Menu Close

ಕೋಟಿಗಟ್ಟಲೆ ಪ್ರಯಾಣಿಕರನ್ನು ಲೂಟಿ ಮಾಡುತ್ತಿರುವ ಪ್ರವಾಸಿ ಆಪ್ ವಿರುದ್ಧ ವಿತ್ತೀಯ ದಂಡದೊಂದಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ! – ‘ಸುರಾಜ್ಯ ಅಭಿಯಾನ’ದ ಆಗ್ರಹ

‘ಸುರಾಜ್ಯ ಅಭಿಯಾನ’ಕ್ಕೆ ಯಶಸ್ಸು: ಅಕ್ರಮ ಪ್ರಯಾಣಿಕರ ಆಪ್ ಬಂದ್ ಮಾಡಲು ಸಾರಿಗೆ ಇಲಾಖೆ ಸೂಚನೆ !

‘ಮೇಕ್ ಮೈ ಟ್ರಿಪ್’, ‘ರೆಡ್ ಬಸ್’, ‘ಗೋಯಿಬಿಬೋ’, ‘ಸವಾರಿ’, ‘ಇನ್ ಡ್ರೈವ್’, ‘ರ್ಯಾಪಿಡೋ’, ‘ಕ್ವಿಕ್ ರೈಡ್’, ‘ರ್ಯಾಪಿಡೋ’ ನಂತಹ ೧೮ ಖಾಸಗಿ ಪ್ರವಾಸಿ ಆಪ್‌ಗಳು ಕೇಂದ್ರ ಸರಕಾರದ ಅನುಮತಿ ಪಡೆಯದೆ ಅಗ್ರಿಗೇಟರ್‌ನ ವ್ಯವಹಾರ ನಡೆಸುತ್ತಿವೆ. ಅವುಗಳನ್ನು ಬಂದ್ ಮಾಡುವಂತೆ ಪುಣೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಾರ್ಚ್ ೬, ೨೦೨೪ ರಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯು ‘ಸುರಾಜ್ಯ ಅಭಿಯಾನ’ದ ವತಿಯಿಂದ ಕಳೆದ ೪ ವರ್ಷಗಳಿಂದ ಬೆಂಬತ್ತುವಿಕೆ ಮಾಡಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವ ಈ ಟ್ರಾವೆಲ್ ಆಪ್‌ಗಳು ಮತ್ತು ಟ್ರಾವೆಲ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕ ಆಂದೋಲನಗಳು ನಡೆಸಿದವು ಮತ್ತು ದೂರುಗಳು ನೀಡಿವೆ; ಅನಂತರ ಕೇವಲ ಅಪ್ಲಿಕೇಶನ್ ಅನ್ನು ಮುಚ್ಚುವ ಅಧಿಸೂಚನೆಯನ್ನು ನೀಡಲಾಗಿದೆ. ಕೋಟಿಗಟ್ಟಲೆ ಪ್ರಯಾಣಿಕರನ್ನು ಲೂಟಿ ಮಾಡುತ್ತಿರುವ ಈ ಅಕ್ರಮ ಅಗ್ರಿಗೇಟರ್ ಆಪ್ ವಿರುದ್ಧ ಈ ಕ್ರಮ ಸಾಕಾಗುವುದಿಲ್ಲ. ಈ ಕಂಪನಿಗಳ ಭಾರೀ ಲೂಟಿಯ ಬಗ್ಗೆ ವಿಶೇಷ ಲೆಕ್ಕಪರಿಶೋಧನೆ ನಡೆಸಿ, ಈ ಕಂಪನಿಗಳಿಗೆ ಭಾರೀ ಆರ್ಥಿಕ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ಸಮನ್ವಯಕ ಶ್ರೀ. ಅಭಿಷೇಕ ಮುರುಕಟೆ ಇವರು ಕೇಂದ್ರ ಹಾಗೂ ರಾಜ್ಯ ಸರಕಾರದ ಬಳಿ ಆಗ್ರಹಿಸಿದ್ದಾರೆ.
‘ಮೋಟಾರು ವಾಹನ ಕಾಯಿದೆ ೧೯೮೮’ ರ ಸೆಕ್ಷನ್ ೯೩ (೧) ರ ನಿಬಂಧನೆಗಳ ಪ್ರಕಾರ, ಆಪ್ ಮತ್ತು ವೆಬ್‌ಸೈಟ್‌ಗಳ ಮೂಲಕ ಪ್ರಯಾಣಿಕರ ಸಾರಿಗೆ ವ್ಯವಹಾರವನ್ನು ನಡೆಸಲು ಕೇಂದ್ರ ಸರಕಾರದ ಮಾರ್ಗಸೂಚಿಗಳಿಗೆ ಒಳಪಟ್ಟಿರುವ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಅಗತ್ಯವಿದೆ; ಆದರೆ, ಈ ರೀತಿ ಮಾಡದೆ ವರ್ಷಗಳೇ ಅಕ್ರಮ ವ್ಯವಸಾಯ ನಡೆಯುತ್ತಿದೆ. ಪುಣೆ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ೧೮ ಆಪ್ ಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸಾರಿಗೆ ಆಯುಕ್ತರು ಮತ್ತು ರಾಜ್ಯದ ಸೈಬರ್ ಸೆಲ್‌ನ ವಿಶೇಷ ಪೊಲೀಸ್ ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಮೂಲತಃ, ಈ ಅಗ್ರಿಗೇಟರ್ ಅಪ್ಲಿಕೇಶನ್‌ಗಳು ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ವಂಚನೆ ಮಾಡಿವೆ. ಹೀಗಾಗಿ ದೇಶಾದ್ಯಂತ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಲ್ಲದೇ ಇದುವರೆಗೆ ಅಕ್ರಮವಾಗಿ ಎಷ್ಟು ರೂಪಾಯಿ ಸಂಗ್ರಹಿಸಿದೆ ? ಇದರಲ್ಲಿ ಬೇರೆ ಯಾರು ಭಾಗಿಯಾಗಿದ್ದಾರೆ ? ಇದು ’ಮಹದೇವ್ ಬೆಟ್ಟಿಂಗ್ ಆಪ್’ ನಂತಹ ದೊಡ್ಡ ಹಗರಣವೇ ? ಈ ಪ್ರಕರಣವನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದಿಂದ (ಈಡಿಯಿಂದ) ಆಳವಾಗಿ ತನಿಖೆ ನಡೆಸುವಂತೆ ಶ್ರೀ. ಮುರುಕಟ್ಟೆ ಇವರು ಆಗ್ರಹಿಸಿದ್ದಾರೆ.

