ಮಕ್ಕಳಲ್ಲಿ ಕನ್ನಡಾಭಿಮಾನ ಬೆಳೆಯಲಿ!

ತನ್ನ ಸ್ವಂತದ ಭಾಷೆಯನ್ನು ನಾಶ ಮಾಡಿ ಪರಕೀಯ ಭಾಷೆಯನ್ನು ಮಾತನಾಡುವುದೆಂದರೆ ತನ್ನ ಮಕ್ಕಳನ್ನು ಕೊಂದು ಇತರರ ಮಕ್ಕಳನ್ನು ದತ್ತುತೆಗೆದುಕೊಂಡಂತಾಗುತ್ತದೆ! – ಸ್ವಾತಂತ್ರ್ಯ ವೀರ ಸಾವರಕರ

ನೀವೇ ನೋಡಿ, ಪ್ರತಿದಿನ ಉಪಯೋಗಿಸುವ ಬಹಳಷ್ಟು ಶಬ್ದಗಳು ಉದಾ. ‘ಗುಡ್ಮಾರ್ನಿಂಗ್’, ‘ಥ್ಯಾಂಕ್ಯೂ’, ‘ಎಕ್ಸಕ್ಯೂಸ್ ಮಿ’, ‘ಬಾಯ್-ಬಾಯ್’, ‘ಹಲೋ’, ‘ಗುಡ್ ನೈಟ್’ ಇತ್ಯಾದಿ ಶಬ್ದಗಳನ್ನು ಕನ್ನಡವೆಂದು ಹೇಳಬಹುದೇ? ಆದರೆ ನಾವು ಇವುಗಳನ್ನು ಸರಾಗವಾಗಿ ಉಪಯೋಗಿಸುತ್ತಿರುತ್ತೇವೆ. ಇಂದು ಪರಿಸ್ಥಿತಿ ಎಷ್ಟು ಕೆಟ್ಟಿದೆಯೆಂದರೆ, ‘ಗುಡ್ಮಾರ್ನಿಂಗ್’ ಎನ್ನದೇ‘ ಸುಪ್ರಭಾತ’ ಹೇಳಿದರೆ, ‘ಥ್ಯಾಂಕ್ಯೂ’ ಎನ್ನದೇ ‘ಧನ್ಯವಾದ’, ‘ಹಲೋ’ ಎನ್ನದೇ ‘ನಮಸ್ಕಾರ’ ಇತ್ಯಾದಿ ಹೇಳಿದರೆ ಜನರು ನಗುತ್ತಾರೆ. ಇದರ ಅರ್ಥವೇನೆಂದರೆ, ನಮ್ಮ ‘ಸ್ವಂತದ’ ಭಾಷೆಯೇ ಈಗ ನಮಗೆ ಪರಕೀಯವೆನಿಸುತ್ತಿದೆ. ಇದರ ಬಗ್ಗೆ ಸ್ವಾತಂತ್ರ್ಯ ವೀರ ಸಾವರಕರರವರು ಹೇಳುತ್ತಾರೆ, ‘ಸ್ವಕೀಯ’ ಶಬ್ದವನ್ನು ನಾಶಗೊಳಿಸಿ ಪರಕೀಯ ಶಬ್ದ ಮಾತನಾಡುವುದೆಂದರೆ ತನ್ನ ಮಕ್ಕಳನ್ನು ಕೊಂದು ಇತರರ ಮಕ್ಕಳನ್ನು ದತ್ತು ತೆಗೆದುಕೊಂಡಂತಾಗುತ್ತದೆ. ನಮ್ಮ ಕನ್ನಡ ಭಾಷೆ ಎಷ್ಟು ಸಂಪನ್ನವಾಗಿದೆ! ಅದನ್ನು ಬದಿಗಿರಿಸಿ ಆಂಗ್ಲ, ಫಾರ್ಸಿ ಇತ್ಯಾದಿ ಪರಕೀಯ ಭಾಷೆಗಳಿಂದ ಶಬ್ದಗಳನ್ನು ಉಪಯೋಗಿಸುವುದೆಂದರೆ ಮನೆಯಲ್ಲಿರುವ ಚಿನ್ನದ ಲೋಟವನ್ನು ಬಿಸಾಡಿ ಚೀನೀ ಮಣ್ಣಿನ ಕಪ್ ಖರೀದಿಸಿದಂತೆ ಆಗುವುದಿಲ್ಲವೇ? ಇಂತಹ ಅಮೂಲ್ಯವಾದಂತಹ ಬಹಳಷ್ಟು ಗಣಿಗಳು ನಮ್ಮ ಮನೆಯ ಅಂಗಳದಲ್ಲಿರುವಾಗ ಪರಕೀಯರ ಬಾಗಿಲಲ್ಲಿ ಏಕೆ ಭಿಕ್ಷೆ ಬೇಡುತ್ತೀರಿ? ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಇತರ ಭಾಷೆಗಳನ್ನು ಕಲಿಯುವ ಬಗ್ಗೆ ಸ್ವಾತಂತ್ರ್ಯ ವೀರ ಸಾವರಕರರವರ ಆಕ್ಷೇಪವಿರಲಿಲ್ಲ.

