ಶ್ರೀ ಸದ್ಗುರುಗಳ ಆರತಿ

ಸ್ವಾಮೀ ಮುಕ್ತಾನಂದರು ರಚಿಸಿರುವ ಈ ಆರತಿ ಹಾಡಿನಲ್ಲಿ, ಶಿಷ್ಯನು ತನ್ನಲ್ಲಿರುವ ಅಜ್ಞಾನವನ್ನು ದೂರ ಮಾಡಿ, ಆತ್ಮ ಜ್ಞಾನವನ್ನು ದಯಪಾಲಿಸಬೇಕು ಎಂದು ಸದ್ಗುರುಗಳ ಮೊರೆ ಹೋಗುತ್ತಾನೆ.

ಜ್ಯೋತ ಸೇ ಜ್ಯೋತ ಜಗಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ |
ಮೇರಾ ಅಂತರ್-ತಿಮಿರ ಮಿಟಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ || ಧೃ೦ ||


ಹೇ ಯೋಗೇಶ್ವರ, ಹೇ ಜ್ಞಾನೇಶ್ವರ, ಹೇ ಸರ್ವೇಶ್ವರ,
ಹೇ ಪರಮೇಶ್ವರ |
ನಿಜ ಕೃಪಾ ಬರಸಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ || ೧ ||

ಮೇರಾ ಅಂತರ್-ತಿಮಿರ ಮಿಟಾಓ |

ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ

ಹಮ ಬಾಲಕ ತೇರೇ ದ್ವಾರ ಪೇ ಆಯೇ |
ಮಂಗಲ ದರಸ ದಿಖಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ || ೨ ||

ಮೇರಾ ಅಂತರ್-ತಿಮಿರ ಮಿಟಾಓ |

ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ

ಶೀಶ ಝುಕಾಯ ಕರೇಂ ತೇರೀ ಆರತೀ |
ಪ್ರೇಮ ಸುಧಾ ಬರಸಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ || ೩ ||

ಮೇರಾ ಅಂತರ್-ತಿಮಿರ ಮಿಟಾಓ |

ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ

ಅಂತರ್ ಮೇಂ ಯುಗ-ಯುಗ ಸೇ ಸೋಈ |
ಚಿತ್ಶಕ್ತಿ ಕೋ ಜಗಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ || ೪ ||

ಮೇರಾ ಅಂತರ್-ತಿಮಿರ ಮಿಟಾಓ |

ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ

ಸಾಚೀ ಜ್ಯೋತ ಜಗೇ ಹೃದಯ ಮೇಂ |
ಸೋsಹಂ ನಾದ ಜಗಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ || ೫ ||

ಮೇರಾ ಅಂತರ್-ತಿಮಿರ ಮಿಟಾಓ |

ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ

ಜೀವನ ಮುಕ್ತಾನಂದ ಅವಿನಾಶೀ |
ಚರಣನ ಶರಣ ಲಗಾಓ |
ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ || ೬ ||

ಮೇರಾ ಅಂತರ್-ತಿಮಿರ ಮಿಟಾಓ |

ಸದ್ಗುರು ಜ್ಯೋತ ಸೇ ಜ್ಯೋತ ಜಗಾಓ

– ಸ್ವಾಮೀ ಮುಕ್ತಾನಂದ

ಜ್ಯೋತ ಸೆ ಜ್ಯೋತ ಜಗಾಓ, ಸದ್ಗುರು, ಜ್ಯೋತ ಸೆ ಜ್ಯೋತ ಜಗಾಓ (ಹೇ ಸದ್ಗುರು, ತಮ್ಮ ಜ್ಞಾನಜ್ಯೋತಿಯಿಂದ ನನ್ನ ಆಂತರ್ಯದಲ್ಲಿ ಜ್ಞಾನದ ಜ್ಯೋತಿಯನ್ನು ಪ್ರಜ್ವಲಿಸಿರಿ.) ಮೇರಾ ಅಂತರ್-ತಿಮಿರ ಮಿಟಾಓ (ಆ ಜ್ಞಾನದಿಂದ ನನ್ನ ಆಂತರ್ಯದಲ್ಲಿನ ಅಂಧಕಾರ, ಆತ್ಮದ ಬಗೆಗಿನ ಅಜ್ಞಾನ ಮತ್ತು ದೇಹಬುದ್ಧಿಯನ್ನು ನಾಶಗೊಳಿಸಿರಿ.)||….||

