ತಮಗೇನಾದರೂ “ನಮ್ಮ ಮಕ್ಕಳು ಆದರ್ಶರಾಗಬೇಕು”, ಎಂದು ಅನಿಸುತ್ತಿದ್ದಲ್ಲಿ…

ತಮಗೇನಾದರೂ "ನಮ್ಮ ಮಕ್ಕಳು ಆದರ್ಶರಾಗಬೇಕು", ಎಂದು ಅನಿಸುತ್ತಿದ್ದಲ್ಲಿ, "ನುಡಿದಂತೆ ನಡೆವವರ ಪಾದಗಳಿಗೆ ನಮಿಸಬೇಕು", ಎಂಬ ಸಂತವಚನದಂತೆ ನಾವು ಪಾಲಕರು ಸಹ ಆದರ್ಶವಾದ ಉದಾಹರಣೆಗಳಾಗಬೇಕಲ್ಲವೇ? ಯಾವುದೇ ಮಗುವಿನ ತಂದೆ-ತಾಯಿಯೇ ಅದರ ಪ್ರಥಮ ಗುರುವಾಗಿರುತ್ತಾರೆ. ಮಕ್ಕಳಿಗೂ ತನ್ನ ತಂದೆ-ತಾಯಿಯ ಅನುಕರಣೆಯನ್ನು ಮಾಡಲು ಒಳ್ಳೆಯದೆನಿಸುತ್ತದೆ, ಆದುದರಿಂದಲೇ ಎಲ್ಲ ಪಾಲಕರು ಸ್ವತಃ ಆದರ್ಶರಾಗಲು ಪ್ರಯತ್ನವನ್ನು ಮಾಡಬೇಕು.

ಆದರ್ಶ ಪಾಲಕರ ಗುಣಧರ್ಮಗಳು

ಮಗುವಿಗೆ ಆದರ್ಶ ನಾಗರಿಕನನ್ನಾಗಿ ಮಾಡಲು ತಂದೆ-ತಾಯಿಯು ಸತತ ಜಾಗರೂಕರಾಗಿರಬೇಕು. ಆದರ್ಶ ಪಾಲಕರಾಗಲು ಬೇಕಾಗಿರುವ ಮಹತ್ವದ ಗುಣಗಳ ವಿವೇಚನೆಯನ್ನು ಕೆಳಗೆ ನೀಡಲಾಗಿದೆ.

ಅ. ಸರಳವಾದ ಪ್ರೇಮ

ಆದರ್ಶ ಪಾಲಕರ ಗುಣವೆಂದರೆ ಸರಳವಾದ ಪ್ರೇಮ. ಯಾವುದೇ ಅಪೇಕ್ಷೆಯಿಲ್ಲದೇ ತಮ್ಮ ಮಗು ಹೇಗಿದೆಯೋ ಹಾಗೆಯೇ ಪ್ರಿಯವಾಗಿರುತ್ತದೆ. ಮಗುವು ಮಂದಬುದ್ಧಿಯದ್ದಾಗಿದ್ದರೂ, ಆದರ್ಶ ಪಾಲಕರು ತಮ್ಮ ಕರ್ತವ್ಯವನ್ನು ಪಾಲಿಸಿ ಆ ಮಗುವಿಗೆ ಇತರ ಮಗುವಿನಷ್ಟೇ ಪ್ರೇಮವನ್ನು ಮಾಡುತ್ತಾರೆ. ಮಗುವಿನ ಬೆಳವಣಿಗೆ ಮತ್ತು ವಿಕಾಸವಾಗಲು ಇಂತಹ ನಿರಪೇಕ್ಷ ಪ್ರೇಮದ ಮಹತ್ವದ ಪಾಲು ಇರುತ್ತದೆ. ಅದರಿಂದಾಗಿ ಮಕ್ಕಳಲ್ಲಿ ಆತ್ಮವಿಶ್ವಾಸವು ನಿರ್ಮಾಣವಾಗುತ್ತದೆ. ಆದರ್ಶ ಪಾಲಕರು ತಮ್ಮ ಮಕ್ಕಳ ಮನಸ್ಸನ್ನು ಪ್ರೇಮದಿಂದ ಮತ್ತು ಮನಸ್ಸನ್ನು ನೋಯಿಸದ ವೃತ್ತಿಯಿಂದ ಗೆಲ್ಲುತ್ತಾರೆ.

