ದೇಶಭಕ್ತರಿಗೆ ಸ್ಫೂರ್ತಿದಾಯಕವಾಗಿರುವ ‘ವಂದೇ ಮಾತರಂ’ ಗೀತೆಯ ಇತಿಹಾಸ




ವಂದೇ ಮಾತರಂ ಇದು ಭಾರತದ ರಾಷ್ಟ್ರಗೀತೆ ಎಂದು ಪ್ರಸಿದ್ಧವಾಗಿದೆ. ಅದರಲ್ಲಿರುವ ವಂದೇ ಮಾತರಂ ಎರಡು ಶಬ್ದಗಳಿಗೆ ಬಹಳ ಮಹತ್ವವು ಲಭಿಸಿದೆ. ಅನೇಕ ರಾಷ್ಟ್ರಭಕ್ತರಿಗೆ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಗಳಾದಾಗ, ಅನೇಕ ಕ್ರಾಂತಿಕಾರರು ನಗುನಗುತ್ತಾ ಗಲ್ಲಿನ ಕುಣಿಕೆಗೆ ತಮ್ಮ ಕುತ್ತಿಗೆಯನ್ನು ಒಡ್ಡುವಾಗ ಅವರಿಗೆ ಎರಡು ಶಬ್ದಗಳೇ ನೆನಪಾಗುತ್ತಿದವು. ಹಿನ್ನೆಲೆಯಲ್ಲಿ ವಂದೇ ಮಾತರಂನ ಇತಿಹಾಸವನ್ನು ನಾವೀಗ ತಿಳಿದುಕೊಳ್ಳೋಣ. – ಶ್ರೀ.ಸಂಜಯ ಮುಳ್ಯೆ.

ಮಾತೃಭೂಮಿಯ ಹಿರಿಮೆಯೇ ಹಿಂದೂ ಸಂಸ್ಕೃತಿಯ ಮುಖ್ಯ ಸೂತ್ರವಾಗಿದೆ. ಪ್ರಭು ಶ್ರೀರಾಮಚಂದ್ರನಿಂದ ಹಿಡಿದು ಶಿವಾಜಿ ಮಹಾರಾಜರವರೆಗೆ ಎಲ್ಲರಿಗೂ ಮಾತೃಭೂಮಿಯ ಒಲವಿದೆ. ರಾವಣನ ವಧೆಯಾದ ನಂತರ ಕೆಲವರು ಶ್ರೀರಾಮನಿಗೆ ಲಂಕೆಯಲ್ಲಿಯೇ ಉಳಿಯಲು ಹೇಳಿದಾಗ, ಶ್ರೀ ರಾಮಚಂದ್ರನು ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸಿ ಎಂದು ನೀಡಿದ ಉತ್ತರವು ಅತ್ಯಂತ ಸುಪ್ರಸಿದ್ಧವಾಗಿದೆ. ಪ್ರಭು ಶ್ರೀರಾಮಚಂದ್ರನೇ ಸ್ವತಃ,ನನ್ನ ಮಾತೆ ಮತ್ತು ಮಾತೃಭೂಮಿಯು ನನಗೆ ಸ್ವರ್ಗಕ್ಕಿಂತಲೂ ಪ್ರಿಯವಾಗಿದೆ ಎನ್ನುತ್ತಾನೆ.

