ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರವನ್ನು ಹೇಗೆ ಮೂಡಿಸಬೇಕು ?

ಸಂಸ್ಕಾರದ ಮೂಲ ತಳಹದಿಯೆಂದರೆ ಶಿಸ್ತು. ಪ್ರತಿಯೊಂದು ಕೃತಿಗೆ ಶಿಸ್ತು, ನಿಯಮವನ್ನು ಹಾಕದಿದ್ದರೆ, ಆ ಕೃತಿಯು ಅಪೂರ್ಣವಾಗುತ್ತದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಕಟ್ಟುನಿಟ್ಟಾಗಿ ಶಿಸ್ತಿನ ಪಾಲನೆಯನ್ನು ಮಾಡಬೇಕು. ಅದಕ್ಕಾಗಿ ಚಿಕ್ಕಂದಿನಲ್ಲಿಯೇ ಶಿಸ್ತಿನ ಸಂಸ್ಕಾರವನ್ನು ಎಳೆಯಮನಸ್ಸಿನ ಮೇಲೆ ಬಿಂಬಿಸಿಬೇಕು.

ಮಕ್ಕಳು ಸ್ವಾವಲಂಬಿಗಳಾಗಲಿ

ಚಿಕ್ಕವರಿರುವಾಗಲೇ ಮಕ್ಕಳಿಗೆ ಯೋಗ್ಯ ನಡವಳಿಕೆಯನ್ನು ಕಲಿಸಬೇಕು. ಮಲಗಿ ಎದ್ದ ನಂತರ ಸ್ವಂತದ ಹೊದಿಕೆಯನ್ನು ಮಡಚಿಡಲು ಕಲಿಸಬೇಕು. ಪ್ರಾರಂಭದಲ್ಲಿ ಸರಿಯಾಗಿ ಆಗದಿರಬಹುದು, ಆದರೆ ಮಗು ಬೆಳೆಯುತ್ತಿದ್ದಂತೆ, ವ್ಯವಸ್ಥಿತತೆಯು ಗುಣಮೈಗೂಡದೇ ಇರಲಾರದು. ಪ್ರಾತರ್ವಿಧಿಗಳು ಮುಗಿದ ನಂತರ ಶಾಲೆಯ ಅಧ್ಯಯನ, ಶಾಲೆಯ ತಯಾರಿಯನ್ನು ಅವರೇ ಸ್ವತಃ ಮಾಡಿಕೊಳ್ಳಲು ಕಲಿಸಬೇಕು. ಅಭ್ಯಾಸದ ಪುಸ್ತಕಗಳು, ನೋಟ್ ಪುಸ್ತಕಗಳನ್ನು ವ್ಯವಸ್ಥಿತವಾಗಿ ಮತ್ತು ಅವುಗಳ ಜಾಗದಲ್ಲೇ ಇಡಲು ಕಲಿಸಬೇಕು. ಶಾಲೆಯಿಂದ ಅಥವಾ ಹೊರಗಡೆಯಿಂದ ಬಂದನಂತರ ಪಾದರಕ್ಷೆಗಳು-ಬೂಟ್, ಪಠ್ಯಪುಸ್ತಕಗಳ ಚೀಲ ಮುಂತಾದವುಗಳನ್ನು ನಿಗದಿತ ಜಾಗದಲ್ಲಿಡಲು ಕಲಿಸಬೇಕು. ಹಾಗೆಯೇ ಕೈ-ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡು ಬಟ್ಟೆಗಳನ್ನು ಬದಲಿಸಿ ಅವುಗಳನ್ನು ವ್ಯವಸ್ಥಿತವಾಗಿ ಮಡಚಿಡಲು ಕಲಿಸಬೇಕು. ಬಟ್ಟೆಗಳ ಗುಂಡಿಗಳು ಅಥವಾ ಬಟ್ಟೆಗಳ ಹೊಲಿಗೆ ಸ್ವಲ್ಪ ಬಿಚ್ಚಿಕೊಂಡಲ್ಲಿ ತಾವೇ ಸ್ವತಃ ಅವುಗಳನ್ನು ಹೊಲಿದುಕೊಳ್ಳಲು ಕಲಿಸಬೇಕು. ತಾವೇ ಸ್ವತಃ ಮಾಡುವಾಗ ಮಕ್ಕಳಿಗೆ ಆನಂದವಾಗುತ್ತದೆ. ವಯಸ್ಸಿಗನುಸಾರ ಸ್ವಂತ ಬಟ್ಟೆಗಳನ್ನು ತೊಳೆಯಲು ಸಹ ಕಲಿಸಬೇಕು. ಬೆಳಗ್ಗಿನ-ಮಧ್ಯಾಹ್ನದ ಉಪಾಹಾರದ ನಂತರ ತಟ್ಟೆಯನ್ನು ತೊಳೆಯಲು ಕಲಿಸಬೇಕು. ಸ್ವಲ್ಪದರಲ್ಲಿ ಹೇಳುವುದೆಂದರೆ ಮಕ್ಕಳಿಗೆ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಅದರಲ್ಲಿ ಮಗ-ಮಗಳು ಎಂಬ ಭೇದ ಬೇಡ. ಪ್ರತಿಯೊಂದು ವಿಷಯದಲ್ಲಿ ವ್ಯವಸ್ಥಿತ ಶಿಸ್ತನ್ನು ಕಲಿಸಿದರೆ, ಮಗುವು ಮನೆಯಲ್ಲಿರಲಿ ಅಥವಾ ಬೇರೆಡೆಯಲ್ಲಿ, ಅದು ಶಿಸ್ತಿನಿಂದಲೇ ನಡೆದುಕೊಳ್ಳುತ್ತದೆ.

