Menu Close

‘ಭಾರತದ ಆಂತರಿಕ ಶತ್ರುಗಳು ಯಾರು ?’ ಈ ಕುರಿತು ಹಿಂದೂ ಜನಜಾಗೃತಿ ಸಮಿತಿ ಇ೦ದಾ ಚರ್ಚಾ ಕುತ್

ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಭಾರತದಲ್ಲಿರುವ ಆಂತರಿಕ ಶತ್ರುಗಳ ಬಗ್ಗೆಯೂ ನಾವು ವಿಚಾರ ಮಾಡಬೇಕಾಗಬಹುದು ! – ಕರ್ನಲ್ ಆರ್.ಎಸ್.ಎನ್. ಸಿಂಗ್, ರಕ್ಷಣಾ ತಜ್ಞ

ಆಂತರಿಕ ಶತ್ರುಗಳಿಂದಾಗಿ ಅನೇಕ ದೇಶಗಳ ಹಾನಿಯಾಗಿದೆ. ವಿವಿಧ ಯುದ್ಧ ಸಾಮಗ್ರಿಗಳನ್ನು ಹೊಂದಿದ್ದರೂ ಆಂತರಿಕ ಶತ್ರುಗಳು ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದಾಗಿ ‘ಸೋವಿಯತ್ ಯುನಿಯನ್’ ಅನೇಕ ದೇಶಗಳಾಗಿ ವಿಭಜಿಸಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ. ಭಾರತದ ವಿವಿಧ ಶತ್ರುಗಳು ದೇಶದ ಮೇಲೆ ದಾಳಿ ಮಾಡುತ್ತಿದ್ದಾರೆ. ಭಾರತದ ವಿರುದ್ಧ ‘ಪ್ರಾಕ್ಸಿ ವಾರ್’ ನಡೆಯುತ್ತಿದೆ, ಇದರಲ್ಲಿ ಕೆಲವು ದೇಶವಿರೋಧಿ ರಾಜಕೀಯ ಪಕ್ಷಗಳು, ಶಿಕ್ಷಣ ಸಂಸ್ಥೆಗಳು, ವಕೀಲರು, ಪತ್ರಕರ್ತರ ಗುಂಪು ಕೆಲಸ ಮಾಡುತ್ತಿವೆ. ಯಾವುದೇ ದೇಶವು ಬಾಹ್ಯ ಶತ್ರುಗಳಿಂದಲ್ಲ, ಬದಲಾಗಿ ಆಂತರಿಕ ಶತ್ರುಗಳಿಂದ ಕುಸಿಯುತ್ತದೆ. ಆದ್ದರಿಂದ ನಾವು ಪಾಕಿಸ್ತಾನ ಮತ್ತು ಚೀನಾ ಈ ಎರಡು ಶತ್ರುಗಳೊಂದಿಗೆ ಭಾರತದಲ್ಲಿರುವ ಆಂತರಿಕ ಶತ್ರುಗಳ ಬಗ್ಗೆಯೂ ಯೋಚಿಸಬೇಕಾಗಿದೆ ಎಂದು ದೆಹಲಿಯ ರಕ್ಷಣಾ ತಜ್ಞ ಮತ್ತು ‘ಭಾರತ್ ಕೆ ಅಂದರೂನಿ ಶತ್ರು’ ಈ ಪುಸ್ತಕದ ಲೇಖಕ ನಿವೃತ್ತ ಕರ್ನಲ್ ಆರ್.ಎಸ್.ಎನ್. ಸಿಂಗ್ ಇವರು ‘ಭಾರತದ ಆಂತರಿಕ ಶತ್ರುಗಳು ಯಾರು ?’ ಎಂಬ ವಿಷಯದ ಕುರಿತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಅವರೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ವಕ್ತಾರ ಶ್ರೀ. ನರೇಂದ್ರ ಸುರ್ವೆ ಸಂವಾದ ನಡೆಸಿದರು. ಈ ವೇಳೆ ಕರ್ನಲ್ ಸಿಂಗ್ ತಮ್ಮ ಮಾತನ್ನು ಮುಂದುವರಿಸಿ, ನಮ್ಮ ಹೋರಾಟ ಕೇವಲ ಪಾಕಿಸ್ತಾನದೊಂದಿಗೆ ಆಗಿರದೇ ಅಲ್ಲಿ ಹುಟ್ಟಿರುವ ‘ಜಿಹಾದ್’ನೊಂದಿಗೆ ಆಗಿದೆ. ಈ ಜಿಹಾದ್ ಅನ್ನು ಬೆಂಬಲಿಸುವ ಮತ್ತು ಸಹಾಯ ಮಾಡುವ ಜನರು, ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ’, ಅವರ ಮಾವೋವಾದಿಗಳು ಆಗಿದ್ದಾರೆ. ಹಾಗೆಯೇ ಅವರು ಇಲ್ಲಿನ ಚರ್ಚ್‌ನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದಾರೆ. ಇಂತಹವರೊಂದಿಗೆ ಅನೇಕ ಭಾರತ ವಿರೋಧಿ ಅಂಶಗಳ ವಿರುದ್ಧ ನಾವು ಹೋರಾಡಬೇಕಾಗಿದೆ. ಜಗತ್ತಿನಾದ್ಯಂತದ ಅನೇಕ ದೇಶಗಳು ಅಲ್ಲಿಯ ಪಂಥೀಯ ಅಥವಾ ಧಾರ್ಮಿಕ ಬಹುಸಂಖ್ಯಾತರ ಆಧಾರದ ಮೇಲೆ ರಚಿಸಲ್ಪಟ್ಟಿದೆ. ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ ದೇಶವನ್ನು ಮುಸಲ್ಮಾನರಿಗೆ ನೀಡಲಾಯಿತು. ಯಾವುದೇ ಯುದ್ಧದಲ್ಲಿ ಪಂಥ ಅಥವಾ ಧರ್ಮದ ದೊಡ್ಡ ಪಾತ್ರವಿರುತ್ತದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಈಗ ನಡೆಯುತ್ತಿರುವ ಯುದ್ಧದಲ್ಲಿಯೂ ಇದು ಕಾಣಿಸುತ್ತಿದೆ.

