Menu Close

ಆರೋಗ್ಯ ಸಹಾಯ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯ ಶಾಖೆ

”ಆರೋಗ್ಯ ಸಹಾಯ ಸಮಿತಿ’ಯು ಚಿಕಿತ್ಸಾ ಕ್ಷೇತ್ರದ ರಾಷ್ಟ್ರನಿಷ್ಠ ಮತ್ತು ಧರ್ಮನಿಷ್ಠ ವೈದ್ಯರು, ಪರಿಚಾರಿಕೆಯರ ಸಂಘಟನೆಯಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ಭೋದಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಪ್ರೇರಣೆಯಿಂದ ಜೂನ್ 2018 ರಲ್ಲಿ ಏಳನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಈ ಸಮಿತಿಯನ್ನು ಸ್ಥಾಪಿಸಲಾಯಿತು. ಈ ಸಮಿತಿಯ ಮೂಲಕ ವೈದ್ಯಕೀಯ ಕ್ಷೇತ್ರದ ಎಲ್ಲ ಜನರಿಗೂ ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ಲಭಿಸಿದೆ. ಇದು ಅತ್ಯುತ್ತಮ ಸಮಷ್ಟಿ (ಸಾಮಾಜಹಿತ) ಸಾಧನೆಯೇ ಆಗಿದೆ.

ಆರೋಗ್ಯ ಸಹಾಯ ಸಮಿತಿಯ ಉದ್ದೇಶ

ವೈದ್ಯಕೀಯ ನೆರವಿನಿಂದ ವಂಚಿತ ರೋಗಿಗಳು ಮತ್ತು ಮುಂಬರುವ ಕಾಲದಲ್ಲಿ ಯುದ್ಧ, ಪ್ರವಾಹ, ಭೂಕಂಪಗಳಂತಹ ಭೀಕರ ದುರಂತಗಳಲ್ಲಿ ಸಿಲುಕಿರುವ ಸಂತ್ರಸ್ತರಿಗೆ ತಕ್ಷಣದ ವೈದ್ಯಕೀಯ ನೆರವು ಒದಗಿಸುವುದು.

ಸಾರ್ವಜನಿಕರನ್ನು ವಂಚಿಸಿ, ಜನತೆಯ ಆರೋಗ್ಯದೊಂದಿಗೆ ಆಟವಾಡುವ ವೈದ್ಯಕೀಯ ಕ್ಷೇತ್ರದ ದುಷ್ಟ ಪ್ರವೃತ್ತಿಗಳ ವಿರುದ್ಧ ಜನಜಾಗೃತಿ ಮತ್ತು ಈ ದುಷ್ಟಪ್ರವೃತ್ತಿಗಳ ವಿರುದ್ಧ ಕಾನೂನು ಮಾರ್ಗದಲ್ಲಿ ಹೋರಾಡುವುದು.

ವೈದ್ಯಕೀಯ ಕ್ಷೇತ್ರದ ವ್ಯಕ್ತಿಗಳನ್ನು ಸಂಘಟಿಸುವುದು ಮತ್ತು ಸಕ್ರಿಯಗೊಳಿಸುವುದು

ಆರೋಗ್ಯ ಕ್ಷೇತ್ರದ ದುಷ್ಟಪ್ರವೃತ್ತಿಗಳನ್ನು ತಡೆಯಿರಿ

ಆರೋಗ್ಯ ಕ್ಷೇತ್ರದ ದುಷ್ಟಪ್ರವೃತ್ತಿಗಳ ಕೆಲವು ಉದಾಹರಣೆಗಳು

ವೈದ್ಯರ ಮೂಲಕ ಸ್ಕ್ಯಾನ್ ಮತ್ತು ಪರೀಕ್ಷಣೆಗಳಿಗೆ ಕಳುಹಿಸಿ ಲಂಚದ ರೂಪದಲ್ಲಿ ಕಮಿಷನ್ ಪಡೆಯುವುದು (ಕಟ್ ಅಭ್ಯಾಸ)

ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡದಿರುವುದು, ತಕ್ಷಣ ಚಿಕಿತ್ಸೆಯ ಆವಶ್ಯಕತೆಯಿದ್ದರೂ ಮುಂಗಡ ಹಣ (ಠೇವಣಿ) ಪಾವತಿಸುವವರೆಗೆ ರೋಗಿಗೆ ಚಿಕಿತ್ಸೆ ನೀಡದಿರುವುದು

ರೋಗಿಗಳಿಗೆ ಅಗ್ಗದ ಔಷಧಿಗಳ ಬದಲಿಗೆ ದುಬಾರಿ ಔಷಧಗಳು ಮತ್ತು ಉಪಕರಣಗಳನ್ನು ಖರೀದಿಸಲು ಒತ್ತಾಯಿಸುವುದು

