Menu Close

ಸಾಮಾಜಿಕ ದುಷ್ಪ್ರವೃತ್ತಿಗಳ ವಿರುದ್ಧ ಸಾಂವಿಧಾನಿಕ ಮಾರ್ಗದಲ್ಲಿ ಹೋರಾಡಲು

‘ಸುರಾಜ್ಯ ಅಭಿಯಾನ’

ಸಾಮಾಜಿಕ ದುಷ್ಪ್ರವೃತ್ತಿಗಳಗಳನ್ನು ತಡೆಯಿರಿ, ಸುರಾಜ್ಯವನ್ನು ಸ್ಥಾಪಿಸಿರಿ

2017 ರಲ್ಲಿ ಅಕ್ಷಯ ತೃತೀಯಾದ ಶುಭಮುಹೂರ್ತದಲ್ಲಿ ಸಾಮಾಜಿಕ ದುಷ್ಪ್ರವೃತ್ತಿಗಳ ವಿರುದ್ಧ ಸಾಂವಿಧಾನಿಕ ಮಾರ್ಗಗಳ ಮೂಲಕ ಹೋರಾಡಲು ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ಪ್ರಾರಂಭವಾಯಿತು. ನಮ್ಮಲ್ಲಿ ಪ್ರತಿಯೊಬ್ಬರೂ ‘ಹಿಂದೂ ರಾಷ್ಟ್ರ’ವನ್ನು ನೋಡಲು ಬಯಸುತ್ತೇವೆ. ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಗಳಿಸಿದರು, ಆದರೆ ಸ್ವಾತಂತ್ರ್ಯ ಎಂದರೆ ಹಿಂದೂ ರಾಷ್ಟ್ರ ಎಂದಲ್ಲ. ಸ್ವರಾಜ್ಯ ದೊರಕಿದೆ. ಆದರೆ ಸುರಾಜ್ಯವನ್ನೂ ಸಾಧಿಸಬೇಕು. ಸ್ವರಾಜ್ಯ, ಸುರಾಜ್ಯ ಮತ್ತು ಆಧ್ಯಾತ್ಮಿಕ ಪರಿಕಲ್ಪನೆಗಳನ್ನು ಆಧರಿಸಿದ ಆಡಳಿತ ವ್ಯವಸ್ಥೆ; ಈ ಮೂರರ ಸಂಗಮವೇ ಹಿಂದೂ ರಾಷ್ಟ್ರ ಎಂದು ಖಚಿತವಾಗಿ ಹೇಳಬಹುದು. ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರ ವ್ಯಾಪಿಸಿದೆ. ಎಲ್ಲರೂ ಇದರ ಬಗ್ಗೆ ಆಕ್ರೋಶಗೊಂಡಿದ್ದಾರೆ; ಆದರೆ ಅದರ ಬಗ್ಗೆ ಏನು ಮಾಡಬೇಕೆಂದು ತಿಳಿಯದೆ, ನಾವು ಸಿಲುಕಿಕೊಳ್ಳುತ್ತೇವೆ ಮತ್ತು ಭ್ರಷ್ಟ ವ್ಯವಸ್ಥೆಯ ಭಾಗವಾಗುತ್ತೇವೆ. ಸರಕಾರ ಮತ್ತು ಸಾಮಾಜಿಕ ವಲಯದ ದುಷ್ಟಕೃತ್ಯಗಳ ಸಾಂವಿಧಾನಿಕ ವಿಧಾನಗಳ ಮೂಲಕ ವಿರುದ್ಧ ಹೋರಾಡುವುದು ಮತ್ತು ಜಾಗೃತಿ ಮೂಡಿಸುವುದು. ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಸುರಾಜ್ಯ ಅಭಿಯಾನದ ಅಡಿಯಲ್ಲಿ ಅಭಿಯಾನಗಳು