ಜಪಾನಿನಲ್ಲಿ ಪ್ರತಿಯೊಬ್ಬ ಜಪಾನಿ ವ್ಯಕ್ತಿ ಜಪಾನಿ ಭಾಷೆಯಲ್ಲಿಯೇ ಮಾತನಾಡುತ್ತಾನೆ!

ಇತರ ಧರ್ಮೀಯರಿಗೆ ತಮ್ಮ ಭಾಷೆಯ ಬಗ್ಗೆ ಅತ್ಯಂತ ಅಭಿಮಾನವಿದೆ. ಮುಸಲ್ಮಾನರಿಗೆ ಉರ್ದು ಭಾಷೆಯ ಬಗ್ಗೆ ಎಷ್ಟು ಅಭಿಮಾನವಿದೆ. ಮುಸಲ್ಮಾನರ ಮಕ್ಕಳು ಉರ್ದು ಭಾಷೆಯಲ್ಲಿಯೇ ಮಾತನಾಡುತ್ತಾರೆ ಅಥವಾ ಶಿಕ್ಷಣ ತೆಗೆದುಕೊಳ್ಳುತ್ತಾರೆ, ಅವರ ಅಂಗಡಿಯ ಹೆಸರೂ ಉರ್ದು ಭಾಷೆಯಲ್ಲಿಯೇ ಇರುತ್ತದೆ. ಅದಲ್ಲದೆ ಇತರ ದೇಶಗಳ ಉದಾಹರಣೆಯನ್ನು ನೋಡಿರಿ! ಪ್ರಗತಿ ಹೊಂದಿರುವ ರಾಷ್ಟ್ರ ಜಪಾನಿನಲ್ಲಿ ಉಚಿತವಾಗಿ ಜಪಾನಿ ಭಾಷೆಯ ಶಿಕ್ಷಣ ನೀಡಲಾಗುತ್ತಿದೆ. ತಮ್ಮ ಭಾಷೆಯನ್ನು ಇತರರಿಗೆ ಕಲಿಸಲಿಕ್ಕಾಗಿ ಎಷ್ಟು ಪ್ರಯತ್ನ ಮಾಡುತ್ತಾರೆ. ಜಪಾನಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಜಪಾನಿ ಭಾಷೆಯಲ್ಲಿಯೇ ಮಾತನಾಡುತ್ತಾನೆ.

ಎದುರಿನ ವ್ಯಕ್ತಿಗೆ ಆಂಗ್ಲ ಭಾಷೆ ಅರ್ಥವಾಗುತ್ತದೆಯೋ ಇಲ್ಲವೋ, ಎಂಬುದನ್ನು ಸ್ವಲ್ಪವೂ ವಿಚಾರ ಮಾಡದೆ ಆಂಗ್ಲ ಭಾಷೆಯಲ್ಲಿ ಮಾತನಾಡುವುದರಲ್ಲಿಯೇ ಧನ್ಯರೆನಿಸಿಕೊಳ್ಳುವ ಕನ್ನಡಿಗರು!

