Menu Close

ಹಿಂದೂ ರಾಷ್ಟ್ರ ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇವೆ!

ಹಿಂದೂ ರಾಷ್ಟ್ರ ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ಪಡೆದೇ ತೀರುತ್ತೇವೆ!

ಹಿಂದೂ ರಾಷ್ಟ್ರ ನಮ್ಮ ಗುರುತು. ನಮ್ಮನ್ನು ಒಗ್ಗೂಡಿಸುವ ಭಾವನೆ. ಹಿಂದೂ ರಾಷ್ಟ್ರ ಯಾವುದೇ ಭೌಗೋಳಿಕ ಮಿತಿಯನ್ನು ತೋರಿಸುವ ಸಂಕುಚಿತ ವಿಚಾರಧಾರೆ ಅಥವಾ ಕಲ್ಪನೆಯಲ್ಲ. ಈ ದೇಶದ ಜನರ ಸಂಸ್ಕೃತಿ, ಸಭ್ಯತೆ, ಸಂಪ್ರದಾಯ, ಇತಿಹಾಸ, ಧರ್ಮ, ಸಾಹಿತ್ಯ, ಕಲೆ ಮತ್ತು ರಾಜಕೀಯ ಇವಲ್ಲೆವೂ ಇದರಲ್ಲಿ ಒಳಗೊಂಡಿದೆ. ಹಿಂದೂ ರಾಷ್ಟ್ರ ಕೇವಲ ಒಂದು ಧಾರ್ಮಿಕ ಅಥವಾ ರಾಜಕೀಯ ಕಲ್ಪನೆಯಲ್ಲ. ಇದು ಒಂದು ಆದರ್ಶ ಸಾಮಾಜಿಕ – ಧಾರ್ಮಿಕ – ಆರ್ಥಿಕ ವ್ಯವಸ್ಥೆಯಾಗಿದೆ. ಸತ್ಯನಿಷ್ಠೆ, ಯೋಗ್ಯತೆ ಹಾಗೂ ನ್ಯಾಯ ಹಿಂದೂ ರಾಷ್ಟ್ರದ ಗುರುತಾಗಿವೆ. ಇದುವೇ ನಮ್ಮ ಕಲ್ಪನೆಯ  ಹಿಂದೂ ರಾಷ್ಟ್ರ! ಹಿಂದೂ ರಾಷ್ಟ್ರದಿಂದ ಕೇವಲ ಹಿಂದುಗಳಿಗಾಗಿ ಅಷ್ಟೇ ಅಲ್ಲದೆ ಸಂಪೂರ್ಣ ಮಾನುಕುಲಕ್ಕೆ ಶಾಂತಿ ಮತ್ತು ಸಮೃದ್ಧಿ ಲಭಿಸಲಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಈ ಯಾತ್ರೆಯಲ್ಲಿ ಭಾವಹಹಿಸಲು ನಿಮಗಿದೋ ಆಮಂತ್ರಣ! 

ಹಿಂದೂ ರಾಷ್ಟ್ರ ಏಕೆ ಆವಶ್ಯಕವಾಗಿದೆ ?

ಶತಮಾನಗಳಿಂದ ಬಾಹ್ಯ ಮತ್ತು ಆಂತರಿಕ ಆಕ್ರಮಣಕಾರರಿಂದ ರಾಷ್ಟ್ರ ಮತ್ತು ಧರ್ಮ ಇವುಗಳು ನಿರಂತರವಾಗಿ ಆಕ್ರಮಣಕ್ಕೊಳಪಟ್ಟಿವೆ. ಇದರಿಂದ, ಒಂದು ಕಾಲದಲ್ಲಿ ವಿಶ್ವ ಗುರುವಾಗಿದ್ದ ಭಾರತವು ಇಂದು ಧಾರ್ಮಿಕ – ಬೌದ್ಧಿಕ – ಸಾಂಸ್ಕೃತಿಕ – ಆರ್ಥಿಕ ದಿವಾಳಿಯನ್ನು ಅನುಭವಿಸುತ್ತಿದೆ. ಅನಾದಿಕಾಲದಿಂದ ಪಾಲಿಸಲಾಗುವ ಧಾರ್ಮಿಕ ಸಿದ್ಧಾಂತಗಳ ಕಾರಣ ಈ ರಾಷ್ಟ್ರದ ಲೌಕಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠೆ ಅದ್ವಿತೀಯವಾಗಿದೆ. ಆದರೆ ನಮ್ಮ ಧಾರ್ಮಿಕ ಮೌಲ್ಯಗಳಿಂದ ನಮ್ಮನ್ನು ಪ್ರತ್ಯೇಕವಾಗಿರಿಸಿದ್ದರಿಂದ ಇಂದು ನಮ್ಮ ಪರಿಸ್ಥಿತಿ ದಯನೀಯವಾಗಿದೆ. ಆದ್ದರಿಂದ ಈ ರೀತಿಯ ಆಕ್ರಮಣಗಳನ್ನು ಎದುರಿಸಲು ಆವಶ್ಯಕವಿರುವ ಆಧ್ಯಾತ್ಮಿಕ ಮತ್ತು ಶಾರೀರಿಕ ಶಕ್ತಿಯಿಂದ ನಮ್ಮನ್ನು ವಂಚಿಸಲಾಗಿದೆ.

