Menu Close

ಹಿಂದೂಗಳ ಸಂಘಟನೆ ಹಾಗೂ ಧರ್ಮಪ್ರೇಮ ಜಾಗೃತಗೊಳಿಸುವ

ಗಣೇಶೋತ್ಸವ

ಹಿಂದೂಗಳ ಸಂಘಟನೆ ಹಾಗೂ ಧರ್ಮಪ್ರೇಮ ಜಾಗೃತಗೊಳಿಸುವ

ಗಣೇಶೋತ್ಸವ

ಗಣೇಶೋತ್ಸವ ಸಂಪೂರ್ಣ ದೇಶದಲ್ಲಿ ಸಡಗರ ಮತ್ತು ಉತ್ಸಾಹದಿಂದ ಆಚರಿಸುವ ಹಬ್ಬವಾಗಿದೆ. ಅನೇಕ ಕುಟುಂಬಗಳು ನೂರಾರು ವರ್ಷಗಳಿಂದ ಮನೆಯಲ್ಲಿ ಗಣೇಶೋತ್ಸವ ಆಚರಿಸುತ್ತಾರೆ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಸಾರ್ವಜನಿಕ ಗಣೇಶೋತ್ಸವದ ಸಂಬಂಧ ಅನನ್ಯ ಸಾಧಾರಣವಾಗಿದೆ. ಗಣೇಶ ಚತುರ್ಥಿಯಂದು ಶ್ರೀ ಗಣೇಶನ ಸಾರ್ವಜನಿಕ ಪೂಜೆಯನ್ನು ಜನಪ್ರಿಯ ಮಾಡಿದ ಶ್ರೇಯಸ್ಸು ಸ್ವರಾಜ್ಯದ ಪ್ರವರ್ತಕರಾದ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ. ಅವರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನರಲ್ಲಿ ಒಗ್ಗಟ್ಟು ಮೂಡಲಿಸಲು ಹಾಗೂ ಹೋರಾಟನಕ್ಕೆ ಆವಶ್ಯಕವಿರುವ ಆಧ್ಯಾತ್ಮಿಕ ಶಕ್ತಿ ಪಡೆಯಲು ಇದನ್ನು ಪ್ರಾರಂಭಿಸಿದರು.

ಆದರೆ, ಸ್ವಾತಂತ್ರ್ಯದ ನಂತರದ ದಶಕಗಳಿಂದ ಗಣೇಶೋತ್ಸವದ ಜೊತೆಗೆ ಕೆಲವು ಕೆಟ್ಟ ರೂಢಿಗಳು ಸೇರಿಕೊಂಡಿವೆ. ಈ ಕೆಟ್ಟ ರೂಢಿಗಳನ್ನು ದೂರಗೊಳಿಸಲು ಹಿಂದೂ ಜನಜಾಗೃತಿ ಸಮಿತಿ ಪ್ರಯತ್ನಿಸುತ್ತಿದೆ. ಸಮಿತಿ ಜಾಗೃತಿ ಅಭಿಯಾನ ನಡೆಸುತ್ತದೆ ಮತ್ತು ಗಣೇಶೋತ್ಸವ ಮಂಡಳಿಗಳಿಗೆ ಆಧ್ಯಾತ್ಮಿಕ ಪದ್ಧತಿಯಲ್ಲಿ ಗಣೇಶೋತ್ಸವ ಆಚರಿಸಲು ಪ್ರೋತ್ಸಾಹಿಸುತ್ತದೆ. ಸಾರ್ವಜನಿಕ ಗಣೇಶೋತ್ಸವ ಸ್ವರಾಜ್ಯ ಪ್ರಾಪ್ತಿಯಲ್ಲಿ ಮಹತ್ವದ ಪಾತ್ರ ವಹಿಸಿದೆ, ಮತ್ತು ಈಗ ಈ ಸ್ವರಾಜ್ಯವನ್ನು ಸುರಾಜ್ಯಕ್ಕೆ ಬದಲಾಯಿಸುವ ಸಮಯ ಬಂದಿದೆ.