ಬೇಗ ಮಲಗುವುದು ಮತ್ತು ಬೇಗ ಏಳುವುದು

ಚಿಕ್ಕಂದಿನಿಂದಲೇ ಮಕ್ಕಳಿಗೆ ಬೇಗ ಏಳುವ ಅಭ್ಯಾಸವನ್ನು ಹಚ್ಚಬೇಕು. ಬಹಳಷ್ಟು ಮನೆಗಳಲ್ಲಿ ಮಕ್ಕಳು ಅಧ್ಯಯನಕ್ಕಾಗಿ ರಾತ್ರಿಯ ಸಮಯದಲ್ಲಿ ಎಚ್ಚರವಾಗಿರುತ್ತಾರೆ ಮತ್ತು ಬೆಳಿಗ್ಗೆ ೮-೯ ಗಂಟೆಗೆ ಏಳುತ್ತಾರೆ. ಇದರ ಬದಲಾಗಿ ಬೇಗನೆ ಮಲಗಿ ಪ್ರಾತಃಕಾಲದಲ್ಲಿ ಅಧ್ಯಯನವನ್ನು ಮಾಡಿದರೆ ಅದು ಹೆಚ್ಚು ಒಳ್ಳೆಯದಾಗಿ ಮನಸ್ಸಿನಲ್ಲಿರುತ್ತದೆ. 'ಬೇಗ ಮಲಗಿ ಬೇಗ ಏಳುವವನಿಗೆ ಆರೋಗ್ಯ ಮತ್ತು ಧನಸಂಪತ್ತು ಸಿಗುತ್ತದೆ!', ಎಂಬ ಉಕ್ತಿ ಇದೆ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ವೇದಪಠಣ ಮಾಡುತ್ತಿದ್ದರು. ರಾತ್ರಿಯ ಸಮಯದಲ್ಲಿ ರಜ-ತಮದ ಪ್ರಾಬಲ್ಯವಿರುತ್ತದೆ. ಇದರ ಬದಲಾಗಿ ಪ್ರಾತಃಕಾಲದಲ್ಲಿ ಸಾತ್ತ್ವಿಕತೆಯಿರುವುದರಿಂದ ಅವನ ಅಧ್ಯಯನದ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆ.

