ಅಷ್ಟವಿನಾಯಕ ಮಂದಿರಗಳು

ಮೋರೆಗಾಂವ ನ ಮಯೂರೇಶ್ವರ


ಬಾರಾಮತಿ ತಾಲ್ಲೂಕಿನ ಕೃಷ್ಣಾ ನದಿಯ ದಂಡೆಯಮೇಲೆ ಕಟ್ಟಿರುವ ಈ ದೇವಾಲಯ, ಈ ಸ್ಥಳದ ಆಕಾರ, ನವಿಲಿನಂತೆ ಇರುವುದರಿಂದ ಮೋರೆಗಾಂವ, ಹೆಸರು ಬಂದಿದೆ.

೨. ಶ್ರೀ ಚಿಂತಾಮಣಿ, ತೇವೂರ


ತನ್ನ ಚಂಚಲ ಮನಸ್ಸನ್ನು ಪ್ರಶಾಂತಗೊಳಿಸಲು ಬ್ರಹ್ಮದೇವರು, ಇಲ್ಲಿ ತಪಸ್ಸನ್ನು ಮಾಡಿದರಂತೆ. ಚಿಂತೆಗಳು ಮಾಯವಾದದ್ದರಿಂದ, ಮೂರ್ತಿಗೆ ಚಿಂತಾಮಣಿ ಎಂಬ ಹೆಸರು ಬಂತು. ಈ ಜಾಗವು ತೇವೂರ್ ಕುದುರೆ ಲಾಯಗಳ ಪ್ರದೇಶವೆನ್ನುತ್ತಾರೆ.

 

೩. ಶ್ರೀ ಸಿದ್ಧಿವಿನಾಯಕ, ಸಿದ್ಧಟೇಕ


ವಿಷ್ಣುದೇವರು ಇಲ್ಲಿನ ಸಿದ್ಧಟೇಕ ಬೆಟ್ಟದ ಮೇಲೆ ತಪಸ್ಸನ್ನು ಆಚರಿಸಿದರಂತೆ. ಇದು ಭೀಮಾ ನದಿಯ ದಂಡೆಯ ಮೇಲಿದೆ. ಮಹಾವಿಷ್ಣುವಿಗೆ ಮಧು ಮತ್ತು ಕೈಟಭರೆಂಬ ದೈತ್ಯರನ್ನು ಸಂಹರಿಸಲು ಸಹಾಯವಾಯಿತು. ಗಣಪತಿಯ ಸಿದ್ಧಿಯಿಂದ ವಿಷ್ಣುವಿಗಾದ ವಿಜಯ ಕಾರ್ಯಕ್ಕೋಸ್ಕರವಾಗಿ ಈ ಕ್ಷೇತ್ರವನ್ನು ಸಿದ್ಧಿವಿನಾಯಕ, ಎನ್ನುತ್ತಾರೆ.

 

೪. ಶ್ರೀ ಮಹಾಗಣಪತಿ, ಶಿರೂರ


ಮಹಾಗಣಪತಿಯ ಆರಾಧನೆಮಾಡಿ, ಶಿವನು, ವರಪಡೆದನು. ಇಲ್ಲಿನ ಗಣಪತಿಗೆ, ೮, ೧೦, ಅಥವಾ ೧೨ ಕೈಗಳಿವೆ. ತ್ರಿಪುರಾಸುರನ ವಧೆಮಾಡಿದ್ದು ಗಣಪತಿಯ ಅನುಗ್ರಹವಾದಮೇಲೆ. ಶಿವಶಂಕರನಿಗೆ, ತ್ರಿಪುರಾರಿ ಎಂಬ ಹೆಸರು ಬಂತು.

 

೫. ಶ್ರೀ ವಿಘ್ನೇಶ್ವರ, ಓಜಾರ


ಕುಕಡಿ ನದಿಯ ದಡದ ಮೇಲೆ ಸ್ಥಾಪಿತವಾಗಿದೆ. ಇಲ್ಲಿನ ದೇವಸ್ಥಾನದ ಮೇಲೆ ಬಂಗಾರದ ಗೋಪುರ ಮತ್ತು ಕಲಶಗಳಿವೆ.