ಮಣ್ಣಿನಿಂದ ಮಾಡಿರುವ ಶ್ರೀ ಗಣೇಶ ಮೂರ್ತಿ – ‘ಇಕೋ ಫ್ರೆಂಡ್ಲಿ’ ಮೂರ್ತಿ

ಮೂರ್ತಿ ನೀರಿನಲ್ಲಿ ಕರಗಿ ಮಣ್ಣಲ್ಲಿ ಮಿಶ್ರಿತಗೊಳ್ಳುತ್ತದೆ, ಇದರಿಂದ ನದಿಯ ನೀರು ನಿಲ್ಲುವುದಿಲ್ಲ .

ನೀರನ್ನು ಮಲಿನಗೊಳಿಸುವುದಿಲ್ಲ, ಮನುಷ್ಯನ ಆರೋಗ್ಯ ಮತ್ತು ಜಲಚರಗಳಿಗೂ ಹಾನಿಯಾಗುವುದಿಲ್ಲ.

ನೀರನ್ನು ಆಧ್ಯಾತ್ಮಿಕ ರೂಪದಲ್ಲಿ ಶುದ್ಧಗೊಳಿಸುತ್ತದೆ, ಇದರಿಂದ ಜನರಿಗೆ ಮತ್ತು ವಾತಾವರಣಕ್ಕೂ ಲಾಭವೇ ಆಗುತ್ತದೆ.

ಗಣೇಶೋತ್ಸವ ವಿರೋಧಿ ಪ್ರಚಾರ

(ಕಾಗದದ ಮುದ್ದೆಯಿಂದ ಮಾಡಿದ ಮೂರ್ತಿಗಳು )

ಕಲ್ಪನೆ

ಕಾಗದದ ಮುದ್ದೆಯಿಂದ ತಯಾರಿಸಿದ ಮೂರ್ತಿಗಳು ವಾತಾವರಣಕ್ಕೆ ಅನುಕೂಲಕರವಾಗಿವೆ.

ವಾಸ್ತವ

ಎಂಜಿಟಿ (ನ್ಯಾಷನಲ್ ಗ್ರೀನ್ ಟ್ರೀಬ್ಯುನಲ್) ಕಾಗದದ ಮುದ್ದೆಯಿಂದ ತಯಾರಿಸುವ ಮೂರ್ತಿಗಳಿಂದ ಪ್ರದೂಷಣೆಯಾಗುತ್ತದೆ ಮತ್ತು ವಾತಾವರಣಕ್ಕೆ ಹಾನಿಯುಂಟು ಮಾಡುತ್ತದೆ ಎಂದು ಹೇಳಿದೆ.

ಕಾಗದದ ಮುದ್ದೆ ನೀರಿನಲ್ಲಿನ ಆಕ್ಸಿಜನ್ ಹೀರಿಕೊಳ್ಳುತ್ತದೆ ಮತ್ತು ಮಿಥೇನ್ ಗ್ಯಾಸ್ ಬಿಡುತ್ತದೆ, ಇದರಿಂದ ಜಲಚರಗಳಿಗೂ ಹಾನಿಯುಂಟಾಗುತ್ತದೆ.

ಕಾಗದದಲ್ಲಿರುವ ಲಿಗ್ನಿನ್ ಘಟಕ ಜೈವಿಕ ಆಕ್ಸಿಜನ್ ಬೇಡಿಕೆ ಹೆಚ್ಚಿಸುತ್ತದೆ, ಅದು ಜಲಚರಗಳಿಗೆ ಹಾನಿಕಾರಕವಾಗಿದೆ.

ಕಾಗದದ ಮುದ್ದೆಯಿಂದ ಚಿಕ್ಕ ಚಿಕ್ಕ ತುಂಡುಗಳಾಗಿ ಹರಡುತ್ತವೆ, ಅವೂ ಜಲಚರಗಳಿಗೆ ಹಾನಿಕಾರಕವಾಗುತ್ತವೆ.