ಪ್ರತಿಯೊಂದು ವಿಷಯವನ್ನು ಸಮಯಕ್ಕೆ ಸರಿಯಾಗಿ ಮಾಡಲು ಕಲಿಸುವುದು

ಹಿರಿಯರ ಕೃತಿಗಳಿಂದ ಚಿಕ್ಕ ಮಕ್ಕಳು ಕಲಿಯುತ್ತಾರೆ, ಆದುದರಿಂದ ಹಿರಿಯರೇ ತಮ್ಮ ನಡವಳಿಕೆ, ಮಾತನಾಡುವ ರೀತಿ, ಇತರರಿಗೆ ಗೌರವವನ್ನು ತೋರುವುದು, ಇವೆಲ್ಲವನ್ನೂ ಮಾಡಬೇಕು. ಹಾಗೆಯೇ ಪ್ರತಿಯೊಂದು ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. 'ನಂತರ ಮಾಡೋಣ'ಎಂದುಕೊಂಡಾಗ, ಪುನಃ ಆ ವಿಷಯವನ್ನು ಮಾಡಲಾಗುವುದಿಲ್ಲ. ಅದಕ್ಕಾಗಿ ಶರೀರಕ್ಕಿಂತ ಮನಸ್ಸಿಗೇ ಶಿಸ್ತನ್ನು ಹಚ್ಚಬೇಕು. ಅನೇಕ ಮನೆಗಳಕಪಾಟುಗಳಲ್ಲಿಬಟ್ಟೆಗಳನ್ನು ತುರುಕಿ ಅಥವಾ ಅಸ್ತವ್ಯಸ್ತವಾಗಿ ತೂಗುಹಾಕಲಾಗಿರುತ್ತದೆ. ಹಾಗೆಯೇ ಮನೆಯೂ ಅವ್ಯವಸ್ಥಿತವಾಗಿರುತ್ತದೆ. ಆಗ ಮನೆಯಲ್ಲಿ ಯಾರಾದರೂ ಬಂದರೆ, ಗಡಿಬಿಡಿಯಾಗುತ್ತದೆ. ಒಮ್ಮೆ ಕೈಯಿಗೆ ಅಭ್ಯಾಸವನ್ನು ಹಚ್ಚಿದರೆ ಸಾಕು, ಮನಸ್ಸಿಗೆ ಅದನ್ನು ವ್ಯವಸ್ಥಿತವಾಗಿ ಮಾಡಿದ ಹೊರತು ಸಮಾಧಾನವಾಗುವುದಿಲ್ಲ. ಮನೆಯನ್ನು ಸ್ವಚ್ಛ ಮತ್ತು ವ್ಯವ್ಯಸ್ಥಿತವಾಗಿ ಇಡುವಲ್ಲಿ ಆಲಸ್ಯ ಬೇಡ. ಆಲಸ್ಯ ನಮ್ಮ ಮೊದಲ ಕ್ರಮಾಂಕದ ಶತ್ರು ಎನ್ನುವುದನ್ನು ಮಕ್ಕಳ ಮನಸ್ಸಿನ ಮೇಲೆ ಬಿಂಬಿಸಬೇಕು.

ಮಕ್ಕಳಿಗೆ ಅತಿಯಾದ ಮುದ್ದು ಮಾಡುವುದನ್ನು ತಪ್ಪಿಸಬೇಕು

ಈಗೀಗ ಮನೆಯಲ್ಲಿ ಒಂದು-ಎರಡು ಮಕ್ಕಳು ಇರುವುದರಿಂದ ಅವರ ಬೇಕು-ಬೇಡಗಳನ್ನು ಪೋಷಿಸಲಾಗುತ್ತದೆ. ಊಟ, ಬಟ್ಟೆ ಇತ್ಯಾದಿ ವಿಷಯಗಳಲ್ಲಿ "ಮಕ್ಕಳು ಹೇಳಿದ್ದೇ ಪೂರ್ವ ದಿಕ್ಕು", ಎನ್ನುವುದು ಗಮನಕ್ಕೆ ಬರುತ್ತದೆ. ಚಿಕ್ಕಂದಿನಿಂದ ಅವರು ಹೇಳಿದ್ದನ್ನು ಕೇಳುತ್ತ ಹೋದರೆ, ಮಕ್ಕಳು ಮುಂದೆ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಆದುದರಿಂದ ಅವರ ಅತಿಯಾದ ಅಕ್ಕರೆಯನ್ನು ಮಾಡಬಾರದು.

ಮಕ್ಕಳೆದುರು ಸ್ವಂತದ ಆದರ್ಶವನ್ನಿಡಿ !

ಮನೆಯನ್ನು "ಸತ್ಯಂ ಶಿವಂ ಸುಂದರಂ" ಮಾಡುವುದಿದ್ದಲ್ಲಿ, ಶಿಸ್ತು, ಆಜ್ಞಾಪಾಲನೆ, ಹಿರಿಯರ ಆದರವನ್ನು ಮಾಡುವುದು, ಇವೆಲ್ಲವನ್ನೂ ಮಾಡಬೇಕಾಗುವುದು. ಹಿರಿಯರು ತಮ್ಮ ಆದರ್ಶವನ್ನೇ ಹೀಗೆ ಇಡಬೇಕೆಂದರೆ, ನಮ್ಮ ನಡವಳಿಕೆ, ಶಿಸ್ತನ್ನು ನೋಡಿ ನಮ್ಮ ಮಕ್ಕಳು ಅನುಕರಣೆ ಮಾಡಬೇಕು. ಹೀಗೆ ಆದಾಗ, ನಿಮ್ಮ ಕುಟುಂಬಆದರ್ಶ ಕುಟುಂಬವಾಗಲು ಸಮಯ ತಗಲಲಾರದು.

Leave a Comment