ರೈಲು ನಿಲ್ದಾಣಗಳಲ್ಲಿ ಮುಚ್ಚಿದ `ವಾಟರ ವೆಂಡಿಂಗ್ ಮಶೀನ್’ ಪುನರಾರಂಭಿಸಲು ಅಭಿಯಾನ

Learn more

‘ರೈಲ್ ನೀರ್’ ಗೆ ಹೆಚ್ಚಿನ ಬೆಲೆ ವಿಧಿಸುವ ಮಾರಾಟಗಾರರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಅಭಿಯಾನ

Learn more

ಇತರೆ ಅಭಿಯಾನಗಳು

ಜಲ ಮಾಲಿನ್ಯದ ಕುರಿತು ‘ರಾಷ್ಟ್ರೀಯ ಹಸಿರು ಪ್ರಾಧಿಕಾರ’ಕ್ಕೆ ಅರ್ಜಿ

Learn More

ರಾಜ್ಯ ಹೆದ್ದಾರಿ (NH4A) ಯಲ್ಲಿ ಸುರಕ್ಷತಾ ಸೂಚನೆಗಳ ಕೊರತೆಯ ಸಂದರ್ಭದಲ್ಲಿ ಪತ್ರವ್ಯವಹಾರ.

Learn More

ಎಲ್ಲಾ ಸ್ಥಳಗಳಲ್ಲಿ Maximum Retail Price ಗರಿಷ್ಠ ಚಿಲ್ಲರೆ ಬೆಲೆಯ ಅನುಸಾರ ದರಗಳನ್ನು ತೆಗೆದುಕೊಳ್ಳಬೇಕು, ಈ ಸಂದರ್ಭದಲ್ಲಿ ಜಾಗೃತಿ ಅಭಿಯಾನ

Learn More

ನಿಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ದುಷ್ಟ ಪ್ರವೃತ್ತಿಗಳ ವಿರುದ್ಧ ಕಾನೂನು ವಿಧಾನಗಳ ಮೂಲಕ ಹೋರಾಡಲು ಪ್ರಾರಂಭಿಸಿ !

: 7204082609

ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿರುವ ದುಷ್ಪ್ರವೃತ್ತಿಗಳ ಕೆಲವು ಉದಾಹರಣೆಗಳು