ಕಾಗದದ ಮುದ್ದೆಯಿಂದ ತಯಾರಿಸಿರುವ ಗಣೇಶನ ಮೂರ್ತಿ ‘ಇಕೋ ಫ್ರೆಂಡ್ಲಿ’ ಅಲ್ಲ, ಅದನ್ನು ಕೂರಿಸಬೇಡಿ !

ಮೂರ್ತಿ ವಿಸರ್ಜನೆಗೆ ಪರ್ಯಾಯ ಮಾರ್ಗ

ಕಾಲ್ಪನಿಕ

ಕೆಲವು ಸರಕಾರೇತರ ಸಂಘಟನೆಗಳು ಮತ್ತು ಪರಿಸರವಾದಿಗಳು ಮೂರ್ತಿಗಳನ್ನು ನದಿಯಲ್ಲಿ ವಿಸರ್ಜನೆ ಮಾಡಿದರೆ ಜಲ ಮಾಲಿನ್ಯವಾಗುತ್ತದೆ ಎಂದು ದೂರುತ್ತಾರೆ ಮತ್ತು ಆ ಮೂರ್ತಿಗಳ ವಿಸರ್ಜನೆಗೆ ಈ ರೀತಿ ಪರ್ಯಾಯ ಸೂಚಿಸುತ್ತಾರೆ…

ಕೃತಕ ಸರೋವರಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಿ

ಎನ್ ಜಿ ವೊ ಅಥವಾ ಸರಕಾರಕ್ಕೆ ಶ್ರೀ ಗಣೇಶನ ಮೂರ್ತಿ ದಾನ ಮಾಡಿ

ಅಮೋನಿಯಂ ಬೈಕಾರ್ಬೋನೇಟ್ ನಲ್ಲಿ ವಿಘಟನೆ

ವಾಸ್ತವ

ದಾನ ನೀಡಿರುವ ಮೂರ್ತಿಗಳನ್ನು ಕಲ್ಲಿನ ಗಣಿಯಲ್ಲಿ ಮತ್ತು ನದಿಯಲ್ಲಿ ಎಸೆದು ಅನಾದರಗೊಳಿಸಲಾಗುತ್ತದೆ.

ವಿಸರ್ಜನೆಯಿಂದ ಆಧ್ಯಾತ್ಮಿಕ ಲಾಭವಾಗುತ್ತದೆ, ಅದೇ ಮೂರ್ತಿ ರಸಾಯನಗಳಲ್ಲಿ ಕರಗಿಸಿದರೆ ಅದು ನಾಶವಾಗುತ್ತದೆ.

ಯಾವುದೇ ದೇವತೆಯ ಮೂರ್ತಿ ದಾನ ಮಾಡುವುದು ಅಥವಾ ಸ್ವೀಕರಿಸುವುದೆಂದರೆ ದೇವತೆಗಳ ಘೋರ ಅಪಮಾನವಾಗಿದೆ, ಏಕೆಂದರೆ ಮನುಷ್ಯರಲ್ಲಿ ದೇವತೆಗಳನ್ನು ದಾನ ನೀಡುವ ಅಥವಾ ದಾನವಾಗಿ ಸ್ವೀಕರಿಸುವ ಕ್ಷಮತೆ ಇರುವುದಿಲ್ಲ.

ಅಧ್ಯಾತ್ಮ ಶಾಸ್ತ್ರಕ್ಕನುಸಾರ ಗಣೇಶ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜಿಸಿ !

ಢೋಂಗಿ ಪರಿಸರವಾದಿಗಳು

ಢೋಂಗಿ ಪರಿಸರವಾದಿಗಳು ವರ್ಷವಿಡೀ ಗಾಢ ನಿದ್ರೆಯಲ್ಲಿದ್ದು ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಅಪಾಯದ ಗಂಟೆ ಬಾರಿಸಲು ಜಾಗೃತರಾಗುತ್ತಾರೆ. ಗಣೇಶೋತ್ಸವದ ಸಮಯದಲ್ಲಿ ಇಂತಹ ಕಥಿತ ಪರಿಸರಪ್ರೇಮಿಗಳಿಗೆ ಜಲ ಮಾಲಿನ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ.

ನಾನು ಪ್ರತಿಜ್ಞೆ ಮಾಡುತ್ತೇನೆ…

1

ಮಣ್ಣು ಮತ್ತು ನೈಸರ್ಗಿಕ ಬಣ್ಣದಿಂದ ತಯಾರಿಸಿದ ಗಣೇಶ ಮೂರ್ತಿಯನ್ನೇ ನಾನು ಮನೆಯಲ್ಲಿ ಕೂರಿಸುತ್ತೇನೆ.

2

ವಿಚಿತ್ರ ರೂಪವಿರುವ ಮತ್ತು ಅತಿ ದೊಡ್ಡ ಗಣೇಶ ಮೂರ್ತಿಯನ್ನು ಕೂರಿಸುವುದಿಲ್ಲ.

3

ಪಾರಂಪಾರಿಕ ಉಡುಪು ಮತ್ತು ಸಾತ್ತ್ವಿಕ ಭಜನೆ ಮತ್ತು ಮಂತ್ರಗಳೊಂದಿಗೆ ಆಚರಿಸುವೆ.

4

ಅಧ್ಯಾತ್ಮಶಾಸ್ತ್ರಕ್ಕನುಸಾರ ಗಣೇಶ ಮೂರ್ತಿಯನ್ನು ಹರಿಯುವ ನೀರಿನಲ್ಲಿ ವಿಸರ್ಜಿಸುತ್ತೇನೆ.

5

ಶ್ರೀ ಗಣೇಶನ ಅಪಮಾನ ಮಾಡುವವರನ್ನು ಕಾನೂನು ಮಾರ್ಗದಲ್ಲಿ ವಿರೋಧಿಸುವೆ.

6

ನಿಜವಾದ ಗಣೇಶ ಭಕ್ತನಾಗಿ ಆದರ್ಶ ಪದ್ಧತಿಯಿಂದ ಗಣೇಶೋತ್ಸವ ಆಚರಿಸುವೆ.

ಗಣೇಶೋತ್ಸವದ ಪಾವಿತ್ರ‍್ಯತೆ ಕಾಪಾಡಲು
ಹಿಂದೂ ಜನಜಾಗೃತಿ ಸಮಿತಿಯ ಅಭಿಯಾನ

ಮಣ್ಣಿನ ಮೂರ್ತಿಗಳನ್ನು ತಯಾರಿಸಲು ಮೂರ್ತಿ ತಯಾರಕರು ಮತ್ತು ಗಣೇಶೋತ್ಸವ ಮಂಡಳಿಗಳಲ್ಲಿ ಜಾಗೃತಿ

ಆದರ್ಶ ಗಣೇಶೋತ್ಸವದ ಬಗ್ಗೆ ಜನಜಾಗೃತಿ ನಿರ್ಮಾಣ ಮಾಡಲು ವ್ಯಾಖ್ಯಾನ ಮತ್ತು ವಿಶೇಷ ಚರ್ಚೆಗಳ ಆಯೋಜನೆ

