Menu Close

ರಾಷ್ಟ್ರಧ್ವಜ ಗೌರವಿಸಿ

ಹಿಂದೂ ಜನಜಾಗೃತಿ ಸಮಿತಿಯ ಅಭಿಯಾನ

ರಾಷ್ಟ್ರಧ್ವಜ

ಗೌರವಿಸಿ

ಹಿಂದೂ ಜನಜಾಗೃತಿ ಸಮಿತಿಯ

ಅಭಿಯಾನ

ರಾಷ್ಟ್ರಧ್ವಜವು ರಾಷ್ಟ್ರದ ಪ್ರತೀಕವಾಗಿದ್ದು ಅದು ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ಇದು ದೇಶದ ಅಭಿಮಾನ ಮತ್ತು ಗೌರವದ ಪ್ರತೀಕವಾಗಿದೆ. ಭಾರತದ ನಾಗರಿಕರು ಆಗಸ್ಟ್ 15 ಮತ್ತು ಜನವರಿ 26 ರಂದು ಎಲ್ಲೆಲ್ಲಿ ಸಾಧ್ಯವೊ ಅಲ್ಲಿ ಅಭಿಮಾನದಿಂದ ಧ್ವಜವನ್ನು ಹಾರಿಸಿ ರಾಷ್ಟ್ರದ ಮೇಲಿನ ತಮ್ಮ ಪ್ರೀತಿ ಮತ್ತು ಗೌರವ ತೋರಿಸುತ್ತಾರೆ. ದೌರ್ಭಾಗ್ಯವೆಂದರೆ ಈ ಗೌರವ ಸ್ವಲ್ಪ ಸಮಯವೆ ಉಳಿಯುತ್ತದೆ. ಸಂಜೆ ಹೊತ್ತಿಗೆ ಅದೇ ಧ್ವಜಗಳು ಕಸದ ಬುಟ್ಟಿಯಲ್ಲಿ ಅಥವಾ ಕೊಳವೆಪೈಪ್ಗಳಲ್ಲಿ ಕಾಣುತ್ತವೆ, ನಾವು ರಸ್ತೆಯಲ್ಲಿ ಈ ದ್ವಜಗಳನ್ನು ತುಳಿಯುವುದು ಕೂಡ ನೋಡುತ್ತೇವೆ. ಜನರು ಇದು ರಾಷ್ಟ್ರಧ್ವಜದ ಅಪಮಾನವೆಂದು ಮರೆತುಬಿಡುತ್ತಾರೆ. ಅನೇಕ ಬಾರಿ ಧ್ವಜಗಳನ್ನು ಕಸದ ಜೊತೆಗೆ ಸುಡಲಾಗುತ್ತದೆ. ಪ್ರತಿಯೊಬ್ಬ ನಾಗರೀಕನು ನಮ್ಮ ಧ್ವಜದ ಕುರಿತು ಯೋಗ್ಯ ಅಭಿಮಾನವನ್ನಿಡಬೇಕು. ಎರಡು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ, ಹಿಂದೂ ಜನಜಾಗೃತಿ ಸಮಿತಿ ‘ರಾಷ್ಟ್ರಧ್ವಜ ಗೌರವಿಸಿ’ ಈ ಅಭಿಯಾನದ ಮೂಲಕ ಜನರನ್ನು ಜಾಗೃತಗೊಳಿಸಲು ಬೇರೆ ಬೇರೆ ಮಾಧ್ಯಮಗಳನ್ನು ಉಪಯೋಗಿಸುತ್ತಿದೆ. ಸಮಿತಿಯ ನಿರಂತರ ಪ್ರಯತ್ನದಿಂದ ಪ್ಲಾಸ್ಟಿಕ್ ರಾಷ್ಟ್ರ ಧ್ವಜದ ಉತ್ಪಾದನೆ ಶೇಕಡ 95 ರಷ್ಟು ಕಡಿಮೆ ಮಾಡುವಲ್ಲಿ ಮತ್ತು ಧ್ವಜಗಳ ಅವಮಾನ ತಡೆಯುವಲ್ಲಿ ಯಶಸ್ವಿಯಾಗಿದೆ.

ತಮಗಾಗಿ ಧ್ವಜ ಸಂಹಿತೆ ಸರಳ ಭಾಷೆಯಲ್ಲಿ..

ಈ ರೀತಿ ಮಾಡಿ !