ವಿದೇಶದಲ್ಲಿ ಇತರರಿಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡುವುದೆಂದರೆ ಶಿಷ್ಟಾಚಾರವಿಲ್ಲದ ಲಕ್ಷಣ ಎಂದು ಪರಿಗಣಿಸಲಾಗುತ್ತದೆ! ಕನ್ನಡಿಗರಾದ ನಾವು ಮಾತ್ರ ‘ಎದುರಿನ ವ್ಯಕ್ತಿಗೆ ಆಂಗ್ಲ ಅರ್ಥವಾಗುತ್ತದೆಯೋ ಇಲ್ಲವೋ ಎಂಬುದನ್ನು ಸ್ವಲ್ಪವೂ ವಿಚಾರ ಮಾಡದೆ ಆಂಗ್ಲ ಭಾಷೆ ಮಾತನಾಡುವುದರಲ್ಲಿಯೇ ಧನ್ಯರೆನಿಸಿಕೊಳ್ಳುತ್ತೇವೆ. ಪರಕೀಯರ ಆಂಗ್ಲ ಭಾಷೆ ಮಾತನಾಡುವುದು ನಮಗೆ ಗೌರವದ ವಿಷಯವೆನಿಸುತ್ತದೆ. ಸ್ವಾತಂತ್ರ್ಯ ವೀರ ಸಾವರಕರರವರು ಮಾತನಾಡುವಾಗ ದಿನದಲ್ಲಿ ಒಂದು ಆಂಗ್ಲ ಶಬ್ದ ಬಂದರೂ, ‘ಚಹಾ ಕುಡಿಯುವುದಿಲ್ಲ’, ಎಂದು ಪ್ರಾಯಶ್ಚಿತ್ತ ತೆಗೆದುಕೊಳ್ಳುತ್ತಿದ್ದರು. ಎಲ್ಲಿ ಸ್ವಭಾಷೆಯ ಬಗ್ಗೆ ಅಭಿಮಾನವಿರುವ ಛತ್ರಪತಿ ಶಿವಾಜಿ ಮಹಾರಾಜರು, ಸ್ವಾಮಿ ವಿವೇಕಾನಂದರು, ಸ್ವಾತಂತ್ರ್ಯ ವೀರ ಸಾವರಕರರು ಹಾಗೂ ಎಲ್ಲಿ ನಮ್ಮದೇ ಕನ್ನಡ ಭಾಷೆಯ (ಸ್ವಭಾಷೆಯ) ಬಗ್ಗೆ ನಾಚಿಕೆಯೆನಿಸುವವರು! ಇತ್ತೀಚೆಗೆ ಆಂಗ್ಲ ಮಾಧ್ಯಮದ ಶಾಲೆಗಳು ಅಭಿವೃದ್ಧಿ ಹೊಂದುತ್ತಿವೆ. ಆದುದರಿಂದ ನಾವು ಕೇವಲ ವರ್ಣದಿಂದ ಹಿಂದೂಗಳಾಗಿದ್ದು ಸಂಸ್ಕೃತಿಯಿಂದ ಕ್ರೈಸ್ತರಾಗುತ್ತಿದ್ದೇವೆ! ಈ ಶಾಲೆಗಳಲ್ಲಿ ಕನ್ನಡ ಕಲಿಯಲು ಬಂಧನ ಮತ್ತು ಆಂಗ್ಲ ಕಲಿಯಲು ದಮ್ಮು ಕಟ್ಟುತ್ತದೆ. ನಾವು ಆಂಗ್ಲದ ಹಿಂದೆ ಬಿದ್ದಿರುವುದರಿಂದ ನಮ್ಮ ಕನ್ನಡವೂ ಅಪಕ್ವವಾಗಿರುತ್ತದೆ. ನಾವು ಕನ್ನಡವನ್ನು ಕಲಿಯದಿದ್ದರೆ, ನಾವು ಕೇವಲ ವರ್ಣದಿಂದ ಹಿಂದೂಗಳಾಗಿದ್ದು ಸಂಸ್ಕೃತಿಯಿಂದ ಕ್ರೈಸ್ತರಾಗುತ್ತೇವೆ.