ಹಿಂದೂ ವಿರೋಧಿ ಪ್ರಚಾರದ ಷಡ್ಯಂತ್ರ ತಡೆಯಲು ಸೋಶಿಯಲ್ ಮೀಡಿಯಾ ಜಾಗೃತಿ ಅಭಿಯಾನ

ಆಧ್ಯಾತ್ಮಿಕ ಮತ್ತು ಶಾಸ್ತ್ರ ಸಂಬಂಧಿ ಮಾಹಿತಿ ನೀಡುವ ಪೋಸ್ಟರ್, ಪ್ರದರ್ಶನಿ, ಕರಪತ್ರಗಳ ವಿತರಣೆ

ಕೃತಕ ಟ್ಯಾಂಕಿನಲ್ಲಿ ಬಿಡುವುದು ಅಥವಾ ಮೂರ್ತಿ ದಾನ ಅಭಿಯಾನದ ಮೇಲೆ ನಿಷೇಧ ಹೇರಲು ಸರಕಾರಿ ಅಧಿಕಾರಿಗಳಿಗೆ ಮನವಿ

ಸಮಿತಿಯು ತಥಾಕಥಿತ ಇಕೋ ಫ್ರೆಂಡ್ಲಿ ಮೂರ್ತಿಗಳ ಬಗ್ಗೆ ಎನ್ ಜಿ ಟಿ ಮತ್ತು ಮಾಲಿನ್ಯ ನಿಯಂತ್ರಣ ಬೋರ್ಡ್ ನಿಂದ ವರದಿ ‌ಕೇಳಿದೆ

ಸಮಿತಿ 2002 ರಿಂದ ಪಿಒಪಿ ಮೂರ್ತಿಗಳ ಮೇಲೆ ನಿಷೇಧ ಹೇರುವ ಹೋರಾಟದಲ್ಲಿ ಮುಂಚೂಣಿಯಲ್ಲಿದೆ.

ಮೂರ್ತಿಗಳ ಶಾಂತಿಯುತ ಮತ್ತು ಸುನಿಯೋಜಿತ ವಿಸರ್ಜನೆ ಮಾಡಲು ಸಮಿತಿಯ ಸ್ವಯಂಸೇವಕರ ಮೂಲಕ ಭಕ್ತರಿಗೆ ಮತ್ತು ಪೊಲೀಸ್ ಆಡಳಿತಕ್ಕೆ ಸಹಾಯ

ಸಮಿತಿಯ ಸ್ವಯಂಸೇವಕರು, ಜನರಿಗೆ ಸಾತ್ತ್ವಿಕ ವಿಸರ್ಜನಾ ಪದ್ಧತಿಯ ಆಯ್ಕೆ ಮಾಡುವಂತೆ ಪ್ರೇರೇಪಿಸುವಲ್ಲಿ ಸಫಲರಾಗಿದ್ದಾರೆ

ಆದರ್ಶ ಗಣೇಶೋತ್ಸವ ಆಚರಣೆ ಹೇಗೆ ?

ಹೀಗೆ ಮಾಡಿರಿ !

  • ಸಾತ್ತ್ವಿಕ ಮತ್ತು ನೈಸರ್ಗಿಕ ಸಾಮಗ್ರಿಗಳಿಂದ ಅಲಂಕಾರ ಮಾಡಿ.
  • ಧರ್ಮಶಾಸ್ತ್ರಕ್ಕನುಸಾರ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣದಿಂದ ಮಾಡಿದ ಮೂರ್ತಿ ಖರೀದಿಸಿ.
  • ಭಕ್ತಿಪೂರ್ವಕವಾಗಿ ಆರತಿಗಳನ್ನು ಹಾಡಿರಿ ಹಾಗೂ ಪ್ರಾರ್ಥನೆ ಮತ್ತು ನಾಮಜಪ ಮಾಡಿರಿ.
  • ನಾಮಜಪ ಮತ್ತು ಭಾವ ಜೋಡಿಸಿ ಪ್ರಸಾದ ತಯಾರಿಸಿ.
  • ನಾಮಜಪ ಮಾಡುತ್ತಾ ವಿಸರ್ಜನಾ ಶೋಭಾಯತ್ರೆ ನಡೆಸಿರಿ, ಸಮಯದಲ್ಲಿ ಆರಂಭವಾಗಲಿ ಮತ್ತು ಮುಗಿಯಲಿ
  • ಮೂರ್ತಿಯ ವಿಸರ್ಜನೆ ಹರಿಯುವ ನೀರಿನಲ್ಲಿ ಮಾಡಿರಿ.

