ಶಿಕ್ಷಣದ ಕಡೆಗೆ ಪಾಲಕರು ನೋಡುವ ದೃಷ್ಟಿಕೋನವು ಬದಲಾಗಬೇಕಿದೆ!

ಸಂಸ್ಕಾರಕ್ಕಿಂತ ಪರೀಕ್ಷೆಯಲ್ಲಿ ಸಿಗುವ ಅಂಕಗಳು ಮಹತ್ವದ್ದೆನಿಸುವುದು

ಇತ್ತೀಚಿನ ಪಾಲಕರ ದೃಷ್ಟಿಯಿಂದಮಕ್ಕಳಿಗೆ ಸಿಗುವ ಅಂಕಗಳಿಗೆ ಅಷ್ಟೇಶಿಕ್ಷಣದಮಹತ್ವಸೀಮಿತವಾಗಿದೆ. ಶಿಕ್ಷಣದಿಂದಾಗಿ ಮಕ್ಕಳ ನಡವಳಿಕೆಯಲ್ಲಾಗುವ ಬದಲಾವಣೆ ಹಾಗೂ ಅವರ ಮೇಲಾಗುವ ಒಳ್ಳೆಯ ಸಂಸ್ಕಾರಗಳಿಗಿಂತ ಮಕ್ಕಳಿಗೆ ಸಿಗುವ ಅಂಕಗಳೇ ಅವರ ದೃಷ್ಟಿಯಿಂದ ಮಹತ್ವದ್ದಾಗಿರುತ್ತದೆ. ಅವರ ಈ ದೃಷ್ಟಿಕೋನವೇ ಮೂಲದಲ್ಲಿ ತಪ್ಪಿನದಾಗಿರುತ್ತದೆ ಹಾಗೂ ಅದನ್ನು ಬದಲಾಯಿಸಬೇಕು. "ಶಿಕ್ಷಣವೆಂದರೆ ಸುಸಂಸ್ಕಾರಗಳ ಸಂವರ್ಧನೆ ಮತ್ತು ವಿಕಾಸ" "ಶಿಕ್ಷಣವೆಂದರೆ ಮನುಷ್ಯನೆಂದು ಜೀವಿಸಲು ಕಲಿಯುವುದು" ಈ ದೃಷ್ಟಿಕೋನವನ್ನೇ ಇಂದಿನ ಪಾಲಕರು ಮರೆತಿದ್ದಾರೆ. "ನನ್ನ ಮಗಡಾಕ್ಟರ ಅಥವಾ ಅಭಿಯಂತನಾಗಬೇಕು (engineer). ಅವನು ತುಂಬಾ ಹಣವನ್ನು ಗಳಿಸಬೇಕು", ಎನ್ನುವುದೇ ಅವರ ಇಚ್ಛೆಯಾಗಿರುತ್ತದೆ. "ನನ್ನ ಮಗನು ಮೊದಲು ಮನುಷ್ಯನೆಂದು ಜೀವಿಸಲು ಕಲಿಯಬೇಕು, ಅವನ ಮೇಲೆ ಸುಸಂಸ್ಕಾರವಾಗಬೇಕು", ಎಂದು ಪಾಲಕರಿಗೆ ಅನಿಸುವುದಿಲ್ಲ. ಅದರಿಂದಾಗಿ ಹೇಗೆ ಮಗುವಿಗೆ ಪರೀಕ್ಷೆಯಲ್ಲಿ ಸಿಗುವ ಅಂಕಗಳ ವರದಿಯನ್ನು ಪಾಲಕರು ತೆಗೆದುಕೊಳ್ಳುತ್ತಾರೋ, ಹಾಗೆ ಮಕ್ಕಳ ಗುಣಗಳ ವರದಿಯನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದಾಗಿ ಮಕ್ಕಳಿಗೂ ಪರೀಕ್ಷೆಯಲ್ಲಿ ಸಿಗುವ ಅಂಕಗಳೇ ಮಹತ್ವದ್ದೆನಿಸುತ್ತದೆ.

