್ನು ಮಾಡಬೇಕು. ಸಮಾಜದಲ್ಲಿನ ಜನರ ಭಾವನೆಯನ್ನು ನೋಯಿಸದೇ ರೋಗಜಂತುಗಳಿಂದ ತಾಯಿ ಮತ್ತು ನವಜಾತ ಶಿಶುವಿನ ಸಂರಕ್ಷಣೆಯನ್ನು ಮಾಡುವುದಕ್ಕೋಸ್ಕರ ನಮ್ಮ ಹಿರಿಯರು ಕೆಲವು ದಿನ ಬಾಣಂತಿಯನ್ನು ಮುಟ್ಟದಿರುವ ಪ್ರಥೆಯನ್ನು ಪಾಲಿಸುತ್ತಾರೆ.

ನವಜಾತ ಶಿಶುಮತ್ತು ತಾಯಿಯನ್ನು ಕತ್ತಲೆಯ ಕೋಣೆಯಲ್ಲಿ ಇಡುವ ಕಾರಣ

ಮಗುವು ಗರ್ಭಾಶಯದಲ್ಲಿರಬೇಕಾದರೆ ಕತ್ತಲೆಯ ವಾತಾವರಣದಲ್ಲಿರುತ್ತದೆ. ಅಲ್ಲಿ ಪ್ರಕಾಶಕಿರಣಗಳು ತಲುಪಲು ಸಾಧ್ಯವಿರುವುದಿಲ್ಲ. ಹೊರಗಿನ ಧ್ವನಿ, ಸ್ಪರ್ಶ ಮುಂತಾದ ಜ್ಞಾನೇಂದ್ರಿಯಗಳನ್ನು ಉತ್ತೇಜಿಸುವ ವಿಷಯಗಳು ಅಲ್ಲಿ ಇರುವುದಿಲ್ಲ ಅಥವಾ ಅವುಗಳ ಪ್ರಭಾವವು ಅತ್ಯಂತ ಅಲ್ಪವಾಗಿರುತ್ತದೆ. ಜನ್ಮದ ನಂತರ ಮಗುವು ಪ್ರಕಾಶ, ಧ್ವನಿ, ಹಾಗೆಯೇ ಜ್ಞಾನೇಂದ್ರಿಯಗಳನ್ನು ಉತ್ತೇಜಿಸುವ ಗಾಳಿ, ವಾಸನೆ ಇತ್ಯಾದಿ ವಿಷಯಗಳ ಸಾನಿಧ್ಯದಲ್ಲಿ ಬರುತ್ತದೆ. ನಾವೂ ಸಹ ಕತ್ತಲೆಯ ಕೋಣೆಯಿಂದ ಅಥವಾ ಚಲನಚಿತ್ರಮಂದಿರದಿಂದ ತಕ್ಷಣ ಹೊರಗೆಪ್ರಖರ ಬೆಳಕಿನಲ್ಲಿ ಬಂದಾಗ ನಮ್ಮ ಕಣ್ಣು ಕುಕ್ಕುತ್ತವೆ ಮತ್ತು ನಮ್ಮ ಕಣ್ಣುಗಳಿಗೆ ತೊಂದರೆಯಾಗುತ್ತದೆ, ಹಾಗಿರುವಾಗ ಯಾರ ಕಣ್ಣುಗಳಿಗೆ ಎಂದಿಗೂ ಬೆಳಕಿನ ಅಭ್ಯಾಸವೇ ಇರುವುದಿಲ್ಲವೋ, ಅಂತಹ ನವಜಾತ ಶಿಶುವಿಗೆ ಬೆಳಕು, ಗಾಳಿ ಮತ್ತು ಇತರ ಜ್ಞಾನೇಂದ್ರಿಯಗಳನ್ನು ಸತತ ಉತ್ತೇಜಿತಗೊಳಿಸುವ ವಾತಾವರಣದಲ್ಲಿಡುವುದು ಅನ್ಯಾಯ ಮತ್ತು ಅಹಿತಕರವಾಗುವುದು. ಮಗುವಿಗೆ ಒಂದು ವೇಳೆ ಜ್ಞಾನೇಂದ್ರಿಯಗಳನ್ನು ಉತ್ತೇಜಿಸುವ ಬೆಳಕು, ಗಾಳಿ ಇತ್ಯಾದಿ ವಿಷಯಗಳ ಅಭ್ಯಾಸವನ್ನು ಮಾಡಿಸಿದರೆ ಅವರಿಗೆ ಅದರ ತಿರಸ್ಕಾರವೆನಿಸದೇ ಆನಂದವೇ ಆಗುವುದು. ಹಾಗೆಯೇ ಚಳಿ, ಗಾಳಿ ಮತ್ತು ಅತಿ ಉಷ್ಣತೆಯಿಂದ ಮಗುವಿನ ಸಂರಕ್ಷಣೆಯಾಗುತ್ತದೆ. ಪ್ರತಿಯೊಂದು ಮಗುವು ೧೮ ರಿಂದ ೨೦ ತಾಸು ಮಲಗುತ್ತದೆ ಮತ್ತು ನಮ್ಮ ಹಾಗೆಯೇ ಅವರಿಗೂ ಸಹ ಕತ್ತಲೆಯ ಕೋಣೆಯು ಬೇಕೆಂದೆನಿಸುತ್ತದೆ. ಅದರಂತೆಯೇ ದಣಿದು ಸೊರಗಿದ ತಾಯಿಗೂ ಸಹ ಅಲ್ಪ ಬೆಳಕಿನ ಕೋಣೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೋಣೆಯು ಶಿಸ್ತುಬದ್ಧ ಮತ್ತು ಸ್ವಚ್ಛವಾಗಿರುವುದು ಮಹತ್ವದ್ದಾಗಿದೆ. "ಕತ್ತಲೆಯ ಕೋಣೆಯೆಂದರೆ ಅಸ್ತವ್ಯಸ್ತ ಕೋಣೆ" ಎಂಬ ತಪ್ಪು ಅರ್ಥವನ್ನು ಮಾಡಿಕೊಳ್ಳಬಾರದು.