ಯಾವುದೇ ಭಾಷೆ ಕೆಟ್ಟದ್ದಲ್ಲ, ಅದರ ಉಪಯೋಗವು ತಾರಕಕ್ಕೇರಿದರೆ ಅದು ಕೆಟ್ಟದು. ಅಭಿರುಚಿಯೆಂದು ಇತರ ಭಾರತೀಯ ಅಥವಾ ವಿದೇಶಿ ಭಾಷೆಗಳನ್ನು ಅಗತ್ಯವಾಗಿ ಕಲಿಯಬೇಕು. ಎಂದಾದರೊಮ್ಮೆ ಅದು ಉಪಯೋಗಕ್ಕೆ ಬರಬಹುದು. ಶಿಕ್ಷಣವು ಎಂದೂ ವ್ಯರ್ಥವಾಗುವುದಿಲ್ಲ. ಆದರೆ ಅದಕ್ಕಾಗಿ ನಮ್ಮ ಭಾಷೆಯನ್ನು ಹೀನ, ನಿರುಪಯುಕ್ತ ಅಥವಾ ತ್ಯಾಜ್ಯವೆಂದು ತಿಳಿಯಬೇಕೆ?

ನಮಗೆ ಸ್ವಭಾಷೆಯ ಮೇಲೆಯೇ ಅಭಿಮಾನವಿಲ್ಲದಿರುವಾಗ ಹಿಂದೂ ಧರ್ಮ ಮತ್ತು ಭಾರತ ದೇಶದ ಬಗ್ಗೆ ಅಭಿಮಾನವಿರಬಹುದೇ?

ನಾವು ಕನ್ನಡ ಭಾಷೆಯವರಾಗಿದ್ದರೂ ಆಂಗ್ಲ ಭಾಷೆ ಮಾತನಾಡುವುದರಲ್ಲಿ ಧನ್ಯರೆನಿಸಿಕೊಳ್ಳುತ್ತೇವೆ. ಆಂಗ್ಲ ಮಾತನಾಡುವುದೆಂದರೆ ನಮಗೆ ಗೌರವದ ವಿಷಯವೆಂದೆನಿಸುತ್ತದೆ ಮತ್ತು ಜನ್ಮ ತಾಳುವಾಗ ಯಾವ ಭಾಷೆ ನಮ್ಮ ಕಿವಿಗೆ ಬಿದ್ದಿತ್ತು, ಯಾವುದು ನಮ್ಮ ಪರಿಚಯ ಮಾಡಿಸಿತು, ಅದರ ಬಗ್ಗೆ ನಮಗೇ ತಾತ್ಸಾರವೆನಿಸುತ್ತದೆ. ಹಿಂದುಳಿದಂತೆ ಅನಿಸುತ್ತದೆ. ನಮಗೆ ನಮ್ಮ ಸ್ವಭಾಷೆಯ ಬಗ್ಗೆ ಅಭಿಮಾನವಿಲ್ಲ. ಸ್ವಭಾಷೆಯ ಅಭಿಮಾನವೇ ಇಲ್ಲದವರಲ್ಲಿ ಹಿಂದೂ ಧರ್ಮ ಮತ್ತು ಭಾರತ ದೇಶದ ಬಗ್ಗೆ ಅಭಿಮಾನವಿರಲು ಸಾಧ್ಯವೇ? ಭಾಷೆಯು ಕೇವಲ ವ್ಯಕ್ತಿಯನ್ನು ಮಾತ್ರವಲ್ಲ, ರಾಷ್ಟ್ರವನ್ನೂ ಸಮೃದ್ಧಗೊಳಿಸುತ್ತದೆ. ನಾವು ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಮತ್ತು ಇತರರನ್ನೂ ಮಾತನಾಡುವಂತೆ ಪ್ರೇರೇಪಿಸಬೇಕು. ನಾವು ದೈನಂದಿನ ಜೀವನದಿಂದ ಇದನ್ನು ಆರಂಭಿಸಿದರೆ ಇಂದಿನಿಂದಲೇ ನಾವು ನಮ್ಮಲ್ಲಿನ ಸ್ವಭಾಷಾಭಿಮಾನ ಹೆಚ್ಚಿಸಬಹುದು.

Leave a Comment