ಹೆಚ್ಚು ಅಂಕಗಳು, ಅಂಕಗಳ ಸ್ಪರ್ಧೆ, ಹಣ, ಕರಿಯರ್ ಇವೇ ಜೀವನದ ತತ್ತ್ವಜ್ಞಾನವಾಗಿರುವುದು

ಭಾರತದ ಮೇಲೆ ರಾಜ್ಯವನ್ನಾಳಿದ ಕ್ರೈಸ್ತ ಆಂಗ್ಲರು ರಾಷ್ಟ್ರಾಭಿಮಾನಿ ನಾಗರಿಕರನ್ನು ತಯಾರಿಸುವ ಉಜ್ವಲ "ಗುರುಕುಲ ಶಿಕ್ಷಣ ಪದ್ಧತಿ"ಯನ್ನು ನಾಶ ಮಾಡಿದರು. ಆಗಿನಿಂದ ರಾಷ್ಟ್ರಾಭಿಮಾನಿ ಪೀಳಿಗೆನಿರ್ಮಾಣವಾಗುವ ಮುಖ್ಯ ಸ್ರೋತವೇ ನಿಂತುಹೋಯಿತು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತದಲ್ಲಿ ಆಂಗ್ಲ ಶಿಕ್ಷಣದ ಪ್ರಭಾವವು ಹೆಚ್ಚುತ್ತ ಹೋಯಿತು ಮತ್ತು ಬಹುತಾಂಶ ಸಮಾಜವು ತಮ್ಮ ಮಕ್ಕಳಿಗೆ ಆಂಗ್ಲ ಶಿಕ್ಷಣವನ್ನು ನೀಡುವ ಸ್ಪರ್ಧೆಯಲ್ಲಿಳಿಯಿತು. (ಇತ್ತೀಚಿನ ಬಹುತಾಂಶ ಪಾಲಕರಜೀವನದ ಬಗ್ಗೆ ಸ್ವಂತದೃಷ್ಟಿಕೋನ ಇದೇ ಪಾಶ್ಚಾತ್ಯ ಸಂಸ್ಕೃತಿಯ ಮೇಲೆ ಆಧರಿಸಿದ ಮತ್ತು ಸುಖಲೋಲುಪ್ತವಾಗಿದೆ. ಅದರಿಂದಾಗಿ ಅವರಿಂದ ಮಕ್ಕಳ ಮೇಲೂ ಸಹ ಅವೇ ವಿಚಾರಗಳ ಹಾಗೂ ಕೃತಿಗಳ ಸಂಸ್ಕಾರವನ್ನು ಮಾಡಲಾಗುತ್ತದೆ. ಹೆಚ್ಚು ಅಂಕಗಳು, ಅಂಕಗಳ ಸ್ಪರ್ಧೆ, ಅವರ ಪ್ರತಿಯೊಂದು ವಿಷಯಗಳ ಸ್ಪರ್ಧೆ, ಹಣ, ಅದಕ್ಕಾಗಿ ಕರಿಯರ್ ಇದು ಪಾಲಕರು ಮಕ್ಕಳ ಭವಿಷ್ಯದೆಡೆ ನೋಡುವ ದೃಷ್ಟಿಕೋನವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಆಕ್ರಮಣ ಮತ್ತು ಸ್ವಸಂಸ್ಕೃತಿಯ ನಿರ್ಲಕ್ಷದಿಂದ ಸದ್ಯದ ಅಕ್ಕರೆಯ ಮಕ್ಕಳು "ಮಾತುಕೇಳುವುದಿಲ್ಲ" ಎನ್ನುವ ಚಿತ್ರಣವೇ ಎಲ್ಲೆಡೆನೋಡಲು ಸಿಗುತ್ತಿದೆ. ಇದಕ್ಕಾಗಿ ಪಾಲಕರು ಅವರಿಗೆ ವಿವಿಧ ಅಭ್ಯಾಸಗಳಮತ್ತು ಮನೆಪಾಠಗಳಲ್ಲಿ ಸೇರಿಸಿ ಅವರ ಸಮಯವನ್ನು ಉಪಯೋಗಿಸುವಲ್ಲಿಪ್ರಯತ್ನಿಸುತ್ತಾರೆ.ಅವರ ಮೇಲೆ ಸುಸಂಸ್ಕಾರವಾಗಬೇಕು, ಎಂದು ಅನೇಕ ಸುಶಿಕ್ಷಿತ ಪಾಲಕರಿಗೆ ಇಚ್ಛೆಯಿರುತ್ತದೆ. ಆದರೆ ಇಂತಹ ಸ್ಥಿತಿಯಲ್ಲಿ ನಿಜವಾಗಿಯೂ ಏನು ಮಾಡಬೇಕೆನ್ನುವುದು ಅವರಿಗೂ ತಿಳಿಯುವುದಿಲ್ಲ. ಆದುದರಿಂದಲೇ ಆಂಗ್ಲರು ತೋರಿಸಿಕೊಟ್ಟ ಸುಖಲೋಲುಪತೆಯತ್ತ ಕೊಂಡೊಯ್ಯುವ ಪೀಳಿಗೆಯನ್ನು ತಯಾರಿಸುವ ವಿಧಿಯನ್ನು ಇಂದಿನ ಪಾಲಕರು ಅಂಗೀಕರಿಸಿದ್ದಿರಬಹುದೆಂದು ಅನಿಸುತ್ತದೆ.