 

೬. ಶ್ರೀ ಗಿರ್ಜಾತ್ಮಕ, ಲೆನ್ಯಾದ್ರಿ


ಇಲ್ಲಿ ಪಾರ್ವತಿ ತನ್ನ ಕಠಿಣ ತಪಸ್ಸಿನ ಫಲದಿಂದ ಗಣಪತಿಯನ್ನು ಪುತ್ರನನ್ನಾಗಿ ಪಡೆಯುತ್ತಾಳೆ. ಇಲ್ಲಿನ ದೇವಾಲಯ ಬೌದ್ಧವಿಹಾರಗಳ ಸಮೀಪದಲ್ಲಿದ್ದು ಪರ್ವತದ ಅತ್ಯಂತ ಎತ್ತರದಲ್ಲಿ ಕಟ್ಟಲಾಗಿದೆ.

 

೭. ಬಲ್ಲಾಳೇಶ್ವರ, ಪಾಲಿ


ಬಲ್ಲಾಳನೆಂಬ ಭಕ್ತನು ಕಲ್ಲಿನಲ್ಲಿ ಗಣಪತಿಯನ್ನು ಕೆತ್ತಿ ಪೂಜಿಸಿದಾಗ, ಗಣಪತಿಯು ಸುಪ್ರೀತನಾಗಿ ಅವನ ಬಳಿಯಲ್ಲಿಯೆ ವಾಸಮಾಡಿದರು. ಬ್ರಾಹ್ಮಣನ ವಟುವಿನ ರೂಪದಲ್ಲಿ ಬಂದು ದರ್ಶನ ಕೊಟ್ಟನು.

 

೮. ಶ್ರೀ ವರದ ವಿನಾಯಕ, ಮಹಾಡ


ಇಲ್ಲಿನ ವಿಶೇಷವೆಂದರೆ, ಸುಮಾರು ೧೦೭ ವರ್ಷಗಳಿಂದ ಒಂದು ನಂದಾದೀಪ ಸತತವಾಗಿ ಉರಿಯುತ್ತಿದೆ.
ಮೇಲೆ ತಿಳಿಸಿದ ೮ ಕ್ಷೇತ್ರಗಳೂ ಮಹಾರಾಷ್ಟ್ರದಲ್ಲೇ ಇವೆ. ಕೆಲವು, ಪುರಾತನ ದೇವಾಲಯಗಳು. ಉಳಿದವುಗಳನ್ನು ಮಾಧವರಾವ ಪೇಷ್ವೆಯವರ ಕಾಲದಲ್ಲಿ ಜೀರ್ಣೋದ್ಧಾರ ಮಾಡಿ ಪುನರ್ನಿಮಿಸಲಾಗಿದೆ. ಅಷ್ಟವಿನಾಯಕನ ಪ್ರತಿಮೆಗಳು ಸ್ವಯಂಭು. ಅಷ್ಟವಿನಾಯಕನ ದರ್ಶನಮಾಡಲು ವಿಧಿವತ್ತಾಗಿ ಹೋಗಬೇಕು. ಇದನ್ನು ಪುರಾಣದಲ್ಲಿ ನಿರೂಪಿಸಲಾಗಿದೆ. ಶ್ಲೋಕದಲ್ಲಿ ಹೇಳಿರುವಂತೆ, ಮೋರೆಗಾಂವ, ತೇವೂರ, ಸಿದ್ಧಟೇಕ, ರಾಜನ್ಗಾಂವ, ಲೆನ್ಯಾದ್ರಿ, ಓಜಾರ, ಪಾಲಿ, ಮತ್ತು ಮಹಾಡ ಕೊನೆಯಲ್ಲಿ ಬರುತ್ತವೆ.