Menu Close

Sign Petition : ಬಾಂಗ್ಲಾದೇಶದ ಹಿಂದೂಗಳು ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಭಾರತ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು !

ಬಾಂಗ್ಲಾದೇಶದಲ್ಲಿನ ಪ್ರಸ್ತುತ ರಾಜಕೀಯ ಅಸ್ಥಿರತೆಯಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರ ಲಾಭವನ್ನು ಪಡೆದುಕೊಂಡ ಜಿಹಾದಿಗಳು ಯಾವುದೇ ಭಯವಿಲ್ಲದೆ ಹಿಂಸಾಚಾರ ನಡೆಸುತ್ತಿದ್ದಾರೆ, ಇದರಿಂದಾಗಿ ಅಲ್ಲಿನ ಹಿಂದೂ ಅಲ್ಪಸಂಖ್ಯಾತ ಸಮುದಾಯವು ಗಂಭೀರ ಅಪಾಯದಲ್ಲಿದೆ.


ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಪ್ರಮುಖ ಕಾರ್ಯಕರ್ತ ಶರೀಫ್ ಉಸ್ಮಾನ್ ಹಾದಿಯ ಸಾವಿನ ನಂತರ ಬಾಂಗ್ಲಾದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದವು. ಈ ಪ್ರತಿಭಟನೆಗಳ ಸಂದರ್ಭದಲ್ಲಿ ವ್ಯಾಪಕವಾಗಿ ಧ್ವಂಸ, ಬೆಂಕಿ ಹಚ್ಚುವುದು, ಘೋಷಣೆಗಳು ಮತ್ತು ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಮೇಲೆ ದಾಳಿಗಳು ನಡೆದಿವೆ. ಢಾಕಾದಲ್ಲಿನ ಪತ್ರಿಕಾ ಕಚೇರಿಗಳನ್ನೂ ಬಿಡದೆ ಗುರಿಯಾಗಿಸಲಾಗಿದೆ. ಈ ಘಟನೆಗಳ ನಡುವೆ ಇಸ್ಲಾಮಿಕ್ ಮತ್ತು ಮೂಲಭೂತವಾದಿ ಗುಂಪುಗಳು ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿವೆ.
ಮೈಮನ್ಸಿಂಗ್ ಜಿಲ್ಲೆಯಲ್ಲಿ ನಡೆದ ಘೋರ ಘಟನೆಯೊಂದರಲ್ಲಿ, ಹಿಂದೂ ಯುವಕ ದೀಪು ಚಂದ್ರ ದಾಸ್ ಮೇಲೆ ಧರ್ಮನಿಂದನೆಯ ಸುಳ್ಳು ಆರೋಪ ಹೊರಿಸಿ ಜಿಹಾದಿ ಗುಂಪೊಂದು ಆತನನ್ನು ಬರ್ಬರವಾಗಿ ಹೊಡೆದು ಕೊಂದಿದೆ. ಆತನ ಬಟ್ಟೆಗಳನ್ನು ಬಿಚ್ಚಿಸಿ ಹಿಂಸಿಸಿ, ನಂತರ ಶವಕ್ಕೆ ಬೆಂಕಿ ಹಚ್ಚಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಗುಂಪು ದಾಳಿ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ, ಇದು ಬಾಂಗ್ಲಾದೇಶದಲ್ಲಿ ಹಿಂದೂಗಳ ಅಸುರಕ್ಷಿತ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.


ಬಾಂಗ್ಲಾದೇಶದ ಹಲವು ಭಾಗಗಳಲ್ಲಿ ಹಿಂದೂಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಲಾಗುತ್ತಿದೆ, ಅವರ ಮನೆಗಳು ಮತ್ತು ದೇವಾಲಯಗಳ ಮೇಲೆ ದಾಳಿಗಳು ನಡೆಯುತ್ತಿವೆ. ಅಲ್ಲಿನ ಜನರು ತಮ್ಮ ಪ್ರಾಣ ಮತ್ತು ಗೌರವದ ಭಯದಲ್ಲಿ ಬದುಕುತ್ತಿದ್ದಾರೆ. ಬಾಂಗ್ಲಾದೇಶ ಸರ್ಕಾರ ನೀಡಿದ ಭದ್ರತೆಯ ಭರವಸೆಗಳು ಈ ಘಟನೆಗಳನ್ನು ತಡೆಯುವಲ್ಲಿ ವಿಫಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆ ಅತ್ಯಗತ್ಯವಾಗಿದೆ, ವಿಶೇಷವಾಗಿ ಭಾರತದ ಪಾತ್ರ ಮುಖ್ಯವಾಗಿದೆ. ಏಕೆಂದರೆ ಭಾರತವು ಬಾಂಗ್ಲಾದೇಶದ ನೆರೆಯ ರಾಷ್ಟ್ರವಾಗಿದ್ದು, ಎರಡೂ ದೇಶಗಳ ನಡುವೆ ಆಳವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಂಬಂಧಗಳಿವೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದ ಮೂಲಕ ಬೆಳಕಿಗೆ ಬರುತ್ತಿವೆ, ಇದರಿಂದ ಭಾರತ ಸರಕಾರ ಕೂಡಲೇ ಅದರ ಕಡೆಗೆ ಗಮನ ನೀಡದಿದ್ದರೆ, ಬಾಂಗ್ಲಾದೇಶ ಎರಡನೆಯ ಪಾಕಿಸ್ತಾನವಾಗುವುದೆ ಎಂಬ ಆತಂಕ ನಿರ್ಮಾಣವಾಗಿದೆ. ಈ ಹಿಂಸಾಚಾರವನ್ನು ಗಮನಿಸಿ ಹಿಂದೂ ಜನಜಾಗೃತಿ ಸಮಿತಿ ಸರಕಾರಕ್ಕೆ ಈ ಬೇಡಿಕೆಗಳನ್ನು ಸಲ್ಲಿಸುತ್ತಿದೆ.

ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಗಳು

1

ಮೊಟ್ಟ ಮೊದಲು ಬಾಂಗ್ಲಾದೇಶದ ಹಿಂದುಗಳ ಮೇಲಿನ ದಾಳಿಗಳು, ಮನೆಯ ಲೂಟಿ, ದೇವಸ್ಥಾನಗಳ ಮೇಲಿನ ದಾಳಿ, ಮೂರ್ತಿಗಳು ಧ್ವಂಸಗೊಳಿಸುವುದು, ಮಹಿಳೆಯರ ಮೇಲೆ ನಡೆಯುತ್ತಿರುವ ಬಲಾತ್ಕಾರ ತಡೆಯಲು ಅಲ್ಲಿಯ ಸೈನ್ಯಶಕ್ತಿಗೆ ಕಠೋರ ಆದೇಶ ನೀಡಬೇಕು.

2

ಸದ್ಯ ಸುಮಾರು 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರು ಭಾರತದಲ್ಲಿ ನುಸುಳಿದ್ದಾರೆ, ಈ ಘಟನೆಯ ನಂತರ ಇಲ್ಲಿ ನುಸುಳುವಿಕೆಯು ಮತ್ತೆ ಹೆಚ್ಚಾಗುವ ಅನುಮಾನ ಇರುವುದರಿಂದ ಭಾರತೀಯ ಗಡಿಯಲ್ಲಿ ಕಠಿಣ ಬಂದೋಬಸ್ತ್ ಮಾಡಬೇಕು.

3

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಅಲ್ಲಿಂದ ಸ್ಥಳಾಂತರವಾಗಲು ಬಯಸುತ್ತಿರುವ ಹಿಂದೂಗಳನ್ನು ಭಾರತ ಸರಕಾರ ನಾಗರಿಕ ಸಂಶೋಧನಾ ಅಧಿನಿಯಮದ (ಸಿ ಎ ಎ) ಮೂಲಕ ಅವಕಾಶ ನೀಡಬೇಕು.

4

ಅಲ್ಲಿನ ಹಿಂದುಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವುದರಿಂದ ಅವರನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸುವುದು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು.

5

ಬಾಂಗ್ಲಾದೇಶದಲ್ಲಿನ ಹಿಂದುಗಳ ಜೀವ ಮತ್ತು ಸಂಪತ್ತಿನ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು.

6

ಭಾರತ ಸರಕಾರ ತಕ್ಷಣ ಈ ವಿಷಯವನ್ನು ವಿಶ್ವಸಂಸ್ಥೆಯ ಮುಂದಿಟ್ಟು ಅಲ್ಲಿನ ಪ್ರತಿನಿಧಿಗಳನ್ನು ಬಾಂಗ್ಲಾದೇಶದ ಪರ್ಯಟನೆ ಮತ್ತು ಅಮಾಯಕರ ರಕ್ಷಣೆಗೆ ಕಳಿಸಬೇಕು.

ಹಿಂದೂ ಜನಜಾಗೃತಿ ಸಮಿತಿಯ ಪ್ರಯತ್ನಗಳು

ಸಮಿತಿಯು ಈ ಕೆಳಗಿನ ವಿಷಯಗಳ ಕುರಿತು ಆತಂಕ ವ್ಯಕ್ತ ಪಡಿಸಿದೆ !

೧. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಾಮೂಹಿಕ ನರಸಂಹಾರ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹಿಂಸಾಚಾರ ನಡೆಯುವ ಆತಂಕವಿದೆ.

೨. ಈ ಘಟನೆಯ ನಂತರ ಕಟ್ಟರ ಜಿಹಾದಿ ಭಯೋತ್ಪಾದಕರ ಮನೋಧೈರ್ಯ ಹೆಚ್ಚಾಗುವುದು ಮತ್ತು ಅವರು ತಮ್ಮ ತೆರೆಮರೆಯಲ್ಲಿರುವ ಬೆಂಬಲಿಗರ ಸಹಾಯದಿಂದ ಭಾರತದಲ್ಲಿಯೂ ಹಿಂಸಾಚಾರ ನಡೆಸುವ ಸಂಶಯವಿದೆ.