ಆ. ಸಹವಾಸ

ಮಕ್ಕಳು ತಮ್ಮ ಪಾಲಕರ ಸಹವಾಸಕ್ಕಾಗಿ ಉತ್ಸುಕರಾಗಿರುವುದು ಮತ್ತು ಅವರ ಸಹವಾಸದಲ್ಲಿ ಆನಂದದಿಂದಿರುವುದು, ಇದೇ ಆದರ್ಶ ಪಾಲಕರಾಗಿರುವುದಕ್ಕೆ ಸಂಕೇತವಾಗಿದೆ.

ಇ. ಮಕ್ಕಳ ಆದರ್ಶ

ಅಭಿಮಾನವೆನ್ನಿಸುವಂತಹ ಪಾಲಕರು ಮಕ್ಕಳಿಗೆ ಬೇಕಾಗಿರುತ್ತದೆ. ಕರ್ತನ ಹೊರತಾಗಿ ಕುಟುಂಬ ಪ್ರಮುಖ ಮತ್ತು ಸಮಾಜದಲ್ಲಿನ ಮಹತ್ವದ ಹಾಗೂ ಗಣ್ಯ ವ್ಯಕ್ತಿಯೆಂದು ತಮ್ಮ ಆದರ್ಶವನ್ನು ಪಾಲಕರು ಮಕ್ಕಳೆದುರು ಇಡಬೇಕು. ಒಬ್ಬ ಸ್ತ್ರೀ ಎಂದು ಪತ್ನಿ, ಮಾತಾ, ಅತ್ತಿಗೆ, ಚಿಕ್ಕಮ್ಮ ಎಂಬ ಬೇರೆ ಬೇರೆ ಭೂಮಿಕೆಯಿಂದ ತಾಯಿಯು ತನ್ನ ಮಕ್ಕಳೆದುರು ಉತ್ತಮ ಆದರ್ಶವನ್ನು ನಿರ್ಮಾಣ ಮಾಡಬಲ್ಲಳು ಮತ್ತು ಅದರಿಂದ ಸಿಗುವ ಮಾನಸಿಕ ಸಮಾಧಾನವನ್ನೂ ಸಹ ಅವಳೇ ಮಕ್ಕಳೆದುರು ತೋರಿಸಿಕೊಡಲ್ಲಳು.

ಈ. ಜಿಜ್ಞಾಸು ಮನಸ್ಸಿಗೆ ಪ್ರೋತ್ಸಾಹನೆ

ಮಕ್ಕಳಿಗೆ ಅಕ್ಕಪಕ್ಕದ ವಾತಾವರಣದ ವಿಷಯದಲ್ಲಿ ಕುತೂಹಲವಿರುತ್ತದೆ. ಗುಂಡಿಯನ್ನೊತ್ತಿದಾಗ ದೀಪ ಹೇಗೆ ಹತ್ತಿಕೊಳ್ಳುತ್ತದೆ? ಮಗು ತಾಯಿಯ ಹೊಟ್ಟೆಯಲ್ಲಿ ಹೇಗೆ ಹೋಯಿತು? ಸತ್ತ ನಂತರ ಅಜ್ಜ ಎಲ್ಲಿ ಹೋದರು? ದೇವರು ಎಲ್ಲಿರುತ್ತಾನೆ? ಇತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನು ಅವನು ತಂದೆ – ತಾಯಿಯ ಮೇಲೆ ಮಾಡುತ್ತಿರುತ್ತಾನೆ. ತಮ್ಮ ಕೈಯಲ್ಲಿನ ಕೆಲಸಗಳನ್ನು ಪಕ್ಕಕ್ಕೆ ಒತ್ತಿ ಮಕ್ಕಳು ಕೇಳಿದ ಪ್ರತಿಯೊಂದು ಪ್ರಶ್ನೆಯ ಉತ್ತರಗಳನ್ನು ಪಾಲಕರು ಕೊಡಬೇಕು.