ಈ ರೀತಿ ಮಾಡಬೇಡಿ !

  • ದುಬಾರಿ ಲೈಟಿಂಗ್ ಮತ್ತು ಥರ್ಮಕೋಲ್ ನ ಅಲಂಕಾರ
  • ಪ್ಲಾಸ್ಟರ್ ಆಫ್ ಪ್ಯಾರೀಸ್, ವಿಶಾಲ ಆಕಾರ, ವಿಚಿತ್ರ ಉಡುಪು, ತೆಂಗಿನ ಚಿಪ್ಪುಗಳು, ಬಾಳೆಹಣ್ಣು, ಪಾತ್ರೆ ಮುಂತಾದ ವಸ್ತುಗಳಿಂದ ತಯಾರಿಸಿದ ಮೂರ್ತಿಗಳು
  • ಆರತಿಯ ಸಮಯದಲ್ಲಿ ತಮಾಷೆ, ಉದ್ದದ ಆರತಿಗಳು, ಚಲನಚಿತ್ರ ಹಾಡಿನ ರಾಗದ ಆರತಿ
  • ಪ್ರಸಾದ ತಯಾರಿಸುವಾಗ ಅನಾವಶ್ಯಕ ಮಾತು
  • ಶೋಭಾಯಾತ್ರೆಯ ಸಮಯದಲ್ಲಿ ಮದ್ಯ ಸೇವನೆ, ತಮೋಗುಣಿ ಹಾಡುಗಳು, ಬಲವಂತವಾಗಿ ಬಣ್ಣ ಎರಚುವುದು, ತಡ ರಾತ್ರಿಯವರೆಗೆ ವಿಸರ್ಜನೆ
  • ಮೂರ್ತಿ ದಾನ, ಅಮೋನಿಯಂ ಕಾರ್ಬೋನೇಟ್ ನಲ್ಲಿ ವಿಸರ್ಜನೆ, ಮೂರ್ತಿಗಳನ್ನು ನಾಲೆಗಳಲ್ಲಿ ಎಸೆಯುವುದು

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು

ಶ್ರೀ ಗಣಪತಿಯ ಮೂರ್ತಿಯಲ್ಲಿ ಚೈತನ್ಯವಿರುವುದರಿಂದ ಅದು ನೀರನ್ನು ಶುದ್ಧಗೊಳಿಸುತ್ತದೆ, ಹರಿಯುವ ನೀರಿನಿಂದ ಈ ಚೈತನ್ಯ ದೂರದವರೆಗೆ ತಲುಪುತ್ತದೆ ಮತ್ತು ಅನೇಕ ಜನರಿಗೆ ಅದರ ಲಾಭವಾಗುತ್ತದೆ. ಈ ನೀರು ಬಿಸಿಲಿಗೆ ಆವಿಯಾಗುವಾಗ ಸುತ್ತಲಿನ ಪರಿಸರವೂ ಸಾತ್ತ್ವಿಕಗೊಳ್ಳುತ್ತದೆ.

