Menu Close

ಬಿಂದಿಯಿರದ ಕರೀನಾ ಕಪೂರ್ ಖಾನ್ ಚಿತ್ರವಿದ್ದ ಜಾಹೀರಾತು ತೆರವುಗೊಳಿಸಿ ಬಿಂದಿ ಇಟ್ಟಿರುವ ಹಿಂದೂ ನಟಿಯನ್ನು ತೋರಿಸಿದ ಮಲಬಾರ್ ಗೋಲ್ಡ್ಸ್ 

ಹಿಂದೂ ಜನಜಾಗೃತಿ ಸಮಿತಿ ಮತ್ತು  ಸಂಘಟಿತ ಹಿಂದೂಗಳ ವಿರೋಧದ ಫಲಶ್ರುತಿ !

ಇತ್ತೀಚಿಗೆ ಚಿನ್ನದ ಆಭರಣ ಮಾರುವ ಪ್ರಸಿದ್ಧ ಮಲಬಾರ್ ಗೋಲ್ಡ್ ಕಂಪನಿ ಅಕ್ಷಯ ತೃತೀಯ ದಿನದಂದು ಒಂದು ಜಾಹೀರಾತಿನಲ್ಲಿ ಕರೀನಾ ಕಪೂರ್ ಖಾನ್ ಹಣೆಗೆ ಬಿಂದಿಯಿಲ್ಲದೆ ಆಭರಣಗಳನ್ನು ಧರಿಸಿರುವುದು ತೋರಿಸಲಾಗಿತ್ತು. ಇದಕ್ಕೆ ಹಿಂದೂಗಳು ತೀವ್ರವಾಗಿ ವಿರೋಧಿಸಿದ್ದರು. ನೆನ್ನೆ (ಏಪ್ರಿಲ್ 22)ರಂದು ಟ್ವಿಟರ್ ನಲ್ಲೂ ಟ್ರೆಂಡಿಂಗ್ ವಿಷಯವಾಯಿತು.

ಹಿಂದೂ ಜನಜಾಗೃತಿ ಸಮಿತಿಯೂ ಈ ಇದನ್ನು ವಿರೋಧಿಸುವಂತೆ ವ್ಯಾಪಕವಾಗಿ ಕರೆ ನೀಡಿತ್ತು. ಪರಿಣಾಮವಾಗಿ ಇಂದು ಮಲಬಾರ್ ಗೋಲ್ಡ್ ನ ವೆಬ್ಸೈಟ್ ನಿಂದ ಜಾಹೀರಾತಿನಲ್ಲಿದ್ದ ಕರಿನಾ ಕಪೂರ್ ಖಾನನನ್ನು ತೆರವುಗೊಳಿಸಿ ಹಣೆಬಟ್ಟು ಇಟ್ಟಿರುವ ನಟಿ ತಮನ್ನಾ ಭಾಟಿಯಾ ಇವರ ಚಿತ್ರ ಹಾಕಿದ್ದರು.