ನಾಗರಿಕರ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಪೂರ್ಣಗೊಳಿಸುವುದನ್ನು ವಿಳಂಬಗೊಳಿಸುವುದು.
ನಾಗರಿಕರು ಸರಕಾರಿ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುವಂತೆ ಒತ್ತಾಯಿಸುವುದು
ಸಾರ್ವಜನಿಕರ ಬಗ್ಗೆ ಅಸಭ್ಯ ವರ್ತನೆ
ಬೇರೆಡೆ ಕಚೇರಿ ಸಮಯ ವ್ಯರ್ಥ ಮಾಡುವುದು
ಕಚೇರಿಯ ಸಮಯದ ಮೊದಲೇ ಕಾರ್ಯಾಲಯವನ್ನು ಮುಚ್ಚುವುದು.
ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳೊಂದಿಗೆ `ರಾಗಿಂಗ್’
ಶಾಲಾ ಕಾಲೇಜು ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ದೊಡ್ಡ ಮೊತ್ತದ ದೇಣಿಗೆ (ಡೊನೇಶನ) ಕೇಳುವುದು.
ಶಿಕ್ಷಕರ ವರ್ಗಾವಣೆ ಮತ್ತು ವರ್ಗಾವಣೆ ತಡೆಯಲು ಲಂಚಕ್ಕೆ ಬೇಡಿಕೆ ಇಡುವುದು.
ಶಾಲೆ ಅಥವಾ ಕಾಲೇಜಿನಲ್ಲಿ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲದಿದ್ದರೂ ತಪ್ಪು ವಿದ್ಯಾರ್ಥಿಗಳ ಸಂಖ್ಯೆಯನ್ನು ತೋರಿಸಿ ಸರಕಾರಿ ಅನುದಾನ ಪಡೆಯುವುದು.
ಶಾಲಾ ಶಿಕ್ಷಕರು ಖಾಸಗಿ ಟ್ಯೂಷನ್ ತೆಗೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ತಮ್ಮ ಟ್ಯೂಷನ್ಗೆ ಹಾಜರಾಗುವಂತೆ ಒತ್ತಡ ಹೇರುವುದು.
ಶಾಲಾ ಅಥವಾ ಕಾಲೇಜು ಫಲಿತಾಂಶಗಳನ್ನು ಹೆಚ್ಚು ನಿಖರವಾಗಿಸಲು ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಿ ಅಥವಾ ‘ನಕಲು ಮಾಡಲು’ ಸಹಾಯ ಮಾಡುವುದು.
ರೋಗಿಗಳಿಗೆ ಅಗ್ಗದ ಔಷಧಿಗಳ ಬದಲಿಗೆ ದುಬಾರಿ ಔಷಧಿಗಳು ಮತ್ತು ಉಪಕರಣಗಳನ್ನು ಖರೀದಿಸುವಂತೆ ಒತ್ತಾಯಿಸುವುದು.
ಐಸಿಯುನಲ್ಲಿ ರೋಗಿ ಸತ್ತರೂ, ಅವರ ಕುಟುಂಬದವರಿಗೆ ತಿಳಿಸದೆ ಅವರನ್ನು ಅಲ್ಲಿಯೇ ಇರಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆ ಶುಲ್ಕ ವಿಧಿಸುವುದು.
ಅಗತ್ಯವಿಲ್ಲದಿದ್ದರೂ ಶಸ್ತ್ರಚಿಕಿತ್ಸೆಯನ್ನು ಒತ್ತಾಯಿಸುವುದು
ಅನಗತ್ಯವಾಗಿ ದುಬಾರಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದು
ರೋಗಿಗಳಿಂದ ವೈದ್ಯರು ಮತ್ತು ಆಸ್ಪತ್ರೆಗಳು ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದು
ಕಲಬೆರಕೆ ಆಹಾರ ಅಥವಾ ಹಾಲು ಮಾರಾಟ
ಪೆಟ್ರೋಲ್, ಡೀಸೆಲ್ ಇತ್ಯಾದಿಗಳನ್ನು ತುಂಬಿಸುವ ಪಂಪ್ನಲ್ಲಿ ಪ್ರಮಾಣ ಅಥವಾ ಗುಣಮಟ್ಟದಲ್ಲಿ ವಂಚನೆ.
ಗಾಳಿಯಾಡದ ಉತ್ಪನ್ನಗಳ ಮೇಲೆ ಗರಿಷ್ಠ ಚಿಲ್ಲರೆ ಬೆಲೆ (MRP) ಗಿಂತ ಹೆಚ್ಚು ಶುಲ್ಕ ವಿಧಿಸುವುದು.
ಹೆಚ್ಚಿನ ಲಾಭ ಗಳಿಸಲು ತಕ್ಕಡಿ/ತೂಕ ಯಂತ್ರಗಳಲ್ಲಿ ಮೋಸ ಮಾಡುವುದು.
ಐಆರ್ಸಿಟಿಸಿ ಮೂಲಕ ರೈಲ್ವೆಯಲ್ಲಿ ಮಾರಾಟ ಮಾಡುವ ಖಾದ್ಯಪದಾರ್ಥಗಳಿಗೆ ಸುಂಕ ವಿಧಿಸಿದ ನಂತರವೂ ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವುದು.
ರಾಷ್ಟ್ರೀಯ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪ್ರಸಾರ
ಸುಳ್ಳು ಸುದ್ದಿಗಳನ್ನು ಹರಡುವುದು, ಶ್ರದ್ಧಾಸ್ಥಾನಗಳನ್ನು ಅಗೌರವಿಸುವುದು
ಬ್ಲ್ಯಾಕ್ಮೇಲ್ ಮಾಡುವ ಬೆದರಿಕೆಯನ್ನು ನೀಡಿ ಹಣವನ್ನು ಕಬಳಿಸುವುದು
ಅಶ್ಲೀಲತೆ ಮತ್ತು ನಗ್ನತೆಯನ್ನು ಉತ್ತೇಜಿಸುವ ಜಾಹೀರಾತುಗಳನ್ನು ಪ್ರಕಟಿಸುವುದು
ಅಪಮಾನಕಾರಿ, ಸಮಾಜವಿರೋಧಿ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಪ್ರಸಾರ
ಸಾಮಾಜಿಕ ದುಷ್ಟತನ ಮತ್ತು ಹಿಂಸೆಯನ್ನು ಬೆಂಬಲಿಸುವ ಅಥವಾ ಉತ್ತೇಜಿಸುವ ಲೇಖನಗಳು ಮತ್ತು ಚಿತ್ರಗಳನ್ನು ಪ್ರಕಟಿಸುವುದು.