ಸುಜಲಾಂ, ಸುಫಲಾಂ ಮತ್ತು ಸಸ್ಯ ಶ್ಯಾಮಲೆಯಾಗಿರುವ ಭೂಮಿಯು ಯಾವ ದೇಶಭಕ್ತನಿಗೆ ವಂದನೀಯವಾಗಿಲ್ಲ? ಐಶ್ವರ್ಯದಾಯಿ, ಪುಣ್ಯಪ್ರದವಾದ ಹಾಗೂ ಸಮೃದ್ಧವಾದಂತಹ ಭೂಮಿಯನ್ನು ಯಾರು ತಾನೇ ವಂದಿಸಲಾರರು? ಗೀತೆಯ ಭಾವಾರ್ಥವನ್ನು ನೋಡಿದಾಗ ಭಾರತಭೂಮಿಯ ಬಗ್ಗೆ ಅಭಿಮಾನದಿಂದ ಎದೆ ತುಂಬಿ ಬರುತ್ತದೆ. ಬಂಕಿಮಚಂದ್ರರು ರಾಷ್ಟ್ರೀಯ ಮಹಾಮಂತ್ರ ವಂದೇ ಮಾತರಂ ಗೀತೆಯನ್ನು ನವಂಬರ ,೧೮೭೫ ರಂದು ಬರೆದರು. ದಿನವು ಕಾರ್ತಿಕ ಶುಕ್ಲ ನವಮಿಯಾಗಿತ್ತು. ಬಂಕಿಮಚಂದ್ರರು ಬರೆದ ಆನಂದಮಠ ಎಂಬ ಕಾದಂಬರಿಯಲ್ಲಿ ಗೀತೆಯನ್ನು ಪ್ರಕಟಿಸಲಾಗಿದೆ. ಗೀತೆಯ ಭಾಷೆಯು ಸಂಸ್ಕೃತ ಪ್ರಾಬಲ್ಯ ವಿರುವಂತಹದ್ದಾಗಿದೆ. ..೧೭೭೨ ರಲ್ಲಿ ಮುಸಲ್ಮಾನ ಮತ್ತು ಆಂಗ್ಲರ ದಬ್ಬಾಳಿಕೆಯ ವಿರುದ್ಧ ಬಂಗಾಲದಲ್ಲಿ ಸಂನ್ಯಾಸಿಗಳು ನಡೆಸಿದ ಸಶಸ್ತ್ರ ಹೋರಾಟದ ಮಾಹಿತಿಯು ಕಾದಂಬರಿಯಲ್ಲಿದೆ.

೧೯೦೫ರಲ್ಲಿ ಲಾರ್ಡ್ ಕರ್ಝನ್ನು ಬಂಗಾಲ ವಿಭಜನೆಯನ್ನು ಬಹಿರಂಗ ಪಡಿಸಿದನು. ವಿಭಜನೆಯು ರದ್ದಾಗಬೇಕು ಎಂದು ಇಡೀ ಬಂಗಾಲವು ಸಿಡಿದೆದ್ದಿತು. ವಂದೇ ಮಾತರಂ ಎಂಬ ಎರಡೇ ಶಬ್ದಗಳಿಂದ ಇಡೀ ಬಂಗಾಲವು ತುಂಬಿಹೋಯಿತು. ಇದೇ ಎರಡು ಶಬ್ದಗಳಿಂದ ಆಂಗ್ಲರ ಕ್ರೋಧವು ಕಾಲಿನಿಂದ ನೆತ್ತಿಗೇರಿತು. ಕರ್ಝನ್ ಪಟ್ಟ ಶಿಷ್ಯನಾದ ಬಂಗಾಲದ ಗರ್ವನರನು ವಂದೇ ಮಾತರಂ ಶಬ್ದಗಳ ಮೇಲೆ ಕಾನೂನುರೀತ್ಯಾ ನಿಷೇಧವನ್ನು ಹೇರಿದನು. ನಿಷೇಧವನ್ನು ಹೇರಿದೊಡನೆ ಬಂಗಾಲದ ವಂದೇ ಮಾತರಂ ಗೀತೆಯು ಹಿಂದೂಸ್ಥಾನವಿಡೀ ವ್ಯಾಪಿಸಿತು. ಅದು ಒಂದು ರಾಷ್ಟ್ರೀಯ ಮಹಾಮಂತ್ರವಾಯಿತು. ವಂದೇ ಮಾತರಂ ಗೀತೆಯು ದೇಶಭಕ್ತರ ಅತ್ಯಂತ ಪ್ರಿಯವಾದ ಶಬ್ದವಾಯಿತು. ಆಗಸ್ಟ್ ,೧೯೦೬ರಲ್ಲಿ ಬಂಗಾಲದಲ್ಲಿ ವಂದೇ ಮಾತರಂ ಎಂಬ ಹೆಸರಿನ ಆಂಗ್ಲ ದೈನಿಕವು ಪ್ರಾರಂಭವಾಯಿತು. ಸ್ವಾತಂತ್ರ್ಯ ಚಳುವಳಿಯ ಪ್ರತಿಯೊಂದು ಕಾರ್ಯಕ್ರಮವು ವಂದೇ ಮಾತರಂ ಗೀತೆಯನ್ನು ಹಾಡದೇ ಮುಕ್ತಾಯವಾಗುತ್ತಿರಲಿಲ್ಲ. ಸಹೋದರಿ ನಿವೇದಿತಾರವರು ಕೊಲಕತ್ತಾ ಕಾಂಗ್ರೆಸ್ನಲ್ಲಿ ಮಂಡಿಸಿದ ರಾಷ್ಟ್ರಧ್ವಜದ ಮೇಲೆ ಮತ್ತು ಮ್ಯಾಡಮ್ ಕಾಮಾ ಇವರು ಜರ್ಮನಿಯಲ್ಲಿನ ಅಂತರಾಷ್ಟ್ರೀಯ ಸಮಾಜವಾದಿ ಪರಿಷತ್ತಿನಲ್ಲಿ ೧೯೦೮ ರಲ್ಲಿ ಹಾರಿಸಿದ ಹಿಂದಿ ರಾಷ್ಟ್ರಧ್ವಜದ ಮೇಲೆ ವಂದೇ ಮಾತರಂ ಶಬ್ದಗಳನ್ನು ದೇವನಾಗರಿ ಲಿಪಿಯಲ್ಲಿ ಎದ್ದುಕಾಣುವಂತೆ ಬರೆಯಲಾಗಿತ್ತು. ಅಖಿಲ ಭಾರತೀಯ ಕಾಂಗ್ರೆಸ್ ಅಧಿವೇಶನಗಳು ವಂದೇ ಮಾತರಂ ಗೀತೆಯಿಂದ ಪ್ರಾರಂಭವಾಗತೊಡಗಿದವು. ‘ವಂದೇ ಮಾತರಂಗೀತೆಯಿಂದ ತಲೆಯ ಮೇಲೆ ಬೀಳುವ ಲಾಠಿಯ ಏಟುಗಳು ಮತ್ತು ಬರಿ ಮೈಮೇಲೆ ಬೀಳುವ ಬೆತ್ತದ ಬಾಸುಂಡೆಗಳನ್ನು ಸಹಿಸುವ ಸಾಮರ್ಥ್ಯವು, ಕ್ರಾಂತಿಕಾರರಿಗೆ ಹಾಗೆಯೇ ಸಾಮಾನ್ಯ ಜನರಿಗೆ ಪ್ರಾಪ್ತವಾಯಿತು.

೧೯೦೫ರಲ್ಲಿ ವಾರಣಾಸಿಯಲ್ಲಿ (ಆಂಗ್ಲಭಾಷೆಯಲ್ಲಿ ಬನಾರಸ್) ಕಾಂಗ್ರೆಸ್ ೨೧ನೆಯ ಅಧಿವೇಶನವನ್ನು ಏರ್ಪಡಿಸಲಾಗಿತ್ತು. ಅಧಿವೇಶನದಲ್ಲಿ ಸೇರಿದ್ದ ಪ್ರತಿನಿಧಿಗಳ ಒತ್ತಾಯದಿಂದ ಪ್ರಸಿದ್ಧ ಬಂಗಾಲಿ ಕವಯತ್ರಿ ಮತ್ತು ಗಾಯಕಿ ಸರಳಾದೇವಿ ಚೌಧುರಣಿಯವರು ಸಂಪೂರ್ಣವಂದೇ ಮಾತರಂಗೀತೆಯನ್ನು ಹಾಡಿದರು. ಈಗಂತೂ ನಾವುವಂದೇ ಮಾತರಂಗೀತೆಯ ಒಂದು ವಾಕ್ಯವನ್ನು ಮಾತ್ರ ಹೇಳುತ್ತಿದ್ದೇವೆ. ಹೊಸ ಪೀಳಿಗೆಗೆ ಗೀತೆಯು ಎಷ್ಟು ಶ್ರೇಷ್ಠವಾಗಿದೆ ಎಂಬ ವಿಷಯವೇ ತಿಳಿದಿಲ್ಲ.