ಶ್ರೀ ಗಣೇಶನ ಮೂರ್ತಿಯನ್ನು ಹರಿಯುವ ನೀರಿನಲ್ಲಿ ಅಥವಾ ಜಲಾಶಯದಲ್ಲಿ ವಿಸರ್ಜಿಸಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಕೆಲವರು ಮೂರ್ತಿ ವಿಸರ್ಜನೆಯಿಂದ ಜಲಮಾಲಿನ್ಯ ಇತ್ಯಾದಿಗಳಿಗೆ ಕಾರಣ ಎಂದು ಹೇಳುತ್ತಾರೆ. ಈ ಸಮಸ್ಯೆ ಪರಿಹರಿಸಲು, ಕೆಲವು ಹಿಂದೂ ವಿರೋಧಿಗಳು ಮೂರ್ತಿಯನ್ನು ಮುಳುಗಿಸುವ ಬದಲು ದಾನ ಮಾಡುವಂತೆ ಹಾಸ್ಯಾಸ್ಪದ ಕರೆ ನೀಡುತ್ತಾರೆ. ಮೂರ್ತಿಯನ್ನು ದಾನ ಮಾಡುವುದು ಅವೈಜ್ಞಾನಿಕ ಮಾತ್ರವಲ್ಲದೆ ಗಣಪತಿಗೆ ಮಾಡಿದ ಅವಮಾನವೇ ಆಗಿದೆ. ಮೂರ್ತಿ ದಾನ ಅವೈಜ್ಞಾನಿಕ ಎನ್ನುವುದಕ್ಕೆ ಈ ಕೆಳಗಿನ ಕಾರಣಗಳಿವೆ.

  • ಭಾದ್ರಪದ ಮಾಸದ ಶ್ರೀ ಗಣೇಶ ಚತುರ್ಥಿಯಂದು ಸ್ಥಾಪಿಸಿದ ಮೂರ್ತಿಯನ್ನು ವಿಸರ್ಜಿಸುವುದು ಧರ್ಮಗ್ರಂಥಗಳಿಗನುಸಾರ ಒಂದು ಧಾರ್ಮಿಕ ಅನುಷ್ಠಾನವಾಗಿದೆ.

  • ಯಾವುದೇ ದೇವತೆಯನ್ನು ದಾನವಾಗಿ ನೀಡುವುದು ಅಥವಾ ದೇವತೆಯನ್ನು ದಾನವೆಂದು ಸ್ವೀಕರಿಸುವುದು ದೇವರಿಗೆ ಘೋರವಾದ ಅವಮಾನವಾಗಿದೆ, ಏಕೆಂದರೆ ಮನುಷ್ಯರಿಗೆ ದೇವರನ್ನು ದಾನ ನೀಡುವ ಅಥವಾ ಅವರನ್ನು ದಾನವೆಂದು ಸ್ವೀಕರಿಸುವ ಸಾಮರ್ಥ್ಯವಿಲ್ಲ.

  • ನಮ್ಮ ಇಚ್ಛೆಯಂತೆ ಬಳಸಿ ಬೇಡವಾದಾಗ ದಾನ ಮಾಡಲು ಮೂರ್ತಿಯು ಆಟಿಕೆ ಅಥವಾ ಶೋಪೀಸ್ ವಸ್ತುವಲ್ಲ.

ಕೆಲವು ಪ್ರದೇಶಗಳಲ್ಲಿ ಮುಳುಗಲು ಸಾಕಷ್ಟು ನೀರು ಇರುವ ಜಲಾಶಯಗಳಿಲ್ಲ. ಇನ್ನು ಕೆಲವೆಡೆ ಜಲಮೂಲಗಳೆಲ್ಲ ಕಲುಷಿತಗೊಂಡಿದ್ದು, ಮೂರ್ತಿ ವಿಸರ್ಜನೆಗೆ ಅಯೋಗ್ಯವಾಗಿದೆ. ಅದೇ ರೀತಿ ರೋಗ ಅಥವಾ ಆಪತ್ತುಗಳಿಂದ ಕೆಲವೆಡೆ ಮೂರ್ತಿ ವಿಸರ್ಜನೆ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಈ ಕೆಳಗಿನ ಎರಡು ವಿಧಾನಗಳಲ್ಲಿ ಅನುಸರಿಸಬಹುದು :