ಹೇ ಯೋಗೇಶ್ವರ, ಹೇ ಜ್ಞಾನೇಶ್ವರ, ಹೇ ಸರ್ವೇಶ್ವರ, ಹೇ ಪರಮೇಶ್ವರ ನಿಜ ಕೃಪಾ ಬರಸಾಓ (ತಮ್ಮ ಕೃಪೆಯ ಮಳೆಯನ್ನೇ ನನ್ನ ಮೇಲೆ ಸುರಿಸಿ.)||೧||

ಹಮ್ ಬಾಲಕ ತೇರೆ ದ್ವಾರ ಪೆ ಆಯೆ (ಆಧ್ಯಾತ್ಮಿಕ ದೃಷ್ಟಿಯಿಂದ ನಾವು ಬಾಲಕನಂತೆ ಅಜ್ಞಾನಿಯಾಗಿದ್ದೇವೆ. ನಾವು ತಮ್ಮ ಕೃಪೆಯಿಂದ ಈ ಭವಸಾಗರದಿಂದ ಪಾರಾಗುವ ಇಚ್ಛೆಯನ್ನು ಮನಸ್ಸಿನಲ್ಲಿಟ್ಟು ಆಸೆಯಿಂದ ತಮ್ಮ ಬಾಗಿಲಿಗೆ ಬಂದಿದ್ದೇವೆ.) ಮಂಗಲ ದರಸ ದಿಖಾಓ (ನಮಗೆ ತಮ್ಮ, ಆತ್ಮಸ್ವರೂಪದ ಮಂಗಲ ದರ್ಶನವನ್ನು ಮಾಡಿಸಿರಿ.)||೨||

ಶೀಶ ಝುಕಾಯ ಕರೆ ತೇರಿ ಆರತೀ (ನಾವು ನಿಮಗೆ ಪೂರ್ಣವಾಗಿ ಶರಣಾಗತರಾಗಿ ಪ್ರಾರ್ಥಿಸುತ್ತಿದ್ದೇವೆ.) ಪ್ರೇಮ ಸುಧಾ ಬರಸಾಓ (ತಮ್ಮ ಪ್ರೀತಿರೂಪವಾದ ಅಮೃತದ ವರ್ಷಧಾರೆಯನ್ನು ಮಾಡಿ ನಮ್ಮನ್ನು ತೃಪ್ತಿಗೊಳಿಸಿ.)||೩||

ಅಂತರ್ ಮೇಂ ಯುಗ-ಯುಗ ಸೇ ಸೋಯೀ ಚಿತ್‌ಶಕ್ತಿ ಕೊ ಜಗಾಓ (ನಮ್ಮ ಆಂತರ್ಯದಲ್ಲಿ ಅನಾದಿಕಾಲದಿಂದ ಇರುವ ಆದರೆ ಅವಿದ್ಯೆಯ ಆವರಣದಿಂದಾಗಿ ಮುಚ್ಚಲ್ಪಟ್ಟಿರುವ ಚೈತನ್ಯವನ್ನು ಜಾಗೃತಗೊಳಿಸಿರಿ.)||೪||

ಸಾಚೀ ಜ್ಯೋತ ಜಗೇ ಹೃದಯ ಮೇಂ, ಸೋಹಂ ನಾದ ಜಗಾಓ (ಆಂತರ್ಯದಲ್ಲಿ ಆತ್ಮಜ್ಞಾನದ ನಿಜವಾದ ಜ್ಯೋತಿಯನ್ನು ಪ್ರಜ್ವಲಿಸಿ ‘ಸೋಹಂ’ನ…………. ತಮ್ಮ ಕೃಪೆಯಿಂದ ಪ್ರಾರಂಭಿಸಿರಿ.)||೫||

ಜೀವನ ಮುಕ್ತಾನಂದ ಅವಿನಾಶೀ, ಚರಣನ ಶರಣ ಲಗಾಓ (ಸ್ವಾಮೀ ಮುಕ್ತಾನಂದರು ಹೇಳುತ್ತಾರೆ, ತಮ್ಮ ಕೃಪೆಯಿಂದ ನನಗೆ ಜ್ಞಾನವಾದ ಅವಿನಾಶೀ ಜೀವನವನ್ನು ತಮ್ಮ ಚರಣಗಳಲ್ಲಿ ಸಮರ್ಪಿಸಿಕೊಳ್ಳಿರಿ, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥನೆ!)||೬||

Leave a Comment