ಛತ್ರಪತಿ ಶಿವಾಜಿ ಮಹಾರಾಜರಂತೆ ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಹೋರಾಡಬೇಕಿದೆ – ಶ್ರೀ. ಚಂದ್ರ ಮೊಗವೀರ

ಶಿವಮೊಗ್ಗ : ಹಿಂದೂ ಸಮಾಜದ ಮೇಲೆ ಇವತ್ತು ವಿವಿಧ ಪ್ರಕಾರ ಆಘಾತ,ಅತ್ಯಾಚಾರ, ಹಲ್ಲೆಗಳು, ಗೋಹತ್ಯೆ,ದೇವರ ವಿಡಂಬನೆ, ಅಪಮಾನ,ಅತ್ಯಾಚಾರ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಹಿಂದೂ ಜನಜಾಗೃತಿ ಸಮಿತಿಯು ಕಳೆದ 23 ವರ್ಷಗಳಿಂದ ಧರ್ಮಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ, ಯಾವಾಗ ಅಯೋಧ್ಯೆ ರಾಮಮಂದಿರದ ಮೇಲೆ ಭಗವಾ ಧ್ವಜ ಸ್ಥಾಪಿಸಲಾಯಿತು ಆಗಿನಿಂದಲೇ ನಾವೆಲ್ಲರೂ ಹಿಂದೂರಾಷ್ಟ್ರ ಸ್ಥಾಪನೆಯ ಯುಗದ ಪ್ರಾರಂಭದ ಹೆಜ್ಜೆಯನ್ನು ಇಟ್ಟಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ. ಹಿಂದೂರಾಷ್ಟ್ರದಲ್ಲಿ ಯಾವುದೇ ಸಮಾಜದ ಮೇಲೆ ಅತ್ಯಾಚಾರ, ಅಪಮಾನ, ಹಲ್ಲೆಗಳು ಆಗುವುದಿಲ್ಲ ಯಾಕೆ ಅಂದರೆ ನಮ್ಮ ಸನಾತನ ಧರ್ಮ ಸರ್ವೇ ಜನ ಸುಖೀನೊ ಭವಂತು ಈ ವಾಕ್ಯವನ್ನು ಪರಿಪಾಲನೆ ಮಾಡುತ್ತದೆ ಎಂದರು.
ಹಿಂದೂಗಳ ಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿನಾಂಕ 05.04.2026 ರಂದು ಆಯೋಜಿಸಿದ್ದ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನವು ಶಿವಮೊಗ್ಗದ ಶ್ರೀ ಬೆಕ್ಕಿನ ಕಲ್ಮಠ ಸಭಾಗೃಹದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಶಂಖನಾದ, ದೀಪಪ್ರಜ್ವಲನೆ, ವೇದ ಮಂತ್ರಗಳ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕರ್ಮದ ನಿರೂಪಣೆಯನ್ನು ಸೌ.ಐಶ್ವರ್ಯ , ಸೌ. ನಾಗವೇಣಿ ಪಾಲನಕರ್, ಇವರು ಮಾಡಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಸೇರಿದಂತೆ 250 ಕ್ಕೂ ಅಧಿಕ ಹಿಂದೂ ಸಂಘಟನೆಯ ಮುಖಂಡರು , ದೇವಸ್ಥಾನಗಳ ವಿಶ್ವಸ್ತರು, ಪುರೋಹಿತರು, ಆಡಳಿತ ಮಂಡಳಿಯವರು, ಸಕ್ರೀಯ ಹಿಂದೂ ಕಾರ್ಯಕರ್ತರು, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಪ್ರಮುಖರು, ವಕೀಲರು ಉದ್ಯಮಿಗಳು ಸಂಘಟನೆಯ ಅಧ್ಯಕ್ಷರು, ಹಿಂದೂತ್ವವಾದಿ ವಕೀಲರು, ಮಾಧ್ಯಮ ಮಿತ್ರರು ಸೇರಿದಂತೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ದೇವಸ್ಥಾನಗಳ ಮೂಲಕ ಸನಾತನ ಧರ್ಮದ ಆಚರಣೆ ಉಳಿಯಬೇಕಾಗಿದೆ!
ಶ್ರೀ. ಶಂಕರಾನಂದ ಜೋಯಿಸ್ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ಮಾತನಾಡಿ ದೇವಸ್ಥಾನಗಳ ಮೂಲಕ ಸನಾತನ ಧರ್ಮದ ಆಚರಣೆ ಉಳಿಯಬೇಕಾಗಿದೆ ಸನಾತನ ಧರ್ಮ ರಕ್ಷಣೆ ಮಾಡಲು ಹಿಂದುಗಳು ಒಂದಾಗಿ ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ, ಸಂಸ್ಕೃತಿ, ಸಂಪ್ರದಾಯ ಉಳಿಯಲು ಧರ್ಮಾಚರಣೆ ಮಾಡಬೇಕಿದೆ.
