Menu Close

ಹಿಂದೂಗಳ ವಿರೋಧದ ಬಳಿಕ ‘ಫಿನೋಲೆಕ್ಸ್’ ಪೈಪ್ ಶ್ರೀಕೃಷ್ಣನ ಅನಾದರಗೊಳಿಸುವ ಜಾಹೀರಾತು ತೆಗೆದುಹಾಕಿತು !

ಹಿಂದೂ ಜನಜಾಗೃತಿ ಸಮಿತಿಯಿಂದ ಟ್ವಿಟರ್‌ ಮೂಲಕ ವಿರೋಧ 

ಪಿ.ವಿ.ಸಿ. ಪೈಪ್ ಮತ್ತು ಫಿಟ್ಟಿಂಗ್‌ಗಳ ಉತ್ಪಾದನೆ ಮಾಡುವ  ‘ಫಿನೋಲೆಕ್ಸ್’ ಭಾರತದ ಪ್ರಮುಖ ಪಿ.ವಿ.ಸಿ. ಪೈಪ್ ಉತ್ಪಾದಕರಲ್ಲಿ ಒಂದು. ಫಿನೋಲೆಕ್ಸ್ ತನ್ನ ಅಧಿಕೃತ ಫೇಸ್‌ಬುಕ್ ಪೇಜ್ ನಲ್ಲಿ  ಶುಭಾಶಯ ತಿಳಿಸುವ ಜಾಹೀರಾತನ್ನು ಪ್ರಸಾರ ಮಾಡಿತ್ತು. ಅದರಲ್ಲಿ  ಭಗವಾನ್ ಶ್ರೀಕೃಷ್ಣನ ಕೈಯಲ್ಲಿ ಕೊಳಲಿನ ಬದಲಿಗೆ ಪಿ.ವಿ.ಸಿ. ಪೈಪ್ ಅನ್ನು ತೋರಿಸುವ ಮೂಲಕ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿತ್ತು.

 ಹಿಂದೂ ಜನಜಾಗೃತಿ ಸಮಿತಿಯ ಗಮನಕ್ಕೆ ಬಂದ ತಕ್ಷಣವೇ ಟ್ವೀಟ್ ಮಾಡಿ ಜಾಹೀರಾತನ್ನು ತೆಗೆದುಹಾಕುವಂತೆ ಒತ್ತಾಯಿಸಿತು. ಧರ್ಮಪ್ರೇಮಿಗಳ ಸಂಘಟಿತ ವಿರೋಧದ ಪರಿಣಾಮ ಕೆಲವೇ ಗಂಟೆಗಳಲ್ಲಿ ಫಿನೋಲೆಕ್ಸ್  ಜಾಹೀರಾತನ್ನು  ತನ್ನ  ಪೇಜ್ ನಿಂದ ತೆಗೆದುಹಾಕಿತು.