ಮಕ್ಕಳ ಭಯವನ್ನು ನಿವಾರಿಸಲು ಉಪಾಯಗಳು

ಭೀತಿ:ಅಪಾಯಕಾರಿ ಪ್ರಸಂಗಗಳು ಎದುರಾದಾಗ ಮನುಷ್ಯನು ಸಹಜವಾಗಿ ಭಯದಿಂದ ದೂರ ಓಡುತ್ತಾನೆ. ಬೆಂಕಿ ಅಥವಾ ಗೂಂಡಾಗಳಿಂದ ದೂರ ಓಡುತ್ತಾನೆ, ಆ ಸಮಯದಲ್ಲಿ ಅವನ ಭಯವು ಯೋಗ್ಯವಾಗಿರುತ್ತದೆ, ಆದರೆ ಕಾಲ್ಪನಿಕ ಕಥೆಗಳು, ಅದರಂತೆಯೇ ಕತ್ತಲೆ, ಜಿರಳೆ ಇತ್ಯಾದಿಗಳ ಭಯವು ಅಯೋಗ್ಯವಾಗಿರುತ್ತದೆ. ಆಗ ಮಕ್ಕಳ ಭಯ ನಿವಾರಿಸಲು ಉಪಾಯ ಯೋಜನೆಯನ್ನು ಮಾಡಬೇಕಾಗುತ್ತದೆ.

ಮಕ್ಕಳ ಭಯವನ್ನು ಹೇಗೆ ನಿವಾರಿಸಬೇಕು ?

೧. ರಾತ್ರಿಯ ಸಮಯದಲ್ಲಿ ಕತ್ತಲೆಯ ಭಯದಿಂದ ಮಗುವು ಮೂತ್ರವಿಸರ್ಜನೆಗೆ ಹೋಗಲು ನಿರಾಕರಿಸುವುದಾದರೆ, ಅಲ್ಲಿ ದೀಪವನ್ನು ಉರಿಸಿರಬೇಕು.

೨. ಅನೇಕ ವೇಳೆ ಗಮನಕ್ಕೆ ಬರುವುದೆಂದರೆ, ಹಾರುವ ಜಿರಳೆ ಕೋಣೆಯಲ್ಲಿ ಕಂಡುಬಂದರೆ ತಾಯಿಯೇ ಗಾಬರಿಯಾಗಿ ಅಂಜಿಕೆಯಿಂದ ಹಾರುತ್ತಾಳೆ. ಅಂತಹ ತಾಯಿಯ ಮಕ್ಕಳು ಸಹಜವಾಗಿ ಜಿರಳೆಗಳಿಗೆ ಹೆದರುತ್ತಾರೆ. ಆದುದರಿಂದ ಮಕ್ಕಳೆದುರು ತಾಯಿಯು ಅಂಜದೇ ಸ್ಥಿರವಾಗಿರಬೇಕು.

೩. ಭಯವು ಅಪಾಯಕಾರಿ ಪ್ರಸಂಗದಿಂದ ನಿರ್ಮಾಣವಾದರೆ ಅಂತಹ ಪ್ರಸಂಗಗಳನ್ನು ತಪ್ಪಿಸಲು ಪ್ರಯತ್ನಿಸಬೇಕು.
ಉದಾ. ಒಂದು ವೇಳೆ ರೌಡಿಯು ಶಾಲೆಯ ದಾರಿಯಲ್ಲಿ ತೊಂದರೆಯನ್ನು ಕೊಡುತ್ತಿದ್ದಲ್ಲಿ, ಹೋಗುವ ಮಾರ್ಗವನ್ನು ಬದಲಿಸುವುದು ಅವಶ್ಯಕವಿರುತ್ತದೆ.

೪. ಯಾವುದಾದರೊಂದು ಪ್ರಸಂಗವನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದಲ್ಲಿ, ಉದಾ. ಒಬ್ಬ ವ್ಯಕ್ತಿಗೆ ಅಸಾಧ್ಯ ರೋಗವಾಗಿದ್ದಲ್ಲಿ, ಅವನು ತತ್ತ್ವಜ್ಞಾನದ ಅಭ್ಯಾಸವನ್ನು ಮಾಡಬೇಕು. "ಪ್ರತಿಯೊಂದು ರೋಗವು ನಾವೇ ಹಿಂದೆ ಮಾಡಿದ ಪಾಪಕರ್ಮದ ಫಲವೆಂದು ನಾವು ಭೋಗಿಸುತ್ತಿದ್ದೇವೆ", ಎಂದು ನಿಶ್ಚಯವಾದ ಮೇಲೆ ನಮ್ಮ ಪಾಪದಿಂದ ಮುಕ್ತರಾಗಲು ಆ ರೋಗವನ್ನು ಸ್ವೀಕಾರ ಮಾಡಬಹುದು.

ಶರೀರದಿಂದ ಮತ್ತು ಮನಸ್ಸಿನಿಂದ ದುರ್ಬಲವಾಗಿರುವ ಜನರೇ ಭಯಗ್ರಸ್ತರಾಗಿರುತ್ತಾರೆ. 'ಹೆದರುವವನ ಹಿಂದೆ ಬ್ರಹ್ಮರಾಕ್ಷಸ' ಎಂಬ ಗಾದೆ ಎಲ್ಲರಿಗೂ ತಿಳಿದೇ ಇದೆ. ಭಗತಸಿಂಗ, ಸ್ವಾತಂತ್ರ ವೀರ ಸಾವರಕರ ಮುಂತಾದ ದೇಶಭಕ್ತರು ನಿರ್ದಾಕ್ಷಿಣ್ಯವಾಗಿ ಮತ್ತು ಮೃತ್ಯುವಿಗೆ ಹೆದರದೇ ಕ್ರೂರ ಬ್ರಿಟಿಷ ಸರಕಾರದ ವಿರುದ್ಧ ಎದ್ದು ನಿಂತರು. ಅವರ ತ್ಯಾಗದ ಫಲವನ್ನು ಇಂದು ನಾವು ಭೋಗಿಸುತ್ತಿದ್ದೇವೆ.

ಉಪನಿಷತ್ತಿನಲ್ಲಿ ಹೇಳಿದಂತೆ, 'ಬೇರೆಯವರೊಂದಿಗೆ ನಮ್ಮ ಸಂಪರ್ಕ ಬಂದ ನಂತರ ಅವನು ನಮಗೆ ಮೋಸಗೊಳಿಸಬಹುದೋ' ಎಂಬ ಭಯವು ನಮಗೆ ಸತತವಾಗಿ ಕಾಡುತ್ತದೆ. ಆದುದರಿಂದಲೇ ಸಾಧು – ಸಂತರು ಹೇಳಿದಂತೆ 'ಸಮದೃಷ್ಟಿಯಾದ ನಂತರ, ಎಂದರೆ "ಎಲ್ಲೆಡೆಯಲ್ಲಿಯೂ ನಾನು ನೀನೆಂಬ ಭೇದವಿಲ್ಲ", ಎಂಬ ಸ್ಥಿತಿ ಪ್ರಾಪ್ತವಾದ ನಂತರ ತನ್ನಷ್ಟಕ್ಕೆ ಭಯದ ಲವಲೇಶವೂ ಇರುವುದಿಲ್ಲ'.

ಡಾ. ವಸಂತ ಬಾಳಾಜಿ ಆಠವಲೆ, ಮಕ್ಕಳ ತಜ್ಞರು (ಕ್ರಿ.ಶ. ೧೯೯೦)