ಶಿವಮೊಗ್ಗ ಗಾಂಧಿಬಜಾರ್ ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ. ವಿಜಯಕುಮಾರ್ ದಿನಕರ್ ಮಾತನಾಡಿ ಹಿಂದೂ ವ್ಯಾಪಾರಿಗಳ ಸಂಘಟನೆ ಆಗಬೇಕಿದೆ ಬೇರೆ ಬೇರೆ ವ್ಯವಹಾರಗಳಲ್ಲಿ ತೊಂದರೆಗಳಾದರೆ ಅವರ ರಕ್ಷಣೆಗೆ ಎಲ್ಲಾ ರೀತಿಯ ವ್ಯಾಪಾರಿಗಳು ಸಂಘಟಿತರಾಗಿ ಹೋರಾಡಬೇಕಿದೆ.
ಶ್ರೀ.ರಾಘವೇಂದ್ರಸ್ವಾಮಿ, ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು
ಇವರು ಮಾತನಾಡುತ್ತ ದೇವಸ್ಥಾನ, ಗೋ ರಕ್ಷಣೆ, ಲವ್ ಜಿಹಾದ್ ವಿರುದ್ಧ ಹೋರಾಡಲು ಸಕ್ರಿಯರಾಗಬೇಕು ಇಂತಹ ಸಂದರ್ಭದಲ್ಲಿ ಹಿಂದುತ್ವವಾದಿಗಳ ಹೋರಾಟದಲ್ಲಿ ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ವಕೀಲರ ಸಂಘಟನೆಯು ಕಾರ್ಯನಿರತವಾಗಿರುತ್ತದೆ ಎಂದು ಕರೆ ನೀಡಿದರು.
ಯೋಗ್ಯವಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ಹಿಂದುಗಳ ರಕ್ಷಣೆಯಾಗಲು ಸಾಧ್ಯ ಶ್ರೀ. ಸಂದೀಪ್ ಗುರೂಜಿ ಹಿಂದು ರಾಷ್ಟ್ರ ಸೇನಾ ರಾಜ್ಯ ವಕ್ತಾರರು ಮಾತನಾಡಿ ಚುನಾವಣೆಯಲ್ಲಿ ಜಾತಿ ರಾಜಕೀಯ ಮಾಡದೆ ಕೇವಲ ಹಿಂದುತ್ವಕ್ಕಾಗಿ ಮತ್ತು ಹಿಂದುತ್ವದ ರಕ್ಷಣೆ ಮಾಡುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ ಎಂದು ಕರೆ ನೀಡಿದರು.
ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಮನ್ವಯಕರಾದ ಶ್ರೀ. ದಿನೇಶ್ ಚೌಹಾಣ್ ಮಾತನಾಡಿ ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡಲು ಒಂದು ವೇದಿಕೆಯ ಅಗತ್ಯವಿತ್ತು, ಅದಕ್ಕಾಗಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸ್ಥಾಪನೆಯಾಗಿದ್ದು, ಪ್ರತಿಯೊಬ್ಬರೂ ಈ ಸಮಿತಿಯ ಜೊತೆಗೆ ಜೋಡಣೆ ಯಾಗಬೇಕಾಗಿದೆ ಇದರ ಮಾಧ್ಯಮದಿಂದ ಎಂತಹ ದೊಡ್ಡ ಹೋರಾಟ ಬೇಕಾದರೂ ಮಾಡಬಹುದಾಗಿದೆ ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಯಶಸ್ಸು ಸಹ ದೊರೆಯುತ್ತಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಪಂಚ ಶಿಲ್ಪಾ ಕಾಲಾವಿದರಾದ ಪೂಜ್ಯ ಸಂತರಾದ ಶ್ರೀ. ಕಾಶಿನಾಥ್ ಕೌಟೆಕರ್, ಹಿಂದೂ ರಾಷ್ಟ್ರ ಸೇನೆ ರಾಜ್ಯಾಧ್ಯಕ್ಷರಾದ ಶ್ರೀ. ಸಂದೀಪ್ ಗುರೂಜಿ ತರೀಕೆರೆ ತಾಲ್ಲೂಕು ಗೋಪಾಲ ಭೂಸೆನಹಳ್ಳಿ ಬಂಜಾರ ಸಮುದಾಯದ ಧರ್ಮ ಗುರುಗಳಾದ ಶ್ರೀ. ಶ್ರೀ. ಮಂಜು ಮಹಾರಾಜ್ ಇವರಿಗೆ ಸತ್ಕಾರ ಮಾಡಿ ಸನ್ಮಾನಿಸಲಾಯಿತು.