ಧ್ವಜವನ್ನು ಎತ್ತರದ ಸ್ಥಾನದಲ್ಲಿ ಇಡಬೇಕು ಮತ್ತು ಸುರಕ್ಷಿತವಾಗಿ ಇಡಬೇಕು.
ಧ್ವಜವನ್ನು ಯೋಗ್ಯ ಸಮಯದಲ್ಲಿ ಹಾರಿಸಿರಿ ಹಾಗೂ ನಿಧಾನವಾಗಿ ಮತ್ತು ನಿಯಮದಂತೆ ಇಳಿಸಿರಿ.
ಧ್ವಜವನ್ನು ಎತ್ತರದಲ್ಲಿ ಮತ್ತು ಯೋಗ್ಯ ರೀತಿಯಲ್ಲಿ ಹಾರಿಸಿರಿ.
ಧ್ವಜ ಹಾರಿಸುವುದು ಮತ್ತು ಇಳಿಸುವಾಗ ಧ್ವಜದ ಕಡೆಗೆ ಮುಖ ಮಾಡಿ ಸಾವಧಾನ ಸ್ಥಿತಿಯಲ್ಲಿ ನಿಲ್ಲಿರಿ.
ಧ್ವಜ ತಲೆಕೆಳಗಾಗದಂತೆ ಮತ್ತು ಹರಿಯದಂತೆ ನೋಡಿಕೊಳ್ಳಿ.

ಇದನ್ನು ಮಾಡದಿರಿ !

ಮಕ್ಕಳಿಗೆ ರಾಷ್ಟ್ರೀಯ ಧ್ವಜ ಆಟಿಕೆಯಾಗಿ ಉಪಯೋಗಿಸಲು ನೀಡಬೇಡಿ.
ಪ್ಲಾಸ್ಟಿಕ್ ಧ್ವಜವನ್ನು ಖರೀದಿಸದಿರಿ ಮತ್ತು ಅದನ್ನು ಉಪಯೋಗಿಸಬೇಡಿ.
ಶರ್ಟ್ ನ ಕಿಸೆ ಮತ್ತು ಇತರೆಡೆಗಳಲ್ಲಿ ಪಿನ್ ಹಾಕಿ ಧ್ವಜವನ್ನು ಉಪಯೋಗಿಸಬೇಡಿರಿ
ಧ್ವಜವನ್ನು ಬ್ಯಾನರ್ ಅಥವಾ ಅಲಂಕಾರಕ್ಕಾಗಿ ಉಪಯೋಗಿಸಬೇಡಿ.
ಧ್ವಜವನ್ನು ಬಟ್ಟೆ ಅಥವಾ ಸಮವಸ್ತ್ರದ ರೂಪದಲ್ಲಿ ಉಪಯೋಗಿಸಬೇಡಿ ಮತ್ತು ನೆಲದಲ್ಲಿ ಬೀಳದಂತೆ ನೋಡಿಕೊಳ್ಳಿ.

ತ್ರಿವರ್ಣ ಧ್ವಜದ ಅವಮಾನದ ಉದಾಹರಣೆ

ನೀವು ಯಾವುದಾದರೂ ವ್ಯಕ್ತಿ ಅಥವಾ ಸಂಸ್ಥೆ ರಾಷ್ಟ್ರಾಧ್ವಜವನ್ನು ಅವಮಾನಿಸುತ್ತಿರುವುದನ್ನು ನೋಡಿದರೆ, ಅವರಿಗೆ ಇದರ ಬಗ್ಗೆ ಎಚ್ಚರಿಸಿ ಮತ್ತು ತಕ್ಷಣವೇ ಅವರ ವಿರುದ್ಧ ದೂರು ದಾಖಲಿಸಿ. ಗಮನದಲ್ಲಿಡಿ ರಾಷ್ಟ್ರಧ್ವಜದ ಅಪಮಾನವೆಂದರೆ ಒಂದು ಅಪರಾಧವಾಗಿದೆ, ಅದಕ್ಕಾಗಿ ಜೈಲು ಶಿಕ್ಷೆಯೂ ಆಗಬಹುದು.

ಟಿಪ್ಪಣಿ : ಈ ಚಿತ್ರ ಕೇವಲ ಜನಜಾಗೃತಿಗಾಗಿ ಪೋಸ್ಟ್ ಮಾಡಲಾಗಿದೆ, ಯಾರದೇ ಭಾವನೆಗೆ ಧಕ್ಕೆ ತರುವುದಕ್ಕಲ್ಲ.

ಹಿಂದೂ ಜನಜಾಗೃತಿ ಸಮಿತಿಯ ‘ರಾಷ್ಟ್ರಧ್ವಜ ಗೌರವಿಸಿ’ ಅಭಿಯಾನ

2011 ರಲ್ಲಿ ಸಮಿತಿಯು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ತದನಂತರ ಕೋರ್ಟ್ ಸರಕಾರಕ್ಕೆ ಪ್ಲಾಸ್ಟಿಕ್ ಧ್ವಜದ ಮೇಲೆ ನಿಷೇಧ ಹೇರಲು ಆದೇಶ ನೀಡಬೇಕೆಂದು ಹೇಳಿತ್ತು.

ನ್ಯಾಯಾಲಯವು ಸರಕಾರಕ್ಕೆ ಖಾಸಗಿ ಸಂಘಟನೆಗಳ ಜೊತೆಗೆ (ಎನ್ ಜಿ ವೊ) ಕಾರ್ಯಕ್ಕೆ ಮತ್ತು ಧ್ವಜದ ಅವಮಾನ ತಡೆಯಲು ಒಂದು ಕಾರ್ಯಸಮಿತಿಯನ್ನು ರಚಿಸಲು ಆದೇಶ ನೀಡಿತ್ತು.

ಧ್ವಜದ ಗೌರವ ಕಾಪಾಡುವುಂತೆ ಜಾಗೃತಿ ಮೂಡಿಸಲು ಸಮಿತಿಯು ಪ್ರವಚನ, ಪ್ರಶ್ನಾವಳಿಗಳ ಆಯೋಜನೆ, ಕರಪತ್ರ ವಿತರಣೆ, ಪೋಸ್ಟರ್ ಹಚ್ಚುವುದು ಮುಂತಾದ ಕಾರ್ಯ ಮಾಡುತ್ತಿದೆ.

ಸಮಿತಿಯು ಶಾಲೆ-ಕಾಲೇಜುಗಳಲ್ಲಿ, ಜನಪ್ರತಿನಿಧಿಗಳಿಗೆ, ಪೊಲೀಸ್ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಮನವಿ ನೀಡುತ್ತಿದೆ.

ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ಜಾಗೃತಿ ಮೂಡಿಸಲು ಸಮಿತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವಚನಗಳು ಮತ್ತು ಪ್ರಶ್ನೋತ್ತರಗಳನ್ನು ಆಯೋಜಿಸುತ್ತದೆ.

ಸಮಿತಿಯ ಕಾರ್ಯಕರ್ತರು ಆಗಸ್ಟ್ 15 ಮತ್ತು ಜನವರಿ 26 ನಂತರ ಬಿಸಾಡುವ ಧ್ವಜಗಳನ್ನು ಒಟ್ಟುಗೂಡಿಸುತ್ತಾರೆ ಮತ್ತು ಇಂತಹ ಧ್ವಜಗಳನ್ನು ಸರಕಾರಕ್ಕೆ ಒಪ್ಪಿಸುತ್ತಾರೆ.

ಸಮಿತಿಯು ಸಕ್ರಿಯವಾಗಿ ರಾಷ್ಟ್ರೀಯ ಧ್ವಜದ ಚಿತ್ರವಿರುವ ಮಾಸ್ಕ್ ಬಟ್ಟೆ ಮತ್ತು ಇತರ ವಸ್ತುಗಳನ್ನು ಮಾರುವ ಈ-ಕಾಮರ್ಸ್ ವೆಬ್ಸೈಟ್ ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಒತ್ತಾಯಿಸುತ್ತಿದೆ.

ಹಿಂದೂ ಜನಜಾಗೃತಿ ಸಮಿತಿ ಹೆಚ್ಚೆಚ್ಚು ಜನರವರೆಗೆ ತಲುಪಲು ಬೇರೆ ಬೇರೆ ದಿನಪತ್ರಿಕೆ, ಸಾಪ್ತಾಹಿಕ ಪತ್ರಿಕೆ , ವೆಬ್ ಸೈಟ್ ನಲ್ಲಿ ಲೇಖನ ಪ್ರಕಾಶಿಸುತ್ತದೆ. ಕೆಲವು ರೇಡಿಯೋ ಸ್ಟೇಷನ್ ಗಳೂ ಈ ಜಾಗೃತಿ ಪರ ಕಾರ್ಯದಲ್ಲಿ ಸಮಿತಿಯೊಂದಿಗೆ ಕೈಜೋಡಿಸಿವೆ.

ಬಟ್ಟೆ, ಪ್ರಿಂಟ್ ಅಥವಾ ಅನ್ಯ ಮಾಧ್ಯಮ, ಜಾಹೀರಾತು ಮುಂತಾದರ ಮೂಲಕ ರಾಷ್ಟ್ರ ಧ್ವಜದ ಅವಮಾನ ಮಾಡುವವರ ಮೇಲೆ ಸಮಿತಿಯು ದೂರು ದಾಖಲಿಸುತ್ತದೆ.