ಉ. ಸುಪ್ತ ಗುಣಗಳ ಜೋಪಾಸನೆ

ಪ್ರತಿಯೊಂದು ಮಕ್ಕಳಲ್ಲಿ ಜನ್ಮತಃ ಕೆಲವು ಗುಣಗಳಿರುತ್ತವೆ. ಕೆಲವು ಮಕ್ಕಳಿಗೆ ಸಂಗೀತದ ಒಲವಿದ್ದರೆ, ಕೆಲವು ಮಕ್ಕಳಿಗೆ ಚಿತ್ರಕಲೆಯ ಆಸಕ್ತಿಯಿರುತ್ತದೆ. ಜೀವನದಲ್ಲಿನ ನಿಜವಾದ ಆನಂದವನ್ನು ಉಪಭೋಗಿಸುವುದಕ್ಕಾಗಿ ಮತ್ತು ಜೀವನದ ಸಾರವನ್ನು ತಿಳಿದುಕೊಳ್ಳುವುದಕ್ಕಾಗಿ ವಿವಿಧ ಕಲೆಗಳ ಭಂಡಾರವನ್ನು ಪಾಲಕರು ಮಕ್ಕಳೆದುರು ತೆರೆದಿಡಬೇಕು.

ಊ. ಬೌದ್ಧಿಕ ಬೆಳವಣಿಗೆ ಮತ್ತು ವಿಕಾಸ

ಮಕ್ಕಳ ಬೌದ್ಧಿಕ ಬೆಳವಣಿಗೆ ಮತ್ತು ವಿಕಾಸವಾಗುವುದಕ್ಕಾಗಿ, ಹಾಗೆಯೇ ಅವರಿಗೆ ಪ್ರತಿಯೊಂದು ಜ್ಞಾನವನ್ನು ನೀಡುವುದಕ್ಕಾಗಿ ಆವಶ್ಯಕವಿರುವ ಎಲ್ಲ ಪ್ರಕಾರಗಳ ಶೈಕ್ಷಣಿಕ ಅವಕಾಶಗಳನ್ನು ಪಾಲಕರು ಅವರಿಗೆ ಉಪಲಬ್ಧ ಮಾಡಿಕೊಡಬೇಕು ಹಾಗೂ ಅವರಿಗೆ ಯೋಗ್ಯ ಮಾರ್ಗದರ್ಶನವನ್ನು ಮಾಡಬೇಕು.

ಎ. ಮಕ್ಕಳನ್ನು ಅರಿತು ಮಾರ್ಗದರ್ಶನ

ಆದರ್ಶ ಪಾಲಕರು ಮಕ್ಕಳ ಪ್ರತಿಯೊಂದು ಪ್ರಶ್ನೆಗಳಿಗೆ ಮಕ್ಕಳ ದೃಷ್ಟಿಯಿಂದ ವಿಚಾರ ಮಾಡುವರು.

ಏ. ವಾತ್ಸಲ್ಯ ಮತ್ತು ಕರ್ತವ್ಯ

ವಾತ್ಸಲ್ಯದ / ಪ್ರೇಮದ ಅಭಾವವಿದ್ದು ಕೇವಲ ಕರ್ತವ್ಯವನ್ನು ಪಾಲಿಸುವ ಪಾಲಕರ ಮಕ್ಕಳು ಅವರಿಂದ ದೂರ ಹೋಗುತ್ತಾರೆ. ಅವರಿಗೆ ಪಾಲಕರ ವಿಷಯದಲ್ಲಿ ಪ್ರೇಮವೆನಿಸುವುದಿಲ್ಲ. ಅವರ ಮನಸ್ಸಿನಲ್ಲಿ ಪಾಲಕರ ಬಗ್ಗೆ ಪರಕೀಯ ಭಾವನೆ ನಿರ್ಮಾಣವಾಗುತ್ತದೆ. ಇದಕ್ಕೆ ಬದಲಾಗಿ ಕರ್ತವ್ಯದ ಅಭಾವದಿಂದ ಕುರುಡು ಮಾಯೆಯಿಂದಾಗಿ ಮಗುವಿನ ಸರ್ವನಾಶವು ಹೇಗೆ ಆಗುತ್ತದೆ, ಎನ್ನುವುದು ಮುಂದಿನ ಕತೆಯಿಂದ ಗಮನಕ್ಕೆ ಬರುವುದು. ಒಬ್ಬ ಕಳ್ಳನಿಗೆ ನ್ಯಾಯಾಧೀಶರು ಅವನ ಕೈಯನ್ನು ಕತ್ತರಿಸಿ ಹಾಕುವ ಶಿಕ್ಷೆಯನ್ನು ನೀಡುತ್ತಾರೆ. ಶಿಕ್ಷೆಯ ಮೊದಲು ತಾಯಿಗೆ ಏನೋ ಗುಪ್ತವಾದುದನ್ನು ಹೇಳುವ ನೆಪದಲ್ಲಿ ಕಳ್ಳನು ತಾಯಿಯ ಕಿವಿಯ ಬಳಿ ಹೋಗಿ ಅವಳ ಕಿವಿಯನ್ನು ಎಷ್ಟು ಜೋರಾಗಿ ಕಚ್ಚುತ್ತಾನೆಂದರೆ, ತಾಯಿಯ ಕಿವಿಯ ಚೂರು ಕಿತ್ತುಬರುತ್ತದೆ. ಆಶ್ಚರ್ಯಚಕಿತರಾಗಿ ನ್ಯಾಯಾಧೀಶರು ಕೇಳಿದರು, "ನೀನು ನಿನ್ನ ತಾಯಿಯ ಬಳಿ ಇಷ್ಟು ನಿರ್ದಯವಾಗಿ ಏಕೆ ವರ್ತಿಸಿದೆ?" ಕಳ್ಳನು ಉತ್ತರಿಸಿದನು, "ತಾಯಿಯು ಚಿಕ್ಕವನಿರುವಾಗ ಮಾಯೆಯಿಂದಾಗಿ ನನ್ನ ಅಪರಾಧ ಮತ್ತು ಚಿಕ್ಕಪುಟ್ಟ ಕಳ್ಳತನಗಳನ್ನು ಮುಚ್ಚಿಟ್ಟುಕ್ಕೊಳ್ಳದೇ ನನಗೆ ತಕ್ಕ ಶಿಕ್ಷೆಯನ್ನು ನೀಡಿದ್ದರೆ, ಇಂದು ನನಗೆ ಪಶ್ಚಾತ್ತಾಪ ಪಡುವ ವೇಳೆಯು ಬರುತ್ತಿರಲಿಲ್ಲ."