ಪ್ರತಿಯೊಂದು ಜೀವವನ್ನು ಉದ್ಧರಿಸುವ ಧರ್ಮಾಧಿಷ್ಠಿತ  ಸಾಮಾಜಿಕ-ಧಾರ್ಮಿಕ ವ್ಯವಸ್ಥೆಯು ಹಿಂದೂ ರಾಷ್ಟ್ರದಲ್ಲಿ ಇರಲಿದೆ. ಹಿಂದೂ ಶಬ್ದದಿಂದಲೇ ಮುಕ್ತಿಯ ಮಹತ್ವವನ್ನು ತಿಳಿಯಬಹುದು. ಯಾವ ವ್ಯಕ್ತಿ ಕೆಟ್ಟ ಪ್ರವೃತ್ತಿಗಳಿಂದ ತನ್ನನ್ನು ಮುಕ್ತಗೊಳಿಸಿ ಸಾತ್ವಿಕತೆಯೆಡೆಗೆ ಸಾಗುವನೋ, ಮತ್ತು ಅದರಿಂದಾಗಿ ಅವನು ಶಾಶ್ವತ ಆನಂದ ಪಡೆಯುವನೋ ಅವನನ್ನು ಹಿಂದೂ ಎನ್ನುತ್ತಾರೆ. ಆದ್ದರಿಂದ ಈ ರೀತಿಯ ಪ್ರಯತ್ನಗಳಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸುವಂತಹ ರಾಷ್ಟ್ರವು ಕೇವಲ ಹಿಂದುಗಳಿಗಾಗಿ ಅಷ್ಟೇ ಅಲ್ಲ, ದೇಶ ಮತ್ತು ವಿಶ್ವದ ಪ್ರತಿಯೊಬ್ಬ ನಾಗರಿಕನಿಗೆ ಲಾಭದಾಯಕವಾಗಿರಲಿದೆ.

ಹಿಂದೂ ಜನಜಾಗೃತಿ ಸಮಿತಿ ಆಧ್ಯಾತ್ಮಿಕ ಸಾಧನೆಯನ್ನು ಏಕೆ ಹೇಳುತ್ತದೆ ?

ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶಕ್ಕಾಗಿ ಶಾರೀರಿಕ ಮತ್ತು ಆಧ್ಯಾತ್ಮಿಕ ಬಲದ ಆವಶ್ಯಕತೆಯಿದೆ. ಶಾರೀರಿಕ ಶಕ್ತಿ ಕೇವಲ ಶಾರೀರಿಕ ಸಮಸ್ಯೆಗಳನ್ನು ಬಗೆಹರಿಸಬಹುದು, ಆದರೆ ಆಧ್ಯಾತ್ಮಿಕ ಶಕ್ತಿ ಆಧ್ಯಾತ್ಮಿಕ ಮತ್ತು ಶಾರೀರಿಕ ಎರಡೂ ಬಗೆಯ ಸಮಸ್ಯೆಗಳನ್ನು ಎದುರಿಸಲು ಸಾಮರ್ಥ್ಯ ನೀಡುತ್ತದೆ. ಶಾರೀರಿಕ ಬಲವನ್ನು ಕಡಿಮೆ ಸಮಯದಲ್ಲಿ ಗಳಿಸಬಹುದು ಆದರೆ ಆಧ್ಯಾತ್ಮಿಕ ಬಲ ಹೆಚ್ಚಿಸಲು ಸಮಯ ಬೇಕಾಗುತ್ತದೆ, ಜೊತೆಗೆ ಈಶ್ವರನ ಕೃಪೆಯ ಆವಶ್ಯಕತೆಯೂ ಇರುತ್ತದೆ.

