Menu Close

ಎಚ್ಚರ ! ಸ್ಟಾರ್ ಬಕ್ಸ್ ಇಂಡಿಯಾ ನಿಮಗೆ ನೀಡುತ್ತಿದೆ ಹಲಾಲ್ ಖಾದ್ಯ…

ಸ್ಟಾರಬಕ್ಸ್ ಜಗತ್ತಿನ  ಬೃಹತ್ ಮತ್ತು ದುಬಾರಿ ಕಾಫಿ ಹೌಸ್ ಕಂಪನಿಯಾಗಿದೆ. ಟಾಟಾ ಸ್ಟಾರ್ ಬಕ್ಸ್ ಅಕ್ಟೋಬರ್ 2012 ರಲ್ಲಿ ಸ್ಟಾರ್ ಬಕ್ಸ್ ಕಾಫಿ ಕಂಪನಿ ಮತ್ತು ಟಾಟಾ ಕಂಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ನಡುವೆ ಒಂದು ಜಂಟಿ ಉದ್ಯಮದ ರೂಪದಲ್ಲಿ ಭಾರತಕ್ಕೆ ಬಂತು. ಈ ಕಂಪನಿ ಕೇವಲ ಅಮೇರಿಕಾದಲ್ಲೇ 15 ಸಾವಿರ ಕ್ಕಿಂತಲೂ ಹೆಚ್ಚು, ಕೆನಡಾದಲ್ಲಿ 1300 ಕ್ಕಿಂತಲೂ ಹೆಚ್ಚು ಮತ್ತು ಯುರೋಪ್ ನಲ್ಲಿ  900 ಕ್ಕಿಂತಲೂ ಹೆಚ್ಚು ಮತ್ತು ಭಾರತದಲ್ಲಿ 254 ಶಾಖೆಗಳನ್ನು ಹೊಂದಿದೆ. ಭಾರತದಲ್ಲಿ ಜನರು ಇದನ್ನು ಲಗ್ಸರೀ ರೀತಿಯಲ್ಲಿ ನೋಡುತ್ತಾರೆ. ಸ್ಟಾರ್ ಬಕ್ಸ್ ನ ಔಟ್ಲೆಟ್ ಗಳಲ್ಲಿ ಅನೇಕ ರೀತಿಯ ತಿನಿಸುಗಳೂ ದೊರೆಯುತ್ತವೆ.

ಇತ್ತೀಚಿಗಷ್ಟೇ ವಿಡಿಯೋವೊಂದು ವೈರಲ್ ಆಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಇವರು ಟ್ವೀಟ್ ಮಾಡಿದ್ದ ಈ ವಿಡಿಯೋದಲ್ಲಿ ನವದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಸ್ಟಾರ್ ಬಕ್ಸ್ ಔಟ್ಲೆಟ್ ನಲ್ಲಿ ಓರ್ವ ಮಹಿಳೆ, ಸ್ಟಾರಬಕ್ಸ್ ನ ಸಿಬ್ಬಂದಿಗೆ ‘ನಿಮ್ಮ ಬಳಿ ದೊರೆಯುವ ಚಿಕನ್ ಹಲಾಲ್ ಆಗಿದೆಯೆ ?’ ಎಂದು ಪ್ರಶ್ನಿಸುತ್ತಾಳೆ, ಆಗ ಆ ಸಿಬ್ಬಂದಿ ‘ನಮ್ಮಲ್ಲಿ ಎಲ್ಲವೂ ಹಲಾಲ್ ಸಿಗುತ್ತದೆ’ ಎನ್ನುತ್ತಾರೆ.

Sign Petition : ಜಾತ್ಯಾತೀತ ಭಾರತದಲ್ಲಿ ಧರ್ಮಾಧಾರಿತ ಹಲಾಲ್ ಪ್ರಮಾಣಪತ್ರದ ಮೇಲೆ ತಕ್ಷಣ ನಿಷೇಧ ಹೇರಬೇಕು .

ನಂತರ ಆ ಮಹಿಳೆ,  ‘ಹಿಂದೂಗಳಿಗೆ ಹಲಾಲ್ ಬೇಡವಾಗಿದ್ದರೆ ಏನು ಮಾಡಬೇಕು ?’ ಎಂದು ಕೇಳುತ್ತಾರೆ. ಅದಕ್ಕೆ ಸಿಬ್ಬಂದಿ ನಮ್ಮಲ್ಲಿ ಯಾವುದು ಉಪಲಬ್ಧವಿದೆ, ಅದೇ ದೊರೆಯುವುದು  ಹಲಾಲ್ ಎಂದರೆ ಸಾಮಾನ್ಯವಾಗಿ ಎಲ್ಲ ಹಿಂದೂಗಳೂ ತಿನ್ನುತ್ತಾರೆ ಎನ್ನುತ್ತಾನೆ.

ಇದರಲ್ಲಿ FSSAI ನ ಹೆಸರು ಹೇಳಿ ಜನರನ್ನು ಮೋಸಗೊಳಿಸಲಾಗುತ್ತಿದೆ.

ಕೊನೆಗೆ ಆ ಮಹಿಳೆ, ನಿಮ್ಮ ಬಳಿ ಇರುವ ಎಲ್ಲ ಉತ್ಪಾದನೆ ಹಲಾಲ್ ಆಗಿದ್ದರೆ, ಇದನ್ನು ನೀವು ಎಲ್ಲಾದರೂ ಬರೆದಿದ್ದೀರಾ. ಇದರ ಬಗ್ಗೆ ಸಿಬ್ಬಂದಿ ಹೇಳುತ್ತಾನೆ, ನಮ್ಮ ಗೈಡ್ ಲೈನ್ನಲ್ಲಿ ಇರುತ್ತದೆ.

ಈ ರೀತಿ ಸ್ಟಾರ್ ಬಕ್ಸ್ ಹಿಂದೂಗಳ ಕಣ್ತಪ್ಪಿಸಿ ಅವರಿಗೆ ಹಲಾಲ್ ತಿನ್ನಿಸುತ್ತಿದೆ. ಎಲ್ಲಾ ಹಿಂದೂಗಳು ಸಂಘಟಿತರಾಗಿ ಇದನ್ನು ವಿರೋಧಿಸಬೇಕು.