ರವೀಂದ್ರನಾಥ ಠಾಗೋರರಿಂದ ಮೊದಲ ಸಾರ್ವಜನಿಕ ಗಾಯನ

ವಂದೇ ಮಾತರಂಗೀತೆಯನ್ನು ಮೊದಲು ಕೊಲಕತ್ತಾ ಕಾಂಗ್ರೆಸ್ನಲ್ಲಿ ..೧೮೯೬ರಲ್ಲಿ ಕವಿಶ್ರೇಷ್ಠ ರವೀಂದ್ರನಾಥ ಠಾಗೋರರು ಸಾರ್ವಜನಿಕವಾಗಿ ಹಾಡಿದರು. ಗೀತೆಗೆ ಅವರೇ ಸ್ವತಃ ಲಯವನ್ನು (ರಾಗ) ಹಾಕಿದ್ದರು. ಪಂಡಿತ ವಿಷ್ಣು ದಿಗಂಬರ ಪಲುಸ್ಕರರು ಕಾಫಿ ರಾಗದಲ್ಲಿ ನುಡಿಸಿದ ಲಯವು ವಿಶೇಷವಾಗಿ ಪ್ರಸಿದ್ಧವಾಯಿತು. ಕಾಫಿ ರಾಗದಂತೆ ಇತರ ರಾಗಗಳಲ್ಲಿಯೂ ಗೀತೆಯನ್ನು ಹಾಡಲಾಗಿದೆ. ಆದರೆ ಕಾಫಿ ರಾಗದಲ್ಲಿಯೇ ಗೀತೆಯಸಾರ್ವಜನಿಕ ರೀತಿಯಲ್ಲಿ ಹಾಡಲ್ಪಟ್ಟಿತು ಮತ್ತು ಅದು ಮೊತ್ತಮೊದಲು ಲಾಹೋರನಲ್ಲಿ ದಿ.ಕೀರ್ತಿವಂತ ಪಂಡಿತ ಪಲುಸ್ಕರರ ಬಾಯಿಯಿಂದಲೇ ಹಾಡಲ್ಪಟ್ಟಿತು. ಆದರೆ ಇತ್ತೀಚೆಗೆ ಮಾತ್ರ ಸಾರಂಗ ರಾಗದಲ್ಲಿ ಆಕಾಶವಾಣಿಯಿಂದ ಪ್ರಸಾರವಾಗುತ್ತಿದೆ.

