ರಾಮರಾಜ್ಯದ ಸ್ಥಾಪನೆಗಾಗಿ ದೇಶಾದ್ಯಂತ 850 ಸ್ಥಳಗಳಲ್ಲಿ ಸಾಮೂಹಿಕ ‘ಗದಾಪೂಜೆ’ ಸಂಪನ್ನ!

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ನಡೆದ ಗದಾ ಪೂಜೆಯಲ್ಲಿ ಉಪಸ್ಥಿತರಿರುವ ಹಿಂದೂ ಬಾಂಧವರು

ರಾಯಭಾಗದ ಅಂಬಾಭವಾನಿ ದೇವಸ್ಥಾನದಲ್ಲಿ ಗದಾ ಪೂಜೆ ವೇಳೆ ನೆರೆದಿದ್ದ ಹಿಂದೂ ಸಮಾಜ
“ಇಂದು ಇಡೀ ವಿಶ್ವವು ಯುದ್ಧದ ಅಂಚಿನಲ್ಲಿ ಬಂದು ನಿಂತಿದೆ. ಇತಿಹಾಸವನ್ನು ಗಮನಿಸಿದರೆ, ಯಾವ ಯುದ್ಧಗಳಲ್ಲಿ ಹನುಮಂತನು ನೆಲೆಸಿದ್ದಾನೋ, ಅಲ್ಲಿ ವಿಜಯವು ನಿಶ್ಚಿತವಾಗಿದೆ ಎಂದು ತಿಳಿಯುತ್ತದೆ. ಪ್ರಭು ಶ್ರೀರಾಮನ ಸೇನೆಯಲ್ಲಿದ್ದು ರಾವಣನ ಲಂಕೆಯನ್ನು ದಹಿಸಿದ ಹನುಮಂತನಿರಲಿ ಅಥವಾ ಮಹಾಭಾರತದಲ್ಲಿ ಅರ್ಜುನನ ರಥದ ಧ್ವಜದ ಮೇಲೆ ವಿರಾಜಮಾನನಾಗಿ ಅಧರ್ಮದ ವಿರುದ್ಧ ಪಾಂಡವರಿಗೆ ಬಲ ನೀಡಿದ ಹನುಮಂತನಿರಲಿ; ಪ್ರತಿ ಸ್ಥಳದಲ್ಲೂ ವಿಜಯವು ಖಚಿತವಾಗಿದೆ. ಅಷ್ಟೇ ಅಲ್ಲದೆ, ಛತ್ರಪತಿ ಶಿವಾಜಿ ಮಹಾರಾಜರ ‘ ಹಿಂದವಿ ಸ್ವರಾಜ್ಯ’ದ ಸ್ಥಾಪನೆಗಾಗಿ ಸಮರ್ಥ ರಾಮದಾಸ ಸ್ವಾಮಿಗಳು ಗ್ರಾಮ ಗ್ರಾಮಗಳಲ್ಲಿ ಮಾರುತಿ ಮಂದಿರಗಳನ್ನು ಸ್ಥಾಪಿಸಿ ಪ್ರಾರಂಭಿಸಿದ ಬಲೋಪಾಸನೆಯಿಂದಾಗಿ, ಸ್ವರಾಜ್ಯಕ್ಕೆ ಆಧ್ಯಾತ್ಮಿಕ ಹಾಗೂ ಸಾಮರ್ಥ್ಯದ ಬಲ ದೊರೆಯಿತು. ಇಂದು ಮತ್ತೆ ದೇಶ ಮತ್ತು ಧರ್ಮವು ಸಂಕಷ್ಟದಲ್ಲಿದೆ ಹಾಗೂ ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ.

ಗದಾ ಪೂಜೆ ವೇಳೆ ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯ ಮಾಡುವಂತೆ ಪ್ರತಿಜ್ಞೆ ಮಾಡಿದ ಹಿಂದೂ ಸಮಾಜ ! (ವಿಜಯಪುರ)
ಇಂತಹ ಸಮಯದಲ್ಲಿ ಪ್ರತಿಯೊಬ್ಬ ಹಿಂದೂವಿನಲ್ಲಿ ಮಾರುತಿಯಂತಹ ಶೌರ್ಯ, ಶಕ್ತಿ ಮತ್ತು ಭಕ್ತಿಯ ಜಾಗೃತಿಯಾಗಲಿ ಹಾಗೂ ಮುಂಬರುವ ಕಠಿಣ ಸಮಯದಲ್ಲಿ ಅವರ ಆಶೀರ್ವಾದದಿಂದ ಹಿಂದೂಗಳ ವಿಜಯವು ಖಚಿತವಾಗಲಿ ಎನ್ನುವ ಸಂಕಲ್ಪದೊಂದಿಗೆ, ಶ್ರೀ ಹನುಮ ಜಯಂತಿಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ 850 ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ತುಮಕೂರು, ಹಾಸನ ಸೇರಿದಂತೆ 20 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಮೂಹಿಕ ‘ಗದಾಪೂಜೆ’ ನಡೆಸಲಾಯಿತು.”