೩. ಸಂಭಾವ್ಯ ಅಪಾಯನ್ನು ಎದುರಿಸಲು ಭಾರತೀಯ ಪೊಲೀಸ್ ವ್ಯವಸ್ಥೆ, ಸರಕಾರ ಜೊತೆಗೆ ಎಲ್ಲಾ ಭಾರತೀಯರು ಸತರ್ಕರಾಗಿರಬೇಕು.

೪. ಸಮಾಜವು ಆತ್ಮರಕ್ಷಣೆಗಾಗಿ ಸಜ್ಜಿತ ಮತ್ತು ತಯಾರಿಯಲ್ಲಿರಬೇಕಾಗುವುದು.

ಬಾಂಗ್ಲಾದೇಶದಲ್ಲಿನ ಹಿಂದೂ ಜನಾಂಗದ ರಕ್ಷಣೆ ಮತ್ತು ನಮ್ಮ ದೇಶದ ಸುರಕ್ಷೆಗಾಗಿ ಭಾರತ ಸರಕಾರ ತಕ್ಷಣ ಮತ್ತು ನಿರ್ಣಾಯಕ ಕಾರ್ಯಾಚರಣೆ ನಡೆಸಲು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.

ಬಂಡಾಯ ಶೇಖ್ ಹಸೀನಾ ಸರಕಾರದ ವಿರುದ್ಧ; ಆದರೆ ಗುರಿಯಾಗಿದ್ದು ಹಿಂದೂ ಸಮಾಜ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ಅಂಗಡಿ, ದೇವಸ್ಥಾನಗಳ ಧ್ವಂಸ, ಲೂಟಿಗಳು ನಡೆಯುತ್ತಿವೆ. ಅರಾಜಕತೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಯಾವ ಜನರು ಶೇಖ ಹಸೀನಾರನ್ನು ಅಧಿಕಾರದಿಂದ ಹೊರಗಿರಿಸಲು ಕಾರ್ಯನಿರತವಾಗಿದ್ದರೋ, ಅವರೇ ಈಗ ಅಲ್ಲಿಯ ಹಿಂದುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ವಿರೋಧ ಪ್ರತಿಭಟನೆಯ ಮರೆಯಲ್ಲಿ ಇಲ್ಲಿಯವರೆಗೆ 100 ಕ್ಕು ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ವರದಿಗನುಸಾರ ಹಿಂದುಗಳ ಮನೆಗಳು ಮತ್ತು ದೇವಸ್ಥಾನಗಳನ್ನು ಗುರಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇಸ್ಕಾನ್ ಮತ್ತು ಕಾಳಿ ದೇವಸ್ಥಾನದ ಮೇಲೆಯೂ ದಾಳಿಗಳು ನಡೆದಿವೆ. ಅದರ ನಂತರ ಹಿಂದೂಗಳು ಪ್ರಾಣ ರಕ್ಷಿಸಿಕೊಳ್ಳಲು ಅಡಗಿ ಕುಳಿತಿದ್ದಾರೆ. ಅದರಲ್ಲಿ ಕೆಲವು ಹಿಂದುಗಳ ಹತ್ಯೆಯೂ ನಡೆದಿದೆ.

https://twitter.com/MrSinha_/status/1820506861331796179?ref_src=twsrc%5Etfw%7Ctwcamp%5Etweetembed%7Ctwterm%5E1820506861331796179%7Ctwgr%5E7df6b29e5ce41680e2e6b7edc6cd69861b485d94%7Ctwcon%5Es1_&ref_url=https%3A%2F%2Fwww.hindujagruti.org%2Fhindi%2Fsave-bangladeshi-hindus

ಬಾಂಗ್ಲಾದೇಶದ ಮೇಹರುಪುರ ಇಸ್ಕಾನ್ ದೇವಸ್ಥಾನಕ್ಕೂ ಬೆಂಕಿ ಹಚ್ಚಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಮಂದಿರಗಳನ್ನು ಗುರಿ ಮಾಡುತ್ತಿರುವುದು ಮೊದಲ ಬಾರಿಯೇನಲ್ಲ. ಇದಕ್ಕಿಂತ ಹಿಂದೆ ೨೦೨೧, ೨೦೨೨ ಮತ್ತು ಈಗ ೨೦೨೪, ಕಳೆದ ನಾಲ್ಕು ವರ್ಷದಲ್ಲಿ ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದ ಮೇಲೆ ಮೂರು ಬಾರಿ ದಾಳಿ ನಡೆದಿದೆ. ಹಿಂಸಾಚಾರದ ನಡುವೆ 54 ಜಿಲ್ಲೆಯಲ್ಲಿನ ಅಲ್ಪಸಂಖ್ಯಾತ ಹಿಂದೂ ಜನಾಂಗದ ಮೇಲೆ ಗುರಿ ಇಡಲಾಗಿದೆ.

Related Articles