ಪ್ರಜಾಪ್ರಭುತ್ವದಲ್ಲಿ ಹರಡಿರುವ ದುಷ್ಪ್ರವೃತ್ತಿಗಳ ವಿರುದ್ಧ ಹೋರಾಡುವ ವಿಧಾನ

ಮಾಹಿತಿ ಹಕ್ಕು ಅಧಿಕಾರವನ್ನು ಉಪಯೋಗಿಸಿರಿ!

ದೂರುಗಳು ಮತ್ತು ಜ್ಞಾಪಕ ಪತ್ರಗಳ ಮೂಲಕ ನಿಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ಜನರ ವರೆಗೆ ತಲುಪಿಸಿರಿ!

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು!

ಸಾಮೂಹಿಕ ಚಳುವಳಿಗಳು ಮತ್ತು ಪ್ರತಿಭಟನೆಗಳನ್ನು ನಡೆಸುವುದು!

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಮೂಲಕ ನ್ಯಾಯಾಲಯಕ್ಕೆ ಮೊರೆ ಹೋಗುವುದು!

ಸಾಮಾಜಿಕ ವಲಯದಲ್ಲಿರುವ ನಿಮ್ಮ ಪರಿಚಯಸ್ಥರನ್ನು ಭೇಟಿ ಮಾಡಿ ಮತ್ತು ಸಮಿತಿಯ ಕೆಲಸದ ಬಗ್ಗೆ ಅವರಿಗೆ ತಿಳಿಸಿ.

ಸಾಮಾಜಿಕ ಕ್ಷೇತ್ರಗಳ ವ್ಯಕ್ತಿಗಳಿಗೆ ಸಮಿತಿಯ ಕಾರ್ಯಕರ್ತರ ಸಂಪರ್ಕವನ್ನು ಏರ್ಪಡಿಸುವುದು.

ಗ್ರಾಹಕರ ಅಧಿಕಾರಗಳು, ಮಾಹಿತಿ ಹಕ್ಕು ಕಾಯ್ದೆ ಅಧಿನಿಯಮ ಮತ್ತು ಇತರೆ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಆಯೋಜಿಸುವುದು.

ಭ್ರಷ್ಟಾಚಾರದ ವಿರುದ್ಧ ಕಾರ್ಯವನ್ನು ಮಾಡುವವರಿಗಾಗಿ ಶಿಭಿರ ಇತ್ಯಾದಿಗಳನ್ನು ಆಯೋಜಿಸುವುದು

ಸುರಾಜ್ಯ ಅಭಿಯಾನದ ಕಾರ್ಯಕ್ಕಾಗಿ ದಾನ ಮಾಡುವುದು

ಸೋಶಿಯಲ ಮೀಡಿಯಾ ಮೂಲಕ ಜಾಗರೂಕತೆಯನ್ನು ನಿರ್ಮಾಣ ಮಾಡುವುದು

ಇಂದೇ ಖರೀದಿಸಿರಿ!

ಈ ಗ್ರಂಥಗಳನ್ನು ನಿಮ್ಮ ಮನೆ ಮತ್ತು ಆಸ್ಪತ್ರೆಗಳ ಪುಸ್ತಕಾಲಯದ ಭಾಗವಾಗಿಸಿರಿ !