೨೬ ಜನವರಿ : ಗುಣಾತ್ಮಕ ಪ್ರಜಾಪ್ರಭುತ್ವಕ್ಕಾಗಿ

 

ಭಾರತೀಯ ಸಂವಿಧಾನದಲ್ಲಿ ಮನುಷ್ಯನಿಗೆ ಜನ್ಮದಿಂದಲೇ ಮೂಲಭೂತ ಹಕ್ಕುಗಳನ್ನು ಪ್ರದಾನಿಸಲಾಗಿದೆ. ಈ ಹಕ್ಕುಗಳ ಸಂರಕ್ಷಣೆ ಮಾಡುವ ಜವಾಬ್ದಾರಿಯು ನಮ್ಮ ಸರಕಾರದ್ದಾಗಿರುತ್ತದೆ. ಮೂಲಭೂತ ಹಕ್ಕುಗಳಲ್ಲಿ ಭಾಷಣ, ಸಂಚಾರ, ಶಿಕ್ಷಣ, ಪ್ರಚಾರ ಸ್ವಾತಂತ್ರ್ಯ ಇತ್ಯಾದಿ ಅನೇಕ ಅಧಿಕಾರಗಳು ಬರುತ್ತವೆ. ಸರಕಾರ ಈ ಹಕ್ಕುಗಳ ಸಂರಕ್ಷಣೆ ಮಾಡಲು ಅಸಮರ್ಥವಾಗಿದ್ದರೆ ಅಥವಾ ಅದರ ಉಲ್ಲಂಘನೆ ಮಾಡಿದ್ದಲ್ಲಿ ನ್ಯಾಯಪಾಲಿಕೆಯ ಮೂಲಕ ನಮಗೆ ನ್ಯಾಯ ಬೇಡಬಹುದು.

ಸಂವಿಧಾನ ಸಿದ್ಧಪಡಿಸಲು ಸಮಿತಿಯು ಮೂಲಭೂತ ಅಧಿಕಾರದ ಭಾರತೀಯ ಸಂವಿಧಾನದಲ್ಲಿ ಸಮಾವೇಶ ಮಾಡಿ ತೆಗೆದುಕೊಳ್ಳಲು ತತ್ಕಾಲಿನ ಅನೇಕ ಪ್ರಜಾಪ್ರಭುತ್ವ ದೇಶಗಳ ಸಂವಿಧಾನಗಳ ಅಧ್ಯಯನ ಮಾಡಿದ್ದರು, ಉದಾ. ಅಮೇರಿಕಾ, ಬ್ರಿಟನ್ ಇತ್ಯಾದಿ. ಅದರ ನಂತರ ಸಂವಿಧಾನದ ಪರಿಶಿಷ್ಟ ೧೪-೧೫-೧೯-೨೦-೨೧ರಲ್ಲಿ ಈ ಮೂಲಭೂತ ಅಧಿಕಾರಗಳ ಸಮಾವೇಶ ಮಾಡಲಾಯಿತು ಮತ್ತು ಅವುಗಳ ಸಂರಕ್ಷಣೆಯ ಜವಾಬ್ದಾರಿಯು ನ್ಯಾಯಪಾಲಿಕೆಗೆ ಒಪ್ಪಿಸಲಾಯಿತು.

ಸರ್ವೋಚ್ಚ ನ್ಯಾಯಯಾಲಯದ ೯ ನ್ಯಾಯಾಧೀಶರು, ಸಂವಿಧಾನದ ೯ನೇ ಅಧಿನಿಯಮದಲ್ಲಿ ಬದಲಾವಣೆಗಳನ್ನು ಮಾಡಿ ರಾಜ್ಯ ಸರಕಾರವು ನಿರ್ಮಾಣ ಮಾಡಿದ ಕಾನೂನಿನಿಂದಾಗಿ ಯಾವುದೇ ಮೂಲಭೂತ ಅಧಿಕಾರದಲ್ಲಿ ಕಂಟಕ ಬರಬಾರದೆಂದು ಇಂತಹ ಕಾನೂನು ರಾಜ್ಯಘಟನೆಯ ೯ನೇ ಪರಿಶಿಷ್ಟದಲ್ಲಿ ಸಮಾವೇಶ ಮಾಡಿಕೊಳ್ಳಲಾಗುವುದು ಎಂಬ ಮಹತ್ತ್ವಪೂರ್ಣ ನಿರ್ಣಯ ನೀಡಿದರು.ಒಂದು ವೇಳೆ ರಾಜ್ಯ ಸರಕಾರವು ಸಿದ್ಧ ಮಾಡಿದ ಯಾವುದೇ ಕಾನೂನಿನಿಂದ ಈ ಅಧಿಕಾರಗಳ ಉಲ್ಲಂಘನೆಯಾಗುತ್ತಿದ್ದರೆ ನ್ಯಾಯಪಾಲಿಕೆಯು ೯ನೇ ಪರಿಶಿಷ್ಟದಲ್ಲಿರುವ ಕಾನೂನು ಸಮಾಪ್ತ ಮಾಡಬಹುದೆಂಬುದನ್ನು ಹೇಳಲಾಯಿತು.

