Menu Close

ವಿಜಯದಶಮಿ ಸಮಯದಲ್ಲೇ ವೊಲ್ಕ್ಸವೇಗನ್ ನ ಜಾಹೀರಾತಿನಲ್ಲಿ  ಪ್ರಭು ಶ್ರೀರಾಮನ ಅಪಮಾನ, ವಿರೋಧದ ನಂತರ ತೆರವು 

ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರ ಸಂಘಟಿತ ವಿರೋಧದ ಪರಿಣಾಮ 

ವೊಲ್ಕ್ಸವೇಗನ್ ಜರ್ಮನಿ ಮೂಲದ ಪ್ರಸಿದ್ಧ ಕಂಪನಿ. ಸದ್ಯ ಸಂಪೂರ್ಣ ವಿಶ್ವದಲ್ಲಿ ವಿಸ್ತರಿಸಿದೆ. ಭಾರತದಲ್ಲಿ ವಿಜಯ ದಶಮಿಯ ಸಂದರ್ಭದಲ್ಲಿ  ಒಂದು ಜಾಹೀರಾತು ಪ್ರಕಟಿಸಿತ್ತು. ಅದರಲ್ಲಿ ಪ್ರಭು ಶ್ರೀರಾಮ ಮತ್ತು ರಾವಣನನ್ನು ತೋರಿಸಲಾಗಿತ್ತು. ಜಾಹೀರಾತಿನಲ್ಲಿ ಪ್ರಭು ಶ್ರೀ ರಾಮನು ವೊಲ್ಕ್ಸವೇಗನ್ ಕಾರು ಚಲಾಯಿಸುತ್ತಿದ್ದು ದಾರಿಯಲ್ಲಿ ರಾವಣ ಕಾಣುತ್ತಾನೆ, ಅದರ ನಂತರ ಪ್ರಭು ಶ್ರೀರಾಮ ರಾವಣನನ್ನು ಕಾರಿನಲ್ಲಿ ಕೂರಲು ಹೇಳುತ್ತಾರೆ. ನಂತರ ರಾವಣ ಕಾರಿನಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತಾನೆ . ಈ ದೃಶ್ಯದಲ್ಲಿ ‘ನಮ್ಮೊಳಗಿನ ಒಳ್ಳೆಯತನದಿಂದ ಕೆಟ್ಟದ್ದನ್ನು ದೂರ ಓಡಿಸಿ’ ಈ ರೀತಿಯ ಸಂದೇಶ ನೀಡಲಾಗಿತ್ತು.

ಈ ರೀತಿ ಆರ್ಥಿಕ ಲಾಭಕ್ಕಾಗಿ ಪ್ರಭು ಶ್ರೀರಾಮನನ್ನು ಮನುಷ್ಯನಂತೆ ತೋರಿಸಿ ವೊಲ್ಕ್ಸವೇಗನ್ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿತ್ತು.

ಹಿಂದೂ ಜನಜಾಗೃತಿ ಸಮಿತಿ ಕೂಡಲೇ ಟ್ವಿಟರ್ ನಲ್ಲಿ ಕಂಪನಿಯ ಜಾಹೀರಾತನ್ನು ತೆರವುಗೊಳಿಸುವಂತೆ ಒತ್ತಾಯಿಸಿತು. ತದನಂತರ ಜಾಗೃತ ಧರ್ಮಪ್ರೇಮಿಗಳೂ ಇದನ್ನು ಸಂಘಟಿತವಾಗಿ ವಿರೋಧಿಸಿದ ಪರಿಣಾಮ ವೊಲ್ಕ್ಸವೇಗನ್ ತನ್ನ ಎಲ್ಲಾ ಸೋಶಿಯಲ್ ಪ್ಲಾಟಫಾರ್ಮ್ ನಿಂದ ಈ ಜಾಹೀರಾತನ್ನು ತೆರೆವುಗೊಳಿಸಬೇಕಾಯಿತು. ‘ಸಂಘಟಿತ ಹಿಂದೂಗಳೇ ಧರ್ಮದ ನಿಜವಾದ ಶಕ್ತಿ’ ಎಂದು ಪುನಃ ಸಾಬೀತಾಯಿತು.