Menu Close

ಯಶಸ್ಸು : ಹಿಂದೂಗಳ ವಿರೋಧದ ನಂತರ SATO Toilets ಮಾತೆ ದುರ್ಗೆಯ ವಿಡಂಬನೆ ಮಾಡುವ ಜಾಹೀರಾತು ತೆಗೆದುಹಾಕಿದೆ

ಹಿಂದೂ ಜನಜಾಗೃತಿ ಸಮಿತಿ ಮತ್ತು ಎಲ್ಲಾ ಹಿಂದುತ್ವನಿಷ್ಟರ ಸಂಘಟಿತ ವಿರೋಧದ ಪರಿಣಾಮ !

ಗುಡಗಾವದಲ್ಲಿನ SATO Toilets Asia ಕಂಪನಿ ಸ್ಯಾನಿಟರಿ ವಸ್ತುಗಳನ್ನು ನಿರ್ಮಿಸಿ ಮಾರುಕಟ್ಟೆಯಲ್ಲಿ ಮಾರುತ್ತದೆ. ಇದರಲ್ಲಿ ಸಾಬೂನು ಸ್ಯಾನಿಟೈಸರ್, ಹ್ಯಾಂಡ್ ವಾಶ್ ಮುಂತಾದ ಉತ್ಪನ್ನಗಳು ಇರುತ್ತವೆ. ಇದರ ಪ್ರಚಾರಕ್ಕಾಗಿ ನವರಾತ್ರಿಯ ಸಮಯದಲ್ಲಿ ಅವರು ಒಂದು ಜಾಹೀರಾತು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದರು. ಈ ಜಾಹೀರಾತಿನಲ್ಲಿ ಮಾತೆ ದುರ್ಗೆಯ ಕೈಯಲ್ಲಿ ಸಾಬೂನು, ಸ್ಯಾನಿಟೈಸರ್ ಮುಂತಾದ ವಸ್ತುಗಳು ಕಾಣುತ್ತಿದ್ದವು ಮತ್ತು ಅದರ ಮೂಲಕ ಯಾವ ರೀತಿ ಮಾತೆ ದುರ್ಗಾ ಶತ್ರುಗಳ ನಾಶ ಮಾಡುತ್ತಾಳೆ, ಅದೇ ರೀತಿ ಕಂಪನಿಯ ಮೂಲಕ ತಯಾರಿಸಿರುವ ಉತ್ಪನ್ನಗಳು ಕ್ರಿಮಿಗಳ ನಾಶ ಮಾಡುತ್ತದೆ, ಈ ರೀತಿಯ ಸಂದೇಶ ನೀಡಲಾಗಿತ್ತು. ಹಿಂದುತ್ವ ನಿಷ್ಠರಿಗೆ ಇದು ಗಮನಕ್ಕೆ ಬಂದ ನಂತರ ಅವರು ಹಿಂದೂ ಜನಜಾಗೃತಿ ಸಮಿತಿಗೆ ತಿಳಿಸಿದರು. ಅದರ ನಂತರ ಸಮಿತಿಯ ಮೂಲಕ ಸೋಶಿಯಲ್ ಮೀಡಿಯಾದಿಂದ ಈ ವಿಷಯದಲ್ಲಿ ಜಾಗೃತಿಯ ಪೋಸ್ಟ್ ಹಾಕಲಾಯಿತು ಮತ್ತು ಇದನ್ನು ಕಾನೂನು ಮಾರ್ಗದಲ್ಲಿ ವಿರೋಧಿಸುವಂತೆ ಕರೆ ನೀಡಲಾಯಿತು. ಹಿಂದುಗಳ ವಿರೋಧದ ಕೆಲವೇ ಗಂಟೆಗಳಲ್ಲಿ ಕಂಪನಿಯಿಂದ ಈ ಜಾಹೀರಾತು ತೆಗೆಯಲಾಯಿತು.