ಸಾಧನೆ ಮಾಡುವುದರಿಂದ ಸತ್ವಗುಣದ ವೃದ್ಧಿಯಾಗುವ ಜೊತೆ ಜೊತೆಗೆ ರಜೋಗುಣ ಮತ್ತು ತಮೋಗುಣದಿಂದಾಗುವ ಆಧ್ಯಾತ್ಮಿಕ ಮಾಲಿನ್ಯವೂ ಕಡಿಮೆಯಾಗುತ್ತದೆ. ಈ ರೀತಿ ನಾಗರಿಕರೊಂದಿಗೆ ರಾಜಕಾರಣಿಗಳಿಗೂ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಆವಶ್ಯಕವಾದ ಆಧ್ಯಾತ್ಮಿಕ ಶಕ್ತಿ ಪ್ರಾಪ್ತವಾಗುತ್ತದೆ. ಇದರಿಂದ ಶಿಕ್ಷಣವಿರಲಿ, ರಾಜಕಾರಣವಿರಲಿ, ಪ್ರತಿಯೊಂದು ಕಾರ್ಯ ಆಧ್ಯಾತ್ಮಿಕ ಸ್ತರದಲ್ಲಾಗಲು ಪೂರಕವಾಗಿರುವ ಒಂದು ವಾತಾವರಣ ನಿರ್ಮಾಣವಾಗುತ್ತದೆ. ಇಂತಹ ಆಧ್ಯಾತ್ಮಿಕ ಸಮಾಜ ಸ್ವಾಭಾವಿಕವಾಗಿ ಎಲ್ಲರ ಉದ್ಧಾರಕ್ಕಾಗಿ ಪ್ರಯತ್ನಿಸುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮತ್ತು ವಿಭಿನ್ನ ಮಾರ್ಗಗಳ ಸಂತರ ಆಧ್ಯಾತ್ಮಿಕ ಮಾರ್ಗದರ್ಶನ ಪ್ರಾಪ್ತವಾಗುವ ಅದೃಷ್ಟ ನಮಗೆಲ್ಲರಿಗೂ ಒಲಿದಿದೆ. ಹಿಂದೂ ಜನಜಾಗೃತಿ ಸಮಿತಿ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಧರ್ಮಸಂಸ್ಥಾಪನೆಯ ಕಾರ್ಯವೆಂದು ತಿಳಿಯುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸುವುದೆಂದರೆ ಎಲ್ಲ ಜನರ ಆಧ್ಯಾತ್ಮಿಕ ಉನ್ನತಿಯ ಮಾಧ್ಯಮವಾಗಿರಲಿದೆ.

ನೀವೇನು ಮಾಡಬಹುದು ?