ಧರ್ಮಶಿಕ್ಷಣವೆಂದರೆ ಕೇವಲ ಉಚ್ಚಶಿಕ್ಷಣ, ಎಂಬ ತಪ್ಪುತಿಳುವಳಿಕೆಯ ಬೆನ್ನುಹತ್ತಿದ ಭಾರತೀಯ ಶಿಕ್ಷಣದ ಪ್ರವಾಸ !

ಪ್ರಾಚೀನ ಕಾಲದಲ್ಲಿ ಗುರುಕುಲ ಶಿಕ್ಷಣಪದ್ಧತಿಯಲ್ಲಿ ರಾಷ್ಟ್ರಾಭಿಮಾನಿ ಪೀಳಿಗೆಯನ್ನು ನಿರ್ಮಿಸುವ ಶಕ್ತಿಯು ಇರುವುದು

ಪ್ರಾಚೀನ ಕಾಲದಲ್ಲಿ "ಗುರುಕುಲ ಶಿಕ್ಷಣಪದ್ಧತಿ"ಯೇ ಭಾರತದ ನಿಜವಾದ ಪರಿಚಯವಾಗಿತ್ತು. ರಾಷ್ಟ್ರಾಭಿಮಾನಿ ಪೀಳಿಗೆಯನ್ನು ನಿರ್ಮಿಸುವ ಶಕ್ತಿಯು ಈ ಪದ್ಧತಿಯಲ್ಲಿರುವುದು ಖಚಿತಗೊಂಡಾಗ ಆಂಗ್ಲರು ಮೆಕಾಲೆಯನ್ನು ಭಾರತಕ್ಕೆ ತಂದು "ಗುರುಕುಲ ಶಿಕ್ಷಣಪದ್ಧತಿ"ಯನ್ನು ಹೊಸಕಿ ಹಾಕಿದರು. ಮೆಕಾಲೆಬಿತ್ತಿದ ಆಂಗ್ಲ ಶಿಕ್ಷಣದ ವಿಷಕಾರಿ ಬೀಜವು ಇಂದು ದೊಡ್ಡ ವೃಕ್ಷವಾಗಿದೆ. ಹಿಂದೂ ಹೊಸವರ್ಷ ಯಾವಾಗ ಪ್ರಾರಂಭವಾಗುತ್ತದೆ? ನಮ್ಮ ಪ್ರಮುಖ ಗ್ರಂಥಗಳು ಯಾವುವು? ಹಿಂದೂಧರ್ಮದಪ್ರಮುಖ ದೇವತೆಗಳು ಮತ್ತು ಅವರ ಕಾರ್ಯಗಳೇನು? ಮನುಷ್ಯ ಜನ್ಮದ ಧ್ಯೇಯವೇನು?ಇಂತಹ ಅನೇಕ ಮೂಲಭೂತ ಪ್ರಶ್ನೆಗಳಿಗೆ ಉತ್ತರಗಳನ್ನು ಇಂದಿನ ಯುವಕರು ನೀಡುವಲ್ಲಿ ವಿಫಲರಾಗುತ್ತಾರೆ.ದುರ್ದೈವದಿಂದ ಈ ಸತ್ಯವನ್ನುನಾವು ಜೀರ್ಣಿಸಿಕೊಳ್ಳಬೇಕಾಗಿದೆ!ಪ್ರಾಚೀನ ಸನಾತನಧರ್ಮದ ಮೌಲ್ಯಗಳನ್ನು ಆಚರಿಸುವಲ್ಲಿಯೇ ಜೀವನದ ನಿಜವಾದ ಸಾರವಿದೆ ಮತ್ತು ಆಂಗ್ಲರು ನಮ್ಮನ್ನು ಭಾರತೀಯ ಧರ್ಮ ಮತ್ತು ಸಂಸ್ಕೃತಿಯಿಂದ ದೂರಕೊಂಡೊಯ್ದಅರಿವು ಇಂದಿಗೂ ನಮಗೆ ಆಗುವುದಿಲ್ಲ, ಎನ್ನುವುದು ನಿಜಕ್ಕೂಖೇದಕರ!