ಗದಾ ಪೂಜೆ ಸಂದರ್ಭದಲ್ಲಿ ಸಾಮೂಹಿಕ ಹನುಮಂತನ ನಾಮಜಪ ಮತ್ತು ಪ್ರವಚನ (ವಿಜಯಪುರ)
‘ಗದಾಪೂಜೆ’ ವಿಧಿ, ಶ್ರೀ ಹನುಮಂತನ ಆರತಿ, ಮಾರುತಿ ಸ್ತೋತ್ರ ಪಠಣ, ಶಂಖನಾದ ಮತ್ತು ಸಾಮೂಹಿಕ ಪ್ರಾರ್ಥನೆಯ ನಂತರ ‘ಶ್ರೀ ಹನುಮತೇ ನಮಃ’ ಎಂಬ ಸಾಮೂಹಿಕ ನಾಮಜಪವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಮಾರುತಿಯ ಗುಣಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು’ ಎಂಬ ವಿಷಯದ ಕುರಿತು ಮಾರ್ಗದರ್ಶನ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ‘ರಾಮರಾಜ್ಯದ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ’ ಸ್ವೀಕರಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯು ಕಳೆದ 4 ವರ್ಷಗಳಿಂದ ದೇಶಾದ್ಯಂತ ಸಾಮೂಹಿಕ ‘ಗದಾಪೂಜೆ’ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದ್ದು, ಈ ವರ್ಷವೂ ಹಿಂದುತ್ವನಿಷ್ಠರು ಮತ್ತು ಶ್ರದ್ಧಾಳುಗಳ ಉತ್ಸಾಹಭರಿತ ಸಹಭಾಗಿತ್ವ ಕಂಡುಬಂದಿತು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಗದಗದಲ್ಲಿ ಭಾವಪೂರ್ಣವಾಗಿ ಮಾಡಿದ ಗದೆಯ ಪೂಜೆ
ವೈಶಿಷ್ಟ್ಯಪೂರ್ಣ ಘಟನಾವಳಿಗಳು :
* ಹನುಮ ಜಯಂತಿ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯಿಂದ ಎಲ್ಲಾ ಕಡೆಗಳಲ್ಲಿ ಸಾಮೂಹಿಕ ಗದಾಪೂಜೆ ನಡೆಸಲು ಕರೆ ನೀಡಲಾಗಿತ್ತು. ಸಾಮಾಜಿಕ ಮಾಧ್ಯಮದ ಮೂಲಕ ಇದರ ಮಾಹಿತಿ ಪಡೆದ ಬೆಳಗಾವಿ ಕಾಗವಾಡದ ಓರ್ವ ಹಿಂದುತ್ವನಿಷ್ಠರು ಸ್ವತಹ ಗದಾ ಪೂಜೆಯ ಆಯೋಜನೆ ಮಾಡಿ ಸುಮಾರು 40 ಹಿಂದೂ ಬಾಂಧವರನ್ನು ಜೋಡಿಸಿದರು.
* ಮಂಗಳೂರಿನ ಕೋಡಿಕಲ್ ನಲ್ಲಿ ಓರ್ವ ಹಿಂದುತ್ವನಿಷ್ಠರು ಸಮಿತಿಯ ಗದಪೂಜೆಯ ಕಾರ್ಯಕ್ರಮಕ್ಕೆ ಸಮರ್ಥನೆ ನೀಡಿ ಸ್ವತಹ ಅವರ ಪ್ರದೇಶದಲ್ಲಿ ಗದಾ ಪೂಜೆ ಆಯೋಜನೆ ಮಾಡಿದರು. ಈ ಸಂದರ್ಭಗಳಲ್ಲಿ ಬಂದಿದ್ದ ಒಂದು ಯುವಕರ ಗುಂಪು ತಮ್ಮ ಪ್ರದೇಶದಲ್ಲಿ ಶೌರ್ಯ ಜಾಗೃತಿಗಾಗಿ ಪ್ರಶಿಕ್ಷಣ ಕಾರ್ಯಗಾರವನ್ನು ನಡೆಸುವಂತೆ ಮನವಿ ಮಾಡಿದರು.