‘ಒಮ್ಮೆ ಬಳಸುವ ಸಿರಿಂಜ್‌’, ‘ಕ್ಯಾಥೆಟರ್‌’ ಇತ್ಯಾದಿಗಳನ್ನು ಮರುಬಳಕೆ ಮಾಡುವುದು ಮತ್ತು ಹೊಸ ಉಪಕರಣಗಳಿಗೆ ರೋಗಿಗಳಿಂದ ಹಣ ಪಡೆಯುವುದು

ಆರ್ಥಿಕ ಲಾಭಕ್ಕಾಗಿ ಜೀವಂತ ಅಥವಾ ಮೃತ ರೋಗಿಯ ದೇಹದ ಭಾಗಗಳನ್ನು ತೆಗೆದು ಮಾರಾಟ ಮಾಡುವುದು

ಐಸಿಯುನಲ್ಲಿ ರೋಗಿ ಮರಣ ಹೊಂದಿದ್ದರೂ ಮನೆಯವರಿಗೆ ಹೇಳದೆ ಅಲ್ಲೇ ಇಟ್ಟುಕೊಂಡು ಉಪಚಾರ ಮಾಡಿ ಆಸ್ಪತ್ರೆ ಶುಲ್ಕ ವಸೂಲಿ ಮಾಡುವುದು

ಆರೋಗ್ಯ ಇಲಾಖೆಯ

ಎಲ್ಲಾ ನೌಕರರು ಮತ್ತು ಡಾಕ್ಟರರಿಗೆ

ರಾಷ್ಟ್ರ ಮತ್ತು ಧರ್ಮದ ಸೇವೆ ಮಾಡುವ ಅವಕಾಶ :

: +917058885610

[email protected]

ವೈದ್ಯಕೀಯ ಕಾರ್ಯದಲ್ಲಿ ನೀವೂ ಈ ರೀತಿಯಲ್ಲಿ ಸಹಭಾಗಿಯಾಗಬಹುದು..

ಚಿಕಿತ್ಸೆಗೆ ಸಂಬಂಧಿಸಿದ ಕಾರ್ಯ ಮಾಡುವ ಸದಸ್ಯರೊಂದಿಗೆ ಸಭೆಗಳನ್ನು ಆಯೋಜಿಸಿ, ಅವರನ್ನು ಆರೋಗ್ಯ ಸಹಾಯ ಸಮಿತಿಗೆ ಪರಿಚಯಿಸಿರಿ.

ಸಾಮಾನ್ಯ ಜನತೆಗೆ ಸಾರ್ವಜನಿಕ ಆರೋಗ್ಯ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಉಪನ್ಯಾಸಗಳನ್ನು ಆಯೋಜಿಸಲು ಸಹಾಯ ಮಾಡಿರಿ.

ಆರೋಗ್ಯ ಸಹಾಯ ಸಮಿತಿಯ ಸಹಯೋಗದೊಂದಿಗೆ ಉಚಿತ ‘ಪ್ರಥಮ ಚಿಕಿತ್ಸಾ ತರಬೇತಿ ಶಿಬಿರ’ ದಲ್ಲಿ ಭಾಗವಹಿಸಿರಿ ಅಥವಾ ಆಯೋಜಿಸಿರಿ.

ಆಕ್ಯುಪ್ರೆಶರ್, ಪ್ರಾಣಶಕ್ತಿ ವ್ಯವಸ್ಥೆಯಂತಹ ಪೂರಕ ಚಿಕಿತ್ಸಾ ಪದ್ಧತಿಗಳನ್ನು ಕಲಿಯಿರಿ, ಅಭ್ಯಾಸ ಮಾಡಿರಿ ಮತ್ತು ಕಲಿಸಿರಿ.

ಆರೋಗ್ಯ ಸಹಾಯ ಸಮಿತಿಯ ಕಾರ್ಯಕ್ಕಾಗಿ ಹಣ, ಔಷಧಗಳು ಅಥವಾ ವೈದ್ಯಕೀಯ ಸಾಮಗ್ರಿಗಳನ್ನು ದಾನ ನೀಡಿ.

ಉಚಿತ ಔಷಧಿ ವಿತರಣೆ, ರಕ್ತ ಪರೀಕ್ಷೆ/ನೇತ್ರ ಚಿಕಿತ್ಸೆ ಇತ್ಯಾದಿ ಶಿಬಿರಗಳನ್ನು ಆಯೋಜಿಸಿರಿ ಮತ್ತು ಈ ಸೇವೆಗಳಲ್ಲಿ ಭಾಗವಹಿಸಿರಿ.