ವಂದೇ ಮಾತರಂಗೀತೆಯು ರಾಷ್ಟ್ರಗೀತೆಯಾಗಲು ನೆಹರೂರವರಿಂದ ಅಡ್ಡಗಾಲು

ಪಂಡಿತ ಜವಾಹರಲಾಲ ನೆಹರೂರವರುವಂದೇ ಮಾತರಂಗೀತೆಯು ರಾಷ್ಟ್ರಗೀತೆಯಾಗಲು ಸಾಧ್ಯವಿಲ್ಲ ಎನ್ನುವುದಕ್ಕೆ ನೀಡಿದ ಕಾರಣವೇನೆಂದರೆ ಅದನ್ನು ಘೋಷದಲ್ಲಿ ಅಂದರೆ ವಾದ್ಯವೃಂದದಲ್ಲಿ ಬಾರಿಸಲು ಆಗುವುದಿಲ್ಲ ಎಂದಾಗಿತ್ತು. ಆದರೆ ಮಾ.ಕೃಷ್ಣರಾವ್ ಫ್ರುಲಂಬ್ರೀಕರರು ಕಾರಣವು ತಪ್ಪಾಗಿದೆ ಎಂದು ಶಾಸ್ತ್ರೀಯ ಪದ್ಧತಿಯಿಂದ ಸಿದ್ಧಪಡಿಸಿತೋರಿಸಿದರು. ವಿಷಯದಲ್ಲಿ ಮಾ.ಕೃಷ್ಣರಾವ್ರು ನಡೆಸಿದ ಪರಾಕಾಷ್ಠೆಯ ಪ್ರಯತ್ನ ಎಷ್ಟಿತ್ತು ಎಂದರೆ ಅವರಿಗೆವಂದೇ ಮಾತರಂ ಕೃಷ್ಣರಾವ್ಎಂಬ ಉಪಾಧಿಯೇ ಪ್ರಾಪ್ತವಾಯಿತು. ವಂದೇ ಮಾತರಂಇತಿಹಾಸ ಮತ್ತು ಕಥೆಎಂಬ ಹೆಸರಿನಲ್ಲಿ ಶ್ರೀ.ಅಮರೇಂದ್ರ ಗಾಡ್ಗೀಳರು ಒಂದು ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಅವರು,‘ಸ್ವತಂತ್ರ ಭಾರತದ ರಾಷ್ಟ್ರಗೀತೆ ಯಾವುದಾಗಿರಬೇಕು ಎನ್ನುವ ವಿಷಯದಲ್ಲಿ ಚರ್ಚೆಯನ್ನು ನಡೆಸುವ ಅಗತ್ಯವೇ ಇರಲಿಲ್ಲ. ಪಂಡಿತ ನೆಹರೂರವರಂತೂ ಪ್ರಜಾಪ್ರಭುತ್ವದ ಎಲ್ಲ ತಂತ್ರಗಳನ್ನು ಸಂಭಾಳಿಸಿ ಕೊನೆಯವರೆಗೆ ಒಬ್ಬ ಸ್ವತಂತ್ರ ಸಾಮ್ರಾಟರಂತೆ ತಮ್ಮ ಅಧಿಕಾರವನ್ನು ನಿರಂಕುಶವಾಗಿ ಚಲಾಯಿಸಿದರು. (ಕ್ರುಶ್ಚೆವ್ರು ನೆಹರೂರವರಿಗೆ ಡೆಮೋಕ್ರೆಟಿಕ್ ಡಿಕ್ಟೆಟರ್ ಎಂಬ ಪದವಿಯನ್ನು ಪ್ರದಾನಿಸಿದ್ದರು) ಆದುದರಿಂದ ಕಾಂಗ್ರೆಸ್ ಹೇಳಿದ್ದು ಕಾನೂನು ಮತ್ತು ಪಂಡಿತ ನೆಹರೂ ಎಂದರೆ ಕಾಂಗ್ರೆಸ್ ಎಂಬ ಸ್ಥಿತಿಯು ನೆಹರೂ ರಾಜ್ಯಾಡಳಿತದಲ್ಲಿ ಕೊನೆಯವರೆಗೂ ನಡೆದುಕೊಂಡು ಬಂದಿತು. ‘ವಂದೇ ಮಾತರಂಗೀತೆಯ ನ್ಯಾಯೋಚಿತವಾದ ರಾಷ್ಟ್ರಗೀತೆಯ ಸ್ಥಾನ ಮಾನವನ್ನು ಧಿಕ್ಕರಿಸುವಂತಹ ರಾಷ್ಟ್ರೀಯ ಪಾತಕವು ಇವೆರಡರಿಂದಾಗಿಯೇ ಘಟಿಸಿದೆ, ಅಂದರೆ ಗೀತೆಯು ಕೇವಲ ಸಂಗೀತದ ಹೆಸರಿನಲ್ಲಿ ನಡೆದ ರಾಜಕಾರಣ ಅಥವಾ ನೆಹರೂ ನೀತಿಗೆ ಬಲಿಯಾಗಬೇಕಾಯಿತು. ‘ವಂದೇ ಮಾತರಂಗೀತೆಯನ್ನು ರಾಷ್ಟ್ರಗೀತೆಯಾಗಲು ಬಿಡುವುದಿಲ್ಲ ಎಂದು ಪಂ.ನೆಹರೂರವರರು ಮೊದಲೇ ನಿರ್ಧರಿಸಿದ್ದರು. ಇದನ್ನು ಸಿದ್ಧಪಡಿಸುವ ಅನೇಕ ಪುರಾವೆಗಳೂ ಇವೆ. ಕೊನೆಗೆ ಜನವರಿ ೨೪, ೧೯೫೦ ರಂದು ಅಂದರೆ ಭಾರತವನ್ನು ಗಣರಾಜ್ಯ (ಪ್ರಜಾಪ್ರಭುತ್ವ) ವೆಂದು ಘೋಷಿಸುವ ಎರಡು ದಿನ ಮೊದಲುಜನಗಣಮನವನ್ನು ರಾಷ್ಟ್ರ ಗೀತೆ ಎಂದು ಸಂವಿಧಾನಾತ್ಮಕ ಸಮಿತಿಯು ಮೊಹರು ಹಾಕಿತು. ಸಮಯದಲ್ಲಿ ರಾಷ್ಟ್ರೀಯ ಗೀತೆ ಎಂದುವಂದೇ ಮಾತರಂಗೀತೆಯನ್ನು ಎರಡನೇ ಸ್ಥಾನದಲ್ಲಿರಿಸಲಾಯಿತು. ರಾಜಕಾರಣಕ್ಕಾಗಿ, ಸ್ವಂತದ ದೊಡ್ಡಸ್ಥಿಕೆಗಾಗಿ ಮತ್ತು ಪಕ್ಷೀಯ ಸ್ವಾರ್ಥಕ್ಕಾಗಿ ರಾಷ್ಟ್ರಹಿತವನ್ನು ಬಲಿ ನೀಡುವ ಪರಂಪರೆಯು ಕಾಂಗ್ರೆಸ್ ಮತ್ತು ಪಂ.ನೆಹರೂರವರಿಂದ ಪ್ರಾರಂಭವಾಯಿತು ಮತ್ತು ಇಂದಿನವರೆಗೆ ಮುಂದುವರೆದುಕೊಂಡು ಬಂದಿದೆ. ಆದರೂ ಅದರ ಅರ್ಥವು ಇಡೀ ದೇಶಕ್ಕೆ, ಮುಂದಿನ ಪೀಳಿಗೆಗೆ ಅದು ಒಪ್ಪಿಗೆಯಿದೆ ಎಂದಲ್ಲ. ಇತಿಹಾಸದ ಬಗ್ಗೆ ಆಸಕ್ತಿಯಿರುವವರು ವಿಶೇಷವಾಗಿ ಹೊಸ ಪೀಳಿಗೆಯ ತರುಣರು ಒಂದು ರಾಷ್ಟ್ರೀಯ ಕರ್ತವ್ಯ ವೆಂದುವಂದೇ ಮಾತರಂಗೀತೆಯ ಕುರಿತು ಪುನರ್ವಿಚಾರ ಮಾಡುವುದು ಅತ್ಯಗತ್ಯವಾಗಿದೆ. ಸಂವಿಧಾನವುವಂದೇ ಮಾತರಂಗೀತೆಯ ಸ್ಥಾನವನ್ನು ಕಸಿದುಕೊಂಡಿದ್ದರೂ ಅದಕ್ಕೆ ಅದರ ನಿಜವಾದ ಸ್ಥಾನವನ್ನು ಪುನಃ ದೊರಕಿಸಿಕೊಡುವುದು ಅಸಾಧ್ಯವೇನಲ್ಲ.

Leave a Comment