Menu Close

ವಿರೋಧಿಸಿ : `ಅಮೆಜಾನ್ ಅಮೆರಿಕಾ’ದಲ್ಲಿ ಕಾಳಿ ಮಾತೆಯನ್ನು ಗಲ್ಲಿಗೇರಿಸಿರುವಂತಹ ಚಿತ್ರವಿರುವ ಪುಸ್ತಕ ಮಾರಲಾಗುತ್ತಿದೆ !

ನವದೆಹಲಿ – ಮತ್ತೊಮ್ಮೆ ಹಿಂದೂಗಳ ಶ್ರದ್ಧೆಗೆ ಧಕ್ಕೆ ತರುವ ಕೃತ್ಯ ವಿದೇಶದಲ್ಲಿ ನಡೆದಿದೆ. ಅಮೆಜಾನ್ ಡಾಟ್ ಕಾಮ್ (amazon.com) ದಲ್ಲಿ ‘ಕಾಳಿ ಮಾ : ಎ ಕಲೆಕ್ಷನ್ ಆಫ್ ಶಾರ್ಟ್ ಸ್ಟೋರೀಸ್’ ಶೀರ್ಷಿಕೆ ಇರುವ ಪುಸ್ತಕ ಮಾರಲಾಗುತ್ತಿದೆ. ಈ ಪುಸ್ತಕದಲ್ಲಿ ಕಾಳಿ ಮಾತೆಯನ್ನು ಗಲ್ಲಿಗೇರಿಸಿರುವಂತೆ ತೋರಿಸಲಾಗಿದೆ. ಅಮೆಜಾನ್ ನಲ್ಲಿ ಈ ಪುಸ್ತಕದ ಬೆಲೆ ಪೇಪರ್ ಬ್ಯಾಕ್ ನಲ್ಲಿ 6 ಡಾಲರ್ 99 ಸೆಂಟ್ ಇದೆ ಮತ್ತು ಕಿಂಡಲ್ ನಲ್ಲಿ ಈ ಪುಸ್ತಕದ ಬೆಲೆ 2 ಡಾಲರ್ 99 ಸೆಂಟ್ ಆಗಿದೆ. ಪುಸ್ತಕದ ಬಗ್ಗೆ ಅಮೆಜಾನ್, ಇದನ್ನು ಭಾರತದಲ್ಲಿಯೂ ವಿತರಣೆ ಮಾಡಬಹುದು. ಈ ಪುಸ್ತಕದ ಲೇಖಕ ಎಲ್. ಟಿ. ಫುಲಾಹ ಇವರು ಸುರಕ್ಷಿತ ಮತ್ತು  ವಿಶ್ವಾಸಾರ್ಹ ವ್ಯಕ್ತಿಯಾಗಿದ್ದು  ಅಮೇರಿಕಾದ  ಪೆನ್ಸಿಲವೇನಿಯದ  ಪಿಟ್ಸಬರ್ಗ್ ನ ಮೂಲ ನಿವಾಸಿಯಾಗಿದ್ದಾರೆ ಎಂದು ಹೇಳಿದೆ.

ಈ ಪುಸ್ತಕದಲ್ಲಿ ಕಾಳಿ ಮಾತೆಗೆ ಗಲ್ಲಿಗೇರಿಸಿರುವ ಚಿತ್ರ ಕಾಣಿಸುತ್ತಲೇ ಭಾರತದಲ್ಲಿ ವಿರೋಧ ಆರಂಭವಾಗಿದೆ. ಇದರಿಂದ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಗಿದೆ. ಹಿಂದೂಗಳು ಟ್ವೀಟ್ ಮೂಲಕ ಅಮೆಜಾನ್ ಗೆ ಈ ರೀತಿಯ ಅಪಮಾನ ಸಹಿಸಲಾಗುವುದಿಲ್ಲ ಎಂದು ಆಗ್ರಹಿಸಿದ್ದಾರೆ. ‘ಮಿಸ್ಟರ್ ಸಿಂಹ’ ಯೂಸರ್ ನ ವ್ಯಕ್ತಿ ಇದಕ್ಕೆ ನಾಚಿಕೆಗೇಡಿನ ಕೃತ್ಯ ಎಂದಿದ್ದಾರೆ. ಪ್ರೊ. ಶೇಖ್ ಇಜರಾಯಲ್ ಎಂಬ ಯೂಸರ್ ನ ವ್ಯಕ್ತಿ ಕಾಳಿ ಮಾತೆಯ ಚಿತ್ರವನ್ನು ನೋಡಿದರೆ ಜನರಿಗೆ ಸಕಾರಾತ್ಮಕ ಉರ್ಜೆಯ ಅನುಭವವಾಗುತ್ತದೆ. ಇದೆಂತಹ ಟ್ರೆಂಡ್ ನಡೆಯುತ್ತಿದೆ ಎಂದಿದ್ದಾರೆ.

ಸನ್ನಿ  ಎಂಬ ಯೂಸರ್, ಕಾಳಿ ಮಾತೆಯನ್ನು ತಮಾಷೆಯ ವಿಷಯ ಮಾಡಲಾಗಿದೆ. ನಮ್ಮ ದೇಶದಲ್ಲಿ ಈ ಪುಸ್ತಕವನ್ನು ಲಾಂಚ್ ಮಾಡಲು ಹೇಗೆ ಸಾಧ್ಯ ಎಂದಿದ್ದಾರೆ.

‘ಓಯ್ ನೈಕ್ಸ್’ ಎಂಬ ಯೂಸರ್, ಈ ಜನ ಹಿಂದೂಗಳನ್ನು ಯಾವಾಗಲೂ ಹೀಗೆಯೇ ಛೇಡಿಸುತ್ತಿರುತ್ತಾರೆ. ಅಮೆಜಾನ್ ಬಗ್ಗೆ ಇನ್ನೂ ಕೆಲವು ಯೂಜರ್ಸ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮೇಲೆ ನೀಡಿರುವ ಎಲ್ಲಾ ಟ್ವೀಟ್ ಗಳ ರಿಪ್ಲೈ ಸೆಕ್ಷನ್ ನಲ್ಲಿ  ಜನರು ಈ ಪುಸ್ತಕದ ಬಗ್ಗೆ ಹೇಗೆ ಅಸಮಾಧಾನಕರ ಪ್ರತಿಕ್ರಿಯೆ ನೀಡಿದ್ದಾರೆ ಎಂದು ನೋಡಬಹುದು.

ಆಧಾರ : ನ್ಯೂಸ್ ರೂಮ್ ಪೋಸ್ಟ್