ನವಜಾತ ಶಿಶುವಿಗೆ ಬಂಗಾರವನ್ನು ನೆಕ್ಕಲು ನೀಡುವ ಪ್ರಥೆ

ಬಂಗಾರವು ಆಯುರ್ವೇದದ ಬೋಧನೆಯ ಪ್ರಕಾರ ನರಮಂಡಲಕ್ಕೆಉಪಯುಕ್ತ ಶಕ್ತಿವರ್ಧಕವಾಗಿದೆ.ಅದರಿಂದಬುದ್ಧಿ ಮತ್ತು ಸ್ಮರಣಶಕ್ತಿಯು ಬೆಳೆಯುತ್ತದೆ. ತ್ವಚೆಯ ಕಾಂತಿಯು ಸುಧಾರಿಸುತ್ತದೆ. ಇತರ ಅವಯವಗಳ ಮೇಲೆಯೂ ಸಹ ಅದರ ಒಳ್ಳೆಯ ಪರಿಣಾಮವಾಗುತ್ತದೆ.

ಮಗುವಿಗೆ ಬಂಗಾರವನ್ನು ನೀಡುವ ವಿವಿಧ ರೀತಿ

ಅ.ಸಾಣೆಕಲ್ಲಿನ ಮೇಲೆ ಜೇನುತುಪ್ಪ ಮತ್ತು ತುಪ್ಪದಲ್ಲಿ ಬಂಗಾರವನ್ನು ತೇಯ್ದು ಅದನ್ನು ಮಗುವಿನ ನಾಲಿಗೆಗೆ ಸವರುತ್ತಾರೆ.
ಆ.ಬ್ರಾಹ್ಮಿ, ಬಜೆ ಮತ್ತು ಶಂಖಪುಷ್ಪಔಷಧದ ಜೊತೆ ಶುದ್ಧ ಬಂಗಾರವನ್ನು ತೇಯ್ದು ಕೊಡುತ್ತಾರೆ.
ಚಿಕ್ಕಂದಿನಲ್ಲಿ ಮಗುವಿನ ಮೆದುಳಿನ ಬೆಳವಣಿಗೆ ಮತ್ತು ವಿಕಾಸ ಬೇಗನೆ ಆಗುತ್ತಿರುತ್ತದೆ, ಆದುದರಿಂದಲೇ ಪಾರಂಪಾರಿಕ ಶಕ್ತಿವರ್ಧಕ ಮತ್ತು ಮೆದುಳಿನ ಬೆಳವಣಿಗೆಯನ್ನು ಮಾಡುವ ಶಕ್ತಿವರ್ಧಕಗಳನ್ನು ೬ ತಿಂಗಳುಗಳಿಂದ ೧ ವರ್ಷದವರೆಗಿನ ಕಾಲಾವಧಿಯಲ್ಲಿ ಕೊಡಬೇಕು.