  • ಮೂರ್ತಿಯ ಪ್ರತಿಷ್ಠಾಪನೆಯ ಬದಲು ಅಡಿಕೆಯನ್ನಿಟ್ಟು ಅದನ್ನು ಶ್ರೀ ಗಣಪತಿ ಎಂಬ ಭಾವದಿಂದ ಸಾಂಕೇತಿಕವಾಗಿ ಪೂಜಿಸಿ. ಅಡಿಕೆಯನ್ನು ಯಾವುದಾದರೂ ಸಣ್ಣ ಬಾವಿ ಅಥವಾ ಹೊಳೆಯಲ್ಲಿ ವಿಸರ್ಜಿಸಬಹುದು.
  • ಚತುರ್ಥಿ ಹಬ್ಬಕ್ಕೆ ಶ್ರೀ ಗಣಪತಿಯ ಹೊಸ ಲೋಹದ ವಿಗ್ರಹವನ್ನು ಖರೀದಿಸಿ ಮತ್ತು ಅದನ್ನು ಪ್ರತಿಷ್ಠಾಪಿಸಿದ ನಂತರ ಪೂಜಿಸಿ. ದೈನಂದಿನ ಪೂಜೆಯಲ್ಲಿ ಗಣೇಶನ ಮೂರ್ತಿ ಖಂಡಿತವಾಗಿಯೂ ಇರುತ್ತದೆ, ಆದರೆ ಹೊಸ ಮೂರ್ತಿ ತರಲು ಕಾರಣ ಹೀಗಿದೆ – ಶ್ರೀ ಗಣೇಶ ಚತುರ್ಥಿಯಂದು, ಗಣೇಶ ತತ್ತ್ವ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯೆಡೆಗೆ ಬರುತ್ತದೆ. ನಮ್ಮ ನಿತ್ಯದ ಪೂಜೆಯಲ್ಲಿ ಅದು ಆಕರ್ಷಿತವಾದರೆ ಮೂರ್ತಿಯು ಅತ್ಯಂತ ಶಕ್ತಿಯಿಂದ ತುಂಬುತ್ತದೆ. ವರ್ಷವಿಡೀ ಕಟ್ಟುನಿಟ್ಟಿನ ಆಚರಣೆಗಳೊಂದಿಗೆ ಅಪಾರ ಪ್ರಮಾಣದ ಶಕ್ತಿ ಹೊಂದಿರುವ ಮೂರ್ತಿಯನ್ನು ಪೂಜಿಸುವುದು ಕಷ್ಟಕರವಾಗುತ್ತದೆ; ಏಕೆಂದರೆ ಇದಕ್ಕಾಗಿ ಕಟ್ಟುನಿಟ್ಟಿನ ಆಚರಣೆಗಳ ನಿಯಮಗಳನ್ನು ಪಾಲಿಸಬೇಕು. ಆದ್ದರಿಂದ, ಹೊಸ ಲೋಹದ ಮೂರ್ತಿಯನ್ನು ಖರೀದಿಸಬೇಕು. ಅಂತಹ ವಿಗ್ರಹವನ್ನು ವಾಸ್ತವವಾಗಿ ನೀರಿನಲ್ಲಿ ಮುಳುಗಿಸುವ ಅಗತ್ಯವಿಲ್ಲ. ವಿಸರ್ಜನೆ ಸಮಯದಲ್ಲಿ, ಮೂರ್ತಿಯ ಅಂಗೈಯಲ್ಲಿ ಸ್ವಲ್ಪ ಅಕ್ಷತೆ ಇರಿಸಿ ಮತ್ತು ಬಲಗೈಯಿಂದ ಮೂರ್ತಿಯನ್ನು ಸ್ವಲ್ಪ ತಿರುಗಿಸಿ. ಇದರಿಂದ ಮೂರ್ತಿಯಲ್ಲಿನ ತತ್ತ್ವಗಳು ವಿಸರ್ಜನೆಗೊಳ್ಳುತ್ತವೆ. ಆ ಮೂರ್ತಿಯನ್ನು ಪ್ರತಿನಿತ್ಯ ಪೂಜಿಸುವ ಅಗತ್ಯವಿಲ್ಲ. ಮುಂದಿನ ವರ್ಷ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮತ್ತೆ ಪೂಜಿಸಬಹುದು.