ನ್ಯಾಯವಾದಿ

ಹಿಂದೂ ಧರ್ಮರಕ್ಷಣೆಯ ಕಾನೂನಾತ್ಮಕ ಹೋರಾಟದಲ್ಲಿ ಸಹಾಯ ಮಾಡಿ

ಉದ್ಯಮಿ

ಹಿಂದೂ ಸಂಘಟನೆ ಅಥವಾ ಕಾರ್ಯಕರ್ತರಿಗೆ ಧನದ ಅಥವಾ ಇತರ ಸಹಾಯ ನೀಡಿ

ಪತ್ರಕರ್ತ

ಹಿಂದೂ ರಾಷ್ಟ್ರದ ಸಂಕಲ್ಪನೆ ಮನೆ ಮನೆಗೆ ತಲುಪಿಸಲು ಪ್ರಯತ್ನಿಸಿ

ಶಿಕ್ಷಕ

ಮಕ್ಕಳಲ್ಲಿ ಸುಸಂಸ್ಕಾರಗಳನ್ನು ಹಾಗೂ ರಾಷ್ಟ್ರಾಭಿಮಾನ ಬೆಳೆಸಿ, ಆದರ್ಶ ಪ್ರಜೆಗಳನ್ನು ನಿರ್ಮಿಸಿ

ದೇವಸ್ಥಾನ ವಿಶ್ವಸ್ಥ

ನಿಮ್ಮ ದೇವಸ್ಥಾನವನ್ನು ಹಿಂದೂ ಧರ್ಮದ ಪ್ರಚಾರ-ಪ್ರಸಾರದ ಕೇಂದ್ರವನ್ನಾಗಿಸಿ

ಸರಕಾರಿ ಅಧಿಕಾರಿ

ಹಿಂದೂ ರಾಷ್ಟ್ರದಲ್ಲಿ ಸರಿಪಡಿಸಬೇಕಾದ ದುಷ್ಪ್ರವೃತ್ತಿಗಳನ್ನು ಗುರುತಿಸಿ

ಸೋಶಿಯಲ್ ಮೀಡಿಯಾ
ಆಕ್ಟಿವಿಸ್ಟ್

ಹಿಂದೂ ರಾಷ್ಟ್ರದ ಸಂಕಲ್ಪನೆಯನ್ನು ಎಲ್ಲರಿಗೂ ತಲುಪಿಸಿ, ಹಿಂದೂ ರಾಷ್ಟ್ರದ ಬಗ್ಗೆ ತಪ್ಪಭಿಪ್ರಾಯಗಳನ್ನು ದೂರಗೊಳಿಸಿ

ಹಿಂದೂ ಸಂಘಟನೆ

ಇತರ ಸಂಘಟನೆಗಳೊಂದಿಗೆ ಸೇರಿ ನಿಮ್ಮ ಸಂಘಟನೆಯ ಪೂರ್ಣ ಕ್ಷಮತೆಯನ್ನು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ವಿನಿಯೋಗಿಸಿ

ಸಂತರು ಹಾಗೂ
ಆಧ್ಯಾತ್ಮಿಕ ಗುರುಗಳು

ಹಿಂದೂ ರಾಷ್ಟ್ರದ ಸ್ಥಾಪನೆಯು ಸಾಧನೆಯ ಒಂದು ಭಾಗವೆಂದು ನಿಮ್ಮ ಅನುಯಾಯಿಗಳಿಗೆ ಪ್ರಬೋಧನೆ ಮಾಡಿ

ಹಿಂದೂ ರಾಷ್ಟ್ರ

ಸ್ಥಾಪನೆಯ ಕಾರ್ಯಕ್ಕಾಗಿ

ನಿಮ್ಮ ಆವಶ್ಯಕತೆಯಿದೆ

ಹಿಂದೂ ರಾಷ್ಟ್ರ

ಸ್ಥಾಪನೆಯ ಕಾರ್ಯಕ್ಕಾಗಿ

ನಿಮ್ಮ ಆವಶ್ಯಕತೆಯಿದೆ

ನಾನೊಬ್ಬ ಹಿಂದೂ ಧರ್ಮಾಭಿಮಾನಿ, ನಾನು..

ಪ್ರತಿದಿನ 1 ಗಂಟೆ ಕುಲದೇವರ ಅಥವಾ ಇಷ್ಟದೇವರ ನಾಮಜಪ ಮಾಡುವೆ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿದಿನ ದೇವರಿಗೆ ಪ್ರಾರ್ಥನೆ ಸಲ್ಲಿಸುವೆ

‘ನಮಸ್ತೆ’ ಅಥವಾ ‘ಜೈ ಶ್ರೀ ರಾಮ’ ಎಂದು ಎಲ್ಲರನ್ನೂ ನಮಸ್ಕರಿಸುವೆ

ಪ್ರತಿದಿನ ಹಣೆಗೆ ಕುಂಕುಮದ ತಿಲಕ ಅಥವಾ ಬೊಟ್ಟನ್ನು ಹಚ್ಚಿಕೊಳ್ಳುವೆ

ನಿಯಮಿತವಾಗಿ ಹತ್ತಿರದ ದೇವಸ್ಥಾನಗಳಿಗೆ ಹೋಗಿ ದರ್ಶನ ಪಡೆಯುವೆ

ಹುಟ್ಟುಹಬ್ಬವನ್ನು ಹಿಂದೂ ಸಂಸ್ಕೃತಿಯಂತೆ ಜನ್ಮತಿಥಿ/ನಕ್ಷತ್ರದಂತೆ ಆಚರಿಸುವೆ

ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡುವ ಸಂಘಟನೆಗಳಿಗೆ ಧನ ಸಹಾಯ ಮಾಡುವೆ

ಬಂಧು-ಮಿತ್ರರಲ್ಲಿ ಧರ್ಮಜಾಗೃತಿ ಮೂಡಿಸಲು ವ್ಯಾಖ್ಯಾನಗಳನ್ನು ಆಯೋಜಿಸುವೆ

ಧಾರ್ಮಿಕ ಮತ್ತು ರಾಷ್ಟ್ರಭಕ್ತ ಪೀಳಿಗೆ ನಿರ್ಮಿಸಲು ಬಾಲಸಂಸ್ಕಾರ ವರ್ಗ ಆಯೋಜಿಸುವೆ

ಧರ್ಮಶಿಕ್ಷಣ ಫಲಕಗಳ ಮೂಲಕ ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಿಸುವೆ

ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಾಯೋಜಿಸಿ ಹಂಚುವೆ

ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಕರಪತ್ರಗಳನ್ನು ಪ್ರಾಯೋಜಿಸಿ ಹಂಚುವೆ