ಟ್ಯಾಕ್ಸಿ ಅಗ್ರಿಗೇಟರ್ ಅಪ್ಲಿಕೇಶನ್ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ; ‘ಆನ್‌ಲೈನ್’ ಬಸ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಮೇಲೆ ಯಾವಾಗ ಕ್ರಮ ತೆಗೆದುಕೊಳ್ಳಲಾಗುವುದು ?
ಈ ಕ್ರಮವನ್ನು ಟ್ಯಾಕ್ಸಿ ಅಗ್ರಿಗೇಟರ್ ಅಪ್ಲಿಕೇಶನ್‌ನಲ್ಲಿ ಮಾತ್ರ ತೆಗೆದುಕೊಳ್ಳಲಾಗಿದೆ. ಅದೇ ರೀತಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮವು ‘ರೆಡ್‌ಬಸ್’ ಅಪ್ಲಿಕೇಶನ್ ಸೇರಿದಂತೆ ಇತರ ಎರಡು ಆನ್‌ಲೈನ್ ಅಪ್ಲಿಕೇಶನ್‌ಗಳೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದೆ. ೨೦೧೮ ರಲ್ಲಿ, ಮುಂಬಯಿ ಉಚ್ಚ ನ್ಯಾಯಾಲಯದ ಆದೇಶದಂತೆ, ಮಹಾರಾಷ್ಟ್ರವು ಸರಕಾರಿ ಸಾರಿಗೆ ಸೇವೆಯ ಒಂದೂವರೆ ಪಟ್ಟು ಹೆಚ್ಚು ಬಾಡಿಕೆ ಶುಲ್ಕವನ್ನು ವಿಧಿಸಲು ಅನುಮತಿ ನೀಡಿತು, ಆನ್‌ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳು ಮತ್ತು ಖಾಸಗಿ ಟ್ರಾವೆಲ್ ಕಂಪನಿಗಳು ಕಾನೂನುಬಾಹಿರವಾಗಿ ಅಧಿಕ ಶುಲ್ಕ ವಿಧಿಸುವ ಮೂಲಕ ಪ್ರಯಾಣಿಕರನ್ನು ೫ ವರ್ಷಗಳ ಕಾಲ ದೋಚಿದವು. ಆದರೆ ಆನ್‌ಲೈನ್‌ನಲ್ಲಿ ಬಸ್ ಟಿಕೆಟ್ ಕಾಯ್ದಿರಿಸುವವರ ಮೇಲೆ ಈ ಕ್ರಮ ಯಾವಾಗ ? ಪ್ರಯಾಣಿಕರ ಆರ್ಥಿಕ ದರೋಡೆ ತಡೆಯಲು ಸುರಾಜ್ಯ ಅಭಿಯಾನದಡಿ ೧೬ ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಭೇಟಿಯಾಗಿ ದೂರು ನೀಡಲಾಯಿತು. ಸಾರಿಗೆ ಆಯುಕ್ತರಿಗೆ ಸಾಕ್ಷ್ಯ ಸಲ್ಲಿಸಲಾಗಿದೆ. ಪ್ರತಿ ವರ್ಷವೂ ಹಬ್ಬ ಹರಿದಿನಗಳಲ್ಲಿ ಮತ್ತು ಬೇಸಿಗೆ ರಜೆಯಲ್ಲಿ ಪ್ರಯಾಣ ದರವನ್ನು ಅಕ್ರಮವಾಗಿ ಹೆಚ್ಚಿಸುವುದನ್ನು ತಡೆಯಲು ದೂರುಗಳು ಮತ್ತು ಆಂದೋಲನಗಳ ಮೂಲಕ ನಿರಂತರವಾಗಿ ಧ್ವನಿ ಎತ್ತಲಾಯಿತು. ಗೃಹಸಚಿವ ಹಾಗೂ ಮುಖ್ಯಮಂತ್ರಿ ಸಹಿತ ಪ್ರಧಾನಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಇವರ ಬಳಿಯೂ ಮತ್ತೊಮ್ಮೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಶ್ರೀ. ಮುರುಕಟೆ ಇವರು ಹೇಳಿದ್ದಾರೆ.

Related News