ನಮ್ಮ ಉದ್ದೇಶ

ಇಂಟರನೆಟ್ ಅಥವಾ ಅಂತರಜಾಲದಲ್ಲಿ ಮಕ್ಕಳಿಗಾಗಿ ಅನೇಕ ಸಂಕೇತಸ್ಥಳಗಳು ಉಪಲಬ್ಧವಿದೆ. ಅನೇಕ ದೂರಚಿತ್ರವಾಹಿನಿಗಳಲ್ಲಿ, ಹಾಗೆಯೇ ವಿವಿಧ ಸಂಸ್ಥೆಗಳು ಮತ್ತು ಮಂಡಳಿಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಅನೇಕ ಉಪಕ್ರಮಗಳನ್ನು ನಡೆಸುತ್ತವೆ. ಹೀಗಿದ್ದರೂ ಈ ಸಂಕೇತಸ್ಥಳದಲ್ಲಿ ಏನು ವಿಶೇಷತೆಯಿದೆ? ಅವುಗಳೆಲ್ಲದರ ಜೊತೆ ಇದೂ ಒಂದು ಎಂದು ನಿಮಗೆ ಅನಿಸಬಹುದು.

ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವುದೆಂದರೆ ಅವರ ಅಂತರಂಗ ವಿಕಸನವಾಗುವುದು. ಅದಕ್ಕಾಗಿ ಮಕ್ಕಳಲ್ಲಿ ಪ್ರಾಮಾಣಿಕತೆ, ಸಮಯ ಪರಿಪಾಲನೆ, ನಮ್ರತೆ ಮುಂತಾದ ಗುಣಗಳ ಪರಿಚಯವಾಗಬೇಕೆಂಬುದಷ್ಟೇ ನಮ್ಮ ಉದ್ದೇಶವಾಗಿರದೆ ಈ ಎಲ್ಲಾ ಗುಣಗಳು ಅವರಲ್ಲಿ ಸಂವರ್ಧನೆ ಆಗುವುದೂ ಸಹ ಅಷ್ಟೇ ಮಹತ್ವದ್ದಾಗಿದೆ. ನಿಜವೆಂದರೆ ನಮ್ಮ ಸಂಸ್ಕೃತಿಯು ಮಹಾನ ಸಂಸ್ಕೃತಿಯಾಗಿದೆ. ಅದರಲ್ಲಿರುವ ವಿವಿಧ ಕತೆಗಳು, ರಾಷ್ಟ್ರಪುರುಷರ ಉದಾಹರಣೆಗಳು, ಧರ್ಮಶಾಸ್ತ್ರದಂತೆ ಆಚರಣೆಗಳು, ಅದರ ಅನುಸಾರ ಕೃತಿ ಮಾಡುವುದರಿಂದ ನಿಜವಾದ ಅರ್ಥದಲ್ಲಿ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ.

ಆದರ್ಶದಿಂದ ನಮಗೆ ಸ್ಫೂರ್ತಿಸಿಗುತ್ತದೆ. ಆದರೆ ಇಂದು ಮಕ್ಕಳಿಗೆ ಚಲನಚಿತ್ರದ ನಟ-ನಟಿಯರು, ಕ್ರಿಕೆಟ ಆಟಗಾರರು, ರಾಜಕಾರಣಿಗಳು ಆದರ್ಶರಾಗಿದ್ದಾರೆ. ದೂರಚಿತ್ರವಾಹಿನಿಗಳಲ್ಲಿ ಬರುವ ಅರ್ಥವಿಲ್ಲದ ವಾದ, ಭ್ರಷ್ಟಾಚಾರ, ಹೊಡೆದಾಟ ಮುಂತಾದವುಗಳಿಂದ ನೋಡಿದ್ದನ್ನೇ ನಿಜವೆಂದು ನಂಬುವ ಮಕ್ಕಳ ಮನಸ್ಸಿನ ಮೇಲೆ ಆಕ್ರಮಣವಾಗುತ್ತದೆ. ಇದೇ ಅವರ ಅಂತರ ಮನಸ್ಸಿನಲ್ಲಿ ಸಂಸ್ಕಾರವಾಗುತ್ತದೆ. ಈಗ ಒಟ್ಟು ಕುಟುಂಬಗಳಿರದ ಕಾರಣ ಮತ್ತು ಪೋಷಕರು ವ್ಯಸ್ತರಾಗಿರುವ ಕಾರಣ ಮಕ್ಕಳಿಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸ್ತಿತಿಯಲ್ಲಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸುವುದು ಒಂದು ದೊಡ್ಡ ಪ್ರಶ್ನೆಯಾಗಿಬಿಡುತ್ತದೆ.