ಓ. ವಾತ್ಸಲ್ಯ ಹಾಗೂ ಕರ್ತವ್ಯಗಳ ಸುಂದರ ಸಂಗಮ

ಒಬ್ಬ ಸುಪ್ರಸಿದ್ಧ ಚಿಕ್ಕಮಕ್ಕಳತಜ್ಞರ ಪತ್ನಿಯು ಸ್ವತಃ ಒಬ್ಬ ಚಿಕ್ಕಮಕ್ಕಳತಜ್ಞರಾಗಿದ್ದರು. ಅತ್ಯಂತ ಜಾಣ ಹಾಗೂ ನಾಮಾಂಕಿತ ವಿದ್ಯಾರ್ಥಿನಿ ಮತ್ತು ನಂತರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯ ಕೆಲಸವನ್ನು ಮಾಡುತ್ತಿದ್ದಳು. ಮೊದಲ ಮಗುವಾದ ನಂತರ ಅವಳು ಕೆಲಸವನ್ನು ಬಿಟ್ಟಳು. ೨೦ ವರ್ಷಗಳ ನಂತರ ಪುನಃ ಅದೇ ಮಹಾವಿದ್ಯಾಲಯದಲ್ಲಿ ಅವಳು ಕೆಳದರ್ಜೆಯ ಕೆಲಸಕ್ಕೆ ಸೇರಿಕೊಂಡಳು. ಒಂದು ವೇಳೆ ಅವಳು ಕೆಲಸವನ್ನು ಬಿಡದಿದ್ದಲ್ಲಿ, ಅವಳು ಅಲ್ಲಿ ವಿಭಾಗ ಪ್ರಮುಖಳಾಗುತ್ತಿದ್ದಳು. "ರಾಜೀನಾಮೆಯನ್ನು ಕೊಡದಿದ್ದರೆ ನನ್ನ ಭವಿಷ್ಯವು ಉಜ್ವಲವಾಗುತ್ತಿತ್ತು, ಆದರೆ ರಾಜೀನಾಮೆಯನ್ನು ಕೊಟ್ಟು ನಾನು ನನ್ನ ನಾಲ್ಕು ಮಕ್ಕಳ ಭವಿಷ್ಯವನ್ನು ರೂಪಿಸಿದೆ, ಎನ್ನುವುದರ ಬಗ್ಗೆ ನನಗೆ ಈ ಕ್ಷಣಕ್ಕೂ ಅತ್ಯಂತ ಆನಂದ ಮತ್ತು ಅಭಿಮಾನವೆನಿಸುತ್ತಿದೆ.