ನಾನು ಪ್ರತಿಜ್ಞೆ ಮಾಡುತ್ತೇನೆ …

ಧ್ವಜವನ್ನು ವಾಹನದ ಮೇಲೆ ಹಾರಲು ಬಿಡುವುದಿಲ್ಲ.
ಸ್ಕ್ರೀನ್ ನಂತೆ ಧ್ವಜವನ್ನು ಉಪಯೋಗಿಸುವುದಿಲ್ಲ
ರಾಷ್ಟ್ರಧ್ವಜದ ಮೇಲೆ ಏನನ್ನು ಬರೆಯುಲು ಮತ್ತು ಮುದ್ರಿಸಲು ಬಿಡುವುದಿಲ್ಲ.
ಧ್ವಜವನ್ನು ಯಾವುದೇ ಉಡುಪು ಅಥವಾ ಕರವಸ್ತ್ರ, ಮಾಸ್ಕ್, ನೆಪ್ಕಿನ್, ತಲೆದಿಂಬು, ಕಾಲು ಒರೆಸುವ ಮ್ಯಾಟ್ ಇವುಗಳ ಮೇಲೆ ಮುದ್ರಿಸಲು ಬಿಡುವುದಿಲ್ಲ.
ರಾಷ್ಟ್ರೀಯ ಧ್ವಜವನ್ನು ಮಡಚಿ ಹರಿದು ಹೋಗದಂತೆ, ತುಳಿಯದಂತೆ ಗಮನವಹಿಸುವೆ.
ಯಾವುದೇ ಜಾಹಿರಾತಿನಲ್ಲಿ ಧ್ವಜವನ್ನು ಉಪಯೋಗಿಸದಂತೆ ಹಾಗೂ ಯಾವುದೇ ಜಾಹೀರಾತು ಧ್ವಜದ ಕಂಬಕ್ಕೆ ಕಟ್ಟದಂತೆ ಗಮನ ಇರಿಸುವೆ.
ಹಾಳಾದ ದ್ವಜಗಳನ್ನು ಒಟ್ಟುಗೂಡಿಸಿ ಗೌರವದಿಂದ ವಿಲೇವಾರಿಗಾಗಿ ಸರಕಾರದ ಬಳಿ ನೀಡುವೆ.

ಹಿಂದೂ ಜನಜಾಗೃತಿ ಸಮಿತಿಯ ಪೋಸ್ಟರ್ ಪ್ರದರ್ಶನ

ಭಾರತೀಯ ಸ್ವಾತಂತ್ರ‍್ಯ ಹೋರಾಟದಲ್ಲಿ ತಿಳಿದಿರುವ, ತಿಳಿಯದಿರುವ ವೀರ ಪುರುಷರ ಪ್ರೇರಣಾದಾಯಕ ಕಥೆಗಳನ್ನು ಪ್ರತಿಯೊಬ್ಬ ಭಾರತೀಯನವರೆಗೆ ತಲುಪಿಸಲು ನಿಮ್ಮ ನಿಮ್ಮ ಏರಿಯಾಗಳಲ್ಲಿ ಪೋಸ್ಟರ್ ಪ್ರದರ್ಶನ ಆಯೋಜನೆಗಾಗಿ ನಮಗೆ ಸಹಾಯ ಮಾಡಿರಿ.

: +91 9343017001

ಧ್ವಜದ ವಿಕಾಸ

ಭಾರತೀಯ ಧ್ವಜ ಸಂಹಿತೆ, 2002

ನಿರ್ಮಾಣ ಪ್ರಕ್ರಿಯೆ
ಧ್ವಜಕ್ಕೆ ಗೌರವ
ಧ್ವಜದ ರಕ್ಷಣೆ
ಯೋಗ್ಯವಾಗಿ ಪ್ರದರ್ಶಿಸುವುದು
ಯಾವುದೇ ಕಟ್ಟಡದೊಳಗೆ ಧ್ವಜವನ್ನು ಪ್ರದರ್ಶಿಸದಿರುವುದು
ಧ್ವಜ ಅರ್ಧಕ್ಕೆ ಇಳಿಸುವುದು
ಪರೇಡ್ ಮತ್ತು ಸಮಾರಂಭಕ್ಕೆ
ಅಭಿವಂದನೆ
ವಾಹನದ ಮೇಲೆ ಹಾಕದಿರುವುದು
ಅವರೋಹಣ
ಅಯೋಗ್ಯ ಉಪಯೋಗವನ್ನು ತಡೆಯುವುದು
ಅವಮಾನ ತಡೆಯುವುದು

ವಿವರವಾಗಿ ಓದಿ !

ನಮ್ಮ ಮಹಾನ್ ಕ್ರಾಂತಿಕಾರಿಗಳು ನಮಗೆ ತಂದುಕೊಟ್ಟಿರುವ ಸ್ವರಾಜ್ಯವನ್ನು ಸುರಾಜ್ಯವನ್ನಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಮತ್ತು ಮಕ್ಕಳಲ್ಲಿ ಅಭಿಮಾನವನ್ನು ಹೆಚ್ಚಿಸಲು ಮಾರ್ಗದರ್ಶನ ಪಡೆಯಲು ಈ ಪುಸ್ತಕಗಳನ್ನು ತಪ್ಪದೇ ಖರೀದಿಸಿ !