ಇದೆಲ್ಲವನ್ನು ಅರಿತ ನಂತರ ನಮಗೆ ಸಂಕೇತಸ್ಥಳದ ಅವಶ್ಯಕತೆಯ ಅರಿವಾಯಿತು ಮತ್ತು ನಾವು ಈ ಕ್ಷೇತ್ರದಲ್ಲಿ ಕಾಲಿಟ್ಟೆವು. ಮಕ್ಕಳಿಗೆ ಕೇವಲ ಮಾಹಿತಿ ನೀಡುವುದು ನಮ್ಮ ಉದ್ದೇಶವಾಗಿರದೇ, ಅವರಲ್ಲಿ ವ್ಯಕ್ತಿತ್ವ ವಿಕಸನಕ್ಕಾಗಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ವ್ಯಕ್ತಿತ್ವದ ವಿಕಾಸವೆಂದರೆ ಕೇವಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ವಿಕಸನವಷ್ಟೇ ಅಲ್ಲದೇ ಆಧ್ಯಾತ್ಮಿಕ ವಿಕಸನವೂ ಆಗಬೇಕಾಗುತ್ತದೆ. ನಮಗೆ ಸರ್ವೋಚ್ಚ ಮತ್ತು ಸತತ ಸಿಗಬಹುದಾದ ಸುಖ ಅಥವಾ ಆನಂದ ಕೇವಲ ಆಧ್ಯಾತ್ಮಶಾಸ್ತ್ರದಿಂದ ಸಿಗುತ್ತದೆ. ಅದಕ್ಕನುಸಾರ ಇಲ್ಲಿ ವಿಷಯಗಳನ್ನು ಮಂಡಿಸಲಾಗಿದೆ.

ಇದನೆಲ್ಲಾ ತಿಳಿದ ಮೇಲೆ ನಿಜವಾದ ಅರ್ಥದಲ್ಲಿ ನಮ್ಮ ವ್ಯಕ್ತಿತ್ವದ ವಿಕಾಸವಾಗಲಿ ಮತ್ತು ನಮ್ಮ ಪಯಣ ಆನಂದ ಪ್ರಾಪ್ತಿಯ ಕಡೆಗೆ ಸಾಗಲಿ, ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ. ಹೀಗೇ ಆದಲ್ಲಿ ಈ ಸಂಕೇತಸ್ಥಳದ ಉದ್ದೇಶವು ಸಫಲವಾಗುವುದು.

ನಿಮ್ಮ ಸಹಕಾರದ ಅವಶ್ಯಕತೆ

ಇಲ್ಲಿರುವ ಮಾಹಿತಿಯು ಅನೇಕ ಗ್ರಂಥಗಳಿಂದ ಪಡೆಯಲಾಗಿದೆ. ಈ ಮಾಹಿತಿಯಲ್ಲಿ ಯಾವುದಾದರು ತಪ್ಪುಗಳಿರುವ ಸಾಧ್ಯತೆಗಳಿವೆ. ನಿಮಗೆ ತಪ್ಪುಗಳು ಕಂಡುಬಂದಲ್ಲಿ ದಯಮಾಡಿ ನಮಗೆ ತಿಳಿಸಿಕೊಡಬೇಕಾಗಿ ವಿನಂತಿ. ಪ್ರತಿಯೊಂದು ತಪ್ಪನ್ನು ಸುಧಾರಿಸಲು ಪ್ರಯತ್ನಿಸಲಾಗುವುದು. ಹಾಗೆಯೇ ಈ ಸಂಕತಸ್ಥಳದಲ್ಲಿ ಯಾವುದಾದರೂ ಸೂಚನೆ, ಬದಲಾವಣೆಗಳನ್ನು ನೀವು ನಮಗೆ ಸೂಚಿಸಬಹುದು. ತಮ್ಮೆಲ್ಲರ ಸಹಕಾರ್ಯದಿಂದ ಈ ಸಂಕೇತಸ್ಥಳವನ್ನು ನಾವು ಪರಿಪೂರ್ಣವಾಗಿಸಬಹುದು.

Leave a Comment