ಸ್ನಾನದ ನಂತರ ಹೊಗೆಯನ್ನು ನೀಡುವ ಪ್ರಥೆ

ಚಳಿಗಾಲದಲ್ಲಿ ನವಜಾತ ಶಿಶು ಮತ್ತು ಅದರ ತಾಯಿಯಿರುವ ಕೋಣೆಯಲ್ಲಿ ಬೆಂಕಿಯಿರುವ ಅಗ್ಗಿಷ್ಟಿಕೆ (ಇದ್ದಿಲೊಲೆ) ಯನ್ನಿಟ್ಟು ಕೋಣೆಯ ಉಷ್ಣತೆಯನ್ನು ಕಾಪಾಡುವ ಪ್ರಥೆಯಿದೆ. ಒಲೆಯಲ್ಲಿ ತುಪ್ಪ, ಸರ್ಜರಸ, ಅರಿಶಿಣ, ಸಾಸಿವೆ, ಇಂಗು, ವಾಯುವಡಂಗ ಮತ್ತು ಬಜೆಯನ್ನು ಹಾಕಿ ನಿರ್ಮಾಣ ಮಾಡಿದ ಹೊಗೆಯನ್ನು ಸ್ನಾನದ ನಂತರ ನವಜಾತ ಶಿಶುವಿಗೆ ಕೊಡಲಾಗುತ್ತದೆ. ಅದರಿಂದಾಗಿ ಚಳಿಯಿಂದ ಅದರ ಸಂರಕ್ಷಣೆಯಾಗುತ್ತದೆ ಮತ್ತು ಶರೀರವು ಪೂರ್ಣಪ್ರಮಾಣದಲ್ಲಿ ಒಣಗಲು ಸಹಾಯವಾಗುತ್ತದೆ. ಅದರಂತೆಯೇ ಎದೆಯಲ್ಲಿ ಕಫವು ಸಂಗ್ರಹವಾಗುವುದಿಲ್ಲ. ಈ ಔಷಧದ ಹೊಗೆಯಿಂದಾಗಿ ಸೊಳ್ಳೆ ಅಥವಾ ಕೀಟಗಳ ತೊಂದರೆಯಾಗುವುದಿಲ್ಲ. ಹಾಗೆಯೇ ರೋಗಜಂತುಗಳ ನಾಶವೂ ಆಗುತ್ತದೆ. ಬೇಸಿಗೆಯಲ್ಲಿ ತಾಯಿ ಮತ್ತು ಮಗುವಿಗೆ ಹೊಗೆಯನ್ನು ಸಹಿಸಲಾಗುವುದಿಲ್ಲವಾದುದರಿಂದ ಹೊಗೆಯನ್ನು ಕೊಡಬಾರದು. ಕೋಣೆಯು ಬೆಚ್ಚಗೆ ಮತ್ತು ಜಂತುರಹಿತವಾಗಿದ್ದರೆ, ಹೊಗೆಯನ್ನು ಕೊಡುವ ಅವಶ್ಯಕತೆಯಿಲ್ಲ. ಸಧ್ಯ ಆಧುನಿಕ ಪದ್ಧತಿಯಿಂದ ಎಂದರೆ ಇಲೆಕ್ಟ್ರಿಕ ಹೀಟರ್ಸ್ ಮುಂತಾದವುಗಳಿಂದ ಕೋಣೆಯನ್ನು ಬೆಚ್ಚಗಿಡುವ ಸೌಕರ್ಯವಿರುವುದರಿಂದ ಹೊಗೆಯನ್ನು ಕೊಡುವ ಅವಶ್ಯಕತೆಯಿರುವುದಿಲ್ಲ.

Leave a Comment