ದೇಶದಲ್ಲಿ ೧೯೭೫ರಲ್ಲಿ ತುರ್ತು ಪರಿಸ್ಥಿತಿಯನ್ನು (ಎಮರ್ಜನ್ಸಿ) ಘೋಷಿಸಲಾಯಿತು. ಆಗ ಇದೇ ಪ್ರಶ್ನೆಯು ಉದ್ಭವಿಸಿತು. ತಾತ್ಕಾಲಿನ ಸರಕಾರವು ಎಮರ್ಜನ್ಸಿಯ ಘೋಷಣೆ ಮಾಡಿ ಮೂಲಭೂತ ಅಧಿಕಾರಗಳ ಮೇಲೆ ಬಂಧನಗಳನ್ನು ತಂದಿದ್ದರು, ಹಾಗೂ ದೇಶದ ಆಂತರಿಕ ಭದ್ರತೆಯ ಕಾರಣ ಹೇಳಿ ಲಕ್ಷಗಟ್ಟಲೆ ಜನರನ್ನು ಬಂಧಿಸಿದ್ದರು.ಆಗ ಈ ಕಾನೂನಿನ ಅಂತರ್ಗತ ಬಂಧಿಸಿದ ಜನರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದ್ದರು. ಆದರೆ, ಸರ್ವೋಚ್ಚ ನ್ಯಾಯಾಲಯವು ರಾಜಕೀಯ ವಾದವು ಕಾನೂನು ಸುಸಂಗತವಿಲ್ಲದ್ದನ್ನು ಹೇಳಿ ಅದರಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಬಹುಶಃ ಕೇಂದ್ರ ಸರಕಾರದೊಂದಿಗೆ ಧರ್ಮನಿಷ್ಠೆ ಅಥವಾ ಭಯ ಇದೊಂದು ಕಾರಣವಿರಬಹುದು.

ಕೆಲವು ಅಧಿಕಾರ ನೀಡಲು ಅಡಚಣೆ ನಿರ್ಮಾಣವಾಗಬಹುದೆಂದು ಸಂವಿಧಾನ ರಚನಾಕಾರರು ಸರಕಾರಕ್ಕೆ ಅಧಿಕಾರ ನೀಡುವ ಹಕ್ಕು ನೀಡಿದರು. ಸ್ವಾತಂತ್ರ್ಯದ ನಂತರ ದೇಶದ ಆಡಳಿತ ವ್ಯವಸ್ಥೆ ಬಲಿಷ್ಠವಾಗಿರಲಿಲ್ಲ. ಆದುದರಿಂದ ಈ ಅಧಿಕಾರದ ಸಕ್ಷಮ ಬಳಕೆಯಾಗಲು ಅಸಾಧ್ಯವಾಯಿತು. ಆದುದರಿಂದ ಸಂವಿಧಾನ ಶಿಲ್ಪಿಗಳು ಕೆಲವು ಮಹತ್ತ್ವದ ಅಧಿಕಾರಕ್ಕೆ ಮಾರ್ಗದರ್ಶಕ ತತ್ತ್ವಗಳನ್ನು ಹೇಳಿ ಸರಕಾರಕ್ಕೆ ಈ ಅಧಿಕಾರಗಳನ್ನು ಜಾರಿ ಮಾಡಲು ಹೇಳಿದ್ದರು. ಸ್ವಾತಂತ್ರ್ಯದನಂತರ ಬರುವ ೧೦-೧೫ ವರ್ಷಗಳಲ್ಲಿ ಈ ಅಧಿಕಾರಗಳನ್ನು ನಾಗರಿಕರಿಗೆ ಉಪಲಬ್ಧ ಮಾಡಿಕೊಡಲು ಹೇಳಿದ್ದರು. ಮಾರ್ಗದರ್ಶಕ ತತ್ತ್ವದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಗಳು ಕಲ್ಯಾಣಕಾರಿಯಾಗಿದ್ದವು. ಪ್ರಜಾಪ್ರಭುತ್ವ ದೇಶದಲ್ಲಿ, ನಾಗರಿಕರ ಮೂಲಭೂತ ಅಧಿಕಾರಗಳಂತೆ ಇದ್ದವು. ಕೇವಲ ಸರಕಾರಕ್ಕೆ ಈ ಅಧಿಕಾರಗಳನ್ನ ಜಾರಿಗೊಳಿಸುವ ಬಂಧನಗಳಿದ್ದವು.