ಔ. ಆದರ್ಶ ನಾಗರಿಕ

ಕಾಲಾಂತರದಲ್ಲಿ ಆದರ್ಶ ನಾಗರಿಕರಾಗಿ ಸಮಾಜಕ್ಕಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವುದು ಆವಶ್ಯಕವಿರುತ್ತದೆ. ಇದನ್ನು ಪಾಲಕರು ತಮ್ಮ ಸ್ವಂತದ ನಡವಳಿಕೆಯಿಂದ ಮಗುವಿನ ಮನಸ್ಸಿನ ಮೇಲೆ ಬಿಂಬಿಸುವುದು ಆವಶ್ಯಕವಿರುತ್ತದೆ. ತಮ್ಮ ಎಲ್ಲ ಕರ್ತವ್ಯಗಳನ್ನು ನಿಭಾಯಿಸುವಾಗ ಮಕ್ಕಳೊಂದಿಗೆ ಪ್ರೇಮದಿಂದ, ಜಾಣ್ಮೆಯಿಂದ ಮತ್ತು ಪ್ರಸಂಗ ಬಂದಲ್ಲಿ ಕಠೋರವಾಗಿ ವರ್ತಿಸುವುದು ಆವಶ್ಯಕವಾಗಿರುತ್ತದೆ.

ಅಂ. ಆದರ್ಶ ಮಾತಾ-ಪಿತಾ

ಮಾತಾ ಮತ್ತು ಪಿತಾ ಈ ಶಬ್ದಗಳ ವ್ಯುತ್ಪತ್ತಿಯು ಅರ್ಥಪೂರ್ಣವಾಗಿದೆ.

ಮಾತಾ – "ಮಾಂ ತಾರಯತಿ ಇತಿ ಮಾತಾ !"
ಮಾಂ – ನನಗೆ , ತಾರಯತಿ – ಎಂದರೆ ರಕ್ಷಣೆ ಮಾಡುತ್ತಾಳೆ,
ಅವಳು ಮಾತಾ. ಸಂಕಟಗಳು, ಕೆಟ್ಟ ಸಾಂಗತ್ಯ ಮತ್ತು ಕೆಟ್ಟ ವಿಚಾರಗಳಿಂದ ನಮ್ಮ ಸಂರಕ್ಷಣೆಯನ್ನು ಮಾಡಿ ನಮ್ಮನ್ನು ಸಂಸಾರಸಾಗರವನ್ನು ಪಾರುಮಾಡಿ ಹೋಗಲು ಮಾರ್ಗದರ್ಶನವನ್ನು ಮಾಡುತ್ತಾಳೆ, ಅವಳು ಮಾತಾ.
ಪಿತಾ – "ಪೀಯತೇ ತುರಿಯಾನ್ !"
ಯಾರು ಸಮಾಧಿಯಲ್ಲಿನ ತುರ್ಯಾವಸ್ಥೆಯ ಅನುಭವವನ್ನು ನೀಡಲು ಶಕ್ಯರಿದ್ದಾರೋ, ಅವನು ಪಿತಾ. ಇನ್ನೊಂದು ವ್ಯುತ್ಪತ್ತಿ ಪಿತಾ – "ಪಿತೃನ್ ತಾರಯತಿ !"
ಯಾರು ಸ್ವಂತಕ್ಕೆ ಮಾತ್ರವಲ್ಲ, ತನ್ನ ಪಿತೃಗಳಿಗೂ ಜನ್ಮಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾನೋ, ಅವನು ಪಿತಾ !.
ಒಂದುವೇಳೆ ನಾವು ಆದರ್ಶ ಮಾತಾ-ಪಿತಾ ಆದೆವೆಂದರೆ, ಆಗ ಮಗನೂ ಸಹ ಪುಂಡಲೀಕನ ತರಹ ಆದರ್ಶನಾಗಬಹುದು. ಒಂದುವೇಳೆ ಪ್ರತಿಯೊಬ್ಬ ಮಗುವೂ ಸಹ ಆದರ್ಶ ನಾಗರಿಕನಾದರೆ, ಆಗ ಶಕ್ತಿ, ಪ್ರಗತಿ, ಶಾಂತತೆ ಮತ್ತು ಸುಖ ಇವುಗಳಿಂದಾಗಿ ಸುಸಜ್ಜಿತವಾದ ಸ್ವರ್ಗವು ಪೃಥ್ವಿಯ ಮೇಲೆ ಅವತರಿಸುವುದು.

Leave a Comment