ದೇಶದ ಬಹುಸಂಖ್ಯಾತ ಸಮಾಜ ಚದುರಿ ಹೋದಾಗ ರಾಷ್ಟ್ರ ನಿರ್ಮಾಣ ಆಗುವುದು ಹೇಗೆ ? ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ನರಸಂಹಾರವಾಯಿತು. ಈಗ ಅಲ್ಲಿ ಉಳಿದಿರುವ ಹಿಂದೂಗಳಿಗೆ ಏನು ಪರ್ಯಾಯ ಉಳಿದಿದೆ ? ಒಂದು ಕಾಲದಲ್ಲಿ ಭಾರತದಲ್ಲಿ ‘ಸನಾತನ ಧರ್ಮಿ’ ಮತ್ತು ‘ದೇಶಪ್ರೇಮಿ’ ಯಾಗಿರುವುದು ಎಂದರೆ ಅಭಿಶಾಪವಾಗಿತ್ತು. ಈಗ ಕಾಲ ಬದಲಾಗಿದೆ. ನಿಮ್ಮನ್ನು ರಕ್ಷಿಸುವವರನ್ನು ಗೌರವಿಸಿ. ನೀವು ಅಪಾಯದಲ್ಲಿದ್ದಾಗ, ಹಿಂದೂ ಸಂಘಟನೆಗಳು ನಿಮ್ಮನ್ನು ರಕ್ಷಿಸುತ್ತವೆ. ಯಾವುದೇ ಸರ್ಕಾರಿ ವ್ಯವಸ್ಥೆಯೂ ನಿಮ್ಮ ರಕ್ಷಣೆ ಮಾಡುವುದಿಲ್ಲ. ದೆಹಲಿಯಲ್ಲಿ ಗಲಭೆಗಳಾದಾಗ ಸರ್ಕಾರಿ ವ್ಯವಸ್ಥೆ ಹಿಂದೂಗಳನ್ನು ರಕ್ಷಿಸಿತ್ತೇ ? ಹಿಂದೂಗಳು ತಮ್ಮ ಬಗ್ಗೆ ಅಭಿಮಾನವನ್ನು ಹೊಂದಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು, ಆಗ ವಿಶ್ವದ ಯಾವುದೇ ಶಕ್ತಿಯೂ ನಿಮ್ಮನ್ನು ಕೀಳಾಗಿ ನೋಡುವುದಿಲ್ಲ ಎಂದು ಕರ್ನಲ್ ಆರ್.ಎಸ್.ಎನ್. ಸಿಂಗ್ ಹಿಂದೂ ಸಮುದಾಯವನ್ನು ಉದ್ದೇಶಿಸಿ ಕರೆ ನೀಡಿದರು.

Related News