ಮೂಲಭೂತ ಅಧಿಕಾರಗಳ ಸಂರಕ್ಷಣೆ ಮಾಡುವ ಜವಾಬ್ದಾರಿಯು ರಾಜ್ಯ ಸರಕಾರದ್ದಾಗಿವೆ, ಆದರೆ ಸರ್ವೋಚ್ಚ ನ್ಯಾಯಾಲಯ ಮತ್ತು ಮಾನವ ಅಧಿಕಾರ ಆಯೋಗ ಶಕ್ತಿಶಾಲಿವೆನ್ನಲಾಗುತ್ತದೆ. ಅನೇಕ ಬಾರಿ ಈ ಸಂಸ್ಥೆಗಳು ಮಾನವನ ಮೂಲಭೂತ ಅಧಿಕಾರಗಳ ಬಗ್ಗೆ ಕೆಲವು ಮಹತ್ತ್ವದ ಐತಿಹಾಸಿಕ ನಿರ್ಣಯಗಳನ್ನು ನೀಡಿದ್ದಾರೆ. ಆದರೆ, ಸಾಮಾನ್ಯ ಜನರಿಗೆ ಈ ಸಂಸ್ಥೆಗಳು ಉಚ್ಚವರ್ಗದವರಿಗೆ ಹೆಚ್ಚು ಮಹತ್ತ್ವ ನೀಡುತ್ತಾರೆ ಎಂದು ಅನಿಸುತ್ತದೆ, ಮತ್ತು ಈ ಸಂವಿಧಾನ ನೀಡಿದ ಮೂಲಭೂತ ಅಧಿಕಾರಗಳ ವಿರುದ್ಧವಾಗಿವೆ ಎಂಬ ಅಭಿಪ್ರಾಯವಿರುತ್ತದೆ.

ನಾಗರಿಕರ ಪ್ರಾಥಮಿಕ ಆವಶ್ಯಕತೆಗನುಸಾರ ಶಿಕ್ಷಣ, ನೀರು, ಆರೋಗ್ಯ, ಸ್ವಚ್ಛತೆ, ಮಾಲಿನ್ಯ ಮುಕ್ತಿ ಇತ್ಯಾದಿ ಯಾವ ಮಾನವಾಧಿಕಾರಗಳು ಅಥವಾ ಮೂಲಭೂತ ಆವಶ್ಯಕತೆಗಳಿವೆ, ಅವರಿಗೆ ಸ್ವಾತಂತ್ರ್ಯದ ನಂತರ ಅಂದರೆ ೨೬ ಜನವರಿ ೧೯೫೦ರಲ್ಲಿ ಸಂವಿಧಾನ ಜಾರಿಗೆ ಬಂದ ೧೫-೨೦ ವರ್ಷಗಳ ಒಳಗೆ ಮೂಲಭೂತ ಅಧಿಕಾರದ ದರ್ಜೆ ನೀಡಬಹುದು ಎಂದು ಹೇಳಲಾಯಿತು. ಆದರೆ ಅದಕ್ಕಾಗಿ ಪ್ರಯತ್ನ ಮಾಡುವುದಂತು ದೂರದ ಮಾತು, ಈ ಅಧಿಕಾರಗಳನ್ನು ಅನುವು ಮಾಡಿ ನೀಡಲು ಸರಕಾರ ಏನೂ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ.


 

Leave a Comment