ಜನರು ಸೇರುವಲ್ಲಿ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಫಲಕಗಳಲ್ಲಿ ಮಾಹಿತಿ ಬರೆದು ಜನಜಾಗೃತಿ ಮಾಡುವೆ

ಸೋಶಲ್ ಮೀಡಿಯಾ ಮೂಲಕ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ಬಿತ್ತರಿಸುವೆ

ನನ್ನ ಪರಿವಾರ ಮತ್ತು ಸಮಾಜದ ರಕ್ಷಣೆಗಾಗಿ ಸ್ವಸಂರಕ್ಷಣ ಪ್ರಶಿಕ್ಷಣ ಪಡೆಯುವೆ

ಸ್ವತಃ ತಮ್ಮಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡಿಕೊಳ್ಳಿ ಮತ್ತು ಗರ್ವದಿಂದ ಹಿಂದೂ ರಾಷ್ಟ್ರವೀರರಾಗಿ !

ಸಮಿತಿ ನಡಿಗೆ, ಹಿಂದೂ ರಾಷ್ಟ್ರದೆಡೆಗೆ..

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ-ಚಟುವಟಿಕೆಗಳ ದೃಶ್ಯಾವಳಿ

ಸರ್ವಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ’s)

ಹಿಂದೂ ರಾಷ್ಟ್ರದ ಆಡಳಿತಗಾರರು ಧರ್ಮಪಾಲನೆ ಮಾಡುವ, ಸಾತ್ವಿಕ, ಪ್ರಜೆಯ ಕಲ್ಯಾಣಕ್ಕಾಗಿ ಪ್ರಯತ್ನಶೀಲ, ನಿಸ್ವಾರ್ಥ ಮತ್ತು ವಾತ್ಸಲ್ಯಮಯವಾಗಿರುವರು. ರಾಷ್ಟ್ರವನ್ನು ನಡೆಸಲು ಜನರು ಕೇವಲ ಯೋಗ್ಯ ಮತ್ತು ಸಕ್ಷಮ ಪ್ರತಿನಿಧಿಗಳನ್ನೇ ಚುನಾಯಿಸುವರು. ಉಪಯುಕ್ತತೆ ಮತ್ತು ಆವಶ್ಯಕತೆ ನೋಡಿ ರಾಜ್ಯಮಟ್ಟದ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು, ಬಹುಮತದಿಂದ ಅಲ್ಲ. ಇದರಲ್ಲಿ ಪಾರದರ್ಶಕತೆ ಇರಲಿದೆ.

ಹಿಂದೂ ರಾಷ್ಟ್ರದ ವಿಷಯ ಬರುತ್ತಲೇ ತಥಾಕಥಿತ ಜಾತ್ಯಾತೀತರು ‘ಹಿಂದೂ ರಾಷ್ಟ್ರದಲ್ಲಿ ಮುಸಲ್ಮಾನರ ಸ್ಥಿತಿಯೇನು’ ಎಂಬ ನಿರರ್ಥಕ ಪ್ರಶ್ನೆಯನ್ನು ಕೇಳುತ್ತಾರೆ. ವಾಸ್ತವದಲ್ಲಿ ಈ ಪ್ರಶ್ನೆ ಅಲ್ಪಸಂಖ್ಯಾತರು ಕೇಳಬೇಕಿತ್ತು, ಅವರು ಕೇಳುತ್ತಿಲ್ಲ. ಅವರಂತೂ, ‘ಹಸ್ ಕೆ ಲಿಯಾ ಪಾಕಿಸ್ತಾನ್, ಲಡ್ ಕೆ ಲೇಂಗೆ ಹಿಂದುಸ್ಥಾನ್’ ಎನ್ನುತ್ತಾರೆ. ಆದರೂ, ಈ ಪ್ರಶ್ನೆಗೆ ಉತ್ತರವಿದೆ. ಹಿಂದೂ ರಾಷ್ಟ್ರವು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ಪಡೆದು ನಿರ್ಮಾಣವಾಗುವುದರಿಂದ, ಅವರ ಕಾಲದಲ್ಲಿ ಹೇಗೆ ವಿವಿಧ ಪಂಥಗಳೊಂದಿಗೆ  ವರ್ತಿಸಲಾಗಿಗುತ್ತಿತ್ತೋ ಅದೇ ರೀತಿ ಅಲ್ಪಸಂಖ್ಯಾತರಷ್ಟೇ ಅಲ್ಲ, ಎಲ್ಲಾ ಪಂಥದವರೊಂದಿಗೂ ವರ್ತಿಸಲಾಗುವುದು. 

