ಬಾಲಸಂಸ್ಕಾರ ಆಪ್ ಬಗ್ಗೆ…

ಮಕ್ಕಳೆಂದರೆ ತಂದೆ-ತಾಯಿ ಮಾತ್ರವಲ್ಲ, ಸಮಾಜದ, ದೇಶದ ಹಾಗೂ ಪ್ರಪಂಚದ ಭವಿಷ್ಯ. ಪ್ರಪಂಚವು ಹೇಗೆ ರೂಪುಗೊಳ್ಳುತ್ತದೆ ಎಂಬುವುದು ನಾವು ಮಕ್ಕಳನ್ನು ಹೇಗೆ ರೂಪಿಸುತ್ತೇವೆ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ವಿಕಸಿತಗೊಳಿಸುವುದು ಹಿರಿಯರ ಜವಾಬ್ದಾರಿಯಾಗಿದ್ದು, ಇದರಿಂದ ಮುಂದೆ ಅವರು ವಿಶ್ವದ ಆದರ್ಶ ಪ್ರಜೆಗಳಾಗುತ್ತಾರೆ.

ಅದನ್ನು ಗಮನದಲ್ಲಿಟ್ಟುಕೊಂಡು, ನಾವು ಬಾಲಸಂಸ್ಕಾರ ಆಪ್ ಅನ್ನು 4 ಭಾಷೆಗಳಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ – ಕನ್ನಡ, ಆಂಗ್ಲ, ಹಿಂದಿ ಮತ್ತು ಮರಾಠಿ. ಬಾಲಸಂಸ್ಕಾರ ಆಪ್ ಮುಂದಿನ ಧ್ಯೇಯಗಳನ್ನು ಸಾಧ್ಯಗೊಳಿಸಲು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ –

– ನಿಮ್ಮ ಮಗುವಿನ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು.

– ಮಕ್ಕಳ ಮನಸ್ಸಿನಲ್ಲಿ ಉತ್ತಮ ನೈತಿಕ ಮೌಲ್ಯಗಳನ್ನು (ಸಂಸ್ಕಾರ) ಅಳವಡಿಸಲು, ಇದರಿಂದ ಅವರು ನಮ್ಮ ರಾಷ್ಟ್ರದ ಆದರ್ಶ ಪ್ರಜೆಗಳಾಗುತ್ತಾರೆ.

– ಬಾಲ್ಯದಿಂದಲೇ ಮಕ್ಕಳಲ್ಲಿ ಧಾರ್ಮಿಕ ನಡವಳಿಕೆಯ ಬೀಜಗಳನ್ನು ಬಿತ್ತಲು.

– ಮಕ್ಕಳಲ್ಲಿ ಪ್ರಾಮಾಣಿಕತೆ, ದೇಶಭಕ್ತಿ ಇತ್ಯಾದಿ ವಿವಿಧ ಸದ್ಗುಣಗಳನ್ನು ಅಳವಡಿಸಲು.

– ನಮ್ಮ ರಾಷ್ಟ್ರದ ಭವಿಷ್ಯದ ಆದರ್ಶ ಪೀಳಿಗೆಯನ್ನು ರೂಪಿಸಲು.

– ತಮ್ಮ ಮಕ್ಕಳನ್ನು ಆದರ್ಶ ನಾಗರಿಕರನ್ನಾಗಿ ಬೆಳೆಸುವಲ್ಲಿ ಪೋಷಕರಿಗೆ ಸರಿಯಾದ ದೃಷ್ಟಿಕೋನವನ್ನು ಒದಗಿಸುವುಲು.

ಬಾಲಸಂಸ್ಕಾರ ಆಪ್ ಅಧ್ಯಯನಕ್ಕೆ ಸಂಬಂಧಿಸಿದ ವಿವಿಧ ಸಲಹೆಗಳು, ಸಮಯದ ಉತ್ತಮ ನಿರ್ವಹಣೆ, ವ್ಯಕ್ತಿತ್ವ ವಿಕಸನ, ಒಳ್ಳೆಯ ಹವ್ಯಾಸಗಳನ್ನು ಬೆಳೆಸುವುದು ಮತ್ತು ನಿಮ್ಮ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಅನೇಕ ಮಾರ್ಗದರ್ಶಕ ಲೇಖನಗಳನ್ನು ಹೊಂದಿದೆ. ಇರೊಂದಿಗೆ ಈ ಆಪ್ ಭಾರತದ ಶ್ರೀಮಂತ ಮತ್ತು ವೈಭವಯುತ ಇತಿಹಾಸದ ಪುಟಗಳನ್ನು ಕೂಡ ಮಕ್ಕಳ ಮುಂದೆ ತೆರದಿಡುತ್ತದೆ. ಇದು ಮಕ್ಕಳಿಗೆ ನಮ್ಮ ದೇಶದ ಬಗ್ಗೆ ಇನ್ನಷ್ಟು ಕಲಿಯಲು ಪ್ರೇರೇಪಿಸಿ ನಮ್ಮ ಇತಿಹಾಸದ ಬಗ್ಗೆ ಅವರಲ್ಲಿ ಹೆಮ್ಮೆಯನ್ನು ಮೂಡಿಸಲಿದೆ.

ಸಣ್ಣ ಕಥೆಗಳು ಬೋಧನೆಯ ಉತ್ತಮ ಮಾಧ್ಯಮವಾಗಿವೆ. ಬಾಲಸಂಸ್ಕಾರ ಆಪ್ ಮಾಧ್ಯಮದಿಂದ ನಿಮ್ಮ ಮಕ್ಕಳು ಗೌರವ ನೀಡುವುದು, ಹಂಚಿಕೊಳ್ಳುವುದು, ಇತರರ ವಿಚಾರ ಮಾಡುವುದು, ಸತ್ಯವಂತಿಕೆ, ಪ್ರಾಮಾಣಿಕತೆ, ಶೌರ್ಯ, ವಿವೇಕಬುದ್ಧಿ ಬೆಳೆಸುವ ಬಗ್ಗೆ ಅನೇಕ ವಿಷಯಗಳ ಸಣ್ಣ ನೀತಿ ಕಥೆಗಳ ಮೂಲಕ ಕಲಿಯುತ್ತಾರೆ.

ನಿಮ್ಮ ಮಕ್ಕಳನ್ನು ಭವಿಷ್ಯದ ಆದರ್ಶ ನಾಗರಿಕರನ್ನಾಗಿ ರೂಪಿಸಲು ಬಾಲಸಂಸ್ಕಾರ ಆಪ್ ನಿಮಗೆ ಸಹಾಯ ಮಾಡಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ!