Menu Close

ಲವ್ ಜಿಹಾದ್ ಸಂತ್ರಸ್ತೆ ಖುಷಿ ಕಲಬುರ್ಗಿ ಕುಟುಂಬದ ಭೇಟಿಯಾದ ಹಿಂದೂ ಜನಜಾಗೃತಿ ಸಮಿತಿಯ ‘ರಣರಾಗಿಣಿ’ ನಿಯೋಗ !

ಹುಬ್ಬಳ್ಳಿಯ ಜಿಮ್‌ಗಳಲ್ಲಿ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಘಟನೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲು ಒತ್ತಾಯ !


ಪತ್ರಿಕಾಗೋಷ್ಟಿಯಲ್ಲಿ (ಎಡಗಡೆಯಿಂದ) ಸೌ. ನೀತಾ ಮೆತ್ರಾಣಿ, ಮಹಿಳಾ ಮುಖಂಡರು ಎಸ್ ಎಸ್ ಕೆ ಸಮಾಜ,ನ್ಯಾ.ಶಕುಂತಲಾ ಶೆಟ್ಟಿ ಹೈಕೋರ್ಟ್ ನ್ಯಾಯವಾದಿ ಬೆಂಗಳೂರು, ಸೌ. ಭವ್ಯ ಗೌಡ, ಸಂಯೋಜಕಿ “ರಣರಾಗಿಣಿ ” ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ, ಸೌ. ರಾಣಿ ಚಂದಾವರಿ, ರಣರಾಗಿಣಿಯ ಗದಗ ಜಿಲ್ಲಾ ಸಂಯೋಜಕಿ, ಶ್ರೀ. ತೇಜಸ್ ಗೌಡ, ಹಿಂದೂ ಮುಖಂಡರು, ಶ್ರೀ. ಗುರುಪ್ರಸಾದ ಗೌಡ , ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹುಬ್ಬಳ್ಳಿ : ಫಿಟ್ನೆಸ್ ಜಿಮ್‌ನಲ್ಲಿ ನಡೆದಿರುವ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಪ್ರಕರಣವು ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಸಮೀರ್ ಮುಲ್ಲಾ ಮತ್ತು ಅವನ ಸಹೋದರಿ ತೈಸೀಮ್ ಮುಲ್ಲಾ ಪ್ರಮುಖ ಕಿಂಗ್‌ಪಿನ್ ಆಗಿದ್ದಾರೆ. ಇವರ ಕುರಿತು ಸಮಗ್ರ ತನಿಖೆ ನಡೆಸಲು ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿ ಕಠಿಣ ತನಿಖೆ ನಡೆಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆಯ ವತಿಯಿಂದ ಸೌ. ಭವ್ಯ ಗೌಡ ಇವರು ಆಗ್ರಹಿಸಿದ್ದಾರೆ. ಅವರು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ನಂತರ ಅಲ್ಲಿನ ಪೊಲೀಸ್ ಕಮಿಷನರ್ ಎನ್. ಶಶಿಕಮಾರ್ ಅವರ ಭೇಟಿ ಮಾಡಿ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು. ಅಷ್ಟೇ ಅಲ್ಲದೆ ರಣರಾಗಿಣಿ ನಿಯೋಗವು ಸಂತ್ರಸ್ತೆ ಮನೆಗೆ ತೆರಳಿ ಅವರ ಪೋಷಕರ ಬಳಿ ಪ್ರಕರಣದ ಪೂರ್ಣ ಮಾಹಿತಿಯನ್ನು ಪಡೆದರು. ಈ ವೇಳೆ ಉಚ್ಚ ನ್ಯಾಯಾಲಯದ ವಕೀಲರಾದ ಶಕುಂತಲಾ ಶೆಟ್ಟಿ, SSK ಸಮಾಜದ ಮುಖಂಡರಾದ ಸೌ. ನೀತಾ ಮೆತ್ರಾಣಿ, ರಣರಾಗಿಣಿ ಗದಗ ಸಂಯೋಜಕಿ ಸೌ. ರಾಣಿ ಚಂದಾವರಿ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ, ಹಿಂದೂ ಮುಖಂಡ ಶ್ರೀ. ತೇಜಸ್ ಗೌಡ ಉಪಸ್ಥಿತರಿದ್ದರು.


                                                      ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡಿದ ‘ರಣರಾಗಿಣಿ’ ನಿಯೋಗ


                                                         ಪೊಲೀಸ್ ಕಮಿಷನರ್ ‌ಎನ್ ಶಶಿಕುಮಾರ ಇವರಿಗೆ ಮನವಿ ಸಲ್ಲಿಕೆ

ಸೌ. ಭವ್ಯ ಗೌಡ ಮಾತನಾಡಿ, ಜಿಮ್ ನಡೆಸುತ್ತಿದ್ದ ಸಮೀರ್ ಮುಲ್ಲಾ ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಅವರಿಗೆ ಪಾನೀಯಗಳಲ್ಲಿ ಮದ್ದು ಬೆರೆಸಿ ಅತ್ಯಾಚಾರ ನಡೆಸಿ, ನಗ್ನ ಫೋಟೋ/ವೀಡಿಯೊಗಳನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಹಾಗೂ ಮತಾಂತರಕ್ಕೆ ಒತ್ತಾಯ ಮಾಡಿದ್ದಾನೆ. ತೈಸೀಮ್ ಮುಲ್ಲಾ ಈ ಕೃತ್ಯಗಳಲ್ಲಿ ಪ್ರಮುಖ ಪಾತ್ರವಹಿಸಿ, ಯುವತಿಯರನ್ನು ಪರಿಚಯಿಸಿ, ಮೋಸದಿಂದ ಪ್ರಭಾವಿಸಿ ಈ ಜಾಲದಲ್ಲಿ ಸಿಲುಕಿಸುತ್ತಿದ್ದಾಳೆ. ಪೊಲೀಸರ ತನಿಖೆಯಲ್ಲಿ ಸಮೀರ್ ಮುಲ್ಲಾನ ಮೊಬೈಲ್‌ನಲ್ಲಿ ಹಲವು ಯುವತಿಯರ ಅರೆನಗ್ನ ಚಿತ್ರಗಳು ಪತ್ತೆಯಾಗಿರುವುದು ಹಾಗೂ ಅನೇಕ ಪೀಡಿತರು ಮುಂದೆ ಬರುತ್ತಿರುವುದು ಗಂಭೀರ ಸಂಗತಿಯಾಗಿದೆ. ಅದಲ್ಲದೇ ಮತ್ತೋರ್ವ ಮಹಿಳೆಯು “ಸಮೀರ್ ಮುಲ್ಲಾ ತನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ. ಹಿಂದೂ ಯುವತಿಯರನ್ನು ಎಟಿಮ್ ತರಹ ಉಪಯೋಗ ಮಾಡಿ, ಲಕ್ಷರಿ ಜೀವನ ಮಾಡುತ್ತಿದ್ದಾನೆ” ಎಂದು ಹೇಳಿಕೆ ನೀಡಿದ್ದಾಳೆ. ಅದಲ್ಲದೇ ಇದೇ ಜಿಮ್‌ನಲ್ಲಿ ಮತ್ತೊಬ್ಬ ಯುವಕ ಸಹ ಇದೇ ರೀತಿಯ ವಿಧಾನವನ್ನು ಅನುಸರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ಈ ಘಟನೆಗಳ ಗಂಭೀರತೆಯನ್ನು ಹೆಚ್ಚಿಸಿದೆ ಎಂದರು. ರಾಣಿ ಚಂದಾವರಿ ಮಾತನಾಡಿ ಜಿಮಗಳಲ್ಲಿ ಮಹಿಳಾ ತರಬೇತುದಾರರನ್ನು ನೇಮಕ ಮಾಡಬೇಕು ಮತ್ತು ಸಂತ್ರಸ್ತೆಯ ಕುಟುಂಬ ಒತ್ತಡದಲ್ಲಿದ್ದು ಅವರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದರು. ಸೌ. ನೀತಾ ಮೆತ್ರಾಣಿಯವರು ಹಿಂದೂ ಯವತಿಯರಿಗೆ ಕರೆ ನೀಡಿ ದಿನೇ ದಿನೇ ಲವ್ ಜಿಹಾದ್ ನ ಘಟನೆಗಳು ಹೆಚ್ಚುತ್ತಿದ್ದು ಹಿಂದೂ ಹುಡುಗಿಯರು ಇದರಲ್ಲಿ ಸಿಲುಕಿಕೊಳ್ಳಬಾರದು ಎಂದರು.


                                                     ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ಸೌ. ಭವ್ಯ ಗೌಡ

ವಕೀಲರಾದ ಶಕುಂತಲಾ ಶೆಟ್ಟಿ ಮಾತನಾಡಿ, ಸಮೀರ್ ಮುಲ್ಲಾ, ತೈಸೀಮ್ ಮುಲ್ಲಾ ಮತ್ತು ಸಂಬಂಧಿತ ಜಿಮ್ ಜಾಲದ ಕುರಿತು ಸಮಗ್ರ ತನಿಖೆ ನಡೆಸಬೇಕು, ಎಲ್ಲಾ ಮೊಬೈಲ್/ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿ, ಇತರ ಪೀಡಿತರ ಹಾಗೂ ಶಾಹಿನ್ ಗ್ಯಾಂಗ್ ಸಂಪರ್ಕಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿ ಉತ್ತರ ಪ್ರದೇಶದಲ್ಲಿ ಕೈಗೊಂಡಿರುವಂತೆ (ಜಿರೋ ಟಾಲರೆನ್ಸ್) ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಿ ವಿಶೇಷ ತನಿಖಾ ದಳವನ್ನು ರಚಿಸಬೇಕು, ಕೋಕಾ, ಪೋಕ್ಸೋ ಕಾಯ್ದೆ, ಅತ್ಯಾಚಾರ, ವಸೂಲಿ, ಐಟಿ ಕಾಯ್ದೆ ಮತ್ತು ಕರ್ನಾಟಕದ ಮತಾಂತರ ವಿರೋಧಿ ಕಾಯ್ದೆಗಳಡಿ ದೂರು ದಾಖಲಿಸಿ, ಆರೋಪಿಗಳನ್ನು ಕಸ್ಟಡಿಗೆ ಪಡೆದು ಫಾಸ್ಟ್ ಟ್ರ್ಯಾಕ್ ಕೋರ್ಟನಲ್ಲಿ ವಿಚಾರಣೆ ನಡೆಸಬೇಕು, ರಾಜ್ಯ ಮಹಿಳಾ ಆಯೋಗವು ಕೂಡಲೇ ಮಧ್ಯ ಪ್ರವೇಶಿಸಬೇಕು ಮತ್ತು ಪೀಡಿತ ಮಹಿಳೆಯ ಗೌಪ್ಯತೆ ಕಾಪಾಡಿ, ಆಕೆಗೆ ಸರಕ್ಷತೆಯನ್ನು ನೀಡಬೇಕೆಂದು ಕಮಿಷನರ್ ಗೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದರು.

 

Related News