ಹಿಂದೂಗಳ ಎಲ್ಲ ಆಚಾರ ವಿಚಾರ, ಆಹಾರ, ಉಡುಪು ಮುಂತಾದವುಗಳ ಮೇಲೆ ಪಾಶ್ಚಾತ್ಯ ಪರಂಪರೆಯ ವ್ಯಾಪಕ ಆಕ್ರಮಣವಾಗಿದೆ. ಪರಿಣಾಮವಾಗಿ ಹಿಂದೂ ಸಮಾಜದಲ್ಲಿ ಅನೈತಿಕತೆ, ವ್ಯಸನ, ಅಧರ್ಮಾಚರಣೆ ಮುಂತಾದವುಗಳ ವಿಸ್ತಾರವಾಗುತ್ತಿದೆ. ರಾಜಕೀಯ ಪಕ್ಷಗಳ ನಾಯಕರಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಅಭಿಮಾನವಿಲ್ಲ. ಧರ್ಮಾಭಿಮಾನವಿಲ್ಲದಿರುವುದರಿಂದ ಹಿಂದೂಗಳ ಸಾಂಸ್ಕೃತಿಕ ಮತಾಂತರವಾಗುತ್ತಿದೆ. ಸಂಸ್ಕೃತಿಯು ರಾಷ್ಟ್ರದ ಚಾರಿತ್ರ್ಯವಾಗಿದೆ. ಹಿಂದೂ ಸಂಸ್ಕೃತಿ ಸತ್ವ ಪ್ರಧಾನವಾಗಿದೆ; ಆದ ಕಾರಣ, ಈ ರಾಷ್ಟ್ರ ಪವಿತ್ರ ಮತ್ತು ಆದರ್ಶವಾಗಿದೆ. ಇನ್ನೊಂದು ಕಡೆ ಪಾಶ್ಚಾತ್ಯ ಸಂಸ್ಕೃತಿ ಮತ್ತು ಜೀವನ ಶೈಲಿ ರಜ-ತಮ ಪ್ರಧಾನವಾಗಿದೆ; ಆದಕಾರಣ ಇದು ನಾಗರಿಕರನ್ನು ಮಾತ್ರವಲ್ಲ ರಾಷ್ಟ್ರವನ್ನೂ ಅಧಾರ್ಮಿಕಗೊಳಿಸುತ್ತದೆ. ಆದ್ದರಿಂದ, ನಾಗರಿಕರು ಪಾಶ್ಚಾತ್ಯ ಸಂಸ್ಕೃತಿಯಿಂದ ತಮ್ಮನ್ನು ತಾವು ದೂರಗೊಳಿಸುವುದರಲ್ಲಯೇ ಅವರ ಹಿತವಿದೆ. ಆದರೆ ಭಾರತೀಯರ ಇಂದಿನ ಕೃತಿಗಳು ಸಾಂಸ್ಕೃತಿಕ ಗುಲಾಮಗಿರಿಯತ್ತ ಕೊಂಡೊಯ್ಯುತ್ತಿವೆ. ವಿದ್ಯಾಲಯದ ಪಠ್ಯಕ್ರಮಗಳಲ್ಲಿ ಅಧ್ಯಾತ್ಮ ಮತ್ತು ಧರ್ಮವನ್ನು ಪರಿಚಯಿಸುವುದರಿಂದ ಈ ಪ್ರವೃತ್ತಿ ಬದಲಾಗುವುದು ಮತ್ತು ಭಾರತೀಯ ಹಿಂದೂ ಸಂಸ್ಕೃತಿಯ ಪುನರ್ಸ್ಥಾಪನೆಯಾಗುವುದು.

ದೇಶದಲ್ಲಿ ಪ್ರತಿ ವರ್ಷ ಲಕ್ಷಗಟ್ಟಲೆ ಹಿಂದೂಗಳ ಮತಾಂತರವಾಗುತ್ತಿದೆ. ಅದು ಪ್ರಲೋಭನೆಯಿಂದಿರಬಹುದು, ಬಲಪೂರ್ವಕವಾಗಿಯೂ ಇರಬಹುದು. 1947 ರಲ್ಲಿನ ಜನಗಣತಿಯ ಪ್ರಕಾರ ಇಂದಿನ ಜನಸಂಖ್ಯೆಯ ತುಲನೆ ಮಾಡಿದರೆ, ಕ್ರೈಸ್ತರ ಜನಸಂಖ್ಯೆ 5 ಪಟ್ಟು ಮತ್ತು ಮುಸಲ್ಮಾನರ ಜನಸಂಖ್ಯೆ 8 ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ತಮ್ಮ ತಮ್ಮ ಮತದ ಆಧಿಪತ್ಯ ಸ್ಥಾಪಿಸುವ ಉದ್ದೇಶದಿಂದ ಮೌಲ್ವಿ ಮತ್ತು ಮಿಷನರಿಗಳು ಸಕ್ರಿಯವಾಗಿವೆ. ಭಾರತೀಯ ಆಡಳಿತಗಾರರಲ್ಲಿ ಧರ್ಮಾಭಿಮಾನ ಇಲ್ಲದಿರುವ ಕಾರಣ ಇಂತಹ ಮೂಲಭೂತವಾದಿ ಪ್ರಚಾರಕರಿಗೆ ಯಾವ ಕಡಿವಾಣವೂ ಇಲ್ಲ. ಅಮೇರಿಕಾ, ಜರ್ಮನಿ, ಬ್ರಿಟನ್, ಇಟಲಿ ಮತ್ತು ನೆದರ್ಲ್ಯಾಂಡ್ ಮುಂತಾದ ಪ್ರಮುಖ ದೇಶಗಳು ಮತಾಂತರಕ್ಕಾಗಿ ಹಣ ಪೂರೈಸುತ್ತವೆ. ಮತಾಂಧರು ಲವ್ ಜಿಹಾದ್ ನ ಮೂಲಕ ಹಿಂದೂ ಹುಡುಗಿಯರನ್ನು ತಮ್ಮ ಪ್ರೇಮ ಜಾಲದಲ್ಲಿ ಸಿಲುಕಿಸಿ ಮತಾಂತರಗೊಳಿಸುತ್ತಾರೆ. ಅದರ ನಂತರ ಆ ಹುಡುಗಿಯನ್ನು ಬಿಟ್ಟು ಇನ್ನೊಂದು ಹುಡುಗಿಯ ಜೊತೆಗೆ ಇದೇ ಪ್ರಕ್ರಿಯೆ ಪುನರಾವರ್ತಿಸುತ್ತಾರೆ. ಹಿಂದೂ ರಾಷ್ಟ್ರದಲ್ಲಿ ಮತಾಂತರದ ಮೇಲೆ ಪ್ರತಿಬಂಧ ಇರುವುದರ ಜೊತೆ ಲವ್ ಜಿಹಾದ್ ಎಂಬ ಅರ್ಬುದವನ್ನು ತಡೆಯಲು ಕಠಿಣ ಕಾನೂನು ಜಾರಿಗೊಳಿಸಲಾಗುವುದು.

ಭಾರತದಾದ್ಯಂತ ಕಾರ್ಯನಿರತರಾಗಿರುವ ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳ ಸರ್ವೋಚ್ಛ ಉದ್ದೇಶ ಹಿಂದೂ ರಾಷ್ಟ್ರದ ಸ್ಥಾಪನೆಯೇ ಆಗಿದೆ. ಜೊತೆಗೆ ಎಲ್ಲ ಹಿಂದೂ ಸಂಘಟನೆಗಳ ಕಾರ್ಯ ಸಮಾಜ, ರಾಷ್ಟ್ರ ಮತ್ತು ಧರ್ಮದ ಕಲ್ಯಾಣಕ್ಕಾಗಿಯೇ ಇದೆ. ಈ ರೀತಿ ಸಮಾನ ಉದ್ದೇಶವಿದ್ದರೂ, ಈ ಗುರಿಯನ್ನು ಸಾಧಿಸುವುದು ದೂರದ ಮಾತೆನಿಸುತ್ತಿದೆ. ಇದರ ಏಕೈಕ ಕಾರಣವೆಂದರೆ ಹಿಂದು ಹಾಗೂ ಹಿಂದುತ್ವನಿಷ್ಠ ಸಂಘಟನೆಗಳಲ್ಲಿ ಒಗ್ಗಟ್ಟಿನ ಅಭಾವ. ಆದಕಾರಣ ಹಿಂದುತ್ವದ ಒಗ್ಗಟಿನ ಬಲವನ್ನು ಇಲ್ಲಿಯವರೆಗೆ ಯಾರೂ ನೋಡಲು ಸಾಧ್ಯವಾಗಿಲ್ಲ. ಎಲ್ಲ ಹಿಂದು ಸಂಘಟನೆಗಳು ಸಂಘಟಿತರಾಗಿ ತಮ್ಮ ಗುರಿಯತ್ತ ಸಾಗಿದರೆ ಹಿಂದೂ ರಾಷ್ಟ್ರದ ಕನಸು ಶೀಘ್ರದಲ್ಲಿಯೇ ನನಸಾಗಲು ಸಾಧ್ಯವಿದೆ.