ವೈದ್ಯಕೀಯ ಕ್ಷೇತ್ರದ ದುಷ್ಟಪ್ರವೃತ್ತಿಗಳ ವಿರುದ್ಧ ಆರೋಗ್ಯ ಸಹಾಯ ಸಮಿತಿಯ ಅಭಿಯಾನ

ರೋಗಿಗಳು ಮತ್ತು ಅವರ ಕುಟುಂಬದವರು ವೈದ್ಯಕೀಯ ತಜ್ಞರ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟಿರುತ್ತಾರೆ. ಆದ್ದರಿಂದ, ವೈದ್ಯಕೀಯ ತಜ್ಞರ ಮೊದಲ ಕರ್ತವ್ಯ ಅವರ ವಿಶ್ವಾಸವನ್ನು ಉಳಿಸಿಕೊಂಡು ಯೋಗ್ಯ ಚಿಕಿತ್ಸೆ ನೀಡುವುದು. ರೋಗಿಗಳ ಉತ್ತಮ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಕಾನೂನು ನಿಬಂಧನೆಗಳಿವೆ. ಆದಾಗ್ಯೂ, ಆರೋಗ್ಯ ಸಹಾಯ ಸಮಿತಿಯು ಆರೋಗ್ಯ ಸೇವೆ ಸಂದರ್ಭದಲ್ಲಿ ಕೆಲವು ದುಷ್ಟಪ್ರೃತ್ತಿಗಳನ್ನು ಬಯಲಿಗೆ ತಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿನ ದುಷ್ಟಪ್ರವೃತ್ತಿಗಳನ್ನು ಬಹಿರಂಗಗೊಳಿಸುವಲ್ಲಿ ಮತ್ತು ಅಧಿಕಾರಿಗಳು ಈ ವಿಷಯದಲ್ಲಿ ಗಮನ ಹರಿಸುವಂತೆ ಮಾಡುವಲ್ಲಿ ಆರೋಗ್ಯ ಸಹಾಯ ಸಮಿತಿ ಪ್ರಮುಖ ಪಾತ್ರ ವಹಿಸಿರುವ ಬಗ್ಗೆ ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ. ಆರೋಗ್ಯ ಸಹಾಯ ಸಮಿತಿಯು ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿತು, ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿಯನ್ನು ಪಡೆದುಕೊಂಡಿತು, ಆಹಾರ ಮತ್ತು ಔಷಧ ಇಲಾಖೆಗೆ ದೂರು ಸಲ್ಲಿಸಿತು ಮತ್ತು ಈ ಕೆಳಗಿನ ದುಷ್ಟಪ್ರವೃತ್ತಿಗಳ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಪತ್ರವನ್ನೂ ಸಲ್ಲಿಸಿತು.

ಸರ್ಕಾರಿ ಅನುದಾನಿತ ಆಸ್ಪತ್ರೆಗಳು ಆರ್ಥಿಕವಾಗಿ ವಂಚಿತರಾಗಿರುವ ಜನರಿಗಾಗಿ ಹಾಸಿಗೆಗಳನ್ನು ಮೀಸಲಿಡಲು ವಿಫಲವಾಗಿವೆ.

ಸೂಚನಾ ಫಲಕಗಳ ಮೂಲಕ ಸರ್ಕಾರಿ ಯೋಜನೆಗಳ ಬಗ್ಗೆ ರೋಗಿಗಳಿಗೆ ತಿಳಿಸಲು ಆಸ್ಪತ್ರೆಗಳು ವಿಫಲವಾಗಿವೆ.

ಆಸ್ಪತ್ರೆಗಳ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸದಿರುವುದು, ನಿಯಮಗಳ ಕಟ್ಟುನಿಟ್ಟಿನ ಪಾಲನೆಯಿಲ್ಲ.

ಔಷಧ(ಫಾರ್ಮಾ)
ಉದ್ಯಮದ ಕಳಪೆ ಕಾರ್ಯನಿರ್ವಹಣೆಯಿಂದಾಗಿ ಕಳಪೆ ಗುಣಮಟ್ಟದ ಔಷಧಗಳ ವಿತರಣೆ.

ಆರ್ಥೋಪೆಡಿಕ್ ಇಂಪ್ಲಾಂಟ್ ತಯಾರಕರ ಮೂಲಕ ಡಾಕ್ಟರರು ಮತ್ತು ಆಸ್ಪತ್ರೆಗಳಿಗೆ ಲಂಚ.

ರಕ್ತ ಸಂಗ್ರಹಣಾ ಕೇಂದ್ರಗಳು ಸರ್ಕಾರದ ಆದೇಶಕ್ಕಿಂತ ಹೆಚ್ಚಿನ ಬೆಲೆಗೆ ರಕ್ತವನ್ನು ಮಾರಾಟ ಮಾಡುವುದು.

ಇಂದೇ ಖರೀದಿಸಿರಿ

ಈ ಪುಸ್ತಕಗಳನ್ನು ನಿಮ್ಮ ಮನೆ ಅಥವಾ ಆಸ್ಪತ್ರೆಯ ಲೈಬ್ರರಿಯಲ್ಲಿರಿಸಿ !

BUY NOW

ಇತರ ಸುದ್ದಿ

No post found!