1. ಆಡಳಿತಗಾರರು : ಧರ್ಮಪಾಲಕ, ನೀತಿವಂತ ಮತ್ತು ನಿಸ್ವಾರ್ಥಿಯಾಗಿರುವರು. ಅವರು ಜನರನ್ನು ತಂದೆಯಂತೆ ಪ್ರೀತಿ ಮಾಡುವರು ಮತ್ತು ಅವರಿಂದ ಧರ್ಮಪಾಲನೆ ಮಾಡಿಸಿಕೊಳ್ಳುವವರಾಗಿರುತ್ತಾರೆ.

2. ಸರಕಾರ : ಕಾರ್ಯತತ್ಪರ ಮತ್ತು ಪಾರದರ್ಶಕವಾಗಿರುವುದು. ಕೌಶಲ್ಯ, ಯೋಗ್ಯತೆ ಮತ್ತು ರಾಷ್ಟ್ರಭಕ್ತಿಯ ಗುಣಗಳಿಂದ ಕೂಡಿರುವ ನಾಗರಿಕರಿಗೆ ಸರಕಾರದಲ್ಲಿ ಅಧಿಕಾರಿಯಾಗಿ ಆಯ್ಕೆ ಮಾಡಲಾಗುವುದು.

3. ನ್ಯಾಯವ್ಯವಸ್ಥೆ : ಹಿಂದೂ ರಾಷ್ಟ್ರದಲ್ಲಿ ‘ಕಾನೂನಿನ ರಾಜ್ಯ’ (ಕೋರ್ಟ್ ಆಫ್ ಲಾ) ಇರುವುದಿಲ್ಲ, ‘ನ್ಯಾಯದ ರಾಜ್ಯ’ (ಕೋರ್ಟ್ ಆಫ್ ಜಸ್ಟಿಸ್) ಇರುವುದು. ನಾಗರಿಕರಿಗೆ ಶೀಘ್ರವಾಗಿ ಯೋಗ್ಯ ನ್ಯಾಯ ದೊರೆಯುವುದು.

4. ಪ್ರಜೆ : ಧರ್ಮಾಚರಣಿ , ನೀತಿವಂತ ಮತ್ತು ರಾಷ್ಟ್ರ ಹಿತದಲ್ಲಿ ದಕ್ಷನಾಗಿರುವನು. ಪ್ರಜೆ ಅಧಿಕಾರ ಬೇಡಲು ಅಲ್ಲ, ಕರ್ತವ್ಯ ಪೂರ್ಣಗೊಳಿಸಿಕೊಳ್ಳುವವನಾಗಿರುತ್ತಾನೆ. ಆದಕಾರಣ ಹಿಂದೂ ರಾಷ್ಟ್ರದಲ್ಲಿ ಮೋರ್ಚಾ, ಆಂದೋಲನ, ಪ್ರತಿಭಟನೆ, ಬಂದ್ ಮುಂತಾದವು ಇರುವುದಿಲ್ಲ.

ಗ್ರಂಥ ಖರೀದಿಸಿ

ವೀಡಿಯೋ

ಹಿಂದೂ ರಾಷ್ಟ್ರದ ಸಂಕಲ್ಪನೆಯೇನು ?
ಹಿಂದೂ ರಾಷ್ಟ್ರವು ಯಾರ ಆದರ್ಶದಲ್ಲಿ ನಡೆಯಲಿದೆ ?
ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಆಧ್ಯಾತ್ಮಿಕ ಬಲದ ಮಹತ್ವವೇನು ?
ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಹಿಂದೂ ಸಂಘಟನೆಗಳ ಜವಾಬ್ದಾರಿ !
ಹಿಂದೂ ರಾಷ್ಟ್ರದ ಧ್ಯೇಯ ಸಾಧಿಸಲು ನಮ್ಮ ಕರ್ತವ್ಯ !

ಸಂಬಂಧಿತ ಲೇಖನಗಳು